ಆರಂಭ್ ತಂತ್ರಜ್ಞಾನದ ಸಾಮರ್ಥ್ಯವನ್ನು ಉಪಯೋಗಿಸಿಕೊಂಡು ಕಲಿಯುವುದನ್ನು ಹೆಚ್ಚಿಸಲು ಶಿಕ್ಷಣಕ್ಕಾಗಿ ವಿನ್ಯಾಸಗೊಳಿಸುವ ಪ್ಯಾನ್-ಇಂಡಿಯ ಪಿಸಿಯಾಗಿದೆ; ಇದನ್ನು ಪೋಷಕರು, ಶಿಕ್ಷಕರು ಮತ್ತು ಮಕ್ಕಳಿಗೆ ಡಿಜಿಟಲ್ ಇಂಡಿಯದಲ್ಲಿ ದೃಢವಾದ ಹೆಜ್ಜೆಯನ್ನು ಇಡಲು ಸಹಾಯಕವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಈ ಪ್ರಾರಂಭವು ಪೋಷಕರನ್ನು, ಶಿಕ್ಷಕರನ್ನು ಮತ್ತು ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಕೊಂಡಿಯಾಗಿದೆ ಮತ್ತು ಅವರಿಗೆ ಅಗತ್ಯವಿರುವ ತರಬೇತಿಯನ್ನು ಒದಗಿಸುತ್ತದೆ ಇದರಿಂದಾಗಿ ಅವರು ಪಿಸಿಯನ್ನು ಶಾಲೆ ಮತ್ತು ಮನೆಗಳೆರಡರಲ್ಲಿಯೂ ಉತ್ತಮವಾಗಿ ಬಳಸಿಕೊಳ್ಳುವಂತಾಗುತ್ತದೆ.

ನಾವು ಡೆಲ್‌ನಲ್ಲಿ, ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿದ್ದೇವೆ, ಪಿಸಿಯನ್ನು ಅಳವಡಿಸಿಕೊಳ್ಳುವ ಮತ್ತು ಬಳಕೆ ಮಾಡುವ ವಿಚಾರಕ್ಕೆ ಬಂದರೆ, ಭಾರತದಲ್ಲಿ ಪಿಸಿ ಬಳಕೆಯ ಪ್ರಮಾಣವು ೧೦% ಗಿಂತಲೂ ಕಡಿಮೆ ಇದೆ. ಪೋಷಕರು ಮತ್ತು ಶಿಕ್ಷಕರು ಶಿಕ್ಷಣದಲ್ಲಿ ಪಿಸಿಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ, ಅವರು ಎದುರಿಸುತ್ತಿರುವ ಪ್ರಮುಖ ಅಡ್ಡಗಾಲು ಯಾವುದೆಂದರೆ ಜ್ಞಾನದ ಕೊರತೆಯಾಗಿದೆ – ಉತ್ತಮ ಕಲಿಯುವಿಕೆಗೆ ಪಿಸಿಯನ್ನು ಹೇಗೆ ಬಳಸಬೇಕು ಎನ್ನುವ ಜ್ಞಾನ..

ತರಬೇತಿ ಮತ್ತು ಪ್ರಮಾಣಪತ್ರಗಳ ಮೂಲಕ ಪೋಷಕರು, ಮಕ್ಕಳು ಮತ್ತು ಶಿಕ್ಷಣ ಸಂಸ್ಥೆಗಳು ಸಂಯೋಜಿತವಾಗಿ ಇದನ್ನು ಯಶಸ್ವಿಗೊಳಿಸಿ ಕೊಡುತ್ತಾರೆ ಎಂಬ ವಿಶ್ವಾಸ ನಮಗಿದೆ. ನಾವು ಕಂಪ್ಯೂಟರ್ ಜ್ಞಾನವನ್ನು ಹೇಳಿಕೊಡುವಾಗ ಪೋಷಕರಿಗೆ, ಶಿಖ್ಷಕರಿಗೆ ಮತ್ತು ಸಂಬಂಧಪಟ್ಟ ಮಕ್ಕಳಿಗೆ ಅದ್ಭುತವಾದ ಪಿಸಿ ಬಳಕೆಯ ಕೌಶಲ್ಯಗಳೊಂದಿಗೆ ತರಬೇತಿಯನ್ನು ಒದಗಿಸುತ್ತೇವೆ.

ಸೃಜನಶೀಲತೆ, ಕಠಿಣವಾದ ತಾರ್ಕಿಕ ಯೋಚನೆ ಮತ್ತು ಸಂಕೀರ್ಣವಾದ ಸಮಸ್ಯೆಗಳನ್ನು ಪರಿಹರಿಸುವುದು ಇವುಗಳು ಇಂದಿನ ಡಿಜಿಟಲ್ ಇಂಡಿಯಾದ ಪ್ರಮುಖವಾದ ಮೂರು ಅತ್ಯಾವಶ್ಯಕವಾದ ಕೌಶಲ್ಯಗಳಾಗಿವೆ, ಮತ್ತು ಆರಂಭ್ ಎನ್ನುವುದು ತಂತ್ರಜ್ಞಾನದ ಸಹಾಯದಿಂದ ಈ ಮೂರು ಕೌಶಲ್ಯಗಳನ್ನುಹೊಂದುವ ನಮ್ಮ ಪ್ರಯತ್ನದ ಒಂದು ರೂಪವಾಗಿದೆ. ಈ ರೀತಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ನಾವು ನಮ್ಮ ಡೆಲ್ ಚಾಂಪ್ಸ್ ಸ್ಕೂಲ್ ಕಾಂಟ್ಯಾಕ್ಟ್ ಪ್ರೋಗ್ರಾಮ್ ಮೂಲಕ ಸುಮಾರು ೧.೫ ಮಿಲಿಯನ್ ವಿದ್ಯಾರ್ಥಿಗಳನ್ನು ನಾವು ತೊಡಗಿಸಿಕೊಳ್ಳುವಂತೆ ಮಾಡಿದ್ದೇವೆ. NIITಯ ಸಹಯೋಗದಲ್ಲಿ ನಾವು ೭೦ ನಗರಗಳ ೫,೦೦೦ಕ್ಕೂ ಹೆಚ್ಚಿನ ಶಾಲೆಗಳಿಂದ ೧,೨೫,೦೦೦ ಶಿಕ್ಷಕರನ್ನು ತರಬೇತಿಗೊಳಿಸುವ ಮತ್ತು ಅವರಿಗೆ ಪ್ರಮಾಣಪತ್ರವನ್ನು ನೀಡುವ ಮತ್ತು ೪,೦೦,೦೦೦ ತಾಯಂದಿರನ್ನು ಡಿಜಿಮಾಮ್ಸ್ ಪ್ರೋಗ್ರಾಮ್‌ನ ಭಾಗವಾಗಿಸುವ ಮೂಲಕ ಅವರನ್ನು ಸಮರ್ಥರನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದೇವೆ.

ಬನ್ನಿ, ಕಲಿಯುವಿಕೆಯ ಹೊಸ ವಿಧಾನವಾಗಿರುವ ನಮ್ಮ ’ಆರಂಭ್’ ಆಂದೋಲನಕ್ಕೆ ಸೇರಿಕೊಳ್ಳಿ.