ಶಿಶುವಿಹಾರದ ಪೋಷಕರಿಗೆ ಸಲಹೆಗಳು

ನೀವು ಪ್ರಿ-ಸ್ಕೂಲ್ ಮಕ್ಕಳ ಪೋಷಕರಾಗಿದ್ದರೆ, ಕೆಲವೊಮ್ಮೆ, ನಿಮ್ಮ ಚಿಕ್ಕ ಮಗುವಿನ ಹಿಂದೆ ಓಡುವುದು ಸವಾಲಿನ ಮತ್ತು ದಣಿವಾಗುವಂತಹ ಸಂಗತಿಯಾಗಿದೆ. ಮಕ್ಕಳನ್ನು ಬೆಳೆಸುವುದು ಅತ್ಯಂತ ಸವಾಲಿನ ಕೆಲಸಗಳಲ್ಲಿ ಒಂದಾಗಿದೆ, ಆದರೆ ಅದನ್ನು ನೀವೊಬ್ಬರೇ ಮಾಡಬೇಕಾಗಿಲ್ಲ.

ನಿಮ್ಮನ್ನು ತೊಡಗಿಸಿಕೊಳ್ಳಲು ಮತ್ತು ನಿಮ್ಮ ಮಗುವಿನಲ್ಲಿ ಮತ್ತು ಮಗುವಿನ ಶಾಲಾ ಕಲಿಕೆಯಲ್ಲಿ ಹೊಸತನ ತರಲು ಸರಳ ಮಾರ್ಗಗಳಿವೆ. ನಿಮ್ಮ ಮಗುವಿನ ಶಿಕ್ಷಣದಲ್ಲಿ ಭಾಗಿಯಾಗುವುದು ಹಲವು ವಿಧಗಳಲ್ಲಿ ಪರಿಣಾಮಕಾರಿಯಾಗಿದೆ. ಪೋಷಕರ ಒಳಗೊಳ್ಳುವಿಕೆ ಶಾಲೆಗಳನ್ನು ಬಲಪಡಿಸುತ್ತದೆ ಮತ್ತು ನೀವು ಕಲಿಕೆಯನ್ನು ಗೌರವಿಸುತ್ತೀರಿ ಎಂದು ಮಕ್ಕಳಿಗೆ ತೋರಿಸುತ್ತದೆ. ಪೋಷಕರಿಗೆ ಮಗುವಿನ ಪಾಲನೆಗೆ ಸಹಾಯ ಮಾಡುವ ಕೆಲವು ಸಲಹೆಗಳನ್ನು ನಾವು ಪ್ರಸ್ತುತಪಡಿಸುತ್ತೇವೆ.

ಮನೆಯಲ್ಲಿ ಸಹಾಯ ಹಸ್ತ-

ಪ್ರಸೆಂಟೇಷನ್ ಗಳು ಮತ್ತು ಇತರ ಪಾಠಗಳಿಗೆ ಸಾಮಗ್ರಿಗಳನ್ನು ತಯಾರಿಸಲು ಸಹಾಯ ಮಾಡಿ. ನೀವು PTA ಗೆ ಕೂಡಾ ಸೇರಬಹುದು. ನಿಮ್ಮ ಸ್ವಯಂಸೇವಕ ನೀತಿಯನ್ನು ಮನೆಯಲ್ಲಿ ಪಾಲಿಸುವುದು ಶಾಲೆ ಮುಖ್ಯ ಎಂದು ನಿಮ್ಮ ಮಗುವಿಗೆ ತಿಳಿಯುವಂತೆ ಮಾಡುತ್ತದೆ. ಇದು ಶಿಕ್ಷಕರೊಂದಿಗಿನ ನಿಮ್ಮ ಸಂಪರ್ಕವನ್ನು ಬಲಪಡಿಸಲು ಸಹ ಸಹಾಯ ಮಾಡುತ್ತದೆ.

ಶಾಲಾ ಕಾರ್ಯಕ್ರಮಗಳಿಗೆ ಹಾಜರಾಗಿ-

ವರ್ಚುವಲ್ ಓಪನ್ ಹೌಸ್ ಗಳು, ಕಲಾ ಪ್ರದರ್ಶನಗಳು ಮತ್ತು ಇತರ ಶಾಲಾ ಕಾರ್ಯಕ್ರಮಗಳಿಗೆ ಹಾಜರಾಗಲು ಮರೆಯಬೇಡಿ. ಶಾಲಾ ಕಾರ್ಯಕ್ರಮಗಳು ಶಾಲಾ ಸಿಬ್ಬಂದಿ ಮತ್ತು ಇತರ ಪೋಷಕರೊಂದಿಗೆ ಸಂವಹನ ನಡೆಸಲು ಒಂದು ಉತ್ತಮ ಅವಕಾಶವಾಗಿದೆ.

ಶಾಲೆಯ ಬಗ್ಗೆ ನಿಮ್ಮ ಮಗುವಿನೊಂದಿಗೆ ಮಾತನಾಡಿ-

“ನಿನ್ನ ಕ್ಲಾಸ್ ಹೇಗಿತ್ತು?” ಎಂದು ಕೇಳುವ ಬದಲು, “ಇಂದು ತರಗತಿಯಲ್ಲಿ ನಡೆದ ಅತ್ಯುತ್ತಮ ವಿಷಯ ಯಾವುದು?” ಮತ್ತು "ಶಿಶುವಿಹಾರದಲ್ಲಿ ನೀನು ಇಂದು ಕಲಿತ ಒಂದು ಹೊಸ ವಿಷಯವನ್ನು ಹೇಳು." ಎಂಬುದಾಗಿ ಕೇಳಿ.

ಇಂದಿನ ತಂತ್ರಜ್ಞಾನ ಯುಗದಲ್ಲಿ ಮಗುವನ್ನು ಬೆಳೆಸುವುದು ಸುಲಭವಲ್ಲ. ಪೋಷಕರು ಸರಿಯಾದ ತಾಂತ್ರಿಕ ಜ್ಞಾನವನ್ನು ಹೊಂದಿದ್ದಲ್ಲಿ ಮಾತ್ರ ಈ ಎಲ್ಲಾ ಕಾರ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಬಹುದು. ಕೆಲವೊಮ್ಮೆ, ನಿಮ್ಮ ಮಗುವಿನ ಸಾಮರ್ಥ್ಯದ ಮಟ್ಟ ಮತ್ತು ಕುತೂಹಲಕ್ಕೆ ಸಮನಾಗಿ ನಡೆದುಕೊಳ್ಳಲು ನಿಮಗೆ ಕಷ್ಟವಾಗಬಹುದು. ನಿಮ್ಮ ಪಾಲನೆಯ ಶೈಲಿಯನ್ನು ಹೆಚ್ಚಿಸಲು ನಿಮಗೆ ಸಹಾಯ ಬೇಕಾದಲ್ಲಿ ಈ ಪೋಷಕರ ಸಲಹೆಗಳನ್ನು ನೋಡಿ.

21 ನೇ ಶತಮಾನದ ಡಿಜಿಟಲ್ ಮಕ್ಕಳ ಪಾಲನೆ ಕುರಿತು ನಮ್ಮ ವೆಬಿನಾರ್ - https://www.dellaarambh.com/webinars/ ಗೆ ಟ್ಯೂನ್ ಮಾಡಿ.