ಏಸ್ ವರ್ಚುವಲ್ ಶಾಲೆಗೆ ಸಲಹೆಗಳು

ದೂರ ಶಿಕ್ಷಣದೊಂದಿಗೆ ಇದು ನಿಮ್ಮ ಮೊದಲ ಅನುಭವವೇ? ನಿಮ್ಮ ದಿನಗಳನ್ನು ಹೇಗೆ ರೂಪಿಸುವುದು ಎಂದು ನಿಮಗೆ ಖಚಿತವಿಲ್ಲವೇ? ಮೊದಲನೆಯದಾಗಿ, ಆನ್ ಲೈನ್ ಕಲಿಕೆಯಲ್ಲಿ ಯಶಸ್ವಿಯಾಗಲು ನೀವು ಉತ್ತಮ ಅಭ್ಯಾಸವನ್ನು ಅಳವಡಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಹೆಚ್ಚು ಹೆಚ್ಚು ಸ್ವತಂತ್ರವಾಗಿ ಕೆಲಸ ಮಾಡಬೇಕು. ನಿಮ್ಮ ವರ್ಚುವಲ್ ಶಾಲೆಯನ್ನು ಏಸ್ ಮಾಡಲು ಮತ್ತು ನಿಮ್ಮ ತರಗತಿಯಲ್ಲಿ ಮುಂದಿರಲು (ಟಾಪ್ ಆಗಿರಲು)ಕೆಲವು ಸಲಹೆಗಳು ಇಲ್ಲಿವೆ

1. ಕಲಿಕಾ ಸಾಮಗ್ರಿಗಳನ್ನು ವಿನ್ಯಾಸಗೊಳಿಸಿ 

ಅಂಕಗಳು, ದಿನಾಂಕಗಳು ಮತ್ತು ಹೆಸರುಗಳಿಗಾಗಿ ಆಕರ್ಷಕವಾಗಿ ಮತ್ತು ವರ್ಣಮಯವಾಗಿ ಕಾಣುವ ಫ್ಲ್ಯಾಷ್ ಕಾರ್ಡ್ ಗಳನ್ನು ವಿನ್ಯಾಸಗೊಳಿಸಿ. ಮರೆಯಬಹುದಾದ ವಿವರಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳಲು ಫ್ಲ್ಯಾಶ್ ಕಾರ್ಡ್ ಗಳು ನಿಮಗೆ ಸಹಾಯ ಮಾಡುತ್ತವೆ.

2. ಗೊಂದಲವನ್ನು ತಪ್ಪಿಸಿ

ಆನ್ ಲೈನ್ ತರಗತಿಗಳು ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯಬಹುದು. ನೀವು ಗೊಂದಲದಿಂದ ದೂರವಿರುವ ಒಂದು ಸ್ಥಳದಲ್ಲಿ ಕುಳಿತು ಶಿಕ್ಷಕರು ಏನು ಹೇಳುತ್ತಿದ್ದಾರೆಂಬುದರ ಕಡೆ ಗಮನ ಕೊಡಿ. ನೀವು ತರಗತಿಯಲ್ಲಿ ಕುಳಿತಿರುವಂತೆ ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಿ. 

3. ಪ್ರಶ್ನೆಗಳನ್ನು ಕೇಳಿ

ಯಾವತ್ತೂ ಹೆಚ್ಚು ಪ್ರಶ್ನೆಗಳಿರುವುದಿಲ್ಲ. ಕ್ಲಿಷ್ಟವಾದ ಪರಿಕಲ್ಪನೆಗಳನ್ನು ವಿವರವಾಗಿ ವಿವರಿಸುವಂತೆ ನಿಮ್ಮ ಶಿಕ್ಷಕರನ್ನು ಕೇಳಿ. ಯಾವುದಾದರೂ ತುಂಬಾ ಕಷ್ಟವೆನಿಸಿದರೆ, ನಿಮ್ಮ ತರಗತಿಯ ಶಿಕ್ಷಕರೊಂದಿಗೆ ಖಾಸಗಿಯಾಗಿ ಮಾತನಾಡಿ.

4. ಸಂಘಟಿತರಾಗಿ

ಖುದ್ದಾಗಿ ಆಸಕ್ತಿ ವಹಿಸಿ ನಿಮ್ಮ ಕಂಪ್ಯೂಟರ್ ನಲ್ಲಿ ಮತ್ತು ನಿಮ್ಮ ಇಮೇಲ್ ಪ್ರೋಗ್ರಾಂನಲ್ಲಿ ಪ್ರತಿ ತರಗತಿಯ ಪಾಠಕ್ಕೆ ಎಲೆಕ್ಟ್ರಾನಿಕ್ ಫೋಲ್ಡರ್ ಗಳನ್ನು ರಚಿಸಿ. ನಿಮ್ಮ ವರ್ಚುವಲ್ ಶಾಲೆ ಒಂದು ಆನ್ ಲೈನ್ ಪ್ಲಾನರ್ ಅನ್ನು ಒದಗಿಸಿದರೆ, ಅದನ್ನು ನಿಮ್ಮ ಅಪಾಯಿಂಟ್ಮೆಂಟ್ ಗಳನ್ನು ನಿಗದಿಪಡಿಸಲು ಮತ್ತು ಆದ್ಯತೆಯ ಮೇರೆಗೆ ಶ್ರೇಣೀಕರಿಸಿ ನೀವು ಮಾಡಬೇಕಾದ ಕೆಲಸಗಳ ಒಂದು ಪಟ್ಟಿಯನ್ನು ರಚಿಸಲು ಬಳಸಿಕೊಳ್ಳಿ.

5. ಧನಾತ್ಮಕವಾಗಿ ಯೋಚಿಸಿ

ಬದಲಾವಣೆಯ ಮೂಲಕ ಅಭಿವೃದ್ಧಿ ಹೊಂದುವುದು ಕಠಿಣ ಆದರೆ ಸಕಾರಾತ್ಮಕ ಮನೋಭಾವದಿಂದ ಅದನ್ನು ಮಾಡಬಹುದು. ಆನ್ ಲೈನ್ ಕಲಿಕೆಯ ಬಗ್ಗೆ ಸಕಾರಾತ್ಮಕ ಮನೋಭಾವ ನಿಮಗೆ ನೀವೇ ನೀಡುವ ಅತ್ಯುತ್ತಮ ಕೊಡುಗೆಯಾಗಿದೆ.

ಒಳ್ಳೆಯದಾಗಲಿ!