ಹೊಸ ರೀತಿಯ ಶಿಕ್ಷಣ: ಪಿಸಿಗಳಿಂದ ಸಶಕ್ತಗೊಳಿಸಲಾಗಿದೆ

 

ಪಿಸಿ-ಕಲಿಕೆಯ ಈ ಕಾಲವು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಅನೇಕ ಅನುಕೂಲಗಳನ್ನು ಒದಗಿಸುವಂತಹ ಒಂದು ಹೊಸ ರೀತಿಯ ಶಿಕ್ಷಣ ಪದ್ಧತಿಯನ್ನು ತಂದಿದೆ. ಶಿಕ್ಷಕರಾಗಿ, ನೀವು ತರಗತಿಯಲ್ಲಿ ಹೆಚ್ಚು ಅನುಕೂಲಕರವಾದ ಕಲಿಕೆಯ ವಾತಾವರಣವನ್ನು ಸೃಷ್ಟಿಸಲು ಈ ಸೌಲಭ್ಯಗಳನ್ನು ಬಳಸಬೇಕು.

 

  1. ಮಲ್ಟಿಮೀಡಿಯಾವನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಿ

ತಾಂತ್ರಿಕ ಕೌಶಲ್ಯಗಳನ್ನು ಕಲಿಯುವಾಗ ಪಿಸಿ ಚಾಲಿತ ಪರಿಕರಗಳು ವಿದ್ಯಾರ್ಥಿಗಳಿಗೆ ದೃಶ್ಯೀಕರಿಸಲು, ಸೃಜನಶೀಲತೆಗೆ ಮತ್ತು ಅಭಿವ್ಯಕ್ತಿಗೆ ಅನುವು ಮಾಡಿಕೊಡುತ್ತದೆ. ಇದು ಅವರ ಪರಿಕಲ್ಪನೆಗಳು ಮುಂಚೂಣಿಗೆ ಬರಲು ಸಹಾಯ ಮಾಡುವುದಲ್ಲದೆ ಅವರು ವಯಸ್ಕರಾದಾಗ ಕೂಡಾ ನೆರವಾಗುತ್ತದೆ. ಉಜ್ವಲ ಭವಿಷ್ಯಕ್ಕಾಗಿ ನಾಳೆಯ ಮಕ್ಕಳನ್ನು ಚಿಕ್ಕ ವಯಸ್ಸಿನಿಂದಲೇ ಮಲ್ಟಿಮೀಡಿಯಾಕ್ಕೆ ಒಗ್ಗಿಕೊಳ್ಳುವಂತೆ ಮಾಡಿ.

 

  1. ಕಲಿಕೆಗೆ ಯಾವುದೇ ನಿರ್ಬಂಧವಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ

ವರ್ಚುವಲ್ ಕಲಿಕೆಯೊಂದಿಗೆ, ವಿದ್ಯಾರ್ಥಿಗಳು ಪ್ರಪಂಚದಾದ್ಯಂತದ ಯಾವುದೇ ಕೌಶಲ್ಯವನ್ನು ಕಲಿಯಬಹುದಾದ್ದರಿಂದ ಅವರು ಇನ್ನು ಮುಂದೆ ಸೀಮಿತ ಚೌಕಟ್ಟಿನ ಶಿಕ್ಷಣವನ್ನು ಆರಿಸಬೇಕಾಗಿಲ್ಲ. ಇದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವುದಲ್ಲದೆ, ಅವರ ವ್ಯಕ್ತಿತ್ವದ ಅನ್ವೇಷಣೆಗೆ ಮತ್ತು ವಿಕಸನಕ್ಕೆ ಅವಕಾಶವನ್ನು ನೀಡುತ್ತದೆ.

 

  1. ದೃಶ್ಯಮಾಧ್ಯಮದ ಸಾಧನಗಳನ್ನು ಬಳಸಿ

ವ್ಯಕ್ತಪಡಿಸಲಾಗದ ಪರಿಕಲ್ಪನೆಗಳನ್ನು ದೃಶ್ಯೀಕರಿಸುವುದು ಸಾಮಾನ್ಯವಾಗಿ ಕಷ್ಟ, ಅದಕ್ಕಾಗಿಯೇ ನೀವು ಪರಿಕಲ್ಪನೆಗಳನ್ನು ಕಡಿಮೆ ಅಸ್ಪಷ್ಟ ಮತ್ತು ಹೆಚ್ಚು ದೃಢವಾಗಿಸಲು ಪಿಸಿ ಬೆಂಬಲಿತ ಕಲಿಕಾ ಸಾಧನಗಳನ್ನು ಬಳಸಬಹುದು. ಏಕೆಂದರೆ ಅವು ನೋಡಲು ಮಗುವಿನ ಕಣ್ಣ ಮುಂದೆಯೇ ಇರುತ್ತವೆ.

 

  1. ಸುಲಭ ಸಂವಹನವನ್ನು ಬೆಳೆಸಿಕೊಳ್ಳಿ

ಕಂಪ್ಯೂಟರ್ ಗಳು, ತಂತ್ರಜ್ಞಾನ ಮತ್ತು ಅಂತರ್ಜಾಲವು ಜಗತ್ತನ್ನು ಹತ್ತಿರವಾಗಿಸುತ್ತದೆ. ನಿಮ್ಮ ಮಕ್ಕಳು ನಿಮ್ಮ ನಗರ, ಶಾಲೆ ಮತ್ತು ತರಗತಿಗೆ ಸೀಮಿತವಾದದ್ದನ್ನು ಮಾತ್ರ ಕಲಿಯುತ್ತಿಲ್ಲ ಮತ್ತು ಕಲಿಕೆಯ ಬಗ್ಗೆ ಜಾಗತಿಕ ದೃಷ್ಟಿಕೋನವನ್ನು ಹೊಂದಿರುತ್ತಾರೆ ಎಂದು ನೀವು ಖಚಿತಪಡಿಸಿಕೊಳ್ಳಬಹುದು.

 

  1. ಸಂಶೋಧನೆ ಮತ್ತು ಮಾಹಿತಿಯನ್ನು ತ್ವರಿತವಾಗಿ ನಿಮ್ಮದಾಗಿಸಿಕೊಳ್ಳಬಹುದು.

ಕಂಪ್ಯೂಟರ್ ಶಿಕ್ಷಣವು ಮಕ್ಕಳಿಗೆ ಸಂಶೋಧನೆಗಾಗಿ ಮಾಹಿತಿಯನ್ನು ವೇಗವಾಗಿ ಮತ್ತು ಸುಲಭದಲ್ಲಿ ಪಡೆಯಲು ಅವಕಾಶವೀಯುತ್ತದೆ. ಕೆಲವೇ ಕ್ಲಿಕ್ ಗಳ ಮೂಲಕ, ಅವರು ತಮ್ಮ ಅನುಮಾನಗಳಿಗೆ ಉತ್ತರಗಳನ್ನು ಪಡೆಯಬಹುದು ಮತ್ತು ಇದು ವಿಷಯವನ್ನು ಇನ್ನಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲು ಅವರಿಗೆ ಅನುವು ಮಾಡಿಕೊಡುತ್ತದೆ.

 

ನಿಮ್ಮ ವಿದ್ಯಾರ್ಥಿಗಳು ಅಧ್ಯಯನ ಮಾಡುವ ವಿಧಾನವನ್ನು ಪರಿವರ್ತಿಸಲು ಮತ್ತು ಜ್ಞಾನವನ್ನು  ಮೈಗೂಡಿಸಿಕೊಳ್ಳಲು ಇ-ಕಲಿಕೆಯನ್ನು ನಿಮ್ಮ ತರಗತಿಯ ಭಾಗವಾಗಿಸಿಕೊಳ್ಳಿ.