ಉತ್ತಮ ಆನ್‌ಲೈನ್ ಮತ್ತು ಆಫ್‌ಲೈನ್ ಬೋಧನೆಯ ಮೂಲತತ್ವಗಳು

ಪ್ರಸ್ತುತ ಸನ್ನಿವೇಶದಲ್ಲಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಮಾನವಾಗಿ ಆನ್ ಲೈನ್ ಕಲಿಕೆ ಎಂಬ ಶಿಕ್ಷಣದ ಒಂದು ಹೊಸ ವಿಧಾನವನ್ನು ಎದುರಿಸುತ್ತಿದ್ದಾರೆ. ಶಿಕ್ಷಕರು ತರಗತಿಯ ವಾತಾವರಣಕ್ಕೆ ಅನುಗುಣವಾಗಿ ತಮ್ಮ ಪಾಠಗಳನ್ನು ಯೋಜಿಸುವುದು ಮಾತ್ರವಲ್ಲದೆ ವಿದ್ಯಾರ್ಥಿಗಳ ಮನೆಯ ವಾತಾವರಣವನ್ನೂ ಪರಿಗಣಿಸುತ್ತಾರೆ. ಶಿಕ್ಷಕರಾಗಿ, ಉತ್ತಮ ಕಲಿಕೆಯ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿ ನಿಮ್ಮ ಹೆಗಲ ಮೇಲೆ ಬೀಳುತ್ತದೆ. ಆನ್ ಲೈನ್ ಮತ್ತು ಆಫ್ ಲೈನ್ ತರಗತಿಗಳ ಪ್ರಯೋಜನಗಳನ್ನು ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಾರೆ ಎಂಬುದನ್ನು ನೀವು ಹೇಗೆ ಖಚಿತಪಡಿಸಿಕೊಳ್ಳಬಹುದು ಎಂಬುದು ಇಲ್ಲಿದೆ.

 

  • ಕಲಿಕೆಯ ಒಂದು ಸಮುದಾಯವನ್ನು ರಚಿಸಿ:

ಆರಂಭಿಕ ಚಟುವಟಿಕೆಗಳ ಮೂಲಕ ಕಲಿಯುವವರ ಒಂದು ಸಮುದಾಯವನ್ನು ರಚಿಸುವುದು ಹಾಗೂ ಪರಸ್ಪರ ಸಹಯೋಗದೊಂದಿಗೆ ಕೆಲಸ ಮಾಡುವಂತೆ ಮಾಡುವುದು ಸೂಕ್ತವಾದ ಕಲಿಕೆಯ ವಾತಾವರಣವನ್ನು ನಿರ್ಮಿಸುವ ಒಂದು ಉತ್ತಮ ಮಾರ್ಗವಾಗಿದೆ. ವಿದ್ಯಾರ್ಥಿಗಳು ತರಗತಿಯ ವಾತಾವರಣದಿಂದ ದೂರವಿರುವಾಗ, ಒಂದು ತಂಡವಾಗಿ ಕೆಲಸ ಮಾಡುವುದನ್ನು ಮತ್ತಷ್ಟು ಪ್ರೋತ್ಸಾಹಿಸಬೇಕು, ಇದರಿಂದ ಅವರು ನಾಯಕತ್ವದ ಕೌಶಲ್ಯಗಳನ್ನು ಬೆಳೆಸಿಕೊಳ್ಳಬಹುದು ಮತ್ತು ಸ್ವತಂತ್ರವಾಗಿ ಕಲಿಯುವವರಾಗಬಹುದು.

 

  • ಪ್ರತಿಕ್ರಿಯೆ:

ನಿಯಮಿತವಾಗಿ ಮರುಮಾಹಿತಿ ಪಡೆಯುವುದು ಮತ್ತು ಅಸೈನ್ಮೆಂಟ್&zwjಗಳಿಗೆ ಒಂದು ಸೂಕ್ತ ವೇಳಾಪಟ್ಟಿಯನ್ನು ಇಟ್ಟುಕೊಳ್ಳುವುದರಿಂದ  ವಿದ್ಯಾರ್ಥಿಗಳು ವಾರ ಪೂರ್ತಿ ಶ್ರಮಪಡಬೇಕಿಲ್ಲ ಎಂಬುದನ್ನು ಖಚಿತಪಡಿಸುತ್ತದೆ.

 

  • ಸಮಗ್ರ ಪಠ್ಯಕ್ರಮ

ವಿದ್ಯಾರ್ಥಿಗಳ ಕಲಿಕೆಯ ಶೈಲಿಗಳನ್ನು ಪೂರೈಸುವ ಒಂದು ಸಮಗ್ರ, ಸುಸಂಘಟಿತ, ಸುಲಭವಾದ ಪಠ್ಯಕ್ರಮವನ್ನು ವಿನ್ಯಾಸಗೊಳಿಸಿ. ಪಠ್ಯಕ್ರಮವು ಸಮಗ್ರ ಕಲಿಕೆಯ ಅನುಭವವನ್ನು ಒದಗಿಸಲು ವಿದ್ಯಾರ್ಥಿಗಳ ಸಾಮರ್ಥ್ಯಗಳನ್ನು ಬಳಸುತ್ತದೆ ಮತ್ತು ಇದು ಅವರ ಆತ್ಮಸ್ಥೈರ್ಯ ಮತ್ತು ಧಾರಣ ಶಕ್ತಿಯನ್ನು  ಹೆಚ್ಚಿಸಲು ಉತ್ತಮ ಸಾಧನವಾಗಿದೆ.

 

  • ಶೈಕ್ಷಣಿಕ ಮತ್ತು ವಿನೋದ ವಿರಾಮಗಳು:

ಯಾವುದೇ ಮೋಜಿನ ವಿರಾಮಗಳಿಲ್ಲದೆ ನಿರಂತರವಾಗಿ ಪಾಠ ಕೇಳಲು ಕುಳಿತುಕೊಳ್ಳುವುದು ವಿದ್ಯಾರ್ಥಿಗಳು ತಮ್ಮ ಅಧ್ಯಯನ ಸಾಮಗ್ರಿಗಳ ಬಗ್ಗೆ ಆಸಕ್ತಿ ಕಳೆದುಕೊಳ್ಳಲು ಕಾರಣವಾಗಬಹುದು. ಪ್ರತಿ ತರಗತಿಯ ಪ್ರಾರಂಭ ಮತ್ತು ಕೊನೆಯಲ್ಲಿ ಅವರ ವಿಶಿಷ್ಟ ಸಾಮರ್ಥ್ಯಗಳ ಮೇಲೆ ಗಮನ ಕೇಂದ್ರೀಕರಿಸುವಂತಹ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವುದರಿಂದ ಅದು ನಿಮ್ಮ ವಿದ್ಯಾರ್ಥಿಗಳು ಅಧ್ಯಯನಕ್ಕೆ ಸ್ಪಂದಿಸುವುದನ್ನು ಖಚಿತಪಡಿಸಿಕೊಳ್ಳುತ್ತದೆ.

 

ಆನ್ ಲೈನ್ ಕಲಿಕೆಗೆ ಅಡಿಪಾಯವನ್ನು ನಿರ್ಮಿಸುವುದು ಇಂದಿನ ಅವಶ್ಯಕತೆಯಾಗಿದೆ. ನಿಮ್ಮ ವಿದ್ಯಾರ್ಥಿಗಳನ್ನು ಅತ್ಯುತ್ತಮರನ್ನಾಗಿ ಮಾಡುವುದು ಹೇಗೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಮ್ಮ ವೆಬಿನಾರ್ ಗೆ ಸೇರಿ - https://www.dellaarambh.com/webinars/