ಸಂಶೋಧನೆ ಮಾಡಲು ಪಿಸಿ ನಿಮಗೆ ನೆರವಾಗುವ ಮೂರು ಮಾರ್ಗಗಳು

ಈ ಡಿಜಿಟಲ್ ಯುಗದಲ್ಲಿ, ಅಪಾರ ಸಂಖ್ಯೆಯ ವಿಷಯಗಳನ್ನು ಹುಡುಕಲು ಅಂತರ್ಜಾಲವನ್ನು ಲಕ್ಷಗಟ್ಟಲೆ ಜನರು ಈಗ ಬಳಸುತ್ತಿದ್ದಾರೆ. ಅಂತರ್ಜಾಲದಲ್ಲಿ ಕೊನೆಯಿಲ್ಲದ ಮಾಹಿತಿ ಮತ್ತು ಸಂಪನ್ಮೂಲಗಳೊಂದಿಗೆ, ಈಗ ನಿಮಗೆ ವಿಶ್ವದಲ್ಲಿ ಗೊತ್ತು ಮಾಡಿಕೊಳ್ಳದ ವಿಷಯವೇ ಇಲ್ಲವಾಗಿದೆ. ಆದರೆ ನೀವು ಆರಂಭಿಸುವುದು ಹೇಗೆ? [1]

1) ಒಂದು ವೇಳಾಪಟ್ಟಿಯನ್ನು ನಿರ್ವಹಿಸಿ, ಸಮಯದ ಮಿತಿಯನ್ನು ನಿಗದಿಪಡಿಸುವುದರ ಮಹತ್ವ

ಪ್ರತಿಯೊಂದಕ್ಕೂ ಸಿದ್ಧರಾಗಿ ಇರುವುದು ಯಾವಾಗಲೂ ಅತ್ಯುತ್ತಮವಾಗಿರುತ್ತದೆ. ಆದ್ದರಿಂದ, ನೀವು ಒಂದು ವೇಳಾಪಟ್ಟಿಯನ್ನು ತಯಾರಿಸಿದಾಗ, ಸಂಶೋಧನೆ ಮಾಡಲು ನಿಮಗೆ ಬೇಕಾಗುವ ಸಮಯವನ್ನಷ್ಟೇ ಅಲ್ಲದೇ, ನೀವು ವಿಚಲಿತರಾಗುವಷ್ಟು ಬಾರಿಯ ಸಮಯವನ್ನೂ ಮೀಸಲಿರಿಸಿ. ಒಂದು ವಿಷಯದ ಮೇಲೆ ನಿಮ್ಮ ಸಂಶೋಧನೆಯನ್ನು ಸಂಪೂರ್ಣಗೊಳಿಸಿ, ಅದೇ ಪಥದಲ್ಲಿರಲು ನಿಮಗೆ ವಾಸ್ತವಿಕವಾಗಿ ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನು ಅರ್ಥೈಸಿಕೊಳ್ಳಲು ಇದು ನಿಮಗೆ ನೆರವಾಗುತ್ತದೆ.

2) ವೈಕಿಪೀಡಿಯಾದೊಂದಿಗೆ ಆರಂಭಿಸಿ (ಆದರೆ ನಿಲ್ಲಿಸಬೇಡಿ)

ಒಂದು ನಿರ್ದಿಷ್ಟ ವಿಷಯದ ಬಗ್ಗೆ ಮೇಲ್ನೋಟವನ್ನು ಪಡೆದುಕೊಳ್ಳಲು ಮತ್ತು ಇನ್ನೂ ಹೆಚ್ಚಿನ ಮೂಲಗಳನ್ನು ಕಂಡುಕೊಳ್ಳಲು Wikipedia [2] ತುಂಬಾ ಉಪಯುಕ್ತವಾಗಿದೆ. ನಿಮ್ಮ ಸಂಶೋಧನೆಯನ್ನು ಮುಂದುವರೆಸಲು ಕೀವರ್ಡ್ಗಳು, ಸಂಪನ್ಮೂಲಗಳು, ಸೂಚಿಸಿದ ಮತ್ತು ಸಂಬಂಧಿಸಿದ ಲಿಂಕ್ಗಳನ್ನು ನೀವು ಆಯ್ದುಕೊಳ್ಳಬಹುದು. ಆದರೆ, ಇದು ಒಂದು ಸಮುದಾಯದಿಂದ ಹುಟ್ಟು ಹಾಕಲ್ಪಟ್ಟ ವೇದಿಕೆಯಾಗಿರುವುದರಿಂದ, ಅದನ್ನು ನಿಮ್ಮ ಏಕಮಾತ್ರ ಮೂಲವನ್ನಾಗಿ ಬಳಸುವುದನ್ನು ತಪ್ಪಿಸಿ.

3) ನಿರ್ದಿಷ್ಟ ಪದಗುಚ್ಛಗಳು, ವಿಶಿಷ್ಟ ಕೀವರ್ಡ್ಗಳು ಮತ್ತು ಅಡ್ವಾನ್ಸ್ಡ್ ಸರ್ಚ್ ಫಂಕ್ಷನ್ ಅನ್ನು ಬಳಸುವುದು

ಗೂಗಲ್ನಿಂದ ಅದರ ಬಹುಪಾಲು ಉಪಯೋಗವನ್ನು ಪಡೆದುಕೊಳ್ಳಿ! ಕೆಲವು ಹ್ಯಾಕ್ಗಳೊಂದಿಗೆ, ಗೂಗಲ್ನ ಅಡ್ವಾನ್ಸ್ಡ್ ಸರ್ಚ್ ಫಂಕ್ಷನ್ನಲ್ಲಿ ವಿಶಿಷ್ಟ ಕೀವರ್ಡ್ಗಳು, ನಿರ್ದಿಷ್ಟ ಪದಗುಚ್ಛಗಳು ಮತ್ತು ಕಮಾಂಡ್ಗಳೊಂದಿಗೆ ನಿಮಗೆ ಬೇಕಾದ ನಿಖರ ಮಾಹಿತಿಯನ್ನು ನೀವು ಪಡೆದುಕೊಳ್ಳಬಹುದು. ಉದಾಹರಣೆಗೆ, ಫಲಿತಾಂಶಗಳನ್ನು ನಿಖರವಾಗಿ ಆದೇ ಪದಗುಚ್ಛಗಳೊಂದಿಗೆ ಕಂಡುಕೊಳ್ಳಲು ನಿಮ್ಮ ಪದಗುಚ್ಛವನ್ನು &ldquo&rdquo ಒಳಗೆ ಹುಡುಕಿ. [3]

4) ಗೂಗಲ್ ಸ್ಕಾಲರ್ ಮತ್ತು ಗೂಗಲ್ ಬುಕ್ಸ್ ಅನ್ನು ಉಪಯೋಗಿಸಿಕೊಳ್ಳುವುದು

ಪ್ರಖ್ಯಾತ ವಿದ್ವಾಂಸರಿಂದ ನಿಯತಕಾಲಿಕಗಳು ಮತ್ತು ಪಠ್ಯಪುಸ್ತಕಗಳನ್ನು ಪಡೆದುಕೊಳ್ಳುವುದಕ್ಕಿಂತ ಹೆಚ್ಚು ಉತ್ತಮವಾದದ್ದು ಯಾವುದೂ ಇರಲಾರದು. ನಿಮ್ಮ ವಿಷಯದ ಮೇಲಿನ ಆಳವಾದ ಜ್ಞಾನಕ್ಕಾಗಿ ಗೂಗಲ್ ಸ್ಕಾಲರ್ ಮತ್ತು ಗೂಗಲ್ ಬುಕ್ಸ್ ಅನ್ನು ನಿಮ್ಮ ಸಂಶೋಧನೆಯ ಅವಶ್ಯಕ ಭಾಗವನ್ನಾಗಿಸಿಕೊಳ್ಳಿ. ಅಲ್ಲದೇ, ನಿಮ್ಮ ಹುಡುಕಾಟಕ್ಕೆ ಸಂಬಂಧಿಸದ ಸಾವಿರಾರು ಫಲಿತಾಂಶಗಳನ್ನು ನೀವು ಬೆದಕಬೇಕಿರುವುದಿಲ್ಲ.

5) ಕೋರಾ ಅನ್ನು ಬಳಸುವುದರ ಪ್ರಯೋಜನಗಳು

ಕೋರಾ ಎಂಬುದು ಜೀವನದ ಹಲವಾರು ನಡಿಗೆಗಳಿಂದ ಬಂದ, ಚರ್ಚೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಜನರ ಅದ್ಭುತವಾದ ಸಮುದಾಯವಾಗಿದೆ. ನಿಮ್ಮಂತೆಯೇ ಇರುವ ವಿದ್ಯಾರ್ಥಿಗಳಿಂದ ನಿಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆದುಕೊಳ್ಳಿ, ನಿಮ್ಮ ವಿಷಯದ ಮೇಲೆ ಹಲವಾರು ಅಭಿಪ್ರಾಯಗಳು ಮತ್ತು ದೃಷ್ಟಿಕೋನಗಳನ್ನು ಓದಿ.

ಅಧ್ಯಯನವನ್ನು ನಿಮಗೆ ಹೆಚ್ಚು ವ್ಯವಸ್ಥಿತಗೊಳಿಸುತ್ತಾ ಹಾಗೂ ಅದೇ ಸಮಯದಲ್ಲಿ ಆನಂದಿಸತಕ್ಕುದನ್ನಾಗಿಸುತ್ತಾ, ಸರಿಯಾದ ಮಾಹಿತಿ ಮತ್ತು tools ಗಳಿಂದ ಕಲಿಕೆ ಮತ್ತು ಸಂಶೋಧನೆಗಾಗಿ ಪಿಸಿ ಬಹಳ ಉಪಯುಕ್ತವಾಗಬಲ್ಲದು. ನಿಮ್ಮ ಅಧ್ಯಯನ ಸಂತೋಷದಾಯಕವಾಗಿರಲಿ!ಮುಂದಿನ ಭವಿಷ್ಯಕ್ಕೆ ಸುಗಮ ಹಾದಿ ರೂಪಿಸುತ್ತಿರುವ ಇಂದಿನ ಶಿಕ್ಷಕರು

 

ಶಿಕ್ಷಣ ಕ್ಷೇತ್ರವು ಹಲವು ವರ್ಷಗಳಿಂದ ಕ್ರಿಯಾತ್ಮಕ ಬದಲಾವಣೆಯ ಮೂಲಕ ಸಾಗಿದೆ. ಮಾಹಿತಿಯ ಪ್ರಸಾರದಿಂದ ಹಿಡಿದು ಮುದ್ರಣಾಲಯದ ಆವಿಷ್ಕಾರದಿಂದ ಹಿಡಿದು ವಿಶ್ವವಿದ್ಯಾಲಯಗಳ ಸ್ಥಾಪನೆಯವರೆಗೆ ಸಾಗಿ ಬಂದ ಶಿಕ್ಷಣ ಉದ್ಯಮದಲ್ಲಿ ನಾವು ಈಗ ಮತ್ತೊಂದು ಮಹತ್ವದ ಬದಲಾವಣೆಯನ್ನು ನೋಡುತ್ತಿದ್ದೇವೆ.

 

ಆನ್ ಲೈನ್ ಬೋಧನೆಯು ಶಿಕ್ಷಣದ ಭವಿಷ್ಯವಾಗಿದೆ. ಕಾಲ ಬದಲಾಗಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ, ಭವಿಷ್ಯದ ಶಿಕ್ಷಕರು ಈ ಸಂದರ್ಭಕ್ಕೆ ಅನುಗುಣವಾಗಿ ಶಿಕ್ಷಣದ ಹೊಸ ಅಲೆಗೆ ಹೊಂದಿಕೊಂಡರು. ಸಾಂಪ್ರದಾಯಿಕ ಬೋಧನಾ ವಿಧಾನಗಳನ್ನು  ಅಳವಡಿಸಿಕೊಳ್ಳುವ ಮೂಲಕ ಮತ್ತು ಅದರಲ್ಲಿ ಬದಲಾವಣೆಯನ್ನು ತರುವ ಮೂಲಕ, ಶಿಕ್ಷಕರು ಪರಿಣಾಮಕಾರಿಯಾದ ವಾಸ್ತವ(ವರ್ಚುವಲ್) ಕಲಿಕಾ ಪರಿಸರವನ್ನು ರೂಪಿಸಲು ತರಬೇತಿಯನ್ನು ಪಡೆದರು.

 

 

ಇ-ಗ್ರಂಥಾಲಯಗಳು, ಶ್ರವ್ಯ / ದೃಶ್ಯ ಪರಿಕರಗಳು, ಸಂವಾದಾತ್ಮಕ ತರಗತಿಗಳು ಮತ್ತು ತರಗತಿಯಲ್ಲಿ ಉದ್ಭವಿಸಬಹುದಾದ ತಾಂತ್ರಿಕ ಸಮಸ್ಯೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ಮೂಲಕ, ಶಿಕ್ಷಕರು ಬೆಳವಣಿಗೆ ಮತ್ತು ಶಿಕ್ಷಣವು ಸ್ಥಗಿತಗೊಳ್ಳದಂತೆ ನೋಡಿಕೊಂಡಿದ್ದಾರೆ.

 

ಈ ಶಿಕ್ಷಕರು ಶಿಕ್ಷಣಕ್ಕಾಗಿ ಪಿಸಿ  ಯನ್ನು ಚೆನ್ನಾಗಿ ಅರಿತುಕೊಂಡಿರುವುದು ಮಾತ್ರವಲ್ಲದೆ ನಿರೀಕ್ಷೆಗಳನ್ನು ಮೀರಿ ಮುನ್ನಡೆದಿದ್ದಾರೆ. ಅವರು ಪೂರ್ಣ ಪ್ರಮಾಣದ ಮೌಲ್ಯಮಾಪನಗಳು, ಅಸೈನ್ಮೆಂಟ್ ಗಳು, ಪರೀಕ್ಷೆಗಳು, ಪ್ರಗತಿಯ ದಾಖಲೆಗಳು ಮತ್ತು ವರ್ಚುವಲ್ ಮಾಧ್ಯಮದ ಮೂಲಕ ತಕ್ಷಣವೇ ಮರುಮಾಹಿತಿ, ಸಂವಾದಾತ್ಮಕ ಆನ್ ಲೈನ್ ತರಗತಿಗಳನ್ನು ರೂಪಿಸುವುದು ಮುಂತಾದುವುಗಳನ್ನು ರೂಢಿ ಮಾಡಿಕೊಂಡಿದ್ದಾರೆ.

 

 

ಡೆಲ್ ಆರಂಭ್ ನಲ್ಲಿ, ವೆಬಿನಾರ್ ಗಳ ಮೂಲಕ, ಪಿಸಿ ಯಿಂದ ಸಶಕ್ತಗೊಂಡ ಕಲಿಕೆಯನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಸಲುವಾಗಿ ಶಿಕ್ಷಕರಿಗೆ ಸಹಾಯ ಮಾಡಲು ನಾವು ಬಯಸಿದ್ದೇವೆ. ನಾವು 75-90 ನಿಮಿಷಗಳ ಅವಧಿಯ ವೆಬಿನಾರ್ ಗಳನ್ನು ವಿನ್ಯಾಸಗೊಳಿಸಿದ್ದೇವೆ ಮತ್ತು ಅವುಗಳ ಮೂಲಕ ಈ ಕೆಳಗಿನ ವಿಷಯಗಳನ್ನು ಪರಿಚಯಿಸಿದ್ದೇವೆ:

 

 • ಆನ್ ಲೈನ್ ಬೋಧನೆಗಾಗಿ ಮಾನಸಿಕ ತಯಾರಿ
 • ಆನ್ ಲೈನ್ ಬೋಧನೆಗಾಗಿ ಪರಿಕರಗಳು
 • ಆನ್ ಲೈನ್ ತರಗತಿಗಳ ಯೋಜನೆಯನ್ನು ರೂಪಿಸುವುದು
 • ಆನ್ ಲೈನ್ ತರಗತಿಗಳನ್ನು ಕಾರ್ಯಗತಗೊಳಿಸುವುದು
 • ಪರಿಣಾಮಕಾರಿ ಬೋಧನೆ - ಆನ್ ಲೈನ್
 • ತಂತ್ರಜ್ಞಾನದ ಸಿದ್ಧತೆ
 • ಅಡೆತಡೆಗಳು ಮತ್ತು ಅವುಗಳನ್ನು ನಿಭಾಯಿಸುವುದು ಹೇಗೆ
 • ಆನ್ ಲೈನ್ ಮೂಲಕ ಪರಿಣಾಮಕಾರಿಯಾಗಿ ಬೋಧನೆ
 • ಕಲಿಕೆಯ ಪರಿಣಾಮಗಳಿಗೆ ರೂಪು ಕೊಡಿ ಮತ್ತು ಆದ್ಯತೆ ನೀಡಿ
 • ತೊಡಗಿಸಿಕೊಳ್ಳಲು ಚಿಂತನೆಗಳು
 • ಮೌಲ್ಯಮಾಪನಗಳ ಬಗ್ಗೆ ಮರುವಿಚಾರ ಮಾಡಿ
 • ಆನ್ ಲೈನ್ ತರಗತಿಯಲ್ಲಿ ಏನನ್ನು ತಪ್ಪಿಸಬೇಕು
 • ಬೋಧನಾ ಮಾದರಿಗಳ ದಕ್ಷತೆ

 

ಶಿಕ್ಷಣವನ್ನು ತಲುಪಿಸುವ ಮತ್ತು ಸ್ವೀಕರಿಸುವ ವಿಧಾನವು ವೇಗವಾಗಿ ಬದಲಾಗುತ್ತಿದೆ, ಇದು ಶಿಕ್ಷಣದ ಮುಂದಿನ ಹಂತಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ, ಈ ಮಹತ್ವದ ಬದಲಾವಣೆಯ ಚುಕ್ಕಾಣಿ ಹಿಡಿದಿರುವವರ ಪ್ರಯತ್ನಗಳನ್ನು ನಾವು ಕೃತಜ್ಞತಾಪೂರ್ವಕವಾಗಿ ಸ್ಮರಿಸುತ್ತೇವೆ ಮತ್ತು ಪ್ರಶಂಸಿಸುತ್ತೇವೆ, ಅವರೇ ಶಿಕ್ಷಕರು!