ಈ ಅಸಾಂಪ್ರದಾಯಿಕ ವಿಧಾನಗಳ ಮೂಲಕ ನಿಮ್ಮ ಮಗು ಕಲಿಯುವಂತೆ ಮಾಡಿ

 

ಜ್ಞಾನವನ್ನು ನೀಡುವ ಏಕೈಕ ಮಾರ್ಗವೆಂದರೆ ಅದು ಪುಸ್ತಕಗಳು ಮತ್ತು ತರಗತಿಗಳ ಮೂಲಕ ಎನ್ನುವ ಕಾಲ ಆಗಿಹೋಯಿತು. ತಂತ್ರಜ್ಞಾನವು ದಾಪುಗಾಲಿಟ್ಟು ಬೆಳೆಯುತ್ತಿರುವುದರಿಂದ, ನಾಳೆಯ ಮಕ್ಕಳಿಗೆ ವಿಶಿಷ್ಟವಾದ ಮತ್ತು ಅಸಾಂಪ್ರದಾಯಿಕ ರೀತಿಯಲ್ಲಿ ಕಲಿಸಲು ಈಗ ಸಾಧ್ಯವಿದೆ.

 

ಹೆತ್ತವರಾಗಿ ನೀವು, ನಿಮ್ಮ ಮಕ್ಕಳು ಕಲಿಯುವ ರೀತಿಯಲ್ಲಿ ಕ್ರಾಂತಿಯನ್ನುಂಟುಮಾಡಲು ವರ್ಚುವಲ್ ಕಲಿಕೆಯಲ್ಲಿ ಅತ್ಯುತ್ತಮವಾದುದನ್ನು ನಿಮ್ಮ ಅನುಕೂಲಕ್ಕೆ ಬಳಸಿಕೊಳ್ಳಬಹುದು ಮತ್ತು ಕಲಿಕೆಯನ್ನು ಉತ್ತಮ ರೀತಿಯಲ್ಲಿ ಅಳವಡಿಸಿಕೊಳ್ಳಲು ಅವರಿಗೆ ನೆರವಾಗಬಹುದು.

 

ಹಾಗೆ ಮಾಡಲು ನಾಲ್ಕು ಸುಲಭ ಮಾರ್ಗಗಳು ಇಲ್ಲಿವೆ.

  • ಆನ್ ಲೈನ್ ಪ್ರೋಗ್ರಾಂಗೆ ನೋಂದಾಯಿಸಿಕೊಳ್ಳಿ

ನಿಮ್ಮ ಮಗುವಿನ ಜೊತೆಗೆ, ನೀವಿಬ್ಬರೂ ಒಟ್ಟಿಗೆ ಕಲಿಯಲು ಬಯಸುವ ಒಂದು ಹೊಸ ಕೌಶಲ್ಯವನ್ನು ಆರಿಸಿಕೊಳ್ಳಿ. ಇದು ಹಾಡುಗಾರಿಕೆ, ನೃತ್ಯ ಅಥವಾ ಸಂಗೀತ ಪಾಠಗಳಂತಹದ್ದಾಗಿರಬಹುದು. ಇದು ಅವರು ನಿಮ್ಮೊಂದಿಗೆ ಆತ್ಮೀಯವಾಗಿರುವುದರ ಜೊತೆಗೆ ಅವರಿಗೆ ಒಂದು ಹೊಸ ಕೌಶಲ್ಯವನ್ನು ಕಲಿಯಲು ಸಹ ಸಹಾಯ ಮಾಡುತ್ತದೆ.

 

  • ಒಟ್ಟಿಗೆ ಅಡುಗೆ ಮಾಡುವುದು

ಇದರಿಂದ ಮಕ್ಕಳೊಂದಿಗೆ ಉತ್ತಮವಾಗಿ ಬೆರೆಯುವ ಮತ್ತು ಕಲಿಕೆಯ ಅನುಭವವನ್ನು ನೀವು ಪಡೆಯಬಹುದು. ಇದು ಯೂಟ್ಯೂಬ್ ನಲ್ಲಿ ಅನುಸರಿಸಲು ಸುಲಭವಾದ ಒಂದು ಪಾಕವಿಧಾನವನ್ನು ನೋಡುವುದು ಮತ್ತು ಒಟ್ಟಿಗೆ ಕಲಿಯುವುದು ಮತ್ತು ಪ್ರಯೋಗಿಸುವುದಷ್ಟೇ ಸರಳವಾಗಿದೆ. ಅಡುಗೆ ಸೂಚನೆಗಳನ್ನು ಅನುಸರಿಸುವಾಗ ಮತ್ತು ಅದಕ್ಕೆ ಬೇಕಾದ ಪದಾರ್ಥಗಳನ್ನು ಒಟ್ಟಿಗೆ ಹಾಕುವಾಗ ನಿಮ್ಮ ಮಗು ಕಲಿಯುತ್ತದೆ.

 

  • ಆಟಗಳನ್ನು ಆನ್ ಲೈನ್ ನಲ್ಲಿ ಪ್ಲೇ ಮಾಡಿ

ಆನ್ ಲೈನ್ ನಲ್ಲಿ ಅನೇಕ ಮೋಜಿನ ಮತ್ತು ಸಂವಾದಾತ್ಮಕ ರೀತಿಯ ಬಗೆಬಗೆಯ ಆಟಗಳು  ಲಭ್ಯವಿದೆ. ಪದ/ಅಂಕಿಗಳನ್ನು ಜೋಡಿಸುವ ಒಂದು ಆಟವನ್ನು (ಸ್ಕ್ರ್ಯಾಬಲ್) ಆಡುವುದರಿಂದ ಅದು ನಿಮ್ಮ ಮಗುವಿನ ಮೆದುಳನ್ನು ಚುರುಕಾಗಿಸುತ್ತದೆ ಮತ್ತು ಇ-ಕಲಿಕೆಯ ಒಂದು ಉತ್ತಮ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ. ಅದೇ ಸಮಯದಲ್ಲಿ, ನೀವಿಬ್ಬರೂ ಒಟ್ಟಿಗೆ ವಿನೋದವಾಗಿ ಕಾಲ ಕಳೆಯಬಹುದು.

 

  • ಒಂದು ಶೈಕ್ಷಣಿಕ ಚಲನಚಿತ್ರವನ್ನು ವೀಕ್ಷಿಸಿ

ನಿಮ್ಮ ಮಗುವಿನ ಗಮನವನ್ನು ಸೆಳೆಯುವ ಒಂದು ಅತ್ಯುತ್ತಮ ಮಾರ್ಗವೆಂದರೆ ಅದು ಆಡಿಯೋ-ದೃಶ್ಯ ಮಾಧ್ಯಮ. ಆಸಕ್ತಿ ಕೆರಳಿಸುವಂತಹ ಒಂದು ಶೈಕ್ಷಣಿಕ ಚಲನಚಿತ್ರವನ್ನು ನೋಡುವ ಮೂಲಕ, ನೀವು ಒಟ್ಟಿಗೆ ಉತ್ತಮ ಸಮಯ ಕಳೆಯುವುದಲ್ಲದೆ ಚಿತ್ರದ ಮೂಲಕ ಅವರಿಗೆ ಏನನ್ನಾದರೂ ಕಲಿಸಬಹುದು.

 

ಈ ಸರಳ ಸಲಹೆಗಳನ್ನು ಅನುಸರಿಸುವ ಮೂಲಕ, ನಿಮ್ಮ ಮಗುವಿನ ಉಜ್ವಲ ಭವಿಷ್ಯಕ್ಕಾಗಿ ನೀವು ಶೈಕ್ಷಣಿಕವಾದ ಮತ್ತು ನಿಮ್ಮನ್ನು ತೊಡಗಿಸಿಕೊಳ್ಳುವಂತಹ ಅನುಭವವನ್ನು ಹೊಂದಬಹುದು.