ಅಂತರ್ಜಾಲದಿಂದ ಮಾಹಿತಿಯನ್ನು ಹಂಚಿಕೊಳ್ಳುವ ಅಥವಾ ಬಳಸುವ ಮೊದಲು ನೀವು ಇದನ್ನು ಮಾಡಬೇಕಾಗಿದೆ

 

ನಾವು ಇಂದು ವಾಸಿಸುವ ಜಗತ್ತಿನಲ್ಲಿ, ಒಂದು ಗುಂಡಿಯನ್ನು ಒತ್ತುವ ಮೂಲಕ ಸಾಕಷ್ಟು ಮಾಹಿತಿಯನ್ನು ಪಡೆಯಬಹುದು ಹಾಗೂ ಸಾಕಷ್ಟು ಮಾಹಿತಿ ಲಭ್ಯವಿದೆ ಕೂಡಾ. ಆದರೆ, ಆನ್ ಲೈನ್ ನಲ್ಲಿ ಲಭ್ಯವಿರುವ ಎಲ್ಲಾ ಮಾಹಿತಿಯು ಅಧಿಕೃತವಲ್ಲ ಮತ್ತು ವಿಶ್ವಾಸಾರ್ಹವಲ್ಲ. ಈ ಮಾಹಿತಿಯನ್ನು ಪಡೆದುಕೊಳ್ಳುವಾಗ, ಬಳಸುವಾಗ ಅಥವಾ ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವಾಗ, ನೀವು ಕೆಲವು ಮಾರ್ಗಸೂಚಿಗಳನ್ನು ಅನುಸರಿಸಬೇಕು.

 

  • ಯಾವಾಗಲೂ ಮಾಹಿತಿಯ ಮೂಲವನ್ನು ಪರಿಶೀಲಿಸಿ

ಮಾಹಿತಿಯ ಮೂಲವು ನ್ಯಾಯಸಮ್ಮತವಾಗಿದೆಯೇ ಎಂದು ನೀವು ಖಚಿತಪಡಿಸಿಕೊಳ್ಳಬೇಕು, ಏಕೆಂದರೆ ಹಲವಾರು ಪುಟಗಳು ಮತ್ತು ಮೂಲಗಳು ನಕಲಿ ಮಾಹಿತಿಯನ್ನು ಆನ್ ಲೈನ್ ನಲ್ಲಿ ಹಂಚಿಕೊಳ್ಳುತ್ತವೆ. ವಿಶ್ವಾಸಾರ್ಹ ಮೂಲಗಳೊಂದಿಗೆ ಮಾಹಿತಿಯನ್ನು ಹೋಲಿಸಿ ಪರಿಶೀಲಿಸುವ ಮೂಲಕ ಮಾಹಿತಿಯು ನ್ಯಾಯಸಮ್ಮತವಾಗಿದೆಯೇ ಎಂದು ಪರಿಶೀಲಿಸಿ.

 

  • ಮಾಹಿತಿಯನ್ನು ಬಳಸುವಾಗ ಜವಾಬ್ದಾರಿಯುತವಾಗಿ ಮನ್ನಣೆ ನೀಡಿ

ಪಿಸಿ ಮೂಲಕ ಕಲಿಯುವಾಗ ನೀವು ಮಾಹಿತಿಯನ್ನು ಬಳಸಿದಾಗಲೆಲ್ಲಾ, ನೀವು ಬರಹಗಾರರಿಗೆ ಅವರ ಕೃತಿಗಳನ್ನು ಉಲ್ಲೇಖಿಸಿರುವುದನ್ನು ಪ್ರಸ್ತಾಪಿಸಿ ಮನ್ನಣೆ ನೀಡಬೇಕು. ಸೂಕ್ತ ರೀತಿಯಲ್ಲಿ ಗುರುತಿಸುವುದರಿಂದ, ನೀವು ಕೃತಿಚೌರ್ಯ ಮಾಡಿದಂತಾಗುವುದಿಲ್ಲ.

 

  • ಮಾಹಿತಿಯ ತಾತ್ಪರ್ಯವನ್ನು ನಿಮ್ಮ ಸ್ವಂತ ಪದಗಳಲ್ಲಿ ವ್ಯಕ್ತಪಡಿಸಬೇಕೆಂಬುದನ್ನು ನೆನಪಿಡಿ

ಮಾಹಿತಿಯನ್ನು ನಿಮ್ಮ ಪ್ರೊಜೆಕ್ಟ್ ಗಳು, ಹೋಮ್ ವರ್ಕ್ ಅಥವಾ ಅಸೈನ್ಮೆಂಟ್ ಗಳಲ್ಲಿ ಬಳಸುವಾಗ, ನೀವು ಮಾಹಿತಿಯನ್ನು ಯಥಾವತ್ತಾಗಿ, ಪದವನ್ನು ಹೇಗಿದೆಯೋ ಹಾಗೆ ನಕಲಿ ಮಾಡುವಂತಿಲ್ಲ. ನೀವು ಅದನ್ನು ನಿಮ್ಮದೇ ಪದಗಳಲ್ಲಿ ಬಿಡಿಸಿ ಹೇಳಬೇಕು.

 

  • ಅಧಿಕೃತವೆಂದು ಕಂಡುಬರದ ಕೊಂಡಿ(ಲಿಂಕ್ )ಗಳನ್ನು ತೆರೆಯಬೇಡಿ

ಲಿಂಕ್ ನೈಜವಾದದ್ದು ಅಥವಾ ನೇರವಾಗಿ ತೆರೆಯಬಹುದು ಎಂದು ಅನಿಸದಿದ್ದರೆ, ಅದನ್ನು ತೆರೆಯಬೇಡಿ.

 

ಕಲಿಕೆಗಾಗಿ ಪಿಸಿ ಯನ್ನು ಬಳಸುವಾಗ ಲಿಂಕ್ ನಿಜವಾದದ್ದೇ ಎಂದು ನೀವು ಹೇಗೆ ಪರಿಶೀಲಿಸಬಹುದು ಎಂಬುದು ಇಲ್ಲಿದೆ:

  • ಡೊಮೇನ್ ಹೆಸರನ್ನು ಎಚ್ಚರಿಕೆಯಿಂದ ಪರಿಶೀಲಿಸಿ, ಏಕೆಂದರೆ ದುರುದ್ದೇಶಪೂರಿತ ಲಿಂಕ್ ಗಳಲ್ಲಿ ಸಂಖ್ಯೆಗಳು ಅಥವಾ ತಪ್ಪು ಕಾಗುಣಿತಗಳಿರುತ್ತವೆ.
  • ತೆರೆಯುವ ಮೊದಲು ಲಿಂಕ್ ಮೇಲೆ ಹರಿದಾಡಿ ಮತ್ತು  ಪ್ರೀವ್ಯೂವನ್ನು ವೀಕ್ಷಿಸಿ.
  • ಪುಟದಲ್ಲಿ ಕಂಡುಬರುವ ಪಾಪ್-ಅಪ್ ಜಾಹೀರಾತುಗಳನ್ನು ತೆರೆಯಬೇಡಿ.
  • Https ಸುರಕ್ಷಿತವಾಗಿದೆ, ಆದರೆ http ಅಪಾಯಕಾರಿಯಾಗಿರಬಹುದು.

 

  • ನಿಮ್ಮ ಎಲ್ಲಾ ಮಾಹಿತಿಯನ್ನು ಒಂದೇ ಮೂಲದಿಂದ ತೆಗೆದುಕೊಳ್ಳಬೇಡಿ

ನೀವು ಒಂದು ಪ್ರೊಜೆಕ್ಟ್, ಹೋಮ್ ವರ್ಕ್ ಅಥವಾ ಅಸೈನ್ ಮೆಂಟ್ ಮಾಡುವಾಗಲೆಲ್ಲಾ, ನಿಮ್ಮ ಎಲ್ಲಾ ಮಾಹಿತಿಯನ್ನು ಒಂದೇ ಮೂಲದಿಂದ ತೆಗೆದುಕೊಳ್ಳದಿರುವುದನ್ನು ಖಚಿತಪಡಿಸಿಕೊಳ್ಳಿ. ಮಾಹಿತಿಯುಕ್ತ, ಸುಸಂಗತವಾದ ಅಭಿಪ್ರಾಯವನ್ನು ನೀಡಲು ಹಲವು ಮೂಲಗಳನ್ನು ನೋಡಿ.

ಈ ಸಲಹೆಗಳನ್ನು ಅನುಸರಿಸುವ ಮೂಲಕ, ನೀವು ಮಾಹಿತಿಯನ್ನು ಜವಾಬ್ದಾರಿಯುತವಾಗಿ ಮತ್ತು ವಿಶ್ವಾಸಾರ್ಹವಾಗಿ ಹಂಚಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬಹುದು.ಪಿಸಿ ಗಳು ಜಗತ್ತನ್ನು ನೋಡುವ ನಿಮ್ಮ ಮಗುವಿನ ದೃಷ್ಟಿಕೋನವನ್ನು ಹೇಗೆ ವಿಸ್ತರಿಸುತ್ತವೆ

 

ಜಗತ್ತು ಹೆಚ್ಚು ಜಾಗತಿಕವಾಗುತ್ತಿದೆ. ತಂತ್ರಜ್ಞಾನದ ಆಗಮನ ಮತ್ತು ವ್ಯಾಪಕ ಬಳಕೆಯಿಂದ, ನಾವು ರಾಷ್ಟ್ರಗಳ ನಡುವಿನ ಗಡಿಗಳನ್ನು ಮೀರಿ, ಸಂಸ್ಕೃತಿಗಳ ಸಮ್ಮಿಲನಕ್ಕೆ ಸಾಕ್ಷಿಯಾಗುತ್ತಿದ್ದೇವೆ.

 

ಈ ಹೊಸ ಜಗತ್ತಿನಲ್ಲಿ, ಜಗತ್ತನ್ನು ನೋಡುವ ಜನರ ದೃಷ್ಟಿಕೋನವನ್ನು ವಿಸ್ತರಿಸುವಲ್ಲಿ ಪಿಸಿ ಗಳು ಅತ್ಯಗತ್ಯ ಪಾತ್ರ ವಹಿಸಿವೆ. ನಿಮ್ಮ ಮಕ್ಕಳು ಈ ಹೊಸ-ಯುಗದ ಜಗತ್ತಿಗೆ ಪ್ರವೇಶಿಸುವುದರೊಂದಿಗೆ, ವಿಶ್ವದ ಕುರಿತಂತೆ ಅವರ ದೃಷ್ಟಿಕೋನವನ್ನು ವೃದ್ಧಿಸಿಕೊಂಡು ಭವಿಷ್ಯಕ್ಕೆ ಸಿದ್ಧರಾದ ನಾಗರಿಕರಾಗಲು ಪಿಸಿ ಮೂಲಕ ಶಕ್ತಗೊಂಡ ಕಲಿಕೆಯ ಪ್ರಯೋಜನಗಳ ಅನುಭವವನ್ನು ಅವರು ಪಡೆಯಬೇಕಾಗಿದೆ.

 

ಪಿಸಿ ನಿಮ್ಮ ಮಗುವಿಗೆ ತನ್ನ ಮನೆಯಿಂದಲೇ ಇತರ ರಾಜ್ಯಗಳು ಅಥವಾ ದೇಶಗಳಿಗೆ ಪ್ರವಾಸ ಹೋಗಲು ಒಂದು ವೇದಿಕೆಯನ್ನು ನೀಡುತ್ತದೆ. ಇತರ ದೇಶಗಳ ಹೊಸ ಸಂಸ್ಕೃತಿಗಳನ್ನು ಅನ್ವೇಷಿಸಲು ಮತ್ತು ಅಲ್ಲಿನ ಹೆಗ್ಗುರುತುಗಳು, ಉದ್ಯಾನವನಗಳು, ಪ್ರವಾಸಿ ತಾಣಗಳು ಮತ್ತು ಸ್ಮಾರಕಗಳು ಸೇರಿದಂತೆ ಅನೇಕ ವಿಷಯಗಳನ್ನು ಕಲಿಯಲು ಇದು ಅವರಿಗೆ ಅವಕಾಶ ನೀಡುತ್ತದೆ.

 

ಪಿಸಿ ಗಳು ಮಕ್ಕಳಿಗೆ ಪ್ರಪಂಚದ ಇತರ ಭಾಗಗಳಲ್ಲಿನ ಪಾಕಪದ್ಧತಿಗಳು, ಭಾಷೆಗಳು ಮತ್ತು ಹಬ್ಬಗಳ ಬಗ್ಗೆ ಅಸಾಧಾರಣ ಮಾಹಿತಿಯನ್ನು ನೀಡುತ್ತವೆ, ಅವರ ಕುತೂಹಲವನ್ನು ಕೆರಳಿಸುತ್ತವೆ. ಇದು ನಿಮ್ಮ ಮಗುವಿಗೆ ಅವರು ತಿಳಿದಿರುವ ಪ್ರಪಂಚವನ್ನು ಮೀರಿ ನೋಡಲು ಅನುವು ಮಾಡಿಕೊಡುತ್ತದೆ ಮತ್ತು ಇನ್ನಷ್ಟು ವಿಶಾಲವಾದ ಜಗತ್ತನ್ನು ನೋಡಲು ಅವರಿಗೆ ಅನುವು ಮಾಡಿಕೊಡುತ್ತದೆ.

 

ಮನೆಯಲ್ಲಿಯೇ ಇದ್ದು, ಮಕ್ಕಳು ತಾವು ಮೊದಲು ಭೇಟಿ ನೀಡದ ಅದೇ ದೇಶದ ಸ್ಥಳಗಳ ಬಗ್ಗೆ ತಿಳಿದುಕೊಳ್ಳುತ್ತಾರೆ, ತಮ್ಮದೇ ದೇಶದ ಬಗ್ಗೆ ತಮ್ಮ ದೃಷ್ಟಿಕೋನವನ್ನು ವಿಸ್ತರಿಸುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿನ ಮಕ್ಕಳು ನಗರಗಳ ಬಗ್ಗೆ ಕಲಿಯಬಹುದು ಮತ್ತು ನಗರದ ಮಕ್ಕಳು ಅವರಿಗೆ ತಿಳಿದಿಲ್ಲದ ಹೊಲಗಳು ಮತ್ತು ಕಾಡುಗಳ ಬಗ್ಗೆ ಕಲಿಯಬಹುದು.

 

ಅಂತಹ ಸಂವಾದಾತ್ಮಕ ಕಲಿಕೆ ಮತ್ತು ಅನ್ವೇಷಣೆಯು ನಿಮ್ಮ ಮಗುವನ್ನು ಕುತೂಹಲ, ಉತ್ಸಾಹ ಮತ್ತು ಜ್ಞಾನಕ್ಕಾಗಿ ಯಾವಾಗಲೂ ಹಸಿದಿರುವ ಜಾಗತಿಕ ಪ್ರಜೆಯಾಗಿ ಬೆಳೆಸಲು ಸಹಾಯ ಮಾಡುತ್ತದೆ. ನೀವು ಮಾಡಬೇಕಾಗಿರುವುದು ಪಿಸಿ ಶಿಕ್ಷಣದ ಮೂಲಕ ಅವರಲ್ಲಿ ಒಂದು ಕಿಡಿಯನ್ನು ಬೆಳಗಿಸುವುದು ಮತ್ತು ಅವರ ಕುತೂಹಲ ಮತ್ತು ಆಸಕ್ತಿ ಭುಗಿಲೇಳುವಂತೆ ಮಾಡುವುದು.

 

ನೀವು ತಿಳಿದುಕೊಳ್ಳುವ ಮೊದಲೇ, ನಿಮ್ಮ ಮಗು ನಿಮಗೆ ಗೊತ್ತೇ ಇರದ ದೇಶಗಳು ಮತ್ತು ಸಂಸ್ಕೃತಿಗಳ ಬಗ್ಗೆ ನಿಮಗೆ ತಿಳಿಸುತ್ತದೆ, ಈ ಪ್ರಕ್ರಿಯೆಯಲ್ಲಿ ನಿಮ್ಮ ಜಾಗತಿಕ ಮತ್ತು ಸಾಂಸ್ಕೃತಿಕ ಜ್ಞಾನ ವಿಸ್ತರಿಸುತ್ತದೆ ಮತ್ತು ವೃದ್ಧಿಸುತ್ತದೆ.