ಪೋಷಕರು - ನಿಮ್ಮ ಮಗುವಿನ ಮೊದಲ ಲ್ಯಾಪ್‌ಟಾಪ್ ಖರೀದಿಸುವಾಗ ಇದನ್ನು ನೆನಪಿಡಿ

ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ಗಳು ದೈನಂದಿನ ಜೀವನದ ಅನಿವಾರ್ಯ ಭಾಗವಾಗಿದೆ. ನಾವೆಲ್ಲರೂ ಅವುಗಳನ್ನು ನಿಯಮಿತವಾಗಿ ಬಳಸುತ್ತೇವೆ, ಆದ್ದರಿಂದ ನಮ್ಮ ಮಕ್ಕಳು ಅವುಗಳನ್ನು ಕೇಳಲು ಪ್ರಾರಂಭಿಸಿದಾಗ ನಮಗೆ ಆಶ್ಚರ್ಯವಾಗಬಾರದು. ಬರಬರುತ್ತಾ ಕಂಪ್ಯೂಟರ್ ಗಳ ಗಾತ್ರವು ಚಿಕ್ಕದಾಗುತ್ತಿದ್ದಂತೆ, ಕಂಪ್ಯೂಟರ್ ಗಳನ್ನು ಕಲಿಯುವ ವಯಸ್ಸು ಕೂಡಾ ಚಿಕ್ಕದಾಗುತ್ತಾ ಹೋಗುತ್ತಿದೆ.

ನಿಮ್ಮ ಮಗುವಿನ ವಯಸ್ಸನ್ನು ನೆನಪಿನಲ್ಲಿಡಿ

ಮುಂದಿನ ದಿನಗಳಲ್ಲಿ ಮಕ್ಕಳು ಹೆಚ್ಚಿನ ಸ್ವಾತಂತ್ರ್ಯ ಮತ್ತು ಗೌಪ್ಯತೆಯನ್ನು ಪಡೆಯಲು ಪ್ರಾರಂಭಿಸುತ್ತಾರೆ, ಆದ್ದರಿಂದ ಅವರಿಗಾಗಿ ಲ್ಯಾಪ್ ಟಾಪ್ ನಲ್ಲಿ ಹೂಡಿಕೆ ಮಾಡುವುದರಿಂದ ಕಲಿಯಲು ಮತ್ತು ಅವರ ಗರಿಷ್ಠ ಸಾಮರ್ಥ್ಯಕ್ಕೆ ಬೆಳೆಯಲು ಸಹಾಯ ಮಾಡುತ್ತದೆ. ಒಂದು ನಿರ್ದಿಷ್ಟ ವಯಸ್ಸಿನಲ್ಲಿ ಅವರು ಅಮೂರ್ತವಾಗಿ ಯೋಚಿಸುವ ಸಾಮರ್ಥ್ಯ ಹೊಂದುತ್ತಾರೆ ಮತ್ತು ಅವರು ಸಂಕೀರ್ಣ ಮತ್ತು ಸಮಯ ಆಧಾರಿತ ಆಟಗಳು ಮತ್ತು ಚಟುವಟಿಕೆಗಳನ್ನು ಆನಂದಿಸಬಹುದು ಮತ್ತು ಆನ್ ಲೈನ್ ನಲ್ಲಿ ಹೊಸ ಕೌಶಲ್ಯಗಳನ್ನು ಕಲಿಯಬಹುದು.

ನಿಮ್ಮ ಮಗುವಿಗೆ ಯಾವುದು ಆಸಕ್ತಿ ಹುಟ್ಟುವಂತೆ ಮಾಡುತ್ತದೆ?

ಒಂದು ಲ್ಯಾಪ್ ಟಾಪ್ ಖರೀದಿಸುವ ಮೊದಲು, ನಿಮ್ಮ ಮಗುವಿಗಾಗಿ ನೀವು ಈ ಹೂಡಿಕೆ ಮಾಡಲು ಕಾರಣಗಳೇನೆಂದು ಯೋಚಿಸಿ. ನಿಮ್ಮ ಮುಖ್ಯವಾಗಿ ಮಗುವಿನ ಶಿಕ್ಷಣವನ್ನು ಬೆಂಬಲಿಸಲು ಕಂಪ್ಯೂಟರ್ ಅನ್ನು ಖರೀದಿಸುತ್ತಿದ್ದೀರಾ ಅಥವಾ ಗೇಮಿಂಗ್ ಮತ್ತು ಚಲನಚಿತ್ರಗಳನ್ನು ವೀಕ್ಷಿಸಲು ಖರೀದಿಸುತ್ತಿದ್ದೀರಾ? ನಿಮ್ಮ ಉದ್ದೇಶ ಏನೇ ಇರಲಿ, ನಿಮ್ಮ ಮಗುವಿನ ಆಸಕ್ತಿಗಳು ಮತ್ತು ಸುರಕ್ಷತೆಯನ್ನು ಮೊದಲ ಸ್ಥಾನದಲ್ಲಿರಿಸುವುದನ್ನು ಖಚಿತಪಡಿಸಿಕೊಳ್ಳಿ.

ನಿಮ್ಮ ಬಜೆಟ್ ಅನ್ನು ನಿರ್ಧರಿಸಿ

ಇಂದು ಎಲ್ಲಾ ಬೆಲೆ ಶ್ರೇಣಿಗಳಲ್ಲಿ ವಿವಿಧ ರೀತಿಯ ಲ್ಯಾಪ್ ಟಾಪ್ ಗಳು ಲಭ್ಯವಿವೆ. ನಿಮ್ಮ ಬಜೆಟ್ ಮತ್ತು ಅಗತ್ಯವಿರುವ ವೈಶಿಷ್ಟ್ಯಗಳನ್ನು ಅವಲಂಬಿಸಿ ನಿಮ್ಮ ಮಗುವಿಗೆ ಸರಿಹೊಂದುವಂತಹದನ್ನು ನೀವು ಕಂಡುಕೊಳ್ಳಬಹುದು. ನೀವು ದುಬಾರಿ ಲ್ಯಾಪ್ ಟಾಪ್ ನಲ್ಲಿ ಹೂಡಿಕೆ ಮಾಡುತ್ತಿದ್ದರೆ ದುಬಾರಿ ಸಾಧನಗಳನ್ನು ನಿರ್ವಹಿಸಲು ನಿಮ್ಮ ಮಗುವಿಗೆ ತರಬೇತಿ ನೀಡಲು ಮರೆಯದಿರಿ.

ನೀವು ಬಯಸಿದ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಿ

ಇದಲ್ಲದೆ, ಪರದೆಯ ಗಾತ್ರ, ಲ್ಯಾಪ್ ಟಾಪ್ ತೂಕ ಮತ್ತು ಬಾಳಿಕೆ ಅಗತ್ಯ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ, ನೀವು ಸಾಮಾನ್ಯವಾಗಿ ಸಣ್ಣ ಮತ್ತು ಹಗುರವಾದ ಲ್ಯಾಪ್ ಟಾಪ್ ಗಳನ್ನು ಆರಿಸಬೇಕು ನಿಮ್ಮ ಆಯ್ಕೆಯ ಮಾನದಂಡಗಳಲ್ಲಿ ಮುಖ್ಯವಾಗಿ ಲ್ಯಾಪ್ ಟಾಪ್ ನ ಬಾಳಿಕೆಗೆ ಪ್ರಾಶಸ್ತ್ಯ ಕೊಟ್ಟಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

ನಿಮ್ಮ ಮಕ್ಕಳಿಗೆ ಪರಿಪೂರ್ಣವಾದ ಕಲಿಕೆಯ ಮೂಲಗಳನ್ನು ರೂಪಿಸುವ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬಿನಾರ್ ಅನ್ನು ಪರಿಶೀಲಿಸಿ

https://www.dellaarambh.com/webinars/