ಸಾಮಾನ್ಯ ಸ್ಥಿತಿಗೆ ಮರಳಿದಾಗ ನಿಮ್ಮ ಮಗುವಿಗೆ ಹೈಬ್ರಿಡ್ ಮಾದರಿಯ ಶಿಕ್ಷಣಕ್ಕೆ ಹೊಂದಿಕೊಳ್ಳಲು ನೀವು ಹೇಗೆ ಸಹಾಯ ಮಾಡಬಹುದು ಎಂಬುದನ್ನು ತಿಳಿಯಿರಿ

ಕಳೆದ ಎರಡು ವರ್ಷಗಳಲ್ಲಿ, ಪ್ರಪಂಚವು ಲಾಕ್ ಡೌನ್ ನಲ್ಲಿದ್ದಾಗ ಜನರು ತಮ್ಮ ಜೀವನವನ್ನು ಮುಂದುವರಿಸಲು ಸಹಾಯ ಮಾಡಲು ಎಲ್ಲವೂ ಡಿಜಿಟಲ್ ಮಾಧ್ಯಮಕ್ಕೆ ಪರಿವರ್ತನೆಯಾಗಿದೆ. ಪರಿಣಾಮವಾಗಿ, ಆನ್ ಲೈನ್ ತರಗತಿಗಳು ಹೊಸ ಸಹಜ ಪದ್ಧತಿಯಾಗಿವೆ. ಈಗ ಕೋವಿಡ್ ಪ್ರಕರಣಗಳು ಕ್ಷೀಣಿಸಿದ ಪರಿಣಾಮವಾಗಿ ಶಾಲೆಗಳು ಪ್ರಾರಂಭವಾಗುತ್ತಿರುವುದರಿಂದ ಅನೇಕ ಮಕ್ಕಳು ಶಾಲೆಗೆ ಮರಳಲು ಕಷ್ಟಪಡುತ್ತಿದ್ದಾರೆ. ಮಕ್ಕಳು ಕೂಡಲೇ ಪರಿವರ್ತನೆಗೆ ಹೊಂದಿಕೊಳ್ಳುವುದು ಸ್ವಲ್ಪ ಕಷ್ಟಕರವಾಗಿರುತ್ತದೆ. ಅವರು ಬದಲಾವಣೆಗೆ ಒಳಗಾಗುವುದನ್ನು ಸುಗಮವಾಗಿಸಲು ನೆರವಾಗುವ ಕೆಲವು ಸಲಹೆಗಳನ್ನು ಕೆಳಗೆ ನೀಡಲಾಗಿದೆ:

 

  1. ಹೊಸ ದಿನಚರಿ: ನಿಮ್ಮ ಮಗುವಿನ ದೈನಂದಿನ ಜೀವನದಲ್ಲಿ ಅವರು ಶಾಲೆಗೆ ಹಿಂತಿರುಗಲು ಪ್ರಾರಂಭಿಸಿದಾಗ ಬಹಳಷ್ಟು ವಿಷಯಗಳು ಬದಲಾಗುತ್ತವೆ. ಆದ್ದರಿಂದ, ಅವರ ಸಾಮಾನ್ಯ ಶಾಲಾ ದಿನದ ಬಗ್ಗೆ ಅವರಿಗೆ ಮಾಹಿತಿಯನ್ನು ಒದಗಿಸುವುದು ಬದಲಾವಣೆಗೆ ಒಗ್ಗಿಕೊಳ್ಳಲು ಸಹಾಯ ಮಾಡುತ್ತದೆ.
  2. ನಿದ್ರೆಯ ಸಮಯ: ಆನ್ ಲೈನ್ ನಲ್ಲಿ ಅಧ್ಯಯನ ಮಾಡುವುದರಿಂದ ಅದು ಅವರ ನಿದ್ರೆ ಮಾಡುವ ಸಮಯವನ್ನು ಅಸ್ತವ್ಯಸ್ತಗೊಳಿಸಿದೆ. ಅವರು ಎಂಟು ಗಂಟೆಗಳ ನಿದ್ದೆಯನ್ನು ಪಡೆಯುತ್ತಾರೆ. ಅವರು ಎಂಟು ಗಂಟೆಗಳ ನಿದ್ದೆಯನ್ನು ಪಡೆಯುವಂತೆ ಮಾಡಲು, ಅವರ ಸಾಮಾನ್ಯ ಶಾಲಾ ಸಮಯದಲ್ಲಿ ಅವರನ್ನು ಎಬ್ಬಿಸುವ ಮೂಲಕ ಮತ್ತು ಬೇಗನೇ ಮಲಗುವಂತೆ ತಿಳಿಸುವ ಮೂಲಕ ನೀವು ಅವರಿಗೆ ಮಲಗುವ ಸಮಯದ ದಿನಚರಿಯನ್ನು ರೂಪಿಸಲು ಸಹಾಯ ಮಾಡಬಹುದು, 
  3. ಸಂವಹನ ಬಹಳ ಮುಖ್ಯ: ಇಂತಹ ದೊಡ್ಡ ಬದಲಾವಣೆಗಳಿಗೆ ಸುಲಭವಾಗಿ ಹೊಂದಿಕೊಳ್ಳಲು ನಿಮ್ಮ ಮಗುವಿಗೆ ಸ್ವಲ್ಪ ಕಷ್ಟವಾಗಬಹುದು. ನೀವು ಅವರೊಂದಿಗೆ ಚೆನ್ನಾಗಿ ಮಾತುಕತೆ ನಡೆಸುತ್ತಿದ್ದೀರಿ ಮತ್ತು ಅವರು ಹೇಳುವುದನ್ನು ಕೇಳಿಸಿಕೊಳ್ಳುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸಮಸ್ಯೆ ಮುಂದುವರಿದರೆ ಅವರ ಶಾಲೆ ಅಥವಾ ವಿಶ್ವಾಸಾರ್ಹ ಶಿಕ್ಷಕರನ್ನು ಸಂಪರ್ಕಿಸಿ.
  4. ಹೊಂದಿಕೊಳ್ಳಲು ಅವರಿಗೆ ಸಹಾಯ ಮಾಡಿ: ಬದಲಾವಣೆಗಳಿಗೆ ಹೊಂದಿಕೊಳ್ಳಲು ಪ್ರತಿ ಮಗು ವಿಭಿನ್ನ ಸಮಯವನ್ನು ತೆಗೆದುಕೊಳ್ಳುತ್ತದೆ. ನಿಮ್ಮ ಮಗು ಹೊಂದಿಕೊಳ್ಳಲು ತೆಗೆದುಕೊಳ್ಳುವ ಸಮಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಅವರು ತೊಂದರೆ ಎದುರಿಸುತ್ತಿದ್ದರೆ, ನಿಮ್ಮ ಮಾರ್ಗದರ್ಶನ ಮತ್ತು ಬೆಂಬಲವನ್ನು ಕೇಳಲು ಅವರು ಸಾಕಷ್ಟು ಸ್ವತಂತ್ರರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಿ.

 

ನಿಮ್ಮ ಡಿಜಿಟಲ್ ಮಕ್ಕಳನ್ನು ಬೆಳೆಸಲು ನೀವು ಹೇಗೆ ಸಿದ್ಧತೆ ಮಾಡಿಕೊಳ್ಳಬೇಕೆಂದು ತಿಳಿಯಿರಿ ಮತ್ತು ಸಿದ್ಧರಾಗಿ. ನಮ್ಮ ವೆಬಿನಾರ್ ಗೆ ಟ್ಯೂನ್ ಮಾಡಿ - https://www.dellaarambh.com/webinars/