# ಡಿಜಿಪೋಷಕರು - ಮಕ್ಕಳ ಪರಿಣಾಮಕಾರಿ ಅಂತರ್ಜಾಲ ಸಮಯ ನಿರ್ವಹಣೆಗೆ 3 ಸಲಹೆಗಳು

 

ಆಟವಾಡಲು ಮತ್ತು ಅಂತ್ಯವಿಲ್ಲದ ಸ್ಕ್ರೋಲಿಂಗ್ ಮಾಡುವುದಕ್ಕಾಗಿ ಮಕ್ಕಳು ಅಂತರ್ಜಾಲವನ್ನು ಇಷ್ಟಪಡುತ್ತಾರೆ. ಅಂತ್ಯವಿಲ್ಲದ ಕಲಿಕೆ ಮತ್ತು ಲಭ್ಯವಿರುವ ವ್ಯಾಪಕವಾದ ಮನರಂಜನೆಯ ಸರಕು ಕೂಡಾ ಮಕ್ಕಳಿಗೆ ಇಷ್ಟ.

 

ಆದರೆ, ಇಲ್ಲೊಂದು ಸ್ಪಷ್ಟ ನ್ಯೂನತೆಯಿದೆ. ಹಲವು ಬಾರಿ, ಸ್ಕ್ರೋಲಿಂಗ್ ಒಂದು ಅರ್ಥಹೀನ ಕಸರತ್ತು ಆಗಬಹುದು ಮತ್ತು ಟಿವಿ ಕಾರ್ಯಕ್ರಮಗಳು ಮತ್ತು ವ್ಯಂಗ್ಯಚಿತ್ರಗಳನ್ನು ನೋಡುವುದರಿಂದಾಗಿ ಹೆಚ್ಚಿನ ಸಮಯ ವ್ಯರ್ಥವಾಗಬಹುದು. ಅದಕ್ಕಾಗಿಯೇ ನಾವು ಈ ಸರಳ ಸಲಹೆಗಳನ್ನು ನಿಮ್ಮ ಮುಂದಿರಿಸುತ್ತಿದ್ದೇವೆ ಮತ್ತು ಮಕ್ಕಳ ಪೋಷಕರಾಗಿ ನೀವು ಈ ಸಲಹೆಗಳನ್ನು ನಿಮ್ಮ ಮಕ್ಕಳ ಅಂತರ್ಜಾಲ ಮತ್ತು ಸ್ಕ್ರೀನ್ ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಬಳಸಬಹುದು.

 

  1. ಹೊಸ ಕೌಶಲ್ಯಗಳನ್ನು ಕಲಿಯಲು ಪ್ರೋತ್ಸಾಹಿಸಿ

 

ಒರಿಗಾಮಿ ಮತ್ತು ವಿಜ್ಞಾನ ಯೋಜನೆಗಳಿಂದ ಹಿಡಿದು ಹಾಡುವುದು ಮತ್ತು ಹೊಸ ಭಾಷೆಯ ಕಲಿಕೆ ಮುಂತಾದ ಹೊಸ ಕೌಶಲ್ಯಗಳನ್ನು ಕಲಿಯಲು ಮಕ್ಕಳು ವಿವಿಧ ಮಾಧ್ಯಮ ಮತ್ತು ಇ-ಲರ್ನಿಂಗ್ ಪ್ಲಾಟ್ ಫಾರ್ಮ್ ಗಳು ಮತ್ತು ಅಪ್ಲಿಕೇಶನ್ ಗಳನ್ನು ಬಳಸುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಿ.

 

ಅವರ ಕೆಲಸವನ್ನು ಜಗತ್ತಿನೊಂದಿಗೆ ಹಂಚಿಕೊಳ್ಳಿ. ನಿಮ್ಮ ಮಕ್ಕಳಿಗೆ ಸಾಧ್ಯವಾದಷ್ಟು ಮರುಮಾಹಿತಿ ಪಡೆಯಲು ಅವಕಾಶ ಮಾಡಿಕೊಡಿ. ಅಂತರ್ಜಾಲ, ಕಿಡ್ಸ್ ಮತ್ತು ಟೆಕ್ ಅನ್ನು ನಿಮ್ಮ ಅನುಕೂಲಕ್ಕಾಗಿ ಬಳಸಿ. ನಮ್ಮನ್ನು ನಂಬಿರಿ. ಅತಿ ಶೀಘ್ರದಲ್ಲೇ, ಅವರು ಪ್ರತಿದಿನ ಹಾಸಿಗೆಯ ಮೇಲೆ ಮಲಗುವುದು ಮತ್ತು ವ್ಯಂಗ್ಯಚಿತ್ರಗಳನ್ನು ನೋಡುವುದಕ್ಕಿಂತ ಹೆಚ್ಚಿನದನ್ನು ಮಾಡುತ್ತಾರೆ.

 

  1. ಹವ್ಯಾಸಗಳು ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಪ್ರೋತ್ಸಾಹಿಸಿ

 

ಪಠ್ಯೇತರ ಚಟುವಟಿಕೆಗಳ ತರಗತಿಗಳಿಗೆ ಹಾಜರಾಗುವಂತೆ ನಿಮ್ಮ ಮಕ್ಕಳನ್ನು ಪ್ರೇರೇಪಿಸಿ. ಬಹುಶಃ ನಿಮ್ಮ ಮಗು ಪಿಯಾನೋದಂತಹ ಸಂಗೀತ ವಾದ್ಯವನ್ನು ನುಡಿಸಲು ಬಯಸುತ್ತಿರಬಹುದು. ಇಂತಹ ಕೋರ್ಸ್ ಗಳನ್ನು ನೀಡುವ ಸಾಕಷ್ಟು ಆನ್ ಲೈನ್ ಪ್ಲಾಟ್ ಫಾರ್ಮ್ ಗಳಿವೆ. ಆಸಕ್ತಿಯನ್ನು ಬೆಳೆಸುವ ಕಡೆಗೆ ಅವರನ್ನು ಪ್ರೋತ್ಸಾಹಿಸಿ.

 

ಆನ್ ಲೈನ್ ನಲ್ಲಿ ಸುಲಭವಾಗಿ ಲಭ್ಯವಿರುವ ಸುಡೋಕು ಮತ್ತು ಕ್ರಾಸ್ ವರ್ಡ್ ಗಳಂತಹ ಮನೋವಿಕಾಸಕ್ಕೆ ಕಾರಣವಾಗುವ ಆಟಗಳನ್ನು ಆಡಲು ನೀವು ಅವರನ್ನು ಪ್ರೇರೇಪಿಸಬಹುದು. ಇದು ಅವರ ಸ್ಮರಣ ಶಕ್ತಿ ಮತ್ತು ತಾರ್ಕಿಕ ಕೌಶಲ್ಯಗಳನ್ನು ಹೆಚ್ಚಿಸುತ್ತದೆ.

 

ಕ್ಲಾಕ್ ವರ್ಕ್ ಬ್ರೈನ್ ಅಥವಾ ಬ್ರೈನ್ ಬೀನ್ ನಂತಹ ಅಪ್ಲಿಕೇಶನ್ ಗಳು ನಿಮ್ಮ ಮಕ್ಕಳಿಗೆ ಒಗಟುಗಳು, ಸ್ಮರಣ ಶಕ್ತಿ ಮತ್ತು ಇತರ ಶೈಕ್ಷಣಿಕ ಆಟ(ಎಜು-ಗೇಮ್ )ಗಳ ಮೂಲಕ ಸವಾಲೊಡ್ಡುತ್ತವೆ ಮತ್ತು ಶಿಕ್ಷಣವನ್ನು ಒದಗಿಸುತ್ತವೆ. ವಿಮರ್ಶಾತ್ಮಕ ಚಿಂತನೆಯು 21 ನೇ ಶತಮಾನದ ಒಂದು ಅವಶ್ಯಕತೆಯಾಗಿದೆ ಮತ್ತು ಇದನ್ನು ಭವಿಷ್ಯದ ಎಲ್ಲಾ ಮಕ್ಕಳು ಬೆಳೆಸಿಕೊಳ್ಳುವುದು ಮುಖ್ಯವಾಗಿದೆ.

 

  1. ಮಾರ್ಗದರ್ಶಿತ ಮತ್ತು ಸೀಮಿತ ಪ್ರವೇಶಾವಕಾಶ

 

‘ಮಾರ್ಗದರ್ಶಿತ ಪ್ರವೇಶಾವಕಾಶ/ಗೈಡೆಡ್ ಆಕ್ಸೆಸ್’ನಂತಹ ವೈಶಿಷ್ಟ್ಯಗಳು ನೀವು ಕೆಲವು ನಿರ್ದಿಷ್ಟ ಅಪ್ಲಿಕೇಶನ್ ಗಳನ್ನು ಬಳಸಿಕೊಳ್ಳುವ ಸಮಯವನ್ನು ಮಿತಿಗೊಳಿಸುತ್ತದೆ. ಆಟಗಳು ಮತ್ತು ಸ್ಟ್ರೀಮಿಂಗ್ ಅಪ್ಲಿಕೇಶನ್ ಗಳಿಗೆ ಹೆಚ್ಚಿನ ನಿರ್ಬಂಧಗಳನ್ನು ಹೇರುವ ಮೂಲಕ ನೀವು ಬೇರೆ ಬೇರೆ ಅಪ್ಲಿಕೇಶನ್ ಗಳಿಗೆ ಬೇರೆ ಬೇರೆ ಮಿತಿಗಳನ್ನು ಹೊಂದಿಸಬಹುದು. ಮಾರ್ಗದರ್ಶಿತ ಪ್ರವೇಶ ವಿಧಾನವು ನಿಮ್ಮ ಮಕ್ಕಳಿಗೆ ತಂತ್ರಜ್ಞಾನದೊಂದಿಗೆ ತಮ್ಮ ಸಮಯವನ್ನು ಹೆಚ್ಚು ಉಪಯೋಗವಾಗುವ ರೀತಿಯಲ್ಲಿ ಬಳಸಿಕೊಳ್ಳಲು ಸಹಾಯ ಮಾಡುತ್ತದೆ.