ಶಿಕ್ಷಕರು – ಪ್ರಿ-ಸ್ಕೂಲ್ ಗೆ ಆನ್‌ಲೈನ್‌ನಲ್ಲಿ ಕಲಿಸಲು 5 ಸಲಹೆಗಳು

ಪ್ರಿ-ಸ್ಕೂಲ್ ಗೆ ಕಲಿಸುವುದು ಅತ್ಯಂತ ಸವಾಲಿನದು. ಪ್ರಿ-ಸ್ಕೂಲ್ ಗಳು ದೂರ ಶಿಕ್ಷಣಕ್ಕೆ ಪರಿವರ್ತನೆಗೊಂಡಿರುವುದರಿಂದ ಶಿಕ್ಷಕರು ತಮ್ಮ ಕಲಿಕೆಯನ್ನು ಪರಿಣಾಮಕಾರಿಯಾಗಿಸಲು ತಮ್ಮ ತರಗತಿಗಳಲ್ಲಿ ದಕ್ಷತೆ ಮತ್ತು ಶಿಸ್ತನ್ನು ಮುಂದುವರಿಸುವುದು ಮುಖ್ಯವಾಗಿದೆ

3 ಮತ್ತು 4 ವರ್ಷದ ಮಕ್ಕಳಿಗೆ ಆನ್ ಲೈನ್ ನಲ್ಲಿ ಬೋಧಿಸುವಲ್ಲಿನ ಸಂಕೀರ್ಣತೆಯಿಂದ ಹೆಚ್ಚಿನ ಪ್ರಿ-ಸ್ಕೂಲ್ ಶಿಕ್ಷಕರ ಕಳವಳಗಳು ಹೆಚ್ಚಾಗುತ್ತವೆ. ಆದ್ದರಿಂದ ಮುಖ್ಯ ತತ್ವಗಳು ಉಳಿಯುವುದು ಅತ್ಯಗತ್ಯ.

ಶಿಕ್ಷಕರ ಭೇಟಿ ಕಾರ್ಯಕ್ರಮವನ್ನು ವರ್ಚುವಲ್ ಆಗಿ ಮಾಡುವುದು

ಶಿಕ್ಷಕರನ್ನು ಭೇಟಿ ಮಾಡುವ ಕಾರ್ಯಕ್ರಮದೊಂದಿಗೆ ವರ್ಷವನ್ನು ಪ್ರಾರಂಭಿಸುವುದು ಬಲವಾದ ತರಗತಿ ಸಮುದಾಯಕ್ಕೆ ಅಡಿಪಾಯವನ್ನು ಹಾಕಲು ಒಂದು ಅವಕಾಶವಾಗಿದೆ. ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ನಿಮ್ಮ ಪರಿಚಯ ಮಾಡಿಸಿ. ಅವರಿಗೆ ಆರಾಮವೆನ್ನಿಸುವಂತೆ ವರ್ತಿಸಿ.

ವೀಡಿಯೊ ಕಾನ್ಫರೆನ್ಸಿಂಗ್ ಪ್ಲಾಟ್ ಫಾರ್ಮ್ ಗಳು ನಿಮ್ಮ ಉತ್ತಮ ಸ್ನೇಹಿತರಾಗಲಿವೆ

ನಿಮ್ಮ ವಿದ್ಯಾರ್ಥಿಗಳು ನಿಮ್ಮನ್ನು ನೋಡುವುದು, ನಿಮ್ಮ ಧ್ವನಿಯನ್ನು ಕೇಳುವುದು ಮತ್ತು ನಿಮ್ಮ ಮತ್ತು ಅವರ ಸಹಪಾಠಿಗಳೊಂದಿಗಿನ ಬಾಂಧವ್ಯವು ಮುಖ್ಯವಾಗಿದೆ. ಅದು ನಿಮ್ಮನ್ನು ಬೆದರಿಸಲು ಬಿಡಬೇಡಿ. ವೀಡಿಯೊ ಮೂಲಕ ನಿಮ್ಮ ತರಗತಿಯಲ್ಲಿ ನೀವು ಕಲಿಯುವ ರೀತಿಯಲ್ಲಿಯೇ ನಿಮ್ಮ ವಿದ್ಯಾರ್ಥಿಗಳಿಗೆ ಕಲಿಸಿ ಮತ್ತು ಕಾಳಜಿ ವಹಿಸಿ.

ವಿನಯದಿಂದಿರಿ!

ಪ್ರಿಸ್ಕೂಲ್ ಗೆ ಕಲಿಸುವುದು ವಾಸ್ತವಿಕವಾಗಿ ತುಂಬಾ ಕಷ್ಟ. ತಾಳ್ಮೆಯಿಂದಿರಲು ಮರೆಯದಿರಿ, ಸಕಾರಾತ್ಮಕವಾಗಿರಿ ಮತ್ತು ಮಕ್ಕಳನ್ನು ಚಟುವಟಿಕೆಯಿಂದಿಡಿ. ನೀವು ಪರಿಪೂರ್ಣರಾಗಿರಬೇಕಾಗಿಲ್ಲ. ನಿಮ್ಮ ಬಗ್ಗೆ ಕಾಳಜಿ ವಹಿಸಲು ಮರೆಯಬೇಡಿ, ನಿಮಗೆ ವಿರಾಮ ಕೊಟ್ಟುಕೊಳ್ಳಿ ಮತ್ತು ಕೆಲವೊಮ್ಮೆ ಸ್ವಲ್ಪ ಸಮಯ ನಿಮ್ಮಷ್ಟಕ್ಕೇ ಇರಿ.

ನಿಮ್ಮ ಪಾಠಗಳನ್ನು ವಿಷಯದ ಮೇಲೆ ಕೇಂದ್ರೀಕರಿಸಿ ಮತ್ತು ನಿಮ್ಮ ಚಟುವಟಿಕೆಗಳನ್ನು ಅರ್ಥಪೂರ್ಣವಾಗಿರಿಸಿಕೊಳ್ಳಿ

ಪೋಸ್ಟರ್ ಗಳು, ಆಂಕರ್ ಚಾರ್ಟ್ ಗಳು, ವೈಟ್ ಬೋರ್ಡ್ ಗಳು, ವೀಡಿಯೊ ಟ್ಯುಟೋರಿಯಲ್ ಗಳು ಅಥವಾ ಉದಾಹರಣೆಗಳ ಸಹಿತ ತೋರಿಸುವ ದೃಶ್ಯ ಸಾಧನಗಳನ್ನು ಬಳಸಿ. ಅನುಸರಣಾ ಚಟುವಟಿಕೆಯನ್ನು ಸೇರಿಸಿಕೊಳ್ಳಿ, ಅದು ವಿದ್ಯಾರ್ಥಿಗಳು ಕಲಿತದ್ದನ್ನು ಅನ್ವಯಿಸಲು ನಿಜವಾಗಿಯೂ ಸಹಾಯ ಮಾಡುತ್ತದೆ. ಸಾಕಷ್ಟು ಚಲನೆಯೊಂದಿಗೆ ನಿಮ್ಮ ಪಾಠವನ್ನು ಸಣ್ಣ ಭಾಗಗಳಾಗಿ ವಿಭಜಿಸಲು ಪ್ರಯತ್ನಿಸಿ

ನಿಮ್ಮ ವಿದ್ಯಾರ್ಥಿಗಳನ್ನು ಹುರಿದುಂಬಿಸಿ

ಚಿಕ್ಕ ಮಕ್ಕಳನ್ನು ಅವರ ಸಾಧನೆಗಳಿಗಾಗಿ ಪ್ರಶಂಸಿಸಿದಾಗ ಮತ್ತು ಪ್ರಶಸ್ತಿ ನೀಡಿದಾಗ ಅವರು ಪ್ರೇರೇಪಿತರಾಗುತ್ತಾರೆ ಮತ್ತು ಮತ್ತೆ ಮತ್ತೆ ಉತ್ತಮ ಪ್ರದರ್ಶನ ನೀಡಲು ಮುಂದಾಗುತ್ತಾರೆ. ವಿದ್ಯಾರ್ಥಿಗಳಿಗೆ ಡಿಜಿಟಲ್ ಬಹುಮಾನ ಅಥವಾ ಪ್ರಮಾಣಪತ್ರಗಳನ್ನು ಕಳುಹಿಸುವುದು ಅಥವಾ ಆನ್ ಲೈನ್ ತರಗತಿ ಕೊಠಡಿಗಳ ಮೂಲಕ ಗಮನ ಕೇಂದ್ರೀಕರಿಸಲು ಸಾಧ್ಯವಾಗದ ವಿದ್ಯಾರ್ಥಿಗಳೊಂದಿಗೆ ಕರೆ ಮಾಡಿ ಮಾತನಾಡುವುದರಿಂದ ಅವರೊಂದಿಗೆ ಒಳ್ಳೆಯ ಸಂಬಂಧವನ್ನು ಬೆಳೆಸಲು ನಿಮಗೆ ಸಹಾಯ ಮಾಡುತ್ತದೆ.

ನಿಮಗೆ ಇ-ಲರ್ನಿಂಗ್ ಕೌಶಲ್ಯಗಳನ್ನು ತೀಕ್ಷ್ಣಗೊಳಿಸಲು ಮತ್ತು ನಿಮ್ಮ ತರಗತಿಗಳನ್ನು ಪರಿಣಾಮಕಾರಿಯಾಗಿಸಲು ನಮ್ಮ ವೆಬಿನಾರ್ ಗಳ ಒಂದು ಭಾಗವಾಗಿರಿ.

https://www.dellaarambh.com/webinars/