ತಂತ್ರಜ್ಞಾನವು ವಿದ್ಯಾರ್ಥಿಗಳ ಶೈಕ್ಷಣಿಕ ಯಶಸ್ಸಿಗೆ 360⁰ ವಿಧಾನವನ್ನು ಹೇಗೆ ಸಶಕ್ತಗೊಳಿಸುತ್ತದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ

360⁰ ವಿಧಾನವು ವಿದ್ಯಾರ್ಥಿಗಳಿಗೆ ಕಲಿಕೆಗೆ ಅವಕಾಶವಿರುವ ಎಲ್ಲಾ ಮಾರ್ಗಗಳು ಮತ್ತು ಟಚ್ ಪಾಯಿಂಟ್ ಗಳನ್ನು ಒಳಗೊಂಡಿದೆ. ಪ್ರಯೋಗಾಲಯಗಳಿಂದ ಹಿಡಿದು ಅವರ ಕಲಿಕಾ ಮಾಧ್ಯಮದಿಂದ ಹಿಡಿದು ಅವರ ಸಹಪಾಠಿಗಳ ನಡುವಿನ ಕಲಿಕೆಯವರೆಗೆ, 360⁰ ಕಲಿಕೆಯು ಸಮಗ್ರ ಅಭಿವೃದ್ಧಿಯನ್ನು ಸಾಧ್ಯವಾಗಿಸುತ್ತದೆ.

ಇಂದು, ತಂತ್ರಜ್ಞಾನವು ಕಲಿಕೆಯ ಕಡೆಗೆ ಈ ಸುಸಂಗತವಾದ ಮಾರ್ಗವನ್ನು ಮುನ್ನಡೆಸುತ್ತಿದೆ. ಇದು ಇ-ಪುಸ್ತಕಗಳು, ಪಿಡಿಎಫ್ ಗಳು, ಶ್ರವ್ಯ(ಆಡಿಯೋ) / ದೃಶ್ಯ ಕಲಿಕೆ, ಅತಿಥಿ ಉಪನ್ಯಾಸಕರಿಂದ ಪಾಠ, ಜಾಗತಿಕ ತರಗತಿಗಳಿಗೆ ಅವಕಾಶ, ಆರಂಭದಿಂದ ಕೊನೆಯವರೆಗೆ  ಕಲಿಕೆ, ತಕ್ಷಣವೇ ಮರುಮಾಹಿತಿಯ ಲಭ್ಯತೆ ಮತ್ತು ಅನುಮಾನ ಪರಿಹಾರದಂತಹ ಕಲಿಕೆಯ ಸಂವಾದಾತ್ಮಕ ಮತ್ತು ಜೊತೆಗೂಡಿ ಕಲಿಯುವ ವಿಧಾನಗಳನ್ನು ತರಗತಿಗಳಿಗೆ ತಂದಿದೆ.

ಇದರಿಂದ ಹಲವಾರು ಪ್ರಯೋಜನಗಳಿವೆ:

 

  • ವೈಯಕ್ತೀಕರಿಸಿದ ಕಲಿಕೆ

ಸಾಂಪ್ರದಾಯಿಕ ಕಲಿಕೆಯ ವಿಧಾನಕ್ಕೆ ಬದಲಾಗಿ, ಡಿಜಿಟಲ್ ಕಲಿಕೆಯು ವಿದ್ಯಾರ್ಥಿಗಳಿಗೆ ಕಲಿಯಲು ಅನೇಕ ಮಾರ್ಗಗಳನ್ನು ಒದಗಿಸುತ್ತದೆ. ದೃಶ್ಯ/ಶ್ರವ್ಯ ( ಎ/ವಿ) ಕಲಿಕೆ, ಸಹಪಾಠಿಗಳ ಜೊತೆ ಕಲಿಕೆ(ಪೀರ್-ಟು-ಪೀರ್ ಲರ್ನಿಂಗ್), ಇ-ಪುಸ್ತಕಗಳು, ಮುಂತಾದ ಹೆಚ್ಚು ಆರಾಮದಾಯಕವಾದ ಸ್ವರೂಪದಲ್ಲಿ ವಿದ್ಯಾರ್ಥಿಗಳು ಕಲಿಯಬಹುದು.

 

  • ಸುಧಾರಿತ ಧಾರಣ ಶಕ್ತಿ

ಒಬ್ಬ ವಿದ್ಯಾರ್ಥಿಯು ಅದು ಆಡಿಯೋ, ವಿಡಿಯೋ ಅಥವಾ ಪಠ್ಯವಾಗಿರಲಿ, ತನಗೆ ಸರಿಹೊಂದುವ ವಿಧಾನದಲ್ಲಿ ಕಲಿಯುತ್ತಿರುವಾಗ ಅವರು ಅಧ್ಯಯನ ಮಾಡಿದ್ದನ್ನು ಹೆಚ್ಚು ಕಾಲ ನೆನಪಿನಲ್ಲಿಟ್ಟುಕೊಳ್ಳುವ ಸಾಧ್ಯತೆಯಿದೆ.

 

  • ಸಕ್ರಿಯ ಭಾಗವಹಿಸುವಿಕೆ

ಶಿಕ್ಷಕರು ವಿಷಯ ನಿರೂಪಣೆಗಳಂತಹ ವಿನೋದದಿಂದ ಕೂಡಿದ ಕಲಿಕೆಯ ವಿಧಾನಗಳನ್ನು ಬಳಸುವ ಮೂಲಕ, ತರಗತಿಯಲ್ಲಿ ಸಕ್ರಿಯವಾಗಿ ಭಾಗವಹಿಸುವ ವಾತಾವರಣವನ್ನು ರಚಿಸಬಹುದು.

 

  • ಸಹಕಾರಿ ಮತ್ತು ಸಹಪಾಠಿಗಳ ಜೊತೆಗೆ ಕಲಿಕೆ

ಆನ್ ಲೈನ್ ತರಗತಿಗಳು, ಅಸೈನ್ಮೆಂಟ್ ಗಳು ಮತ್ತು ತಕ್ಷಣದ ನವೀಕರಣಗಳ ಮೂಲಕ, ವಿದ್ಯಾರ್ಥಿಗಳು ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳಬಹುದು  ಇದರಿಂದ ಪರಸ್ಪರ ಕಲಿತು ಪ್ರಗತಿ ಹೊಂದಲು ಸಾಧ್ಯವಾಗುತ್ತದೆ.

 

  • ಭವಿಷ್ಯಕ್ಕೆ ಸಿದ್ಧರಾಗಲು ಅವರಿಗೆ ಸಹಾಯ ಮಾಡುತ್ತದೆ

ಭವಿಷ್ಯ ಡಿಜಿಟಲ್ ಆಗಿದೆ. ಪಿಸಿ ಕಲಿಕೆಯಂತಹ ನಾಳಿನ ಸಾಧನಗಳಿಗೆ ಮಕ್ಕಳನ್ನು ಪರಿಚಯಿಸುವ ಮೂಲಕ, ಚಿಕ್ಕ ವಯಸ್ಸಿನಿಂದಲೇ ಅವರು ಹೆಚ್ಚು ಅಗತ್ಯವಿರುವ ಕೌಶಲ್ಯಗಳನ್ನು ತಮ್ಮದಾಗಿಸಿಕೊಳ್ಳಬಹುದು.

 

ಡೆಲ್ ಆರಂಭ್ ನಲ್ಲಿ,ನಾವು ಡಿಜಿಟಲ್ ಭಾರತದ ಕನಸನ್ನು ನನಸಾಗಿಸಲು ಪೋಷಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ತಂತ್ರಜ್ಞಾನದ ಶಕ್ತಿಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದ್ದೇವೆ. ಪಿಸಿ-ಶಕ್ತಗೊಂಡ ಕಲಿಕೆಯನ್ನು ದೇಶಾದ್ಯಂತದ ತರಗತಿಗಳಿಗೆ ತರುವ ಮೂಲಕ, ಭವಿಷ್ಯದ ಜನಾಂಗವಾಗಿರುವ ಇಂದಿನ ಮಕ್ಕಳಲ್ಲಿ ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ ಮತ್ತು ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ಬೇರೂರಿಸುವುದು ನಮ್ಮ ಉದ್ದೇಶವಾಗಿದೆ.