ಇ-ಕಲಿಕೆಯ ಮುಖ್ಯ 3 ಪ್ರಯೋಜನಗಳು

ಇ-ಲರ್ನಿಂಗ್ ಜ್ಞಾನ ಹಂಚಿಕೆಯ ಒಂದು ಹೊಸ ಮಾದರಿಯಾಗಿ ಶಿಕ್ಷಣತಜ್ಞರು ಮತ್ತು ತರಗತಿ ಶಿಕ್ಷಕರಿಗೆ ಒಂದು ಅಮೂಲ್ಯವಾದ ಸಂಪನ್ಮೂಲವಾಗಿ ಮಾರ್ಪಟ್ಟಿದೆ, ಇದರಲ್ಲಿ ವಿದ್ಯಾರ್ಥಿಗಳು ತಮ್ಮದೇ ಆದ ವೇಗದಲ್ಲಿ ಕಲಿಯುವ ಸಾಧನಗಳನ್ನು ಹೊಂದಿರುತ್ತಾರೆ.

ಈ ವಿದ್ಯಾರ್ಥಿ-ಕೇಂದ್ರಿತ ವಿಧಾನವು ವಿಶಿಷ್ಟವಾಗಿದೆ ಏಕೆಂದರೆ ವಿದ್ಯಾರ್ಥಿಗಳು ಈಗ ತಮ್ಮ ಶೈಕ್ಷಣಿಕ ದೃಷ್ಟಿಕೋನವನ್ನು ವ್ಯಕ್ತಪಡಿಸುತ್ತಾರೆ, ಹಾಗೂ ಬೋಧನಾ ಸಂಪನ್ಮೂಲಗಳು ಮತ್ತು ಸಮಯ ಎರಡನ್ನೂ ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳುತ್ತಾರೆ. ಅದರ ಕೆಲವು ದೊಡ್ಡ ಅನುಕೂಲಗಳು ಇಲ್ಲಿವೆ.

1. ವೈಯಕ್ತಿಕ ವೇಗ

ಆನ್ ಲೈನ್ ಕಲಿಕೆಯ ಪರಿಹಾರಗಳು ಶಿಕ್ಷಕರಿಗೆ ಹೆಚ್ಚು ಅಗತ್ಯವಿರುವ ಪರಿಣಾಮಕಾರಿತ್ವವನ್ನು ಒದಗಿಸುತ್ತದೆ, ಇದು ತರಗತಿಯೊಳಗೆ ವಿದ್ಯಾರ್ಥಿಗಳಿಗೆ ವೈಯಕ್ತಿಕ ಕಲಿಕೆಯ ಸಾಮರ್ಥ್ಯ ಮತ್ತು ಶೈಲಿಗಳನ್ನು ಹೆಚ್ಚಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

2. ಭವಿಷ್ಯದ ದಾರಿ

ಆನ್ ಲೈನ್ ಕಲಿಕೆಯು ಕಲಿಸುವವರಿಗೆ ವೇಳಾಪಟ್ಟಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಮತ್ತು ವೆಚ್ಚವನ್ನು ಪರಿಣಾಮಕಾರಿಯಾಗಿಸುವ ಅವಕಾಶವನ್ನು ಒದಗಿಸುತ್ತದೆ. ಇದು ಕಲಿಕೆಯ ಹೊಸ ವಿಧಾನಗಳಿಗೆ ಪ್ರವೇಶವನ್ನು ಒದಗಿಸುತ್ತದೆ ಮತ್ತು ದೂರ ಶಿಕ್ಷಣದ ಮೂಲಕ ವಿಶ್ವದ ಬೇರೆಡೆ ಇರುವ ಪ್ರಸಿದ್ಧ ಶಿಕ್ಷಣತಜ್ಞರಿಂದ ಕಲಿಯುವ ಅವಕಾಶವನ್ನೂ ಒದಗಿಸುತ್ತದೆ.

3. ತರಬೇತಿ ಪಡೆಯುವ ಅವಕಾಶ

ಉತ್ತಮ ಶಿಕ್ಷಕರು ಕಲಿಸಲು ಇಷ್ಟಪಡುತ್ತಾರೆ, ಆದರೆ ಉತ್ತಮ ಶಿಕ್ಷಣತಜ್ಞರು ನಿರಂತರವಾಗಿ ಕಲಿಯುವ ಅವಕಾಶವನ್ನು ಆನಂದಿಸುತ್ತಾರೆ. ಒಬ್ಬರ ಬೋಧನಾ ವಿಧಾನವನ್ನು ನವೀಕರಿಸುವ ಮತ್ತು ಗೌರವಿಸುವ ಸಾಧನವಾಗಿ ಇ-ಲರ್ನಿಂಗ್ ಸಂಪನ್ಮೂಲಗಳು ಶಿಕ್ಷಕರಿಗೆ ತಮ್ಮ ಬೋಧನಾ ಕ್ರಮವನ್ನು ನಿರಂತರವಾಗಿ ಉತ್ತಮಪಡಿಸಲು ಒತ್ತಾಯಿಸುತ್ತದೆ, ಅಲ್ಲದೇ, ವೃತ್ತಿಪರ ಬೆಳವಣಿಗೆಯನ್ನು ದೈನಂದಿನ ಚಟುವಟಿಕೆಯನ್ನಾಗಿ ಮಾಡುತ್ತದೆ.

ಆನ್ ಲೈನ್ ಕಲಿಕೆಯು ಕೇವಲ ಕೋರ್ಸ್ ನಿರೀಕ್ಷೆಗಳನ್ನು ಮೀರಿ ಪ್ರಗತಿಗೆ ವಿದ್ಯಾರ್ಥಿಗಳನ್ನು ಸಶಕ್ತಗೊಳಿಸುವ ಸಾಮರ್ಥ್ಯವನ್ನಷ್ಟೇ ಹೊಂದಿಲ್ಲ. ಇದು ಕಲಿಕೆಯನ್ನು ಕ್ರಿಯಾತ್ಮಕವಾಗಿಸುವ ಮತ್ತು ಇಂದಿನ ಬೆಳೆಯುತ್ತಿರುವ ತಂತ್ರಜ್ಞಾನದ ಸೇರ್ಪಡೆ ಮತ್ತು ಮೋಜಿನ ರೀತಿಯಲ್ಲಿ ಪಠ್ಯಕ್ರಮವನ್ನು ಅನ್ವೇಷಿಸಲು ಮತ್ತು ಕಲಿಯಲು ಇದು ಅವರನ್ನು ಪ್ರೋತ್ಸಾಹಿಸುತ್ತದೆ.

ಕಾರ್ಯಮಗ್ನತೆ ಮತ್ತು ಪರಿಣಾಮಕಾರಿ ಆನ್ ಲೈನ್ ಬೋಧನೆ  ಕುರಿತು ನಮ್ಮ ವೆಬಿನಾರ್ - https://www.dellaarambh.com/webinars/ ಗೆ ಟ್ಯೂನ್ ಮಾಡಿ.