ಹೈಬ್ರಿಡ್ ಬೋಧನೆಗೆ 2 ಪ್ರಮುಖ ಸಲಹೆಗಳು

ಆಧುನಿಕ ಶಿಕ್ಷಣ ತಂತ್ರಜ್ಞಾನವು ಹೈಬ್ರಿಡ್ ಕಲಿಕಾ ಪರಿಸರವನ್ನು ಸೃಷ್ಟಿಸಲು ಅವಕಾಶ ಮಾಡಿಕೊಟ್ಟಿದೆ, ಈ ಮೂಲಕ ಶಿಕ್ಷಣತಜ್ಞರು ಖುದ್ದಾಗಿ ಮತ್ತು ದೂರದಲ್ಲಿರುವ ಸ್ಥಳದಿಂದ ಕಲಿಯುವವರಿಗೆ ಏಕಕಾಲದಲ್ಲಿ ಕಲಿಸಬಹುದು.

ಇದು ವಿದ್ಯಾರ್ಥಿಗಳು ಹೆಚ್ಚು ಪ್ರಯೋಜನ ಪಡೆಯಬಹುದೆಂದು ನಿರೀಕ್ಷಿಸುವ ಒಂದು ಕಲಿಕಾ ಮಾದರಿಯಾಗಿದೆ. ಇದು ಜನಪ್ರಿಯವಾಗುತ್ತಿರುವ ಒಂದು ವಿಧಾನ ಕೂಡಾ ಆಗಿದೆ ಮತ್ತು ಮುಂದಿನ ತಿಂಗಳುಗಳು ಮತ್ತು ವರ್ಷಗಳಲ್ಲಿ ಇದಕ್ಕೆ ಬೇಡಿಕೆ ಹೆಚ್ಚುವ ಸಾಧ್ಯತೆಯಿದೆ. ಆದ್ದರಿಂದ, ಹೈಬ್ರಿಡ್ ಕಲಿಕೆಯ ಸಲಹೆಗಳನ್ನು ಗ್ರಹಿಸಲು ಪ್ರಯತ್ನಿಸುವುದು ಮುಖ್ಯವಾಗಿದೆ.

ಎರಡೂ ಗುಂಪುಗಳಿಗೆ ಸಮಾನ ಗಮನ ನೀಡಿ

ಒಂದು ತರಗತಿಯಲ್ಲಿ ನಿಮ್ಮಂತೆಯೇ ಖುದ್ದಾಗಿ ಹಾಜರಿರುವ ವಿದ್ಯಾರ್ಥಿಗಳಿಗೆ ನೀವು ಕಲಿಸುತ್ತಿರುವಾಗ, ಸಹಜವಾಗಿ ಆ ವಿದ್ಯಾರ್ಥಿಗಳಿಗೆ ಆದ್ಯತೆ ನೀಡುವಂತಹ ಒಂದು ಪ್ರವೃತ್ತಿ ಇರಬಹುದು. ಇದಕ್ಕೆ ಆಸ್ಪದ ಕೊಡದಂತೆ ಎಚ್ಚರವಾಗಿರಿ ಮತ್ತು ಎರಡೂ ಗುಂಪುಗಳಿಗೆ ಸಮಾನ ಗಮನ ನೀಡಲು ಪ್ರಯತ್ನಿಸಿ.

ಎರಡೂ ಗುಂಪುಗಳು ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಖಚಿತಪಡಿಸಿಕೊಳ್ಳಿ

ನಿಮ್ಮ ಆಫ್ ಲೈನ್ ಮತ್ತು ಆನ್ ಲೈನ್ ವಿದ್ಯಾರ್ಥಿಗಳಿಗೆ ಪರಸ್ಪರ ಸಂವಹನ ನಡೆಸಲು ಅವಕಾಶ ನೀಡಿ. ಅವರು ಒಟ್ಟಿಗೆ ಚಟುವಟಿಕೆಗಳಲ್ಲಿ ಮತ್ತು ಪ್ರೊಜೆಕ್ಟ್ಗಳಲ್ಲಿ ಪಾಲ್ಗೊಳ್ಳುವುದನ್ನು ಖಚಿತಪಡಿಸಿಕೊಳ್ಳಿ. ಇದರಿಂದ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಪರಿಗಣಿಸುವಂತಹ ಯಾವುದೇ ಅಂಶ ಇರುವುದಿಲ್ಲ. 

ಹೈಬ್ರಿಡ್ ಕಲಿಕೆ ನಾವು ಶಿಕ್ಷಣದ ಬಗ್ಗೆ ಯೋಚಿಸುವ ವಿಧಾನವನ್ನು ಬದಲಾಯಿಸುತ್ತಿದೆ ಮತ್ತು ಸಾಂಪ್ರದಾಯಿಕವಾಗಿ ಅಸ್ತಿತ್ವದಲ್ಲಿದ್ದ ಹಲವು ಅಡೆತಡೆಗಳನ್ನು ತೆಗೆದುಹಾಕುತ್ತಿದೆ. ಇದು ವಿದ್ಯಾರ್ಥಿಗಳಿಗೆ ಕಲಿಯುವ ವಿಧಾನವನ್ನು ಆಯ್ಕೆ ಮಾಡಲು ಹೆಚ್ಚಿನ ಮಟ್ಟದ ಹೊಂದಾಣಿಕೆ ಮತ್ತು ಸ್ವಾತಂತ್ರ್ಯವನ್ನು ಒದಗಿಸುವುದಲ್ಲದೆ, ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶವನ್ನು ಕೂಡಾ ವಿಸ್ತರಿಸಬಹುದು

ಇನ್ನಷ್ಟು ತಿಳಿದುಕೊಳ್ಳಲು ಹೈಬ್ರಿಡ್ ಕಲಿಕೆಯ ಕುರಿತು ನಮ್ಮ ವೆಬಿನಾರ್ - https://www.dellaarambh.com/webinars/ ಗೆ ಟ್ಯೂನ್ ಮಾಡಿ