ನೀವು ತಿಳಿದುಕೊಂಡಿರಬೇಕಾದ 10 PC ಪದಗಳು

ನಿಮ್ಮ ನೆಚ್ಚಿನ ಆಟಿಕೆ, ನಿಮ್ಮ ಗ್ರಂಥಾಲಯ ಮತ್ತು ಒಂದು ಕ್ಲಿಕ್ಕಿನಲ್ಲಿ ಮನರಂಜನೆ, ಈ ಎಲ್ಲವನ್ನೂ ಒಂದರಲ್ಲಿಯೇ ಒದಗಿಸುವಂತೆ ಒಂದು PC ಯನ್ನು ನಿರ್ಮಿಸಲಾಗಿರುತ್ತದೆ. ಮನೆ ಮತ್ತು ಶಾಲೆಯಲ್ಲಿ PC ಯೊಂದನ್ನು ಹೊಂದುವುದು ನಿಮ್ಮದೇ ಆದ ರೀತಿಯಲ್ಲಿ ಅಭ್ಯಸಿಸುವ ಅವಕಾಶವನ್ನು ನಿಮಗೆ ನೀಡುತ್ತದೆ. ಅದರ ಮೌಲ್ಯಕ್ಕೆ ತಕ್ಕಂತೆ, ಕೇವಲ ಮಾಹಿತಿಯನ್ನು ಓದುವುದಕ್ಕಿಂತಲೂ ಹೆಚ್ಚಿನದ್ದನ್ನು ನೀವು ಮಾಡುತ್ತೀರಿ – ವಿಡಿಯೋಗಳು, ಚಿತ್ರಗಳು ಮುಂತಾದವುಗಳಿಂದ ವಾಸ್ತವದಲ್ಲಿ ನೀವು ಕಲಿಯುತ್ತಿರುವುದನ್ನು ನೀವು ದೃಶ್ಯೀಕರಿಸಿಕೊಳ್ಳಬಹುದು.

ಆದರೆ ನಿಮ್ಮ PC ಯೊಳಗಡೆ ಏನೇನಿದೆ ಎಂಬುದರ ಬಗ್ಗೆ ಹೇಗೆ?

ನಿಮಗೆ ತಿಳಿದಿರಬೇಕಾದ 10 PC ಪದಗಳನ್ನು ಇಲ್ಲಿ ನೀಡಲಾಗಿದೆ:

 

 

ವೈರಸ್ ಎಂಬುದು, ಸಿಸ್ಟಂ ಅನ್ನು ಕರಪ್ಟ್ ಮಾಡುವುದು ಅಥವಾ ನಿಮ್ಮ ಡೇಟಾವನ್ನು ನಾಶಗೊಳಿಸುವುದು ಮುಂತಾದವುಗಳಂಥ ನಕಾರಾತ್ಮಕ ಪರಿಣಾಮದೊಂದಿಗೆ ತನ್ನನ್ನು ತಾನು ನಕಲಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ಸಂಕೇತದ ತುಣುಕು ಆಗಿರುತ್ತದೆ.

 

 

ಬ್ಯಾಕ್ಅಪ್, ಅಥವಾ ಬ್ಯಾಕ್ಅಪ್ ತೆಗೆದುಕೊಳ್ಳುವ ಪ್ರಕ್ರಿಯೆಯು, ಡೇಟಾ ಕಳೆದುಹೋದಂಥ ಸಂದರ್ಭದಲ್ಲಿ ಮೂಲಪ್ರತಿಯನ್ನು ಪುನಸ್ಥಾಪಿಸಲು ಬಳಸಲಾಗುವಂತೆ ನಿಮ್ಮ ಡೇಟಾವನ್ನು ಕಾಪಿ ಮಾಡಿ, ಆರ್ಕೈವ್ ಮಾಡುವುದನ್ನು ಉಲ್ಲೇಖಿಸುತ್ತದೆ.

 

 

ಡೇಟಾ ಎಂದರೆ ಒಂದು ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನ್ ನಲ್ಲಿ ಪ್ರಸರಣ ಮತ್ತು ಸಂಗ್ರಹ ಮಾಡಿಡಬಹುದಾದ ಮಾಹಿತಿ ಎಂದು ಉಲ್ಲೇಖಿಸಲ್ಪಡುತ್ತದೆ, ಉದಾಹರಣೆಗೆ, ನಿಮ್ಮ ಅಸೈನ್ ಮೆಂಟುಗಳು, ಚಿತ್ರಗಳು ಮತ್ತು ವಿಡಿಯೋಗಳಂಥ ಮಾಹಿತಿ.

 

 

ಡೆಸ್ಕ್ ಟಾಪ್ ಕಂಪ್ಯೂಟರ್ ಎಂಬುದು ಅದರ ಗಾತ್ರ ಮತ್ತು ವಿದ್ಯುತ್ ಅವಶ್ಯಕತೆಯಿಂದಾಗಿ ಒಂದು ಡೆಸ್ಕ್ ಅಥವಾ ಮೇಜಿನ ಮೇಲೆ ಅಥವಾ ಅದರ ಬಳಿ ಒಂದೇ ಸ್ಥಳದಲ್ಲಿ ನಿಗದಿತ ಬಳಕೆಗಾಗಿ ತಯಾರಿಸಲಾದ ಪರ್ಸನಲ್ ಕಂಪ್ಯೂಟರ್ ಆಗಿರುತ್ತದೆ.

 

 

ಕರ್ಸರ್ ಎಂದರೆ ಬಳಕೆದಾರರಿಂದ ನೀಡಲಾಗುವ ಇನ್ ಪುಟ್ ಮೂಲಕ ಚಲಿಸಲ್ಪಡುವ ಬಿಂದುವನ್ನು ಗುರುತಿಸುವ, ಕಂಪ್ಯೂಟರ್ ಸ್ಕ್ರೀನಿನ ಮೇಲಿನ ಸರಿದಾಡಿಸಬಹುದಾದ ಗುರುತು ಆಗಿರುತ್ತದೆ.

 

 

ಹೋಮ್ ಪೇಜ್ ಎಂಬುದು ಸಾಮಾನ್ಯವಾಗಿ ಒಂದು ವೆಬ್ ಸೈಟಿನ ಪರಿಚಯಾತ್ಮಕ ಪುಟವಾಗಿದ್ದು, ಆ ಸೈಟಿನ ವಿಷಯ ಕೋಷ್ಠಕದಂತೆ ಅಥವಾ ಆ ಇಂಟರ್ ನೆಟ್ ಬ್ರೌಜರ್ ನ ಸೆಟ್ ಮಾಡಿದ ಡಿಫಾಲ್ಟ್ ಪುಟವಾಗಿ ಕಾರ್ಯನಿರ್ವಹಿಸುತ್ತದೆ.

 

 

ಪಾಸ್ ವರ್ಡ್ ಎಂಬುದು ಒಂದು ಕಂಪ್ಯೂಟರ್ , ಇ-ಮೇಲ್ ಅಥವಾ ಇತರ ಯಾವುದೇ ಸಂರಕ್ಷಿತ ವ್ಯವಸ್ಥೆಗೆ ಲಾಗಿನ್ ಆಗಲು ಒಬ್ಬ ವ್ಯಕ್ತಿಯನ್ನು ಅನುಮತಿಸುವ ಕ್ಯಾರಕ್ಟರ್ ಗಳ ಸಾಲು ಆಗಿರುತ್ತದೆ.

 

 

ಸಾಫ್ಟ್ ವೇರ್ ಎಂಬುದು, ಅದರ ಸಾಮಾನ್ಯ ಅರ್ಥದಲ್ಲಿ, ನಿರ್ದಿಷ್ಟ ಕೆಲಸಗಳನ್ನು ಮಾಡಲು PC ಯನ್ನು ನಿರ್ದೇಶಿಸುವ ನಿರ್ದೇಶನಗಳು ಅಥವಾ ಪ್ರೋಗ್ರಾಮ್ ಗಳ ಸಮೂಹವಾಗಿರುತ್ತದೆ ಉದಾಹರಣೆಗೆ, ಮೈಕ್ರೊಸಾಫ್ಟ್ ವರ್ಡ್ ನಲ್ಲಿ ಪ್ರಬಂಧವೊಂದನ್ನು ಬರೆಯುವುದು.

 

 

ಸ್ಕ್ರೀನ್ ಸೇವರ್ ಎಂಬುದು ಒಂದು ಎನಿಮೇಶನ್ ಅಥವಾ ಚಿತ್ರವಾಗಿದ್ದು, ಬದಲಾಗದಿರುವ ಕಂಪ್ಯೂಟರ್ ಡಿಸ್ಪ್ಲೇ ಅನ್ನು ನಿಷ್ಕ್ರಿಯವಾಗಿರುವ ಒಂದು ಅವಧಿಯ ನಂತರ ಬದಲಾಯಿಸುತ್ತದೆ.

 

 

ಶಾರ್ಟ್ಕಟ್ ಎಂಬುದು ಒಂದು ಕಡತ, ವೆಬ್ಸೈಟ್ ಅಥವಾ ಇತರ ಮಾಹಿತಿಯ ವಿಳಾಸದ ದಾಖಲೆಯಾಗಿದ್ದು ಕ್ವಿಕ್ ಆ್ಯಕ್ಸೆಸ್ ಅನ್ನು ಎನೇಬಲ್ ಮಾಡಲು ಅಥವಾ ಕೀಬೋರ್ಡ್ ಕಮ್ಯಾಂಡ್ಗಾಗಿ ತಯಾರಿಸಲ್ಪಟ್ಟಿರುತ್ತದೆ, ಉದಾಹರಣೆಗಾಗಿ ಡೇಟಾ ಕಾಪಿ ಮಾಡಲು Ctrl + C ಒತ್ತುವುದು.

PC ಯೊಂದನ್ನು ಶಾಲೆ ಮತ್ತು ಮನೆಯಲ್ಲಿ ಬಹುತೇಕ ಪ್ರತಿನಿತ್ಯ ಬಳಸುವ ಒಬ್ಬ ವ್ಯಕ್ತಿಯಾಗಿ, ಬಹಳ ಅವಶ್ಯಕವಾದ ಹೋಮ್ವರ್ಕ್ ಸಹಾಯದ ಜೊತೆಯಲ್ಲಿಯೇ ಬಹಳಷ್ಟು PC ಪದಗಳು ನಿಮಗೆ ಖಂಡಿತವಾಗಿ ಎದುರಾಗುತ್ತವೆ. ನಿಮ್ಮ ಅಭ್ಯಸಿಸುವಿಕೆ ಸಂತೋಷದಾಯಕವಾಗಿರಲಿ!