ನೀವು ಪ್ರಯತ್ನಿಸಬೇಕಾದ 10 ಟೈಪಿಂಗ್ ಗೇಮ್ಗಳು!

 

 

ಟೈಪಿಂಗ್ಗೆ ಸಂಬಂಧಿಸಿದಂತೆ ಎರಡು ವಿಷಯಗಳು ಮಾತ್ರ ಪ್ರಮುಖವಾಗುತ್ತವೆ – ನಿಖರತೆ ಮತ್ತು ವೇಗ. ನಿಮ್ಮ ಸಹಪಾಠಿಗಳಷ್ಟು ವೇಗವಾಗಿ ನೀವು ಟೈಪ್ ಮಾಡದೇ ಇರುವುದರಿಂದಾಗಿ ಮಾತ್ರವೇ ತರಗತಿಯಲ್ಲಿ ನೀವು ಹಿಂದೆ ಬೀಳುವುದನ್ನು ಕಲ್ಪಿಸಿಕೊಳ್ಳಿ. ಆದರೆ ಚಿಂತಿಸಬೇಕಿಲ್ಲ, ಟೈಪಿಂಗ್ ಅನ್ನು ಪ್ರ್ಯಾಕ್ಟೀಸ್ ಮಾಡುವುದು ನಿಮ್ಮನ್ನು ಅದರಲ್ಲಿ ಅಕ್ಷರಶಃ ಪರಿಪೂರ್ಣರನ್ನಾಗಿಸುತ್ತದೆ!

1. ಟೈಪ್ರೇಸರ್

ಟೈಪ್ರೇಸರ್ ಎಂಬುದು ಒಂದು ಜಾಗತಿಕ ಟೈಪಿಂಗ್ ಸ್ಪರ್ಧೆಯಾಗಿದ್ದು, ಇಡೀ ವಿಶ್ವದಿಂದ ಭಾಗವಹಿಸುವ ಇತರರಿಗೆ ಎದುರಾಗಿ ನೀವು ರೇಸ್ ಮಾಡುತ್ತಿರುವಂತೆಯೇ ನಿಮ್ಮ ಟೈಪಿಂಗ್ ಸ್ಪೀಡನ್ನು ಹೆಚ್ಚಿಸುತ್ತದೆ.

2. ಟೈಪಿಂಗ್ ಏಲಿಯನ್

ಕಲಿಯುವಿಕೆಯು ಮೋಜುಭರಿತವಾಗಿರುವುದಿಲ್ಲ ಎಂದು ಯಾರು ಹೇಳಿದರು! ಒಂದು ಸುತ್ತು ಟೈಪಿಂಗ್ ಏಲಿಯನ್ ಆಟವಾಡಿ ನೋಡಿ, ನೀವು ಅದಕ್ಕೆ ಅಂಟಿಕೊಳ್ಳದಿದ್ದರೆ ಹೇಳಿ! ಟೈಪಿಂಗ್ ಟೆಕ್ನಿಕ್ಗಳು ಹಾಗೂ ಸ್ಪೀಡ್ ಅನ್ನು ಪಿಕ್ಅಪ್ ಮಾಡಿಕೊಳ್ಳಲು ಈ ಗೇಮ್ ಹೇಳಿ ಮಾಡಿಸಿದಂತಿದೆ.

3. ಕೀಮ್ಯಾನ್

ಕೈ-ಕಣ್ಣುಗಳ ಸಂಯೋಜನೆಯನ್ನು ನೀವು ಅಭಿವೃದ್ಧಿಪಡಿಸಿಕೊಂಡು, ಅಲ್ಪ ಸಮಯದಲ್ಲಿಯೇ ನಿಮ್ಮ ಟೈಪಿಂಗ್ ವೇಗವನ್ನು ಹೆಚ್ಚಿಸಿಕೊಳ್ಳುವಂತೆ, ಕೀಮ್ಯಾನ್ನಲ್ಲಿ ಹಂತವೊಂದನ್ನು (ಅಕ್ಷರಗಳು ಹಾಗೂ ಸಂಖ್ಯೆಗಳು ಪ್ರತ್ಯೇಕವಾಗಿ ಇರುವುದರೊಂದಿಗೆ, ಸುಲಭದಿಂದ ಕಠಿಣದವರೆಗಿನ ಹಂತಗಳನ್ನು ಅದು ಒಳಗೊಳ್ಳುತ್ತದೆ) ನೀವು ಸೆಟ್ ಮಾಡಬಹುದು!

4. ಕೀಬೋರ್ಡ್ ನಿಂಜಾ

ಹೆಸರೇ ಸೂಚಿಸುವಂತೆ ಕೀಬೋರ್ಡ್ ನಿಂಜಾ, ಟೈಪಿಂಗ್ನಲ್ಲಿ ನೀವು ಆನಂದಿಸುತ್ತಿರುವಂತೆಯೇ ಆ ಪ್ರಕ್ರಿಯೆಯಲ್ಲಿ ಹೆಚ್ಚು ಫಾಸ್ಟ್ ಮತ್ತು ಹೆಚ್ಚು ಕ್ಷಮತೆಯುಳ್ಳವರಾಗಲು ನೀವು ಆಡಬೇಕಾದ ಗೇಮ್ ಆಗಿದೆ!

5. ಟೈಪ್-ಎ-ಬಲೂನ್

ಕೀಬೋರ್ಡಿನಲ್ಲಿ ಸಾಲುಗಳನ್ನು ಅಳವಡಿಸಿಕೊಳ್ಳುವುದರೊಂದಿಗೇ ಹಲವಾರು ಪಾಠ ವಿಧಗಳೊಂದಿಗೆ ಕಠಿಣತೆಯ ಹಂತಗಳನ್ನು (ಕಠಿಣ, ಮಧ್ಯಮ ಮತ್ತು ಸುಲಭ) ಹೊಂದಿರುವ ಮತ್ತೊಂದು ಗೇಮ್ ಆದ ಟೈಪ್-ಎ-ಬಲೂನ್, ನಿಮ್ಮ ಟೈಪಿಂಗಿಗಾಗಿ ಅತ್ಯುತ್ತಮ ಅಭ್ಯಾಸವಾಗಿರುತ್ತದೆ.

6. ದಿ ಟೈಪಿಂಗ್ ಆಫ್ ದಿ ಘೋಸ್ಟ್ಸ್

ಹೆಸರು ಭಯಪಡಿಸುವಂಥದ್ದಾದರೂ, ಟೈಪಿಂಗ್ ಆಫ್ ದಿ ಘೋಸ್ಟ್ಸ್, ಒಂದು ಸವಾಲೆಸೆಯುವ ಗೇಮ್ ಆಗಿದ್ದು, ಇದರಲ್ಲಿ ಘೋಸ್ಟ್ಗಳಿಂದ ನಿಮ್ಮನ್ನು ನೀವು ಉಳಿಸಿಕೊಳ್ಳುತ್ತೀರಿ, ಹಾಗೂ ಈ ಪ್ರಕ್ರಿಯೆಯಲ್ಲಿ ನಿಮ್ಮ ಕೈ-ಕಣ್ಣುಗಳ ಸಂಯೋಜನೆಯು ಸುಧಾರಿಸುತ್ತದೆ.

7. ವರ್ಡ್ಟ್ರಿಸ್ ಸ್ಕ್ರ್ಯಾಬಲ್

ನಿಮ್ಮ ಟೈಪಿಂಗ್ ರಿಫ್ಲೆಕ್ಸ್ಗಳು ಹಾಗೂ ಶಬ್ದಭಂಡಾರವನ್ನು ತರಬೇತುಗೊಳಿಸಿಕೊಳ್ಳಲು ವರ್ಡ್ಟ್ರಿಸ್ ಸ್ಕ್ರ್ಯಾಬಲ್ ಒಂದು ಉತ್ತಮ ಅವಕಾಶವನ್ನು ಒದಗಿಸುತ್ತದೆ. ನೀವು ಆಟವಾಡುವ ಪ್ರತಿ ಗೇಮ್ನೊಂದಿಗೆ ನಿಮ್ಮನ್ನು ಹೆಚ್ಚು ಉತ್ತಮ “ಟೈಪರ್” ಆಗಿಸುವುದಕ್ಕಾಗಿನ ಸಲಹೆ ಮತ್ತು ಉಪಾಯಗಳನ್ನು ಈ ಗೇಮ್ ಒಳಗೊಂಡಿದೆ.

8. ಟೈಪ್ ದಿ ಅಲ್ಫಾಬೆಟ್

ಓರ್ವ ಟೈಪಿಂಗ್ ಸ್ಪೀಡ್ಸ್ಟರ್ ಆಗಲು ನಿಮಗೆ ನಿಖರವಾಗಿ ಬೇಕಾಗಿರುವುದು ಈ ಟೈಪ್ ದಿ ಅಲ್ಫಾಬೆಟ್ ಆಗಿದೆ. ತರಗತಿಯಲ್ಲಿಯೂ ಸಹ, ನಿಮಗೆ ಪರಿಚಿತರಿರುವ ಎಲ್ಲರಿಗೂ, ಇದು ಒಂದು ಸ್ಪರ್ಧೆಯಾಗಬಲ್ಲದು.

9. ಫಾಸ್ಟ್ ಫೈರ್ ಟೈಪರ್

ನಿಮ್ಮ ಶಬ್ದಭಂಡಾರವನ್ನು ಸುಧಾರಿಸಿಕೊಂಡು, ಓರ್ವ ಟೈಪಿಂಗ್ ಮಾಸ್ಟರ್ ಆಗಬಯಸುತ್ತೀರಾ? ನೀವು ಅಗ್ರಶ್ರೇಯಾಂಕದಲ್ಲಿ ಇರುವಂತೆ, ಒಂದು ಇಂಪಾರ್ಟಂಟ್ ಅಸೈನ್ಮೆಂಟ್ ಅಥವಾ ಟೆಸ್ಟ್ಗೂ ಮೊದಲು ನೀವು ಆಡಬೇಕಿರುವ ಗೇಮ್, ಫಾಸ್ಟ್ ಫೈರ್ ಟೈಪರ್ ಆಗಿದೆ.

10. ಟೈಪಿಂಗ್ ಮಾಸ್ಟರ್ 10 ಫಾರ್ ವಿಂಡೋಸ್

ಟೈಪಿಂಗ್ ಮಾಸ್ಟರ್ 10 ಫಾರ್ ವಿಂಡೋಸ್ ಕೇವಲ ಒಂದು ಗೇಮ್ ಮಾತ್ರವಾಗಿರದೇ, ನಿಮ್ಮ ಟೈಪಿಂಗ್ ಅನ್ನು ಪರಿಪೂರ್ಣಗೊಳಿಸಲು ಡೌನ್ಲೋಡ್ ಮಾಡಿಕೊಳ್ಳಬಹುದಾದ ಕೋರ್ಸ್ ಸಹ ಆಗಿದ್ದು, ನಿಮ್ಮ ದುರ್ಬಲ ಅಂಶಗಳನ್ನು (ಯಾವುದಾದರೂ ಇದ್ದಲ್ಲಿ) ಸುಧಾರಿಸಿಕೊಳ್ಳಲು ನೆರವಾಗುತ್ತದೆ.

ಈಗ, ಸುಪರ್-ಪ್ರೊಡಕ್ಟಿವ್ ಆಗಿರಲು ನಿಮ್ಮ ಪರ್ಸನಲ್ ಕಂಪ್ಯೂಟರ್ಅನ್ನು ಅತ್ಯುತ್ತಮವಾಗಿ ಬಳಸುವುದಷ್ಟೇ ನೀವು ಮಾಡಬೇಕಾದ ಕೆಲಸವಾಗಿರುತ್ತದೆ. ಹ್ಯಾಪಿ ಟೈಪಿಂಗ್!