ನಿಮ್ಮ ವಿದ್ಯಾರ್ಥಿಗಳಿಗೆ ಇಷ್ಟವಾಗುವ 5 ಮೈಕ್ರೊಸಾಫ್ಟ್ ಆಫೀಸ್ ಲೆಸ್ಸನ್ ಪ್ಲ್ಯಾನ್ಗಳು

ಮೈಕ್ರೊಸಾಫ್ಟ್ ಆಫೀಸ್ ಎಂಬುದು ಆಫೀಸು, ಮನೆ ಮತ್ತು ಶಾಲೆಗಳಲ್ಲಿ ವ್ಯಾಪಕವಾಗಿ ಬಳಸಲ್ಪಡುವ, ಒಂದು ತುಂಬಾ ಉಪಯುಕ್ತವಾದ ಸಾಧನವಾಗಿದ್ದು, ಮಾಹಿತಿ, ದತ್ತಾಂಶ ಹಾಗೂ ಅಂಕಿಅಂಶಗಳನ್ನು ಆಯೋಜಿಸಲು, ನಿರ್ವಹಿಸಲು ಹಾಗೂ ಪ್ರಸ್ತುತಪಡಿಸಲು ಬಳಸಲ್ಪಡುತ್ತದೆ.

 

ಮೋಜುಯುಕ್ತ ಕಲಿಕಾ ಅನುಭವವನ್ನು ಹೊಂದಲು ವಿದ್ಯಾರ್ಥಿಗಳಿಗೆ ನೆರವಾಗುವ 4 ಮೈಕ್ರೊಸಾಫ್ಟ್ ಆಫೀಸ್ ಲೆಸ್ಸನ್ ಪ್ಲ್ಯಾನ್ ಗಳನ್ನು ಇಲ್ಲಿ ನೀಡಲಾಗಿದೆ.

  • ಮೈಕ್ರೊಸಾಫ್ಟ್ ವರ್ಡ್ ಲೆಸ್ಸನ್ ಪ್ಲ್ಯಾನ್ ಗಳು – ವರ್ಡ್ ಎಂಬುದು ನಿಬಂಧಗಳು, ಪರೀಕ್ಷೆಗಳು ಮತ್ತು ರಸಪ್ರಶ್ನೆಗಳಂಥ ದಾಖಲೆಗಳನ್ನು ರಚಿಸಲು ಪ್ರಾಥಮಿಕವಾಗಿ ಬಳಸಲ್ಪಡುವ ಒಂದು ಜನಪ್ರಿಯವಾದ ಪ್ರೋಗ್ರಾಮ್ ಆಗಿದೆ. ಮಾಹಿತಿಯ ಅಭ್ಯಸಿಸುವಿಕೆ ಹಾಗೂ ಅರ್ಥೈಸಿಕೊಳ್ಳುವಿಕೆಯನ್ನು ಹೆಚ್ಚು ಸುಲಭವಾಗಿಸುವ ಅನೇಕ ಸರಳ ಹಾಗೂ ಉಪಯುಕ್ತ ವೈಶಿಷ್ಟ್ಯತೆಗಳನ್ನು ವರ್ಡ್ ಹೊಂದಿದೆ. ಉದಾಹರಣೆಗೆ, ಪ್ರತಿಯೊಂದನ್ನೂ ವ್ಯಾಕರಣಬದ್ಧವಾಗಿ ಸರಿಯಾಗಿರುವಂತೆ ಮಾಡಲು ವ್ಯಾಕರಣದ ದೋಷಗಳನ್ನು ಮುಖ್ಯಾಂಶೀಕರಿಸಿ, ಸರಿಪಡಿಸುವಿಕೆಗಳನ್ನು ಸೂಚಿಸುವ ಮೂಲಕ ಇಂಗ್ಲೀಷ್ ನಿಬಂಧಗಳನ್ನು ಬರೆಯಲು ಅದು ನೆರವಾಗುತ್ತದೆ.
  • ಮೈಕ್ರೊಸಾಫ್ಟ್ ಎಕ್ಸೆಲ್ ಲೆಸ್ಸನ್ ಪ್ಲ್ಯಾನ್ ಗಳು – ಎಕ್ಸೆಲ್ ಎಂಬುದು ನೇವಿಗೇಶನ್ ಮಾಡಲು ಸುಲಭವಾಗುವ ರೀತಿಯಲ್ಲಿ ದತ್ತಾಂಶವನ್ನು ಆಯೋಜಿಸಬಲ್ಲದು ಹಾಗೂ ಮೂಲಭೂತವಾದ ಮತ್ತು ಸಂಕೀರ್ಣವಾದ ಗಣಿತೀಯ ಸಮಸ್ಯೆಗಳನ್ನು ಮಾಡಬಲ್ಲದು. ರಾಶೀಗಟ್ಟಲೇ ದತ್ತಾಂಶವನ್ನು ವರ್ಣಮಯ ಚಾರ್ಟುಗಳು ಹಾಗೂ ರೇಖಾಚಿತ್ರಗಳಾಗಿ ಅದು ಪರಿವರ್ತಿಸುತ್ತದೆ ಹಾಗೂ ಅಂದಾಜಿಸುವಿಕೆಗಳನ್ನು ಮಾಡಲು ಅದನ್ನು ವಿಶ್ಲೇಷಿಸುತ್ತದೆ. ಉದಾಹರಣೆಗೆ, ಸೂಕ್ತ ಸೂತ್ರವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಕಳೆಯುವಿಕೆಯಂಥ ಗಣಿತದ ಸಮಸ್ಯೆಗಳನ್ನು ಬಿಡಿಸಲು ವಿದ್ಯಾರ್ಥಿಗಳು ಎಕ್ಸೆಲ್ ಅನ್ನು ಬಳಸಬಹುದು.
  • ಮೈಕ್ರೊಸಾಫ್ಟ್ ಪವರ್ ಪಾಯಿಂಟ್ ಲೆಸ್ಸನ್ ಪ್ಲ್ಯಾನ್ ಗಳು – ವೃತ್ತಿಪರವಾದ ಹಾಗೂ ಸುಧೃಢವಾದ ನಮೂನೆಯೊಂದನ್ನು ರಚಿಸುವ ಮೂಲಕ ಪ್ರೆಜೆಂಟೇಶನ್ ಗಳನ್ನು ಆಯೋಜಿಸಿ, ಅವುಗಳನ್ನು ಸಂರಚಿಸಲು ಪವರ್ ಪಾಯಿಂಟ್ ನೆರವಾಗುತ್ತದೆ. ವಿಷಯಸಾಮಗ್ರಿಗೆ ಒಂದು ನಿದರ್ಶನಾತ್ಮಕ ಹಿನ್ನೆಲೆಯನ್ನು ಅದು ಒದಗಿಸುತ್ತದೆ ಹಾಗೂ ದೃಶ್ಯಾತ್ಮಕವಾಗಿ ಹೆಚ್ಚಿನ ಪ್ರಭಾವಕ್ಕಾಗಿ ಸ್ಲೈಡ್ ಗಳನ್ನು ಎನಿಮೇಟ್ ಮಾಡುತ್ತದೆ. ಇತಿಹಾಸ, ಭೂಗೋಳಶಾಸ್ತ್ರ, ವಿಜ್ಞಾನದ ಪಠ್ಯಪುಸ್ತಕಗಳಿಂದ ಕಲಿಯುವದರ ಬದಲಾಗಿ ಹೆಚ್ಚು ಮೋಜುದಾಯಕ ರೀತಿಯಲ್ಲಿ ಕಲಿಯಲು ವಿದ್ಯಾರ್ಥಿಗಳಿಗೆ ಇದು ನೆರವಾಗುತ್ತದೆ.
  • ಮೈಕ್ರೊಸಾಫ್ಟ್ ಪಬ್ಲಿಶರ್ ಲೆಸ್ಸನ್ ಪ್ಲ್ಯಾನ್ ಗಳು – ವಿದ್ಯಾರ್ಥಿಗಳು ಸೃಜನಾತ್ಮಕವಾಗಿರಲು, ಕಲಾತ್ಮಕವಾಗಿರಲು ಹಾಗೂ ಕಾಲ್ಪನಿಕತೆಯನ್ನು ಮೈಗೂಡಿಸಿಕೊಳ್ಳಲು ಪಬ್ಲಿಶರ್ ನೆರವಾಗುತ್ತದೆ. ಈ ಕೆಳಗಿನ ಕಾರಣಗಳಿಂದಾಗಿ ತರಗತಿಕೋಣೆಯಲ್ಲಿ ಅದು ಪರಿಣಾಮಕಾರಿಯಾಗಿರಬಲ್ಲದು:
    • ವಿದ್ಯಾರ್ಥಿಗಳು ತಮ್ಮ ಪ್ರೆಜೆಂಟೇಶನ್ ಗಳು/ಮೌಖಿಕ ಪರೀಕ್ಷೆಗಳ ಸಂದರ್ಭದಲ್ಲಿ ಕತೆಯೊಂದನ್ನು ಬರೆದು, ಅದನ್ನು ನಿದರ್ಶಿಸಬಹುದು
    • ಪ್ರಾಜೆಕ್ಟ್ ಗಳು/ಅಸೆಸ್ ಮೆಂಟ್ ಗಳಿಗಾಗಿ ಇಂಟರ&zwj್ಯಾಕ್ಟಿವ್ ಆದ ನ್ಯೂಸ್ ಲೆಟರ್ ಒಂದನ್ನು ಅವರು ರಚಿಸಬಹುದು
    • ಆರ್ಟ್ ಅಂಡ್ ಕ್ರಾಫ್ಟ್ ಗಾಗಿ ಡಿಜಿಟಲ್ ಕೆಟಲಾಗ್ ಗಳು ಹಾಗೂ ಗ್ರೀಟಿಂಗ್ ಕಾರ್ಡ್ ಗಳನ್ನು ಸಿದ್ಧಪಡಿಸಲು ಪಬ್ಲಿಶರ್ ಅನ್ನು ಬಳಸಬಹುದು

ಓರ್ವ ಶಿಕ್ಷಕರಾಗಿ, ಮೈಕ್ರೊಸಾಫ್ಟ್ ಆಫೀಸ್ ಸರ್ಟಿಫಿಕೇಶನ್ ಗೆ ನೀವು ಖಂಡಿತವಾಗಿ ಸಿದ್ಧತೆ ನಡೆಸಬೇಕಿರುತ್ತದೆ. ಜಾಗತಿಕವಾಗಿ ಮನ್ನಣೆ ಪಡೆದ ಮಾನಕಕ್ಕೆ ಅನುಗುಣವಾಗಿ ನಿಮ್ಮ ಕೌಶಲ್ಯಗಳನ್ನು ವರ್ಧಿಸಲು ಇತ್ತೀಚಿನ ಸಾಧನಗಳು ಹಾಗೂ ತಾಂತ್ರಿಕತೆಗಳನ್ನು ಈ ಪ್ರಮಾಣೀಕರಣವು ಹೊಂದಿರುವುದರಿಂದ ಈ ಮೇಲೆ ತಿಳಿಸಿದ ಪಾಠಗಳನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಸುಲಭವಾಗಿ ಕಲಿಸಲು ಅದು ನಿಮಗೆ ನೆರವಾಗುತ್ತದೆ. ನಿಮ್ಮನ್ನು ನೀವು ಅಪ್ ಗ್ರೇಡ್ ಮಾಡಿಕೊಳ್ಳಲು ಮತ್ತು ಕಲಿಕೆಯೊಂದಿಗಿನ ನಿಮ್ಮ ವಿದ್ಯಾರ್ಥಿಗಳ ಸಂಬಂಧವನ್ನು ರೂಪಾಂತರಗೊಳಿಸಲು ಈ ಕೌಶಲ್ಯಗಳು ನಿಮಗೆ ನೆರವಾಗುತ್ತವೆ