ನಿಮ್ಮ ಮಗುವಿನಲ್ಲಿ ಬೇಸಿಗೆ ರಜೆಯ ಕಲಿಯುವಿಕೆಯ ನಷ್ಟವನ್ನು ತಡೆಯಲು 4 ವಿಧಾನಗಳು

ಮಕ್ಕಳು ಬೇಸಿಗೆ ರಜೆಯನ್ನು ಇಷ್ಟಪಡುತ್ತಾರೆ! 60 ದಿನಗಳ ಮೋಜು, ಬಿಸಿಲು, ಆರಾಮ ಮತ್ತು ಶಾಲೆ ಇಲ್ಲದೇ ಇರುವುದು. ಈ ರಜೆಯು ಅವರ ಸಾಮಾನ್ಯ ಶೈಕ್ಷಣಿಕ ವರ್ಷದ ಅವಧಿಗೆ ಸಿಗುವ ಉತ್ತಮ ವಿರಾಮವಾಗಿದೆ, ಆದರೆ ಸಂಶೋಧನೆಯ ಪ್ರಕಾರ ಕೆಲವು ಮಕ್ಕಳಿಗೆ ಬೇಸಿಗೆಯಲ್ಲಿ ಕೆಲವು ತಿಂಗಳು ಶಾಲೆಯಿಂದ ದೂರ ಇರುವುದರಿಂದ ಅವರಿಗೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಜ್ಞಾನದಲ್ಲಿನ ಇಳಿಕೆ ಮತ್ತು ಕಿರು ಪರೀಕ್ಷೆಗಳಲ್ಲಿ ಕಡಿಮೆ ಅಂಕ ಬರುವುದು, ಇವುಗಳನ್ನು ಒಳಗೊಂಡ ಗಂಭೀರವಾದ ಹಿನ್ನಡೆಗಳು ಉಂಟಾಗುತ್ತದೆ ಎಂದು ಹೇಳುತ್ತದೆ. ಇದನ್ನು “ಬೇಸಿಗೆ ರಜೆಯಲ್ಲಿ ಕಲಿಕೆಯ ನಷ್ಟ’ ಎನ್ನುತ್ತಾರೆ.

ಇಲ್ಲಿ ಬೇಸಿಗೆ ರಜೆಯಲ್ಲಿ ಕಲಿಕೆಯ ನಷ್ಟದ ಸಾಮಾನ್ಯ ಸಂಕೇತಗಳನ್ನು ನೀಡಲಾಗಿದೆ.

1. ವಿದ್ಯಾರ್ಥಿಗಳು ರಜೆ ಮುಗಿದ ನಂತರದ ಪರೀಕ್ಷೆಯಲ್ಲಿ ಪಡೆಯುವ ಅಂಕಗಳು ರಜೆಗೂ ಮುನ್ನ ನಡೆದ ಪರೀಕ್ಷೆಯಲ್ಲಿ ಪಡೆದ ಅಂಕಗಳಿಗಿಂತ ಕದಿಮೆ ಇರುವುದು.

2. ಅವರಿಗೆ ಗಣಿತದ ಗಣಕೀಕರಣ ಕೌಶಲ್ಯವನ್ನು ಮರೆತಿರುವಂತೆ ಅನುಭವವಾಗುವುದು.

3. ಅವರ ಓದುವ ಮತ್ತು ಸ್ಪೆಲ್ಲಿಂಗ್ ಸಾಮರ್ಥ್ಯಗಳ ಮೇಲೆ ದುಷ್ಪರಿಣಾಮ ಬೀರುವುದು.

 

ಹಾಗಾದರೆ ನೀವು ಬೇಸಿಗೆ ರಜೆಯಲ್ಲಿನ ಕಲಿಕೆಯ ನಷ್ಟವನ್ನು ಹೇಗೆ ತಡೆಯುವಿರಿ?

1. ಗಣಿತ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು

ಪ್ರತಿ ದಿನ ಮೂರರಿಂದ ನಾಲ್ಕು ಗಣಿತ ಸಮಸ್ಯೆಗಳನ್ನು ಬೇಸಿಗೆ ರಜೆಯಲ್ಲಿ ಪರಿಹರಿಸುವುದರಿಂದ ನಿಮ್ಮ ಗಣಿತ ಕೌಶಲ್ಯಗಳು ವ್ಯರ್ಥವಾಗುವುದನ್ನು ತಡೆಯಬಹುದು, ಆದರೆ ಅವರಿಗೆ ಮೋಜನ್ನು ತರಲಾರದು. ಅವರ ಗಣಿತದ ಪರಿಕಲ್ಪನೆಗಳನ್ನು ಚುರುಕುಗೊಳಿಸಲು ಸಹಾಯಕವಾಗುವ ಆನ್‍ಲೈನ್ ಮತ್ತು ವಿಡಿಯೋಗಳನ್ನು ಸಹ ನೀವು ಉಪಯೋಗಿಸಿಕೊಳ್ಳಬಹುದು. ಯೂ ಟ್ಯೂಬ್‍ನಲ್ಲಿ ಇರುವ ಅತ್ಯಂತ ಜನಪ್ರಿಯ ಶೈಕ್ಷಣಿಕ ಚಾನೆಲ್‌ಗಳಲ್ಲಿ ಒಂದಾದ  ಪ್ಯಾಟ್ರಿಕ್ ಜೆಎಂಟಿಯು 1,50,000ಕ್ಕೂ ಹೆಚ್ಚು ಚಂದಾದಾರರಿಗೆ ಉಚಿತವಾದ ಗಣಿತದ ವಿಡಿಯೋಗಳನ್ನು ಒದಗಿಸುತ್ತಿದೆ.

 

2. ವ್ಯಾಕರಣ ಕೌಶಲ್ಯಗಳನ್ನು ಉಂಟುಮಾಡುವುದು

ನಿಮ್ಮ ಮಗುವು ಭಾಷೆಯ ಮೇಲಿನ ಹಿಡಿತವನ್ನು ಕಳೆದುಕೊಳ್ಳದೇ ಇರುವುದನ್ನು ಖಚಿತಪಡಿಸಿಕೊಳ್ಳಲು ವ್ಯಾಕರಣದ ಪರಿಕಲ್ಪನೆಗಳನ್ನು ಪುನರಾವಲೋಕನ ಮಾಡುವುದು ಮತ್ತು ಮುಂದಿನ ವರ್ಷದ ಅಭ್ಯಾಸಗಳ ಮೇಲೆ ಕೆಲಸ ಮಾಡಲು ಪ್ರಾರಂಭಿಸುವುದರಿಂದ ಸಹಾಯಕವಾಗಬಹುದು. ನಿಮ್ಮ ಮಗುವು ಈ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳುವುದನ್ನು ಖಚಿತಪಡಿಸಲು ಅವರ ವ್ಯಾಕರಣದ ಕೌಶಲ್ಯಗಳಲ್ಲಿ ಯಾವುದೇ ಹಿನ್ನಡೆಯಾಗದಂತೆ ಮಾಡಲು ವಿಡಿಯೋಗಳನ್ನು ಇಂಗ್ಲಿಶ್ ಗ್ರಾಮರ್ 101ನಂತಹ ವೆಬ್‌ಸೈಟ್‌ಗಳನ್ನು ಬಳಸುವುದು ಉತ್ತಮ.

 

3. ಬ್ಲಾಗ್‌ಗಳ ಮೂಲಕ ಕ್ರಿಯಾತ್ಮಕ ಬರವಣಿಗೆ

ನಿಮ್ಮ ಮಗುವಿಗೆ ಒಂದು ಬ್ಲಾಗ್ ಪ್ರಾರಂಭಿಸಲು ಉತ್ತೇಜನ ನೀಡಿರಿ. ಅವರು ಬ್ಲಾಗ್ ಅನ್ನು ತಮ್ಮ ಪ್ರವಾಸದ ಕಥೆಗಳು ಮತ್ತು ರಜೆಯ ಡಿಐವೈ ಯಶಸ್ಸಿನ ಕಥೆಗಳ ಮೂಲಕ ಅಥವಾ ಅವರ ಮೇಲೆ ಪ್ರಭಾವವನ್ನು ಬೀರುವ ವಿಷಯವನ್ನು ಬರೆಯುವ ಮೂಲಕ ಅಪ್‌ಡೇಟ್ ಮಾಡಬಹುದು. ಇದು ಅವರ ಕ್ರಿಯಾತ್ಮಕತೆಯನ್ನು ಜಾಗೃತಗೊಳಿಸುತ್ತದೆ, ಅವರನ್ನು ತಲ್ಲೀನರನ್ನಾಗಿಸುತ್ತದೆ ಮತ್ತು ಬಹಳ ವೇಗವಾಗಿ ಬರೆಯಲು ಸಹಾಯ ಮಾಡುತ್ತದೆ.

 

4. ದುರ್ಬಲವಾಗಿರುವ ವಿಷಯಗಳ ಬಗ್ಗೆ ಗಮನ ಹರಿಸುವುದು

ನಿಮ್ಮ ಮಗು ಕಷ್ಟ ಪಡುವಂತಹ ಕನಿಷ್ಟ ಒಂದು ವಿಷಯವಾದರೂ ಇದ್ದಿರಲೇಬೇಕು. ಬೇಸಿಗೆ ರಜೆಯು ಈ ಬೋರು ಹೊಡೆಸುವ ವಿಷಯಗಳ ಮೇಲೆ ಮತ್ತು ಮಗ್ಗಿಯನ್ನು ಕಲಿಯುವುದರ ಬಗ್ಗೆ ಕೆಲಸ ಮಾಡಲು ಅತ್ಯುತ್ತಮವಾದ ಸಮಯವಾಗಿದೆ! ಎಡುರೈಟ್ ನಿಂದ ಅತ್ಯಾಕರ್ಷಕ ಪಾಠಗಳು ಡೇಲ್ ಉತ್ಪನ್ನಗಳ ಮಹತ್ವವನ್ನು ಹೆಚ್ಚಿಸಿವೆ. ಅವು ನಿಮ್ಮ ಮಗುವಿನ ಜ್ಞಾನವನ್ನು ಎಲ್ಲಾ ವಿಷಯಗಳಲ್ಲಿ ಪರಿಣಾಮಕಾರಿಯಾಗಿ ಹೆಚ್ಚಿಸುತ್ತವೆ, ಇದರಿಂದ ಅವರು ಮುಂದಿನ ಶೈಕ್ಷಣಿಕ ವರ್ಷವನ್ನು ಅತ್ಯುತ್ತಮವಾದ ಸುಜ್ಞಾನದ ಆಧಾರದ ಮೇಲೆ ಪ್ರಾರಂಭಿಸಬಹುದಾಗಿದೆ.