5 ಕಾರಣಗಳಿಂದಾಗಿ ವಿದ್ಯುನ್ಮಾನ ಕಲಿಕಾ ಪದ್ಧತಿ(ಇ-ಲರ್ನಿಂಗ್/ಇ-ಕಲಿಕೆ) ನಿಮ್ಮ ಮಗುವಿಗೆ ಅನುಕೂಲಕರವಾಗಿದೆ

 

 

ನಾವು ಆನ್ ಲೈನ್ ಕಲಿಕೆಯಲ್ಲಿ ಭಾರಿ ಏರಿಕೆ ಕಾಣುತ್ತಿದ್ದೇವೆ. ಕೆಲವು ವರದಿಗಳ ಪ್ರಕಾರ, ಭಾರತದ ಆನ್ ಲೈನ್ ಶಿಕ್ಷಣ ಮಾರುಕಟ್ಟೆಯ ಮೌಲ್ಯವು 2024 ರ ವೇಳೆಗೆ ₹360 ಶತಕೋಟಿ ಆಗಲಿದೆ ಎಂದು ಅಂದಾಜಿಸಲಾಗಿದೆ.

ಪೋಷಕರಾಗಿ, ನೀವು ಇ-ಕಲಿಕೆ ಮತ್ತು ನಿಮ್ಮ ಮಗುವಿನ ಮೇಲೆ ಅದರ ಪ್ರಭಾವದ ಬಗ್ಗೆ ಪ್ರಶ್ನೆಗಳನ್ನು ಹೊಂದಿರಬಹುದು. ನಿಮ್ಮ ಮಗು ತನ್ನ ಕಲಿಕೆಯ ಸಾಮರ್ಥ್ಯ ಮತ್ತು ಒಟ್ಟಾರೆ ಅನುಭವವನ್ನು ಹೆಚ್ಚಿಸುವುದರ ಜೊತೆಗೆ ಹಲವಾರು ಪ್ರಯೋಜನಗಳನ್ನು ಆನಂದಿಸಬಹುದು.

ಆ ಪ್ರಯೋಜನಗಳು ಇಲ್ಲಿವೆ-

ನಿಮ್ಮ ಮಗುವನ್ನು ಹೆಚ್ಚು ಜವಾಬ್ದಾರಿಯುತವಾಗಿಸುತ್ತದೆ

ಇ-ಕಲಿಕೆಯ ಸಮಯದಲ್ಲಿ, ನಿಮ್ಮ ಮಗುವಿಗೆ ಅಸೈನ್ಮೆಂಟ್ ಗಳನ್ನು ಸಲ್ಲಿಸುವಂತೆ ಮತ್ತು ತರಗತಿಯ ಚರ್ಚೆಗಳಲ್ಲಿ ಭಾಗವಹಿಸುವಂತೆ ಹೇಳುವವರು ಯಾರೂ ಇರುವುದಿಲ್ಲ. ಇದು ಅವರನ್ನು ಚಿಕ್ಕ ವಯಸ್ಸಿನಲ್ಲಿಯೇ ಸ್ವಯಂ ಪ್ರೇರಿತರನ್ನಾಗಿಸುತ್ತದೆ.

ಕುತೂಹಲವನ್ನು ಮತ್ತು ಕಲಿಯುವ ತೀವ್ರ ಆಸಕ್ತಿಯನ್ನು ಉತ್ತೇಜಿಸುತ್ತದೆ

ಆನ್ ಲೈನ್ ನಲ್ಲಿ ಸಾಕಷ್ಟು ಮಾಹಿತಿ ಲಭ್ಯವಿದೆ. ಆನ್ ಲೈನ್ ಕಲಿಕೆಯ ವಿವಿಧ ಪ್ರಕಾರಗಳಿಗೆ ಪ್ರವೇಶವಿರುವುದರ ಜೊತೆಗೆ, ನಿಮ್ಮ ಮಕ್ಕಳು ಅವರಿಗೆ ಕುತೂಹಲವಿರುವ ಅಥವಾ ಕಲಿಯಲು ಉತ್ಸುಕರಾಗಿರುವ ವಿಷಯಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು.

ಮಕ್ಕಳು ಹೆಚ್ಚು ಕ್ರಮಬದ್ಧವಾಗಿ ಕೆಲಸ ಮಾಡುತ್ತಾರೆ

ತರಗತಿಯ ಫೈಲ್ ಗಳನ್ನು ನಿರ್ವಹಿಸುವುದು, ಇತರ ವಿದ್ಯಾರ್ಥಿಗಳೊಂದಿಗೆ ಸಮಭಾಗಿಯಾಗುವುದು ಮತ್ತು ಅಸೈನ್ಮೆಂಟ್ ಗಳನ್ನು ಸಲ್ಲಿಸುವ ಮೂಲಕ, ನಿಮ್ಮ ಮಗುವಿಗೆ ಕ್ರಮಬದ್ಧವಾಗಿ ಕೆಲಸ ಮಾಡುವ ಕೌಶಲ್ಯಗಳ ಪ್ರಾಥಮಿಕ ಅನುಭವ ಸಿಗುತ್ತದೆ. ಇದು ಚಿಕ್ಕ ವಯಸ್ಸಿನಿಂದಲೇ ಅವರಿಗೆ ಕೆಲಸಗಳನ್ನು ಆದ್ಯತೆ ಆಧಾರದ ಮೇಲೆ ಮಾಡಬೇಕೆಂಬುದನ್ನು ಕಲಿಸುತ್ತದೆ.

ವೈಯಕ್ತೀಕರಿಸಿದ ಕಲಿಕೆ

ಶ್ರವ್ಯ(ಆಡಿಯೋ), ದೃಶ್ಯ ಅಥವಾ ಪಠ್ಯದಂತಹ ಕಲಿಕೆಯ ಅನೇಕ ವಿಧಾನಗಳೊಂದಿಗೆ, ನಿಮ್ಮ ಮಗು ಅವರಿಗೆ ಆರಾಮದಾಯಕವೆನ್ನಿಸುವಂತಹ ರೀತಿಯಲ್ಲಿ ಕಲಿಯಬಹುದು. ಆನ್ ಲೈನ್ ನಲ್ಲಿ ಶಿಕ್ಷಕರನ್ನು ಸಂಪರ್ಕಿಸುವ ಮೂಲಕ ಅಥವಾ ಸ್ವಂತವಾಗಿ ಪರಿಹಾರಗಳನ್ನು ಹುಡುಕುವ ಮೂಲಕ ಅವರಿಗೆ ತಮ್ಮ ಅನುಮಾನಗಳನ್ನು ಪರಿಹರಿಸಿಕೊಳ್ಳಲು ಸಹಾ ಸಾಧ್ಯವಾಗುತ್ತದೆ.

ತಂತ್ರಜ್ಞಾನವನ್ನು ಮನರಂಜನೆಗಿಂತ ಕಲಿಕೆಗೆ ಬಳಸಿ

ನಿಮ್ಮ ಮಗು ಯಾವಾಗಲೂ ಸಾಮಾಜಿಕ ಮಾಧ್ಯಮದ ಪ್ಲಾಟ್ ಫಾರ್ಮ್ ಗಳಲ್ಲಿರುತ್ತದೆ ಎಂದು ನೀವು ಚಿಂತೆ ಮಾಡುತ್ತಿದ್ದರೆ, ಇ-ಕಲಿಕೆ ನಿಮ್ಮ ಚಿಂತೆಯನ್ನು ದೂರ ಮಾಡುತ್ತದೆ. ಆನ್ ಲೈನ್ ನಲ್ಲಿ ಹಲವಾರು ಕಲಿಕೆಯ ಅವಕಾಶಗಳು ಲಭ್ಯವಿರುವುದರಿಂದ, ಅವರು ತಂತ್ರಜ್ಞಾನವನ್ನು ಮನರಂಜನೆಗಷ್ಟೇ ಅಲ್ಲದೇ ಬೇರೆ ಉದ್ದೇಶಗಳಿಗೂ ಬಳಸುತ್ತಾರೆ.

ಈ ರೀತಿಯ ಕಲಿಕೆಗೆ ಹೊಂದಿಕೊಳ್ಳಲು ನಿಮ್ಮ ಮಕ್ಕಳನ್ನು ಪ್ರೋತ್ಸಾಹಿಸಿ, ಏಕೆಂದರೆ ಇದು ಅವರ ಮುಂದಿನ ಜೀವನದುದ್ದಕ್ಕೂ ಯಶಸ್ವಿ ಗುಣಲಕ್ಷಣಗಳನ್ನು ಮತ್ತು ಮಹತ್ವಾಕಾಂಕ್ಷೆಯ ಮನೋಭಾವವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ.