ನೀವು ನಿಮ್ಮ ವಿದ್ಯಾರ್ಥಿಗಳಿಗೆ ಕಲಿಯುವಿಕೆಯು ಹೆಚ್ಚು ಮೋಜುಭರಿತ ಮತ್ತು ಆಸಕ್ತಿದಾಯಕವಾಗಿ ಮಾಡಲು ಬಯಸುವಿರಾ? ನೀವು ನಿಮ್ಮ ವಿದ್ಯಾರ್ಥಿಗಳನ್ನು ಉತ್ತಮವಾಗಿ ತೊಡಗಿಸಿಕೊಳ್ಳಲು ಬಯಸುವಿರಾ? ಆನ್ಲೈನ್ ಕಲಿಸುವಿಕೆಯ ಸಲಕರಣೆಗಳು ಇದ ಮಾಡಲು ಪ್ರಮುಖ ಪಾತ್ರ ವಹಿಸುತ್ತವೆ. ವಿಡಿಯೋಗಳು, ಸ್ಲೈಡ್ಶೋಗಳು, ಆಟಗಳು ಮತ್ತು ಆಸಕ್ತಿದಾಯಕ ಗುಂಪು ಚಟುವಟಿಕೆಗಳು ನಿಮ್ಮ ಬತ್ತಳಿಕೆಯಲ್ಲಿರುವ ಪ್ರಮುಖ ಅಸ್ತ್ರಗಳಾಗಿವೆ, ಮತ್ತು ಮಕ್ಕಳಂತೆ ತಂತ್ರಜ್ಞಾನದೊಂದಿಗೆ ಸಂಪರ್ಕದಲ್ಲಿರುವಾಗ ತರಗತಿಯ ಕೋಣೆಯಲ್ಲಿ ಅದ್ಭುತವಾದ ಸಂಗತಿಗಳು ಸಂಭವಿಸುತ್ತವೆ.
ತರಗತಿಯ ಕೋಣೆಯಲ್ಲಿ ಕಂಪ್ಯೂಟರ್ ವ್ಯವಸ್ಥೆ ಮಾಡುವುದು 21ನೇ ಶತಮಾನದಲ್ಲಿ ಮಕ್ಕಳು ಪ್ರಮುಖ ತಾಂತ್ರಿಕ ಕೌಶಲ್ಯಗಳನ್ನು ಹೊರತರುತ್ತದೆ ಅಲ್ಲದೇ ಇದು ವಿದ್ಯಾರ್ಥಿಯ ತಲ್ಲೀನತೆಯನ್ನು ಮತ್ತು ಕಲಿಕೆಯ ಮಟ್ಟದಲ್ಲಿ ಸುಧಾರಣೆಯೂ ಕೂಡ ಆಗುತ್ತದೆ. [1]
ಈ ಆರು ಸಲಕರಣೆಗಳು ನಿಮ್ಮ ವಿದ್ಯಾರ್ಥಿಗಳನ್ನು ತಲ್ಲೀನರಾಗಿರುವಂತೆ ಮಾಡುತ್ತದೆ ಮತ್ತು ಅವರ ಗ್ರಹಿಕೆಯ ಪರಿಕಲ್ಪನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಮಕ್ಕಳು ಗುಂಪಿನಲ್ಲಿ ಅಭ್ಯಾಸ ಮಾಡುವುದಕ್ಕೆ ಇಷ್ಟಪಡುತ್ತಾರೆ. ಅದೇ ಸಮಯದಲ್ಲಿ ಮಕ್ಕಳು ಡಿಜಿಟಲ್ ವಿಶ್ವಕ್ಕೆ ಪ್ರವೇಶಿಸಲೂ ಕೂಡ ಅತಿಯಾದ ಆಸಕ್ತಿಯನ್ನು ಹೊಂದಿರುತ್ತಾರೆ. ಈ ಎರಡೂ ವಿಚಾರಗಳನ್ನು ಸೇರಿಸುವ ಮೂಲಕ ಎಡ್ಮೊಡೊ ಆನ್ಲೈನ್ನಲ್ಲಿ ಮನೆಕೆಲಸವನ್ನು ನೀಡಲು ಮತ್ತು ಶ್ರೇಣೀಕರಣ ಮಾಡಲು ಶಿಕ್ಷಕರಿಗೆ ನಿಯಂತ್ರಿತ ಸಾಮಾಜಿಕ ಮಾಧ್ಯಮದ ಪ್ಲಾಟ್ಫಾರ್ಮ್ ರಚಿಸುತ್ತದೆ. ಇದರಿಂದಾಗಿ ಮಕ್ಕಳು ತಮ್ಮ ಮನೆಕೆಲಸ ಸರಿಯಾದ ಸಮಯದಲ್ಲಿ ಪೂರ್ಣಗೊಳಿಸುವ ಬಗ್ಗೆ ಅತ್ಯಂತ ಸಂತೋಷ ಪಡುತ್ತಾರೆ. ಅವರು ನಿಮ್ಮ ಮುಂದಿನ ತರಗತಿಯಲ್ಲಿ ಏನಾಗಬಹುದು ಎಂಬುದನ್ನು ಕೂಡ ಎದುರು ನೋಡುತ್ತಿರುತ್ತಾರೆ!
ನೀವು ಮೊದಲು ನಿಮ್ಮ ಶಾಲೆಯ ಪರವಾಗಿ ಸೈನ್ ಅಪ್ ಮಾಡುವ ಮತ್ತು ಅಭ್ಯಾಸದ ಗುಂಪನ್ನು ರಚಿಸುವ ಅಗತ್ಯವಿದೆ. ಅದನ್ನು ಮಾಡಿದ ನಂತರ, ನೀವು ನಿಮ್ಮ ಗುಂಪಿನ ಕೋಡ್ ಅನ್ನು ನಿಮ್ಮ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಿ ಮತ್ತು ಪ್ರಾರಂಭಿಸಿರಿ. ನೀವು ಸೈನ್ ಅಪ್ ಮತ್ತು ಅಭ್ಯಾಸದ ಗುಂಪನ್ನು ರಚಿಸುವಾಗ ಇರುವ ಪ್ಲಾಟ್ಫಾರ್ಮ್ ಯಾವುದೆಂಬ ಸ್ಕ್ರೀನ್ಶಾಟ್ ಇಲ್ಲಿದೆ.
ತರಗತಿಯಲ್ಲಿ ಪ್ರಶ್ನಾವಳಿಗಳನ್ನು ಮತ್ತು ರಸಪರ್ಶ್ನೆಗಳನ್ನು ವಿನ್ಯಾಸಗೊಳಿಸಲು ಸಹಾಯ ಬೇಕೆ? ಕಹೂಟ್! ಇದೊಂದು ಬಳಕೆದಾರ ಸ್ನೇಹಿ ಸಲಕರಣೆಯಾಗಿದ್ದು ನಿಮ್ಮ ಸೇವೆಗೆ ಲಭ್ಯವಿದೆ. ಒಬ್ಬ ಶಿಕ್ಷಕ ವಿವಿಧ ಸಾಧನಗಳನ್ನು ಉಪಯೋಗಿಸಿಕೊಂಡು ಆತನ ಅಥವಾ ಆಕೆಯ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಸಮೀಕ್ಷೆ ಅಥವಾ ಪ್ರಶ್ನಾವಳಿಯನ್ನು ವಿನ್ಯಾಸಗೊಳಿಸಬಹುದು. ವಿದ್ಯಾರ್ಥಿಗಳು ವೈವಿಧ್ಯಮಯ ಸಾಧನಗಳನ್ನು ಉಪಯೋಗಿಸಿಕೊಂಡು ಪ್ರಶ್ನೆಗಳಿಗೆ ಉತ್ತರಿಸಬಹುದು. ರಸಪ್ರಶ್ನೆಗಳನ್ನು ಮತ್ತು ಪ್ರಶ್ನಾವಳಿಗಳನ್ನು “ಕಹೂಟ್ಸ್” ಎಂದು ಕರೆಯಲಾಗಿದ್ದು, ತರಗತಿಯಲ್ಲಿ ಆಟದ ಮಾದರಿಯ ವಾತಾವರಣ ಮೂಡಿಸುವಂತೆ ವಿನ್ಯಾಸಗೊಳಿಸಲಾಗಿದೆ. ಆಟಗಾರರು ಏಕತೆಯ ತರಗತಿಯಲ್ಲಿ ಹಂಚಿಕೊಳ್ಳಲಾದ ಪರದೆಯಲ್ಲಿ ಆಟಗಳನ್ನು ಪ್ರದರ್ಶಿಸುವಾಗ ತಮ್ಮ ಸ್ವಂತ ಕಂಪ್ಯೂಟರ್ಗಳಿಂದ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ. – ಇದು ’ಕ್ಯಾಂಪ್ ಫೈರ್ ಆಂದೋಲನ”ವನ್ನು ರಚಿಸುತ್ತದೆ. ಹೀಗೆ ನಿಮ್ಮ ರಸಪ್ರಶ್ನೆಯನ್ನು ರಚಿಸುವುದು ಸುಲಭ ಸಾಧ್ಯವಾಗುತ್ತದೆ.
ಈ ಸಮಯದಲ್ಲಿ ಪ್ರವಚನಗಳಲ್ಲಿ ಕವರ್ ಮಾಡುವ ಮತ್ತು ಕವರ್ ಮಾಡಬೇಕಾದ ವಿಷಯಗಳನ್ನು ಅನುಸರಣೆ ಮಾಡುವುದು ಬಹಳ ಕಷ್ಟ. ಈ ಸಮಯದಲ್ಲಿ ಕಲಿಕೆ ನಿರ್ವಹಣೆಯ ವ್ಯವಸ್ಥೆ (ಎಲ್ಎಮ್ಎಸ್) ಮುಂದೆ ಬರುತ್ತದೆ.
ಸ್ಕೂಲಜಿಯು ಒಂದು ಕಲಿಕೆಯ ನಿರ್ವಹಣೆಯ ವ್ಯವಸ್ಥೆಯಾಗಿದ್ದು ತರಗತಿಯ ರೋಸ್ಟರ್ಗಳು, ವಿವರ ಮತ್ತು ಕ್ಯಾಲೆಂಡರ್ಗಳನ್ನು ರಚಿಸುತ್ತದೆ. ಇದು ವಿದ್ಯಾರ್ಥಿಗಳ ನಡುವಿನ ಮಾತುಕತೆ ಮತ್ತು ವಿದ್ಯಾರ್ಥಿಗಳ ಅಸೆಸ್ಮೆಂಟ್ ಫಲಿತಾಂಶಗಳನ್ನು ಇತರೆ ವಿಷಯಗಳ ಬಗ್ಗೆ ಗಮನವನ್ನು ಇಟ್ಟಿರುತ್ತದೆ. ನೀವು ನಿಮ್ಮ ವಿದ್ಯಾರ್ಥಿಗಳಿಗೆ ಕಲಿಸುವಿಕೆಯನ್ನು ಮೋಜುಭರಿತಗೊಳಿಸಲು ಅಸೈನ್ಮೆಂಟ್ಗಳು, ರಸಪ್ರಶ್ನೆಗಳು, ಮೀಡಿಯ ಆಲ್ಬಮ್ಗಳು ಮತ್ತು ಇತರೆ ಸಂಪನ್ಮೂಲಗಳನ್ನು ಸೇರಿಸಬಹುದು. ಇದು ಮಾತುಕತೆ ಮೂಲಕ ಕಲಿಸಲು ಇದೊಂದು ಅತ್ಯುತ್ತಮವಾದ ಸಲಕರಣೆಯಾಗಿದೆ ಮತ್ತು ಇದರ ಮೂಲ ಪ್ಯಾಕೇಜ್ ಉಚಿತವಾಗಿದೆ. ಈ ಸಲಕರಣೆಯು ಒದಗಿಸುವ ಅಪರಿಮಿತ ಸಾಧ್ಯತೆಗಳ ಮಹಾಪೂರ ಇಲ್ಲಿದೆ ನೋಡಿ.
ಬೋರ್ಡ್ ಮೇಲೆ ಗ್ರಾಪ್ ರಚಿಸುವುದು ನಿಮ್ಮ ಸಾಕಷ್ಟು ಸಮಯವನ್ನು ವ್ಯಯ ಮಾಡುತ್ತದೆ. ಪ್ರತಿಯೊಂದು ವಿಷಯಕ್ಕೆ ಸೀಮಿತವಾದ ಶಾಲೆಯ ಗಂಟೆಗಳಲ್ಲಿ ಪರಿಮಿತಿಯನ್ನು ನೀಡಲಾಗಿರುತ್ತದೆ, ಒಂದು ಸಲಕರಣೆಯು ಗ್ರಾಫ್ಗಳನ್ನು ತಕ್ಷಣವೇ ಮಾಡಲು ಮತ್ತು ಯೋಜಿಸಲು ಬಹಳಷ್ಟು ಸಹಾಯವಾಗುತ್ತದೆ.
ಡೆಸ್ಮೋಸ್ ಅತ್ಯಂತ ವೇಗವಾಗಿ ಕೆಲಸ ಮಾಡಬಲ್ಲ ಆನ್ಲೈನ್ ಕ್ಯಾಲ್ಕುಲೇಟರ್ ಆಗಿದೆ ಇದು ಯಾವುದೇ ಕಲ್ಪನಾತ್ಮಕ ಪ್ರಕ್ರಿಯೆಯನ್ನು ಗ್ರಾಫ್ ಮಾಡುತ್ತದೆ. ಇದು ಬಳಕೆದಾರರಿಗೆ ಸ್ಲೈಡರ್ಗಳನ್ನು ಸೇರಿಸಲು, ಹಿಂಚಲನೆ ಮಾಡಲು ಮತ್ತು ಇಡೀ ಡೇಟಾ ಟೇಬಲ್ಗಳನ್ನು ಇತರೆ ವಸ್ತುಗಳೊಂದಿಗೆ ಇಡಲು ಅವಕಾಶ ನೀಡುತ್ತದೆ. ಸಂಯೋಜಿತ ರೇಖಾಗಣಿತ ಮತ್ತು ಲೀನಿಯರ್ ಸೂತ್ರಗಳಂತಹ ಪ್ರಮುಖ ಪರಿಕಲ್ಪನೆಗಳನ್ನು ಕಲಿಸುವಾಗ ನಿಮ್ಮ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ತಲ್ಲೀನರನ್ನಾಗಿಸಲು ಕಷ್ಟವಾಗಬಹುದು. ಈ ಸಲಕರಣೆಯು ಪಠ್ಯಪುಸ್ತಕದಿಂದ ಆಚೆಗೆ ಹೋಗಲು ಸಹಾಯ ಮಾಡುತ್ತದೆ ಮತ್ತು ತರಗತಿಯಲ್ಲಿ ವಿದ್ಯಾರ್ಥಿಗಳನ್ನು ತಲ್ಲೀನರಾಗಿರುವಂತೆ ಮಾಡುವುದರೊಂದಿಗೆ ಅವರಿಗೆ ಇತ್ತೀಚಿನ ಮಾಹಿತಿಯನ್ನು ಒದಗಿಸುತ್ತದೆ.
ವಿದ್ಯಾರ್ಥಿಗಳು ಭಾಷೆಗಳನ್ನು ಕಲಿಯುವತ್ತ ಆಸಕ್ತಿಯನ್ನು ತೋರಿಸದೇ ಇರಲು ಅವರು ಅದರಿಂದ ಸುಲಭವಾಗಿ ಬೋರ್ ಆಗುವುದೇ ಆಗಿದೆ. ಹಾಗೆಯೇ ಕಲಿಸುವ ಶಿಕ್ಷಕರು ಭಾಷೆಗಳನ್ನು ಕಲಿಸುವ ವಿಧಾನಗಳಿಂದ ಈ ಕೆಲಸ ಇನ್ನಷ್ಟು ಸವಾಲಿನ ಕೆಲಸವಾಗುತ್ತದೆ.
ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಹೆಚ್ಚು ಮೋಜು ಮತ್ತು ಆಸಕ್ತಿದಾಯಕವನ್ನಾಗಿಸಲು ಡ್ಯೂಲಿಂಗೋ ಎಂಬ ಭಾಷೆಯನ್ನು ಕಲಿಸುವ ಅಪ್ಲಿಕೇಶನ್ ಮತ್ತು ವೆಬ್ಸೈಟ್ ಆಗಿದ್ದು ಇದು ಇಪ್ಪತ್ತು ಭಾಷೆಗಳಿಗೆ ಸುಲಭವಾಗಿ ಮಾರ್ಗದರ್ಶನವನ್ನು ನೀಡುವ ವೈಶಿಷ್ಟ್ಯವನ್ನು ಹೊಂದಿದೆ.
ಡ್ಯೂಲಿಂಗೊ ಅಧ್ಯಾಯದ ಮನನ ಮಾಡುವಿಕೆಯ ಪರಿಣಾಮಕಾರಿಯಾದ ಆಧಾರವಾಗಿದೆ. STEM (ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ) ನಲ್ಲಿ ಕೇಂದ್ರೀಕರಿಸಲು ಹಲವು ಸಲಕರಣೆಗಳು ಮತ್ತು ಅಪ್ಲಿಕೇಶನ್ಗಳು ಇರುವಾಗ, ಡ್ಯೂಲಿಂಗೋ ಭಾಷೆಗಳ ಕಲಿಕೆಯನ್ನು ಆಸಕ್ತಿದಾಯಕವನ್ನಾಗಿ ಮಾಡುತ್ತದೆ. ಇದು ಅಕ್ಷರಗಳ ಕಲಿಕೆ, ನಂತರ ಪದಗಳ ಕಲಿಕೆ ಮತ್ತು ಆನಂತರ ವಾಕ್ಯಗಳನ್ನು ಕಲಿಸುವ ವಿನ್ಯಾಸವನ್ನು ಅನುಸರಣೆ ಮಾಡುವುದಿಲ್ಲ. ಇದು ಅದ್ವಿತೀಯವಾದ ಕಲಿಕೆಯ ವಿಧಾನವನ್ನು ಅನುಸರಿಸುತ್ತದೆ ಇದು ಸರಳ ವಾಕ್ಯಗಳೊಂದಿಗೆ ಪ್ರಾರಂಭವಾಗಿ ಅದರ ನಂತರ ಹೆಚ್ಚಿನ ಸಂಕೀರ್ಣತೆಯುಳ್ಳ ವಾಕ್ಯಗಳ ಕಲಿಕೆಯನ್ನು ಅನುಸರಿಸಲಾಗುತ್ತದೆ.
ನೀವು ಶಾಲೆಗಳಿಗಾಗಿ ಡ್ಯೂಲಿಂಗೋ ಉಪಯೋಗಿಸಿ ವಿವಿಧ ಭಾಷೆಗಳಿಗೆ ಕರಿಕ್ಯುಲಾವನ್ನು ಕೂಡ ರಚಿಸಬಹುದು. ನೀವು ಇಲ್ಲಿ ಇದನ್ನು ಸುಲಭವಾಗಿ ಮಾಡಬಹುದಾಗಿದೆ.
Aarambh is a pan-India PC for Education initiative engineered to enhance learning using the power of technology; it is designed to help parents, teachers and children find firm footing in Digital India. This initiative seeks to connect parents, teachers and students and provide them the necessary training so that they can better utilise the PC for learning, both at school and at home.
ಹೈಬ್ರಿಡ್ Vs ಸಂಯೋಜಿತ ಕಲಿಕೆ
ಉದಯೋನ್ಮುಖ ಕಲಿಕಾರ್ಥಿಗಳ ಒಂದು ಗುಂಪನ್ನು ಅಭಿವೃದ್ಧಿಪಡಿಸಲು ಪರದೆಯ(ಸ್ಕ್ರೀನ್) ಮೂಲಕ ಶಿಕ್ಷಣದ ವ್ಯವಸ್ಥೆ
ವಿದ್ಯಾರ್ಥಿಗಳು ತಮ್ಮ ಕ್ಯಾಮೆರಾಗಳನ್ನು ಆನ್ ಮಾಡಿ ಇಡಲು ಪ್ರೋತ್ಸಾಹಿಸುವ ತಂತ್ರಗಳು
ತಂತ್ರಜ್ಞಾನವು ಏಳು ವಿಧಾನಗಳಿಂದ ಶಿಕ್ಷಕರ ಬೋಧನಾ ತಂತ್ರಗಳನ್ನು ಸುಧಾರಣೆಗೊಳಿಸಿದೆ
ದೂರ ಶಿಕ್ಷಣ – ಮಕ್ಕಳು ಕೇಂದ್ರೀಕರಿಸಲು ಮತ್ತು ತೊಡಗಿಸಿಕೊಳ್ಳಲು ಸಹಾಯ ಮಾಡುವ 8 ಟಿಪ್ಗಳು.