ಆಧುನಿಕ ಕಂಪ್ಯೂಟಿಂಗ್ ಸಾಧ್ಯಗೊಳಿಸಿರುವ 5 ವ್ಯಕ್ತಿಗಳು

ಇಂದು,, ನಾವು ಕಂಪ್ಯೂಟರ್ ಅನ್ನು ಪ್ರತಿಯೊಂದು ವಿಚಾರಕ್ಕೂ ಉಪಯೋಗಿಸುತ್ತಿದ್ದೇವೆ – ಹೋಂ ವರ್ಕ್ ಮಾಡುವುದರಿಂದ ಹಿಡಿದು ಸ್ನೇಹಿತರೊಂದಿಗೆ ಸಂಪರ್ಕದಲ್ಲಿ ಇರುವವರೆಗೂ ಬಳಸುತ್ತಿದ್ದೇವೆ. ಆದರೆ ನೀವು ಕೇವಲ 50 ವರ್ಷಗಳ ಹಿಂದೆ ಹೋದರೂ ಸಹ, ಇದು ಸಾಧ್ಯವಾಗುತ್ತಿರಲಿಲ್ಲ ಎಂದು ನೀವು ತಿಳಿದುಕೊಳ್ಳುತ್ತೀರಿ. ಪ್ರಪಂಚದ ಇತಿಹಾಸದ ಅತ್ಯಂತ ಶ್ರೇಷ್ಟ ಹೊಸ ಸಂಶೋಧನೆಯಾದ ನೀವು ಇಂದು ತಿಳಿದಿರುವ ಕಂಪ್ಯೂಟರ್‌ಗಳು ಹಲವಾರು ವರ್ಷಗಳ ಕಠಿಣ ಪರಿಶ್ರಮ, ಅಭ್ಯಾಸ, ಸಂಶೋಧನೆ ಮತ್ತು ಕನಸಿನಿಂದ ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಯಂತ್ರದ ರೂಪದಲ್ಲಿ ಜನ್ಮತಾಳಿವೆ.

 

1. ಅಲ್ ಖ್ವಾರಿಝ್ಮಿ, ಕಂಪ್ಯೂಟರ್ ವಿಜ್ಞಾನದ ಪಿತಾಮಹ

ಮಹಮದ್ ಇಬ್ನ ಮುಸಾ ಅಲ್-ಖ್ವಾರಿಝ್ಮಿ ಒಬ್ಬ ಪರ್ಶಿಯನ್ ಗಣಿತಜ್ಞ, ಖಗೋಳ ಶಾಸ್ತ್ರಜ್ಞ, ಜ್ಯೋತಿಷಿ, ಭೂಗೋಳ ಶಾಸ್ತ್ರಜ್ಞ ಮತ್ತು ಬಾಗ್ಧಾದ್‌ನಲ್ಲಿನ ವಿವೇಕದ ಗಣಿಯಲ್ಲಿದ್ದ ಪ್ರತಿಭಾನ್ವಿತರಾಗಿದ್ದರು. ಅಲ್-ಖ್ವಾರಿಝ್ಮಿಯು ಗಣಿತದಲ್ಲಿ ಆಲ್ಗೋರಿದಮ್ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದರು, ಇದು ಅವರನ್ನು ಕಂಪ್ಯೂಟರ್ ವಿಜ್ಞಾನದ ಪಿತಾಮಹರನ್ನಾಗಿ ಮಾಡಲು ಕಾರಣವಾಯಿತು.

ಇಂದು ನಾವು ಆಲ್ಗೋರಿದಮ್ ಎಂದು ಕರೆಯಲಾಗುವ ಸೂಚನೆಗಳ ಸರಣಿಯ ಸಹಾಯದೊಂದಿಗೆ ಸಾಫ್ಟ್ ವೇರ್ ಅನ್ನು ಪ್ರೋಗ್ರಾಮ್ ಮಾಡುತ್ತೇವೆ. ಆಲ್ಗೋರಿದಮ್ ಇಲ್ಲದೆಯೇ ಆಧುನಿಕ ಕಂಪ್ಯೂಟರ್ ಅಸ್ತಿತ್ವದಲ್ಲಿಯೇ ಇರುತ್ತಿರಲಿಲ್ಲ. ಕಂಪ್ಯೂಟರ್ ಅನ್ನು “ಶಟ್ ಡೌನ್” ಮಾಡುವಂತಹ ಸರಳ ವಿಚಾರಗಳನ್ನು ಶೋಧಿಸಲು ಗೂಗಲ್‌ನ ಸಾಮರ್ಥ್ಯವನ್ನು ಉಪಯೋಗಿಸಲಾಗುತ್ತಿದೆ, ಈ ಎಲ್ಲಾ ಪ್ರಕ್ರಿಯೆಗಳು ಸುಮಾರು 1200 ವರ್ಷಗಳ ಹಿಂದೆಯೇ ಬರೆದಿರುವ ಅಲ್-ಖ್ವಾರಿಝ್ಮಿಯವರ ತತ್ವಗಳನ್ನೇ ಆಧರಿಸಿವೆ! ಇದೊಂದು ಅದ್ಭುತವಲ್ಲವೇ?

 

2. ಚಾರ್ಲ್ಸ್ ಬ್ಯಾಬ್ಬೇಜ್, ಮೊದಲ ಕಂಪ್ಯೂಟರ್ ತಯಾರಕರು

ಚಾರ್ಲ್ಸ್ ಬ್ಯಾಬೇಜ್‌ರವರು ಲಂಡನ್ನಿನ ಶ್ರೀಮಂತ ಕುಟುಂಬವೊಂದರಲ್ಲಿ 1791ರಲ್ಲಿ ಜನಿಸಿದರು, ಇವರು ಜನರಲ್ ಪ್ರೋಗ್ರಾಮ್ಮೆಬಲ್ ಕಂಪ್ಯೂಟರ್‌ ಯೋಜನೆಯ ಹಿಂದಿನ ಮೆದುಳಾಗಿದ್ದರು. ಅವರು ತಮ್ಮ ಜೀವಿತಾವಧಿಯನ್ನು ಎರಡು ವಿಭಿನ್ನ ಕಂಪ್ಯೂಟರ್‌ಗಳಿಗೆ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಮುಡಿಪಾಗಿಟ್ಟರು. ಮೊದಲಾಗಿ ಡಿಫರೆನ್ಸ್ ಇಂಜಿನ್ ಎಂದು ಕರೆಯಲಾಗುವ ಕಂಪ್ಯೂಟರ್ ಅನ್ನು 1830ರ ದಶಕದ ಪೂರ್ವಾರ್ಧದಲ್ಲಿ ಪೂರ್ಣಗೊಳಿಸಿದರು. ಅವರ ಎರಡನೆಯ ಮತ್ತು ಅತ್ಯಂತ ಸಂಕೀರ್ಣವಾದ ವಿನ್ಯಾಸವಾಗಿರುವ ಅನಾಲೆಟಿಕಲ್ ಇಂಜಿನ್ ಅನ್ನು ಪೂರ್ಣಗೊಳಿಸಲು ಸಾಧ್ಯವಾಗಲೇ ಇಲ್ಲ. ಆದಾಗ್ಯೂ, ಎರಡೂ ಸಹ ಅತ್ಯಂತ ಹೆಚ್ಚು ಸಾಮರ್ಥ್ಯವುಳ್ಳ ಕ್ಯಾಲ್ಕುಲೇಟಿಂಗ್ ಸಲಕರಣೆಗಳಾಗಿವೆ ಮತ್ತು ಅವು ಅವರ ಕಾಲದ ಯೋಜನೆ ಮತ್ತು ಅಭ್ಯಾಸಗಳ ವಿಚಾರದಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿದ್ದವು.

ಅವರ ಯಂತ್ರಗಳು ಇತಿಹಾಸ ಪುಟದ ಅತ್ಯಂತ ಅಗತ್ಯದ ಮೊದಲನೆಯ ಕಂಪ್ಯೂಟರ್ ಆಗಿದೆ!

 

3. ಅಲನ್ ಟರ್ನಿಂಗ್, ಆಧುನಿಕ ಕಂಪ್ಯೂಟರ್‌ನ ಪಿತಾಮಹ

ಅಲನ್ ಟರ್ನಿಂಗ್ ಎರಡನೇ ಮಹಾಯುದ್ಧದ ನಾಯಕರಾಗಿದ್ದರು, ಇವರು ಮತ್ತು ಇವರ ತಂಡದವರು ಬ್ಲೆಚಲಿ ಪಾರ್ಕಿನಲ್ಲಿ ನಾಝಿ ಎನಿಗ್ಮಾ ಯಂತ್ರವನ್ನು ಉಪಯೋಗಿಸಿಕೊಂಡು ಎನ್‌ಕ್ರಿಪ್ಟ್ ಆದ ಸಂದೇಶಗಳನ್ನು ಡೀಕೋಡ್ ಮಾಡಲು ಬೋಂಬೆ ಎಂದು ಕರೆಯಲಾಗುವ ಕಂಪ್ಯೂಟಿಂಗ್ ಯಂತ್ರವನ್ನು ನಿರ್ಮಾಣ ಮಾಡಿದರು. ಅಲನ್ ಟರ್ನಿಂಗ್ ಇಲ್ಲದೇ ಹೋಗಿದ್ದರೆ ಯುದ್ಧವು ಇನ್ನೂ 8 ವರ್ಷ ಮುಂದುವರೆಯುತ್ತಿತ್ತು!

ಅವರ ಇತರೆ ಕೊಡುಗೆಗಳ (ಅವರ ಕೊಡುಗೆಗಳು ಅಪಾರ!) ಪೈಕಿ, ಅಲನ್ ಟರ್ನಿಂಗ್‌ರವರು ಕಂಪ್ಯೂಟಿಂಗ್ ಪ್ರೋಗ್ರಾಮಿಂಗ್‌ಗೆ ಮಾರ್ಗವನ್ನು ಕಂಡುಹಿಡಿದಿರುವುದು ಕೂಡ ಒಂದಾಗಿದೆ. ಪ್ರಾರಂಭದ ಕಂಪ್ಯೂಟರ್‌ಗಳು ಪ್ರೋಗ್ರಾಮ್‌ಗಳನ್ನು ತಮ್ಮ ಮೆಮೊರಿಯಲ್ಲಿ ಸಂಗ್ರಹಿಸಿಡುತ್ತಿರಲಿಲ್ಲ. ಈ ಕಂಪ್ಯೂಟರ್‌ಗಳಿಗೆ ಹೊಸ ಕೆಲಸವನ್ನು ಮಾಡಲು ಯಂತ್ರದ ವೈರಿಂಗ್ ಅನ್ನು ಮಾರ್ಪಾಡು ಮಾಡುವುದು, ಕೈಗಳಿಂದ ಕೇಬಲ್‌ಗಳನ್ನು ರೀ-ರೂಟ್ ಮಾಡುವುದು ಮತ್ತು ಸ್ವಿಚ್‌ಗಳನ್ನು ಸೆಟ್ಟಿಂಗ್ ಮಾಡಬೇಕಾಗಿತ್ತು. ಸುಮಾರು ದಶಕಗಳ ಹಿಂದೆ ಅಲನ್ ಟರ್ನಿಂಗ್ ಪ್ರೋಗ್ರಾಮ್‌ಗಳನ್ನು ಸಂಗ್ರಹಿಸಿಡಬಲ್ಲ ಮೊದಲ ಕಂಪ್ಯೂಟರ್ ಅನ್ನು ತಯಾರಿಸಿದರು, ಇದು ನಾವೆಲ್ಲರೂ ತಿಳಿದಿರುವಂತೆ ಕಂಪ್ಯೂಟರ್‌ಗೆ ನೀಡಲಾದ ಅತ್ಯಮೂಲ್ಯವಾದ ಕೊಡುಗೆಯಾಗಿದೆ.

 

4. ಡಗ್ಲಾಸ್ ಏಂಜೆಲ್‌ಬರ್ಟ್ – ಮೌಸ್ ಕಂಡುಹಿಡಿಯಲು ಜವಾಬ್ದಾರರಾದ ವ್ಯಕ್ತಿ

ಮೌಸ್ ಇಲ್ಲದೆಯೇ ಕಂಪ್ಯೂಟರ್ ಅನ್ನು ಆಪರೇಟ್ ಮಾಡುವುದು ಎಷ್ಟು ಕಷ್ಟ ಎಂಬುದನ್ನು ನೀವು ಊಹಿಸಬಲ್ಲಿರಾ? ಸರಿ, ಶ್ರೀಯುತ ಏಂಜೆಲ್‌ಬರ್ಟ್‌ರವರ ಪ್ರಯತ್ನಕ್ಕೆ ಧನ್ಯವಾದಗಳು, ನಾವು ಇಂತಹ ಸಾಧ್ಯತೆಯನ್ನು ಕಲ್ಪಿಸಿಕೊಳ್ಳುವುದೂ ದುಸ್ಸಾಧ್ಯವಾಗಿದೆ! ಕ್ರಿಯೆಗಳತ್ತ ಪಾಯಿಂಟ್ ಮಾಡುವ ಮೂಲಕ ಸುಲಭವಾಗಿ ಕಂಪ್ಯೂಟರ್‌ನೊಂದಿಗೆ ವರ್ತಿಸಲು ಮೌಸ್ ಅವಕಾಶ ಮಾಡಿಕೊಡುತ್ತದೆ. ಮೌಸ್ ಅನ್ನು ಕಂಡುಹಿಡಿಯುವ ಮೊದಲು ಎಲ್ಲಾ ಕಮಾಂಡ್‌ಗಳನ್ನು ಕೇವಲ ಕೀಬೋರ್ಡ್ ಮೂಲಕ ಮಾತ್ರ ನಮೂದಿಸಬಹುದಾಗಿತ್ತು, ಆದರೆ ನೀವು ಕೆಲಸ ಮಾಡಲು ನಿಮ್ಮ ಮೌಸ್‌ಗೆ ಮಾರ್ಗದರ್ಶನ ನೀಡಬೇಕು ಮತ್ತು ಕ್ಲಿಕ್ ಮಾಡಬೇಕಷ್ಟೆ!

 

5. ಟ್ಮ್ ಬರ್ನರ್ಸ್ ಲೀ – ಕೇವಲ ಎರಡು ದಶಕಗಳ ಹಿಂದೆ ವರ್ಲ್ಡ್ ವೈಡ್ ವೆಬ್ ರಚಿಸಿದರು!

ಹೌದು, 25 ವರ್ಷಗಳ ಹಿಂದೆ WWW ಎಂಬುದೇ ಇರಲಿಲ್ಲ. ಕಂಪ್ಯೂಟರ್‌ಗಳ ನಡುವೆ ಮಾಹಿತಿಯನ್ನು ವರ್ಗಾಯಿಸಲು 1960ರಲ್ಲಿ ಇಂಟರ್‌ನೆಟ್ ಅಭಿವೃದ್ಧಿಪಡಿಸಿದರು. ಆದಾಗ್ಯೂ, ಟಿಮ್ ಬರ್ನರ್ಸ್ ಲೀ ಇದನ್ನು ಜನರಿಗೆ ಅತ್ಯಂತ ಬಳಕೆದಾರ-ಸ್ನೇಹಿಯನ್ನಾಗಿ ಮಾಡಲು ನಿರ್ಧರಿಸಿದರು. ಅವರು ವರ್ಲ್ಡ್ ವೈಡ್ ವೆಬ್ ಕಂಡುಹಿಡಿಯುವ ಮೂಲಕ ಅದನ್ನು ಸಾಧಿಸಿದರು.

ಸಂದರ್ಶನವೊಂದರಲ್ಲಿ ಅವರು ಬ್ರಿಟೀಶ್ ಕಂಪ್ಯೂಟರ್ ವಿಜ್ಞಾನಿಗಳೂ ಕೂಡ ವೆಬ್‌ನಲ್ಲಿ ಒಳಗೊಂಡಿರುವ ಎಲ್ಲಾ ತಂತ್ರಜ್ಞಾನವ ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ ಎಂದು ನಮೂದಿಸಿದ್ದಾರೆ, ಮತ್ತು ಅವರ ಕೊಡುಗೆಯನ್ನು ಒಟ್ಟಗೂಡಿಸಲಾಗಿದೆ! ಅದೊಂದು ಮಾದರಿಯೇ ಸರಿ.

 

ಹೀಗೆ, ಬಹಳಷ್ಟು ವಿಜ್ಞಾನಿಗಳು ಮತ್ತು ಕಂಪ್ಯೂಟರ್ ಇಂಜಿನಿಯರ್‌ಗಳು ಕಂಪ್ಯೂಟರ್‌ಗೆ ಜವಾಬ್ದಾರರಾಗಿರುವುದು ನಿಮಗೆಲ್ಲಾ ತಿಳಿದೇ ಇದೆ, ಅವರಲ್ಲಿ ಇವರು ಪ್ರಮುಖ ಐವರಾಗಿದ್ದಾರೆ, ಅವರ ದೃಷ್ಟಿಕೋನ ಮತ್ತು ಕೆಲಸವು ಆಧುನಿಕ ಕಂಪ್ಯೂಟಿಂಗ್ ಅನ್ನು ಸಾಧ್ಯವಾಗುವಂತೆ ಮಾಡಿದೆ.