ಪ್ರತಿಯೊಬ್ಬ ಪಾಲಕರು ಗಮನಿಸಬೇಕಾದ 5 ಟೆಡ್ ಟಾಕ್ಸ್

 
ಇಂದಿನ ಡಿಜಿಟಲ್ ಪಾಲಕರು ನಮ್ಮ ಯುಗದ ಉತ್ಪನ್ನವಾಗಿದ್ದಾರೆ. ಹೊಸ-ಯುಗದ ಪಾಲಕರು ಎಲ್ಲ ಟೆಕ್ ವಿಷಯಗಳಲ್ಲಿ ಪರಿಣತಿಯನ್ನು ಹೊಂದಿದ್ದು, ಅತ್ಯಂತ ಸೂಕ್ತವಾಗುವ ಪೇರೆಂಟಿಂಗ್ ಕೌಶಲ್ಯವನ್ನು ಹೊಂದಲು ಸಮಯವನ್ನು ಮೀಸಲಿರಿಸುತ್ತಾರೆ.
 
1) ಸ್ವಲ್ಪ ಮಟ್ಟಿಗಿನ ಸ್ವಯಂ-ನಿಯಂತ್ರಣ ನಮ್ಮನ್ನು ಬಹುದೂರಕ್ಕೆ ಕರೆದೊಯ್ಯುತ್ತದೆ (A little self-control goes a long way) - ಜೋಕಿಮ್ ಡಿ ಪೊಸಾಡಾ [1]
 
ಇದು, ಮಕ್ಕಳು ಬೆಳೆದು ದೊಡ್ಡವರಾದಂತೆ ಸ್ವಯಂ-ಶಿಸ್ತು ಮತ್ತು ಯಶಸ್ಸುಗಳ ನಡುವಿನ ಸಂಪರ್ಕದ ಮೇಲಿನ, ಪ್ರೇರೇಪಣಾ ಗುರು ಜೋಕಿಮ್ ಡಿ ಪೊಸಾಡಾರವರು ಹೊಂದಿರುವ ಆಕರ್ಷಕ ನಿಲುವಾಗಿದೆ. ಒಂದು ಸಿಹಿತಿನಿಸನ್ನು ತಿನ್ನದಿರಲು ಪ್ರಯತ್ನಿಸುತ್ತಿರುವ ಮಕ್ಕಳ ನಕ್ಕುನಲಿಸುವ ವಿಡಿಯೋವನ್ನೂ ಸಹ ಈ ಟಾಕ್ ಹೊಂದಿದ್ದು, ವಾಸ್ತವವಾಗಿ ಇದು ಭವಿಷ್ಯದಲ್ಲಿನ ಯಶಸ್ಸನ್ನು ಮುಂದಾಗಿ ಹೇಳುವ ಮೇಲಿನ ಒಂದು ಹೆಗ್ಗುರುತಿನ ಅನುಭವವಾಗಿದೆ.
 
2) ಸಾಹಸೀ-ಪ್ರವೃತ್ತಿಯವರಾಗಿರುವುದು ಉತ್ತಮ (Being adventurous is good) - ಕ್ಯಾರೊಲಿನ್ ಪೌಲ್ [2]
 
ಗಡಿಗಳನ್ನು ವಿಸ್ತರಿಸಿಕೊಳ್ಳುವ ಮೂಲಕ ತಮ್ಮದೇ ಆದ ಸಾಮರ್ಥ್ಯವನ್ನು ಹೊಂದಬಯಸುವ ಯುವತಿಯರಿಗೆ ನೆರವಾಗುವ ಬಗ್ಗೆ ಫೈರ್ಫೈಟರ್ ಆಗಿರುವ ಕ್ಯಾರೊಲಿನ್ ಪೌಲ್ರವರಿಂದ ಒಂದು ಪ್ರೇರೇಪಣಾದಾಯಕ ಭಾಷಣ. ಇತರರು ಯೋಚಿಸಿಯೂ ಇಲ್ಲದಂತಹ ಕೆಲಸಗಳನ್ನು ಮಾಡಲು ಒಬ್ಬ ಫೈರ್ಫೈಟರ್ ಯುವತಿ ತನ್ನ ಅನುಕೂಲಕರ ವಲಯವನ್ನು ಬಿಟ್ಟು ಹೊರಬರುವುದರ ಮೇಲಿನ ಕತೆಗಳನ್ನು ಈ ವಿಡಿಯೋ ಒಳಗೊಂಡಿದೆ.
 
3) ಡಿಜಿಟಲ್ ಯುಗದ ಸದುಪಯೋಗವನ್ನು ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಪಡೆದುಕೊಳ್ಳುವುದು ಹೇಗೆ? (It's all about making the most of the digital age) - ಜ್ಯಾಕ್ ಕೊಂಟೆ [3]
 
ಡಿಜಿಟಲ್ ಯುಗದ ಸೃಜನಾತ್ಮಕ ಕ್ಷೇತ್ರದಲ್ಲಿ ಭವಿತವ್ಯವನ್ನು ಹೊಂದಿರುವ ತಮ್ಮ ಮಕ್ಕಳ ಬಗ್ಗೆ ಸಂಶಯಾತ್ಮಕ ಭಾವನೆಯನ್ನು ಹೊಂದಿರುವ ಪಾಲಕರಿಗಾಗಿ ಯೂಟ್ಯೂಬರ್ ಜ್ಯಾಕ್ ಕೊಂಟೆರವರಿಂದ ಒಂದು ಸೂಕ್ತವಾದ ಮತ್ತು ಆಶಾಪೂರ್ಣ ಭಾಷಣ. ನಿಗದಿತವಾಗಿ ಹಣವನ್ನು ಮಾಡುವುದು ಹೇಗೆ ಎಂಬುದರಿಂದ ಹಿಡಿದು ಒಬ್ಬ ವ್ಯಕ್ತಿಯ ನಿಜವಾದ ಮೌಲ್ಯವೇನು ಎಂಬುದನ್ನು ತಿಳಿದುಕೊಳ್ಳುವವರೆಗೆ, ಈ ವಿಡಿಯೋ ಮನಸ್ಸನ್ನು ಮೇಲಕ್ಕೆತ್ತುವ ಒಂದು ವಿಡಿಯೋ ಆಗಿದೆ.
 
4) ತಾವು ಇಷ್ಟಪಡುವ ಕೆಲಸವನ್ನು ಕಂಡುಕೊಳ್ಳಲು ಅವರಿಗೆ ನೆರವಾಗಿ (Help them find work they love) - ಸ್ಕಾಟ್ ಡಿನ್ಸ್ಮೋರ್ [4]
 
ಭವಿತವ್ಯದ ಹಾದಿಯನ್ನು ಕಂಡುಕೊಳ್ಳಲು ತಮ್ಮ ನಗುವಿಗೆ ನೆರವಾಗಲು ಪ್ರಯತ್ನಿಸುತ್ತಿರುವ ಪ್ರತಿಯೊಬ್ಬ ಪಾಲಕರು ನೋಡಲೇಬೇಕಾದ, ನವ್ಯೋದ್ಯಮಿ ಸ್ಕಾಟ್ ಡಿನ್ಸ್ಮೋರ್ರವರ ವಿಡಿಯೊ. ತಮಗೆ ಸೂಕ್ತವಾಗುವಂಥದ್ದನ್ನು ಕಂಡುಕೊಳ್ಳುವ ಮತ್ತು ಅದನ್ನು ಮಾಡಲು ಆರಂಭಿಸುವ ಬಗ್ಗೆ ತಾವು ಕಲಿತಿರುವುದೇನು ಎಂಬುದನ್ನು ಇದರಲ್ಲಿ ಅವರು ಹಂಚಿಕೊಳ್ಳುತ್ತಾರೆ.
 
5) ಪೇರೆಂಟಿಂಗ್ - ವೈಜ್ಞಾನಿಕ ತಳಹದಿಯ ಮೇಲೆ (Parenting, backed by science) - ಹೆಲೆನ್ ಪಿಯರ್ಸನ್ [5]
 
ಇತರರು ಸಂತೋಷ ಮತ್ತು ಆರೋಗ್ಯದಿಂದ ಇರಲು ಹೆಣಗಾಡುವಾಗ ಕೆಲವರು ಏಕೆ ಲೀಲಾಜಾಲವಾಗಿ ಅವುಗಳನ್ನು ಹೊಂದುತ್ತಾರೆ ಎಂಬುದನ್ನು ಕಂಡುಕೊಳ್ಳಲು ಬ್ರಿಟಿಷ್ ವಿಜ್ಞಾನಿಗಳು ಸಾವಿರಾರು ಮಕ್ಕಳನ್ನು ಅವರ ಜೀವನದ ಮೂಲಕ ಕಳೆದ 70 ವರ್ಷಗಳಿಂದ ಅಧ್ಯಯನ ಮಾಡುತ್ತಿದ್ದಾರೆ. ಹಲವಾರು ವರ್ಷಗಳ ವೈಜ್ಞಾನಿಕ ಅಧ್ಯಯನದ ತಳಹದಿಯನ್ನು ಹೊಂದಿರುವ ಅವಲೋಕನಗಳೊಂದಿಗೆ, ವಿಜ್ಞಾನಿಯಾಗಿರುವ ಹೆಲೆನ್ ಪೌಲ್ರವರ ಈ ಭಾಷಣ ತುಂಬಾ ಹೃದಯಸ್ಪರ್ಶಿಯಾಗಿದೆ.
 
ಪಿಸಿ ಟೈಮ್ ನಿಮ್ಮ ಕುಟುಂಬದ ಟೈಮ್ ಆಗಬಲ್ಲದು ಎಂದು ನೀವು ಅಂದುಕೊಳ್ಳುತ್ತೀರಾ? ನಿಮಗೆ ಆಶ್ಚರ್ಯವಾಗಬಹುದು, ಆದರೆ ಪ್ರತಿಯೊಬ್ಬರಲ್ಲಿಯೂ ಆಸಕ್ತಿಯನ್ನು ಮೂಡಿಸುವ ಚಟುವಟಿಕೆಗಳನ್ನು ಕೂಗೆತ್ತಿಕೊಳ್ಳುವ ಮೂಲಕ ಇದು ಸಾಧ್ಯವಿದೆ. :)