ತರಗತಿಯಲ್ಲಿ, ಕಲಿಯಲು ಪ್ರಯಾಸಪಡುತ್ತಿರುವ ವಿದ್ಯಾರ್ಥಿಗಳನ್ನು ಪ್ರೇರೇಪಿತಗೊಳಿಸುವ 5 ಮಾರ್ಗಗಳು

 

 

ಅತ್ಯುತ್ತಮವಾದ ಟೀಚಿಂಗ್ ಪ್ಲ್ಯಾನ್ ನಮ್ಮ ಬಳಿ ಇದೆ, ಪ್ರಗತಿಯ ಜಾಡು ಇರಿಸಲು ಅತ್ಯುತ್ತಮ ಅಸೆಸ್ ಮೆಂಟ್ ಗಳನ್ನು ನಾವು ಅಭಿವೃದ್ಧಿಪಡಿಸಿದ್ದೇವೆ, ಸೆಮೆಸ್ಟರ್, ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವಂಥ ಯೋಜನೆಗಳು ಮತ್ತು ನಕಾಶೆಗಳನ್ನು ನಾವು ಹಾಕಿಕೊಂಡಿದ್ದೇವೆ, ಆದರೂ, ಏನೋ ಒಂದರ ಕೊರತೆ ಉಂಟಾಗಿದೆಯೇ?? ಓರ್ವ ಸಾಧಾರಣ ವಿದ್ಯಾರ್ಥಿಯು ಮಹಾನ್ ಯಶಸ್ಸನ್ನು ಸಾಧಿಸುವುದನ್ನು ನೋಡಲು ಆನಂದವೆನಿಸುವುದಿಲ್ಲವೇ?

ವಿದ್ಯಾರ್ಥಿಗಳನ್ನು ಪ್ರೇರೇಪಿತಗೊಳಿಸಲು ಪರ್ಸನಲ್ ಕಂಪ್ಯೂಟರ್ ಒಂದನ್ನು ಉಪಯೋಗಿಸಿಕೊಂಡು ತರಗತಿಯಲ್ಲಿ ಬಳಸಬಹುದಾದ 5 ಕಾರ್ಯತಂತ್ರಗಳನ್ನು ಇಲ್ಲಿ ನೀಡಲಾಗಿದೆ:

1) ವಿದ್ಯಾರ್ಥಿಯ ಮನಸ್ಸನ್ನು ಅರ್ಥೈಸಿಕೊಳ್ಳಿ: ವಿದ್ಯಾರ್ಥಿಗಳು ಕಲಿಕೆಯ ಬಗ್ಗೆ ಗುಪ್ತ ನಂಬಿಕೆಯೊಂದನ್ನು ಹೊಂದಿರುತ್ತಾರೆ. ಕೆಲವು ಸಾಮರ್ಥ್ಯಗಳು ಹಾಗೂ ಪ್ರತಿಭೆಗಳಿಲ್ಲದೇ ಅವರು ಜನಿಸಿದ್ದಾರೆ ಎಂಬುದು ಅವರ ನಂಬಿಕೆಯಾಗಿರುತ್ತದೆ ಹಾಗೂ ಪ್ರೇರೇಪಿಸಲ್ಪಟ್ಟ ಭಾವನೆಯನ್ನು ಹೊಂದಿದಾಗ ಮಾತ್ರ ಇದರಿಂದ ಅವರು ಹೊರಬರುತ್ತಾರೆ. ಈ ನಂಬಿಕೆಯನ್ನು ಹೋಗಲಾಡಿಸುವ ಅತ್ಯಂತ ಪ್ರಮುಖ ಅಂಶವೆಂದರೆ ಅವರನ್ನು ಹೊಗಳುವುದಾಗಿರುತ್ತದೆ, ಉದಾಹರಣೆಗೆ: ಪ್ರತಿ ವಾರದ ನಿನ್ನ ಲಿಖಿತ ಅಸೈನ್ ಮೆಂಟ್ ಗಳಲ್ಲಿ ನೀನು ತುಂಬಾ ಉತ್ತಮವಾಗಿ ಮಾಡುತ್ತಿರುವೆ. ಓ ವಾವ್, ನೀನು ಓದುವುದನ್ನು ರೂಢಿಸಿಕೊಳ್ಳುತ್ತಿರುವೆ, ನೀನು ಬರೆದಿರುವ ಚಿತ್ರಗಳು ತುಂಬಾ ಚೆನ್ನಾಗಿ ಕಾಣುತ್ತಿವೆ. ಸಾಮರ್ಥ್ಯಗಳನ್ನು ಹೊಗಳುವಿಕೆಯು ದೀರ್ಘಾವಧಿ ಕಲಿಕೆಯನ್ನು ಪ್ರೋತ್ಸಾಹಿಸುತ್ತದೆ ಹಾಗೂ ಮುಂದಿನ ಬಾರಿ ಇನ್ನೂ ಹೆಚ್ಚು ಉತ್ತಮವಾಗಿ ಮಾಡಲು ಅವರನ್ನು ಪ್ರೇರೇಪಿಸುತ್ತದೆ.

2) ಸ್ನೇಹಿತನ ರೀತಿಯಲ್ಲಿನ ಮಾರ್ಗದರ್ಶನ ಕಾರ್ಯಕ್ರಮ- ನಿಮ್ಮ ವಿದ್ಯಾರ್ಥಿಗಳಿಗೆ ಯಾವಾಗಲೂ ಓರ್ವ ಶಿಕ್ಷಕರಾಗಿಯೇ ಇರಬೇಡಿ, ಬದಲಾಗಿ ಅವರ ಸ್ನೇಹಿತರಾಗಿ ಇರಲು ಪ್ರಯತ್ನಿಸಿ. ಆತ್ಮವಿಶ್ವಾಸವನ್ನು ಗಳಿಸಿಕೊಳ್ಳಲು ಹಾಗೂ ನಿಮ್ಮನ್ನು ನಂಬಲು ಇದು ಅವರಿಗೆ ನೆರವಾಗುತ್ತದೆ, ತತ್ಫಲವಾಗಿ ಹೆಚ್ಚು ಉತ್ತಮ ಕಾರ್ಯಪ್ರದರ್ಶನ ಕಂಡುಬರುತ್ತದೆ. ಒನ್ ಡ್ರೈವ್ ಹಾಗೂ ಇ-ಮೇಲ್ ಗಳ ಮೂಲಕ ಆನ್ಲೈನ್ ಆಗಿ ಇರುವುದು ಶಿಕ್ಷಣದ ಮತ್ತು ಸಂಪರ್ಕಿತರಾಗಿ ಇರುವ ಆಧುನಿಕ ವಿಧಾನವಾಗಿದೆ. ಈ ವೇದಿಕೆಗಳಲ್ಲಿ ನಿಮ್ಮ ಡೇಟಾವನ್ನು ನೀವು ಸ್ಟೋರ್ ಮಾಡಬಹುದು ಹಾಗೂ ಶೇರ್ ಮಾಡಿಕೊಳ್ಳಬಹುದು.

3) 2*4 ತಂತ್ರವನ್ನು ಪ್ರಯತ್ನಿಸಿ- ಇದು ಸರಳ ಹಾಗೂ ಪರಿಣಾಮಕಾರಿಯಾಗಿರುತ್ತದೆ. ತಮ್ಮ ಆಲೋಚನೆಗಳನ್ನು ವಿದ್ಯಾರ್ಥಿಗಳು 4 ದಿನಗಳವರೆಗೆ 2 ನಿಮಿಷಗಳ ಸಮಯ ವ್ಯಕ್ತಪಡಿಸುವುದನ್ನು ಈ ತಂತ್ರವು ಸಲಹೆ ಮಾಡುತ್ತದೆ. ತಮ್ಮ ಬೆಸ್ಟ್ ಫ್ರೆಂಡ್ ಯಾರು ಎಂಬುದರಿಂದ ಹಿಡಿದು ತಮಗೆ ಅತ್ಯಂತ ಹೆಚ್ಚು ಇಷ್ಟವಾಗುವ ವಿಷಯ ಯಾವುದು ಎಂಬುದರವರೆಗೆ ತಮಗೆ ಬಯಸಿದ ಯಾವುದೇ ವಿಷಯದ ಬಗ್ಗೆ ಅವರು ಮಾತನಾಡಬಹುದು. ನಿಮ್ಮ ವಿದ್ಯಾರ್ಥಿಗಳ ಬಗ್ಗೆ ಹೆಚ್ಚು ವಿಷಯಗಳು ನಿಮಗೆ ತಿಳಿಯತೊಡಗುತ್ತವೆ, ಬಾಂಧವ್ಯವು ನಿರ್ಮಾಣವಾಗುತ್ತದೆ ಹಾಗೂ ತಮ್ಮನ್ನು ಬಾಧಿಸುತ್ತಿರುವ ವಿಷಯದ ಬಗ್ಗೆಯೂ ಸಹ ಅವರು ಚರ್ಚಿಸುತ್ತಾರೆ.

4) ಸಮೂಹ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ- ವಿದ್ಯಾರ್ಥಿಗಳನ್ನು ಪ್ರೇರೇಪಿಸಲು, ಸಕ್ರಿಯ ಕಲಿಕೆ ಮತ್ತು ಸಂವಹನವನ್ನು ಪ್ರೋತ್ಸಾಹಿಸಲು ಸಮೂಹ ಕಾರ್ಯವು ಒಂದು ಪರಿಣಾಮಕಾರಿಯಾದ ವಿಧಾನವಾಗಬಲ್ಲದು. ಚಟುವಟಿಕೆಗಳನ್ನು ಒಬ್ಬರೇ ಮಾಡುವ ವಿದ್ಯಾರ್ಥಿಗಳಿಗಿಂತ ಸಮೂಹ ಕಾರ್ಯದಲ್ಲಿ ತೊಡಗಿಕೊಂಡಿರುವ ವಿದ್ಯಾರ್ಥಿಗಳು ಸಹಕಾರಿಯಾಗಿರುತ್ತಾರೆ ಹಾಗೂ ಹೆಚ್ಚು ಉತ್ತಮ ಪ್ರಗತಿ ಮತ್ತು ಆತ್ಮವಿಶ್ವಾಸವನ್ನು ಪ್ರದರ್ಶಿಸುತ್ತಾರೆ (ದಿ ನ್ಯಾಷನಲ್ ಅಕಾಡೆಮೀಸ್ ಪ್ರೆಸ್- https://www.nap.edu/read/5287/chapter/3).

 

5) ಪ್ರಗತಿಯನ್ನು ಟ್ರ್ಯಾಕ್ ಮಾಡಿ- ಮನುಷ್ಯರು ಸಕಾರಾತ್ಮಕತೆಗಿಂತ(ಗಳಿಗಿಂತ) ನಕಾರಾತ್ಮಕತೆಗಳನ್ನು ನೋಡತೊಡಗುತ್ತಾರೆ. ಮಕ್ಕಳ ಪ್ರಗತಿ ಪತ್ರಿಕೆಯನ್ನು ಅವರಿಗೆ ತೋರಿಸುವ ಮೂಲಕ ಅವರಲ್ಲಿ ಸಕಾರಾತ್ಮಕತೆಯನ್ನು ಹುಟ್ಟುಹಾಕುವುದನ್ನು ಖಚಿತಪಡಿಸಿಕೊಳ್ಳಿ. ತಾವು ಎಷ್ಟು ದೂರ ಬಂದಿದ್ದಾರೆ ಎಂಬುದರಲ್ಲಿ ಅವರಿಗೆ ವಿಶ್ವಾಸ ಮೂಡಿಸಲು ಪ್ರಗತಿ ಪತ್ರಿಕೆಯನ್ನು ರೇಖಾಚಿತ್ರಗಳು ಹಾಗೂ ಎಕ್ಸೆಲ್ ಮೂಲಕ ತೋರಿಸಬಹುದು.

ಸ್ಫೂರ್ತಿದಾಯಕ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ನೈಜ ಪ್ರೀತಿ ಹಾಗೂ ಸಹಾನುಭೂತಿಯ ಮಳೆಯನ್ನು ಸುರಿಸುತ್ತಾರೆ, ತಮ್ಮಲ್ಲಿನ ಅತ್ಯುತ್ತಮ ಕಾರ್ಯಪ್ರದರ್ಶನವನ್ನು ಹೊರಗೆಡಹಲು ವಿದ್ಯಾರ್ಥಿಗಳನ್ನು ಇದು ಪ್ರೇರೇಪಿಸುತ್ತದೆ ಹಾಗೂ ನಿಮ್ಮ ಕಲಿಸುವಿಕೆಯನ್ನು ಉತ್ತಮದಿಂದ ಮಹಾನ್ ಆಗಿಸುತ್ತದೆ!