ಮೇಕರ್‌ಸ್ಪೇಸ್ ಗ್ರಂಥಾಲಯದ ಭವಿಷ್ಯವಾಗಿದೆ

ತಂತ್ರಜ್ಞಾನವು ಕಲಿಕೆಯ ಸ್ತರವನ್ನೇ ಬದಲಾಯಿಸುತ್ತಿರುವಾಗ, ಇಲ್ಲಿ ಸಾಕಷ್ಟು ಕಲಿಕೆಯ ವಿಧಾನಗಳ ಶ್ರೇಣಿಗಳೇ ಇದ್ದು ಅವುಗಳು ದೇಶಾದ್ಯಂತ ಶಾಲೆಗಳಲ್ಲಿ ಜನಪ್ರಿಯತೆಯನ್ನು ಪಡೆದುಕೊಡುತ್ತವೆ. ತುಂಬಿದ ತರಗತಿ ಕೋಣೆಯಿಂದ ಆನ್‌ಲೈನ್ ಗುಂಪು ಕಲಿಕೆಯವರೆಗೆ ಶಿಕ್ಷಕರು ವಿಭಿನ್ನ ಸಲಕರಣೆಗಳನ್ನು ಮತ್ತು ತಂತ್ರಗಳನ್ನು ಅಳವಡಿಸಿಕೊಂಡು ಮಕ್ಕಳನ್ನು ಡಿಜಿಟಲ್ ಆಗಿ ಶಾಲೆಗಳಲ್ಲಿ ತಲ್ಲೀನರಾಗಿರುವಂತೆ ಮಾಡುತ್ತದೆ.

ಮೇಕರ್‌ಸ್ಪೇಸ್ ಅನ್ನು ಶಿಕ್ಷಣ ಸಂಸ್ಥೆಗಳು ತುಂಬು ಹೃದಯದಿಂದ ಅಳವಡಿಸಿಕೊಳ್ಳುವ ಸಲಕರಣೆಗಳಲ್ಲಿ ಒಂದಾಗಿದೆ, ಇದನ್ನು ಕೇವಲ ಭಾರತ ಮಾತ್ರವಲ್ಲ ವಿಶ್ವಾದ್ಯಾಂತ ಅಳವಡಿಸಿಕೊಳ್ಳಲಿವೆ.

ಹಾಗಾದರೆ ಮೇಕರ್‌ಸ್ಪೇಸ್ ಎಂದರೇನು? ಮೇಕರ್‌ಸ್ಪೇಸ್ ಶಿಕ್ಷಣದ ಚೌಕಟ್ಟಿನಲ್ಲಿಯೇ ಬರುವ ಒಂದು ವಿಧಾನವಾಗಿದ್ದು, ಇದು ಮಕ್ಕಳಿಗೆ ಉಚಿತ ಸಲಕರಣೆಗಳನ್ನು ಮತ್ತು ಸೌಲಭ್ಯಗಳನ್ನು ಒದಗಿಸುವುದಲ್ಲದೇ, ಅವರು ಜೀವನದಲ್ಲಿ ತಮ್ಮ ಯೋಜನೆಗಳನ್ನು ತರಲು ಅವಕಾಶ ನೀಡುತ್ತದೆ.

ಮೇಕರ್‌ಸ್ಪೇಸ್‌ಗಳನ್ನು ನ್ಯೂ ಮೀಡಿಯ ಕನ್ಸೋರ್ಟಿಯಮ್ (ಎನ್‌ಎಮ್‌ಸಿ) ಹಾರಿಜಾನ್ ರಿಪೋರ್ಟ್ ಫಾರ್ 2015 ರಿಂದ ಕೆ-12 ಶಿಕ್ಷಣಕ್ಕೆ ಶೈಕ್ಷಣಿಕ ತಂತ್ರಜ್ಞಾನದಲ್ಲಿನ ಆರು ಪ್ರಮುಖ ಬೆಳವಣಿಗೆಗಳಲ್ಲಿ ಒಂದು ಎಂಬುದನ್ನು ಇತ್ತೀಚಿನ ದಿನಗಳಲ್ಲಿ ಗುರುತಿಸಿದೆ. ಈ ವರದಿಯು ಸ್ಪಷ್ಟಪಡಿಸುವುದೇನೆಂದರೆ, “ಮೇಕರ್‌ಸ್ಪೇಸ್‌ಗಳು ಕಲಿಯುವವರನ್ನು ಸಕ್ರಿಯವಾಗಿ ತಲ್ಲೀನತೆಯಿಂದ ಇರಿಸುವುದು, ವಿನ್ಯಾಸ, ನಿರ್ಮಾಣ ಮತ್ತು ಸಂರಚನೆಯನ್ನು ಮಾಡುವ ಮೂಲಕ ಹೆಚ್ಚಿನ ಪ್ರಕಾರಗಳಲ್ಲಿ ಸಮಸ್ಯೆ-ಬಗೆಹರಿಸುವಲ್ಲಿ  ಉತ್ತೇಜಿಸುವಂತಹ ವಿಧಾನವಾಗಿದೆ” (ಪುಟ. 38). ಮಕ್ಕಳು ತಮ್ಮ ಥಿಯರಿಯ ಪರೀಕ್ಷೆ ಪಡೆಯುತ್ತಾರೆ ಮತ್ತು ಮೇಕರ್‌ಸ್ಪೇಸ್‌ನಲ್ಲಿ ಅವರಿಗೆ ಲಭ್ಯವಿರುವ ಎಲ್ಲಾ ಸಲಕರಣೆ ಮತ್ತು ಸೌಲಭ್ಯಗಳನ್ನು ಬಳಸಿ ಜೀವನಕ್ಕೆ ತಮ್ಮ ಯೋಜನೆಯನ್ನು ತರುತ್ತಾರೆ.


ಮೇಕರ್‌ಸ್ಪೇಸ್ ವಿದ್ಯಾರ್ಥಿಗಳಿಗೆ ಉತ್ತರಗಳನ್ನು ತಿಳಿದುಕೊಳ್ಳಲು ಮತ್ತು ತರಗತಿಯಲ್ಲಿ ಬಿಡಿಸಲಾಗದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುವಂತೆ ಮಾಡುತ್ತದೆ. ಅವರು ವಿಷಯದ ವಿಶಾಲ ಸ್ತರಗಳ ಮತ್ತು ಅನುಭವಗಳಿಂದ ಜ್ಞಾನ, ಕೌಶಲ್ಯಗಳು ಮತ್ತು ಸಲಕರಣೆಗಳನ್ನು ಉಪಯೋಗಿಸಿಕೊಳ್ಳುತ್ತಾರೆ, ಇದು ಅವರಿಗೆ ಸಂಕೀರ್ಣ ವಿಷಯಗಳನ್ನು ಸರಳವಾಗಿ ಗ್ರಹಿಸಿಕೊಳ್ಳಲು ಸಮರ್ಥರಾಗುವಂತೆ ಮಾಡುತ್ತದೆ.

ಇದಷ್ಟೇ ಅಲ್ಲ, ಮೇಕರ್‌ಪ್ಲೇಸ್ ಅವರಿಗೆ ಹೊಸ ಹಾದಿಯನ್ನು ಸಂಶೋಧಿಸಲು ಕೂಡ ಅವಕಾಶ ಮಾಡಿಕೊಡುತ್ತದೆ, ಇದು ಅವರ ಪಠ್ಯಕ್ರಮದ ಭಾಗವಾಗಿಲ್ಲದೇ ಹೋದರೂ ಇದು ತನ್ನದೇ ಆದ ಶ್ರೇಷ್ಟ ಮಹತ್ವವನ್ನು ಹೊಂದಿದೆ. [2]

ಈ ಹಿಂದೆ ಆರ್ ಎನ್ ಪೋದರ್ ಶಾಲೆ, ಮುಂಬಯಿಯೊಂದಿಗಿದ್ದ ಶಿಕ್ಷಣದ ಸಮಾಲೋಚಕರಾದ ವರ್ಷ ಭಂಬಾನಿಯವರು ಹೇಳುತ್ತಾರೆ “ಮೇಕರ್‌ಸ್ಪೇಸ್ ಸಾಮಾಜಿಕ ಮತ್ತು ಸಾಂಸ್ಕೃತಿಕ ಜ್ಞಾನವನ್ನು ಅಳವಡಿಸಿಕೊಳ್ಳಲು ಕೂಡ ಉಪಯೋಗಿಸಬಹುದು. ಇದು ಮಕ್ಕಳಿಗೆ ಇರುವ ಅತ್ಯುತ್ತಮವಾದ ಮಾರ್ಗವಾಗಿದು ಕೇವಲ ತಿಳಿದುಕೊಳ್ಳುವುದಲ್ಲದೇ ಅಥಮಾಡಿಕೊಳ್ಳುವ ಪರಿಕಲ್ಪನೆಯನ್ನು ನೀಡುತ್ತದೆ ಮತ್ತು ಅವುಗಳನ್ನು ತಮ್ಮ ಸ್ವಾಂತ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಉಪಯೋಗಿಸಬಹುದು.” ಇಂದು, ಆರ್ ಎನ್ ಪೋದರ್ ಶಾಲೆಯು ಅಪ್ಲಿಕೇಶನ್‌ಗಳ ಮೂಲಕ ಅತ್ಯಂತ ಆಳವಾಗಿ ಕಲಿಯಲು ಮೇಕರ್‌ಸ್ಪೇಸ್ ಹೊಂದಿರುವ ಶಾಲೆಗಳಲ್ಲಿ ಒಂದಾಗಿದೆ.

ಹಾಗಾದರೆ ನೀವು ನಿಮ್ಮ ಶಾಲೆಯಲ್ಲಿ ಮೇಕರ್‌ಸ್ಪೇಸ್ ಹೇಗೆ ನಿರ್ಮಿಸುವಿರಿ?

ಈ ಪಯಣವನ್ನು ಪ್ರಾರಂಭಿಸಲು ನಿಮಗೆ ಸಹಾಯಕವಾಗಲು ಇಲ್ಲಿ ಸರಳವಾದ ಮಾಹಿತಿ ಇದ್ದು, ಇದು ನಿಮಗೆ ನಿಮ್ಮ ಶಾಲೆಯಲ್ಲಿ ಮೇಕರ್‌ಸೇಸ್ ರಚಿಸಲು ಸಹಾಯ ಮಾಡುತ್ತದೆ.

ಇದರೊಂದಿಗೆ, ಕು. ಭಂಬಾನಿಯವರು ಸ್ಕ್ರ್ಯಾಚ್, ಮೆಕೇ ಮೆಕೇ, ಮೇಕ್‌ಬ್ಲಾಕ್‌ನಂತಹ ವಿವಿಧ ಸಲಕರಣೆ ಮತ್ತು ಸಾಫ್ಟ್ ವೇರ್‌ನೊಂದಿಗೆ ನಿಮ್ಮ ಮೇಕರ್‌ಸ್ಪೇಸ್ ಇರಬೇಕೆಂದು ಶಿಫಾರಸು ಮಾಡುತ್ತಾ ಒಂದು ಪಟ್ಟಿಯಲ್ಲಿ ಇಲ್ಲಿ ಒದಗಿಸಿದ್ದಾರೆ. ಈ ಸಲಕರಣೆಗಳು ಮಕ್ಕಳಿಗೆ ಕಂಪ್ಯೂಟರ್‌ನೊಂದಿಗೆ ತಮ್ಮ ಸೃಜನಶೀಲತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಕಂಪ್ಯೂಟರ್‌ಗಳು ಮೇಕರ್‌ಸ್ಪೇಸ್‌ನಲ್ಲಿ ಉಸಿರಾಡುತ್ತವೆ, ಬ್ಲಾಕ್ ನಿರ್ಮಾಣದಲ್ಲಿ ಪಾತ್ರವಹಿಸಿ ಮಕ್ಕಳಿಗೆ ತಮ್ಮ ಸೃಜನಶೀಲ ದೃಷ್ಟಿಕೋನವನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತವೆ. ಮೇಕರ್‌ಸ್ಪೇಸ್‌ನಲ್ಲಿ, ವಿದ್ಯಾರ್ಥಿಗಳು ಆನ್‌ಲೈನ್ ಕೋರ್ಸ್‌ಗಳು, ಇಡೀ ಪುಸ್ತಕಕ್ಕೆ ಸ್ಕ್ರೀನ್-ಪ್ರಿಂಟ್ ಮಾಡುವುದು ಅಥವಾ 3D ಪ್ರಿಂಟರ್‌ಗಳೊಂದಿಗೆ ಮಾದರಿ ಮನೆಗಳನ್ನು ರಚಿಸುವ ಮೂಲಕ ವಿನ್ಯಾಸ ಮಾಡುವುದನ್ನು ಕಲಿಯಲು ಕಂಪ್ಯೂಟರ್ ಬಳಸಬಹುದು. [1] ಇದು ನಿಮ್ಮ ಮೇಕರ್‌ಸ್ಪೇಸ್‌ಗೆ ಸೂಕ್ತವಾದ ಪಿಸಿ ಆಯ್ಕೆ ಮಾಡುವುದು ಪ್ರಮುಖವಾಗಿದ್ದು, ಯಾರಾದರೂ ಮಿತಿಯಿಲ್ಲದ ಅವಕಾಶಗಳ ಬಾಗಿಲುಗಳಾನ್ನು ಈ ಮೂಲಕ ತೆರೆಯಬಹುದು.  

 

ಶೈಕ್ಷಣಿಕ ಮೇಕರ್‌ಸ್ಪೇಸ್‌ಗಳ ಪ್ರಯೋಜನಗಳು ಹಲವಾರು ಮತ್ತು ವೈವಿಧ್ಯಮಯವಾಗಿವೆ. ಅವುಗಳು ತಮ್ಮ ಸವಾಲುಗಳೊಂದಿಗೆ ಬರುವುದಿಲ್ಲ, ಮೇಕರ್‌ಸ್ಪೇಸ್‌ಗಳು ವಿದ್ಯಾರ್ಥಿಯ ಕಲಿಕೆ ಮತ್ತು ಅಭಿವೃದ್ಧಿಯಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತವೆ. ನಿಮ್ಮ ಶಾಲೆಯಲ್ಲಿ ಇರುವ ಮೇಕರ್‌ಸ್ಪೇಸ್‌ಗಳು ಅದ್ಭುತವಾದ ಫಲಿತಾಂಶವನ್ನು ಒದಗಿಸುತ್ತವೆ – ದುರ್ಬಲ ಮನಸ್ಸುಗಳಲ್ಲಿ ಆಸಕ್ತಿಕರ ವಿಚಾರಗಳನ್ನು ಹುಟ್ಟಿಸುತ್ತದೆ ಮತ್ತು ಉತ್ತರ ಹುಡುಕಿಕೊಳ್ಳುವತ್ತ ಮುನ್ನಡೆಸುತ್ತದೆ. ಮೇಕರ್‌ಸ್ಪೇಸ್ ಮೇಕರ್‌ಸ್ಪೇಸ್ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಉತ್ತೇಜಿಸುತ್ತದೆ, ಅದಕ್ಕಾಗಿಯೇ ಇದನ್ನು ಭವಿಷ್ಯದ ಗ್ರಂಥಾಲಯ ಎಂದು ಕರೆಯಲಾಗುತ್ತದೆ. ನಿಮ್ಮ ಶಾಲೆಯು ಮೇಕರ್‌ಸ್ಪೇಸ್‌ನಲ್ಲಿ ವಿನಿಯೋಜಿಸುವುದರಿಂದ ಅದು ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. [2]