ಬೋಧನೆಯ ಹೊಸ ಯುಗಕ್ಕೆ ಒಗ್ಗಿಕೊಳ್ಳುವುದು

 

ಬದಲಾಗುತ್ತಿರುವ ಕಾಲದೊಂದಿಗೆ, ದೇಶಾದ್ಯಂತ ಬೋಧನಾ ಮಾದರಿಯಲ್ಲಿಯೂ ಹೊಸತನ ಕಂಡುಬರುತ್ತಿದೆ. ಇದ್ದಕ್ಕಿದ್ದಂತೆ, ಈ ಹೊಸ ಯುಗದ ಬೋಧನೆಯ ಕೇಂದ್ರಭಾಗದಲ್ಲಿ ಪಿಸಿ ಕಲಿಕೆಯನ್ನು ಇಟ್ಟುಕೊಂಡು ಪ್ರತಿಯೊಬ್ಬರೂ ಡಿಜಿಟಲ್ ತರಗತಿ ಮಾದರಿಯನ್ನು ಅನುಸರಿಸತೊಡಗಿದ್ದಾರೆ.

 

ಡೆಲ್ ಫಾರ್ ಎಜ್ಯುಕೇಷನ್/ ಶಿಕ್ಷಣಕ್ಕೆ ಡೆಲ್ ಭಾಗವಾದ ಉಪಕ್ರಮಕ್ಕಾಗಿ, ಶಿಕ್ಷಕರು ತಮ್ಮ ಕೌಶಲ್ಯವನ್ನು ಉನ್ನತ ಮಟ್ಟಕ್ಕೇರಿಸಿಕೊಳ್ಳುವಂತೆ ಮಾಡಲು ಮತ್ತು ಪಿಸಿ ಯನ್ನೊಳಗೊಂಡ ಕಲಿಕೆಯನ್ನು ಸಂಯೋಜಿಸಲು ನಾವು ವೆಬಿನಾರ್ ಗಳನ್ನು ಪ್ರಾರಂಭಿಸಿದ್ದೇವೆ.

 

75-90 ನಿಮಿಷಗಳ ಅವಧಿಯಲ್ಲಿ ನೀವು, ತೊಡಗಿಕೊಳ್ಳುವ ಆಲೋಚನೆಗಳು, ಪರಿಣಾಮಕಾರಿ ಆನ್ ಲೈನ್ ಬೋಧನೆ, ವಿನ್ಯಾಸ ಮತ್ತು ಕಲಿಕೆಯ ಫಲಿತಾಂಶಗಳಿಗೆ ಆದ್ಯತೆ ನೀಡುವಿಕೆ, ಬೋಧನಾ ಮಾದರಿಗಳ ಪರಿಣಾಮಕಾರಿತ್ವ, ಅಸೆಸ್&zwjಮೆಂಟುಗಳನ್ನು ಪುನರ್ವಿಮರ್ಶಿಸುವುದು ಮತ್ತು ಆನ್ ಲೈನ್ ಸೆಷನಿನಲ್ಲಿ ಏನು ಮಾಡಬಾರದು ಎಂಬುದರ ಕುರಿತು ಇಲ್ಲಿ ಕಲಿಯಬಹುದು.

 

ನಮ್ಮ ತರಬೇತಿಗಳಿಂದ ನೀವು ಪಡೆದುಕೊಳ್ಳುವ ಪ್ರಮುಖ ವಿಷಯಗಳು ಹೀಗಿವೆ-

ನಿಮ್ಮ ಪರಿವರ್ತನೆಗಾಗಿ

  • ನೀವು ಆನ್ ಲೈನ್ ಮಾಧ್ಯಮದಲ್ಲಿ ತರಗತಿ ಪ್ರಾರಂಭಿಸುವ ಮೊದಲು ಅದರ ಬಗ್ಗೆ ತಿಳಿದುಕೊಳ್ಳಿ. ಅದರ ವೈಶಿಷ್ಟ್ಯಗಳು ಮತ್ತು ಉಪಕರಣಗಳನ್ನು  ಚೆನ್ನಾಗಿ ಮನದಟ್ಟು ಮಾಡಿಕೊಳ್ಳಿ. ಮೊದಲೇ ಒಂದು ಪ್ರಾಯೋಗಿಕ ತರಗತಿಯನ್ನು ನಡೆಸಿ ನೋಡಿ.
  • ವೈಯಕ್ತಿಕ ಸ್ಪರ್ಶಕ್ಕಾಗಿ ನಿಮ್ಮ ಕ್ಯಾಮೆರಾವನ್ನು ಚಲಾಯಿಸಿ. ಜನರಿಗೆ ಆ ತರಗತಿಯ ಪ್ರಶ್ನೆಗಳಿಗೆ ಉತ್ತರಿಸಲು ಪ್ರೋತ್ಸಾಹಿಸಿ. ಅವರ ಸಂದೇಹಗಳಿಗೆ ಪ್ರತಿಕ್ರಿಯೆ ನೀಡಿ.
  • ನಿರಂತರ ಇಂಟರ್ನೆಟ್ ಸೌಲಭ್ಯವನ್ನು ಹೊಂದಿರದ ಅಥವಾ ಬೇರೆ ಕೆಲಸದಲ್ಲಿ ವ್ಯಸ್ತರಾಗಿರುವ ವಿದ್ಯಾರ್ಥಿಗಳಿಗೆ ಕೆಲವು ಸಿದ್ಧತೆ ಮಾಡಿಕೊಂಡು ಪ್ರತಿ ತರಗತಿಯನ್ನು ಮೊದಲೇ ರೆಕಾರ್ಡ್ ಮಾಡಿ.

ಸಂವಾದಾತ್ಮಕ ಪಾಠಗಳಿಗಾಗಿ

  • ಪಾಠವನ್ನು ಸಣ್ಣ ಭಾಗಗಳಾಗಿ ವಿಭಾಗಿಸಿ ಸಂಕ್ಷಿಪ್ತವಾಗಿರಿರಿಸಿಕೊಳ್ಳಿ. ವೀಡಿಯೊಗಳು ಮತ್ತು ಪಿಡಿಎಫ್ ಗಳಂತಹ ಅಭ್ಯಾಸದ ಸಾಮಗ್ರಿಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿಕೊಡಿ.
  • ಬಹು ವಿಷಯಗಳು ಮತ್ತು ನವೀಕೃತ ಮಾಹಿತಿಯೊಂದಿಗೆ ಒಂದು ಇ-ಲರ್ನಿಂಗ್ ಲೈಬ್ರರಿಯನ್ನು ರಚಿಸಿ. ಗಮನ ಸೆಳೆಯಲು ಆಕರ್ಷಕವಾಗಿರುವ ವೀಡಿಯೊಗಳು ಮತ್ತು ಆಡಿಯೊ ಕ್ಲಿಪ್ ಗಳನ್ನು ಬಳಸಿ.
  • ಮಾಡಿದ ಪ್ರಗತಿಯನ್ನು ಅಳೆಯಲು ಸಂವಾದಾತ್ಮಕ  ಅಸೈನ್&zwjಮೆಂಟುಗಳು, ರಸಪ್ರಶ್ನೆಗಳು ಮತ್ತು ಸಮೀಕ್ಷೆಗಳ ಮೂಲಕ ತರಗತಿಯನ್ನು ವ್ಯಸ್ತವಾಗಿರಿಸಿ.

ನೀವು ಎದುರಿಸಬಹುದಾದ ತೊಂದರೆಗಳಿಗಾಗಿ

  • ಕೆಲವು ವಿದ್ಯಾರ್ಥಿಗಳು ಆಡಿಯೊ ಮೂಲಕ, ಇತರರು ವೀಡಿಯೊ ಮೂಲಕ ಕಲಿಯುವ ಸಾಮರ್ಥ್ಯ ಹೊಂದಿರುತ್ತಾರೆ. ಎಲ್ಲಾ ವಿದ್ಯಾರ್ಥಿಗಳನ್ನೂ ತೊಡಗಿಕೊಳ್ಳಲು ನಿಮ್ಮ ಬೋಧನಾ ಪ್ರಸ್ತುತಿಯಲ್ಲಿ ಹಲವಾರು ವಿಧಾನಗಳನ್ನು ಸೇರಿಸಿಕೊಳ್ಳಿ.
  • ವಿದ್ಯಾರ್ಥಿಯ ಅನುಮಾನಗಳನ್ನು ಪರಿಹರಿಸುವ ಹಾದಿಯಲ್ಲಿ ಎದುರಾಗಬಹುದಾದ ತಾಂತ್ರಿಕ ಸಮಸ್ಯೆಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರಿ. ಆನ್ ಲೈನ್ ಡಾಕ್ಯುಮೆಂಟುಗಳಿಗಾಗಿ ತಪ್ಪದೇ ನೀವು ಮುಕ್ತ ಪ್ರವೇಶವನ್ನು ಒದಗಿಸಿ.
  • ಮಕ್ಕಳು ಆನ್ ಲೈನ್ ಕಲಿಕೆಯಲ್ಲಿ ಎದುರಿಸುವ  ಪ್ರತ್ಯೇಕತೆಯನ್ನು ನಿಭಾಯಿಸಲು, ಗುಂಪು ಚಟುವಟಿಕೆಗಳು, ಅಸೈನ್&zwjಮೆಂಟುಗಳು ಮತ್ತು ಸಂವಾದಾತ್ಮಕ ಕಲಿಕೆಗಾಗಿ  ಪ್ರಸ್ತುತಿಗಳನ್ನು ಸಂಘಟಿಸಬೇಕು.

 

ಒಬ್ಬ ಶಿಕ್ಷಕರಾಗಿ, ಬದಲಾಗುತ್ತಿರುವ ಕಾಲಕ್ಕೆ ನಿಮ್ಮನ್ನು ನೀವು ಸನ್ನದ್ಧರಾಗಿಸಿಕೊಂಡಿರಬೇಕು. ನಿಮ್ಮ ಕೌಶಲ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಮತ್ತು ಕಲಿಕೆಯ ಭವಿಷ್ಯವನ್ನು ಸ್ವೀಕರಿಸಲು, ಇಲ್ಲಿಗೆ ಭೇಟಿ ನೀಡಿ. (https://www.dellaarambh.com/webinars/)