ಸೈಬರ್ ಅಪರಾಧದ ಬಗ್ಗೆ ಮತ್ತು ಅವುಗಳನ್ನು ಎದುರಿಸುವುದು ಹೇಗೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ

ನಿಶಾಂತ್ ಒಂದು ದಿನ ಇನ್ನು ಮುಂದೆ ಆಟವಾಡಲು ಇಷ್ಟಪಡದೇ ಇರುವ ದಿನದವರೆಗೂ ತನ್ನ ಶಾಲೆಯ ಹಿರಿಯ ವಿದ್ಯಾರ್ಥಿಗಳನ್ನು ಬಾಸ್ಕೆಟ್‌ಬಾಲ್‌ನಲ್ಲಿ ಮೀರಿಸುತ್ತಿದ್ದನು. 14 ವರ್ಷದ ಅವನು ಆಟವನ್ನು ನಿಲ್ಲಿಸಿದನು ಮತ್ತು ಅವನ ಆಟದಲ್ಲಿ ಕುಸಿತ ಉಂಟಾಯಿತು.

ಅವನು ತನ್ನ ಹಿರಿಯ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಅವನ ಫೋಟೊಗಳ ಜೊತೆ ಅವಹೇಳನಕಾರಿಯಾದ ಪದಗಳನ್ನು ಬಳಸುತ್ತಿದ್ದುದರಿಂದ ಅವನು ಹಿಂಸೆಯನ್ನು ಅನುಭವಿಸುತ್ತಿರುವುದನ್ನು ಕೊನೆಗೂ ಅವನ ತಂದೆಯ ಹತ್ತಿರ ಒಪ್ಪಿಕೊಂಡನು.

ನೀವು ಯಾರಾದರೂ ಇಂಟರ್‌ನೆಟ್ ಅನ್ನು ಬೆದರಿಕೆ ಹಾಕಲು ಉಪಯೋಗಿಸಿದರೆ ಅಥವಾ ಯಾರಾದರೂ ಒಬ್ಬರನ್ನು ಹಿಂಸೆ ಅನುಭವಿಸುವಂತೆ ಮಾಡುವ ಆತ ಅಥವಾ ಆಕೆ ಬಹುತೇಕ ಸೈಬರ್ ಅಪರಾಧಿಯಾಗಿರುತ್ತಾರೆ!

ಸಾಂಪ್ರದಾಯಿಕ ಅಪರಾಧಿಯಂತೆ ಸೈಬರ್ ಅಪರಾಧಿಗೆ ದೈಹಿಕ ಸಾಮರ್ಥ್ಯ ಅಥವಾ ಮುಖಾಮುಖಿ ಸಂಪರ್ಕದ ಅಗತ್ಯವಿರುವುದಿಲ್ಲ. ಇಂಟರ್‌ನೆಟ್ ಸಂಪರ್ಕ ಅಥವಾ ಮೊಬೈಲ್ ಫೋನ್ ಹೊಂದಿದ್ದು ತಮ್ಮ ನಿಜವಾದ ಗುರುತನ್ನು ಮರೆಮಾಡುವ ಯಾವುದೇ ವ್ಯಕ್ತಿಯು ಸೈಬರ್ ಅಪರಾಧಿಯಾಗಿರುತ್ತಾನೆ.

ನೀವು ಇಂತಹ ಸಾಮಾನ್ಯ ಸೈಬರ್ ಅಪರಾಧಗಳ ಉದಾಹರಣೆಗಳನ್ನು ಗುರುತಿಸಿರುವಿರೇ?

  1. ಸಾಮಾಜಿಕ ಜಾಲತಾಣಗಳಲ್ಲಿ ಅನಪೇಕ್ಷಿತ ಚಿತ್ರಗಳನ್ನು ಅಥವಾ ಸಂದೇಶಗಳನ್ನು ಪ್ರಕಟಿಸುವುದು.
  2. ಹಿಂಸಾತ್ಮಕ ಪಠ್ಯ ಸಂದೇಶಗಳನ್ನು ಕಳುಹಿಸುವುದು
  3. ಯಾರೊಬ್ಬರಿಗೆ ಮೋಸ ಮಾಡಲು ನಕಲಿ ಖಾತೆಗಳನ್ನು ರಚಿಸುವುದು
  4. ವೈಯಕ್ತಿಕ ಕಂಪ್ಯೂಟರ್‌ಗಳಲ್ಲಿ ಇರುವ ಖಾಸಗಿ ಫೈಲ್‌ಗಳನ್ನು ಅಥವಾ ಫೋಲ್ಡರ್‌ಗಳನ್ನು ಪಡೆದುಕೊಳ್ಳುವುದು

ಸೈಬರ್ ಅಪರಾಧಗಳನ್ನು ನೀವು ಹೇಗೆ ಎದುರಿಸುವಿರಿ?

  1. ಪ್ರತಿಕ್ರಿಯೆ ನೀಡಬೇಡಿ: ಒಂದು ವೇಳೆ ಯಾರಾದರೂ ನಿಮಗೆ ತೊಂದರೆ ಕೊಟ್ಟರೆ, ನಿಮ್ಮ ಪ್ರತಿಕ್ರಿಯೆಯು ಸಾಮಾನ್ಯವಾಗಿ ಅಪರಾಧಿಯು ಬಯಸಿದಂತೆಯೇ ಇರುತ್ತದೆ ಎಂಬುದನ್ನು ನೆನಪಿನಲ್ಲಿ ಇಡಿ. ಇದು ಅವನಿಗೆ ಅಥವಾ ಅವಳಿಗೆ ನಿಮ್ಮ ಮೇಲೆ ಹಿಡಿತವನ್ನು ಒದಗಿಸುತ್ತದೆ. ಅಪರಾಧಿಗೆ ಶಕ್ತಿಶಾಲಿಯನ್ನಾಗಿ ಮಾಡಲು ಯಾರು ಬಯಸುತ್ತಾರೆ?
  2. ಪ್ರತಿಕಾರ ತೀರಿಸಿಕೊಳ್ಳಬೇಡಿ: ಅಪರಾಧಿಯ ಕ್ರಿಯೆಗೆ ಪ್ರತಿಕ್ರಿಯೆ ನೀಡುತ್ತೀರಿ ಮತ್ತು ಅವನ ವರ್ತನೆಯನ್ನು ನೀವು ಪ್ರಚೋದಿಸುತ್ತೀರಿ. ಇಂತಹ ಆಕ್ರಮಣಕಾರಿಯಾದ ಮನೋಭಾವನೆಯನ್ನು ತಡೆಯಬೇಕು.
  3. ಸಾಕ್ಷಿಗಳನ್ನು ಉಳಿಸಿ: ಡಿಜಿಟಲ್ ಅಪರಾಧಗಳ ವಿಷಯದಲ್ಲಿ ಇರುವ ಏಕೈಕ ಒಳ್ಳೆಯ ಸುದ್ಧಿ ಏನೆಂದರೆ ಹಿಂಸಾತ್ಮಕ ಸಂದೇಶಗಳನ್ನು ಸಾಮಾನ್ಯವಾಗಿ ಪಡೆದುಕೊಳ್ಳಬಹುದು, ಉಳಿಸಬಹುದು ಮತ್ತು ಅವುಗಳನ್ನು ಸಹಾಯ ಮಾಡುವ ವ್ಯಕ್ತಿಗಳಿಗೆ ತೋರಿಸಬಹುದು. ವಿಷಯಗಳು ಗಂಭೀರವಾಗಿದ್ದರೆ, ಚಿಕ್ಕ ವಿಷಯವಾಗಿದ್ದರೂ ನೀವು ಹೀಗೆ ಮಾಡಬೇಕಾಗುತ್ತದೆ.
  4. ನಂಬಿಕಸ್ಥ ಹಿರಿಯರೊಂದಿಗೆ ಮಾತನಾಡಿ: ನೀವು ಬ್ಯಾಕ್-ಅಪ್ ಇಟ್ಟುಕೊಳ್ಳಬೇಕಾಗುತ್ತದೆ. ಯಾವಾಗಲೂ ಪೋಷಕರನ್ನು ಜೊತೆಯಲ್ಲಿ ಇಟ್ಟುಕೊಳ್ಳುವುದು ಉತ್ತಮ ನಿಮಗೆ ಸಾಧ್ಯವಾಗದೇ ಇದ್ದರೆ ಸಾಮಾನ್ಯವಾಗಿ ಹೇಗೆ ಸಹಾಯ ಮಾಡಬೇಕು ಎಂದು ತಿಳಿದಿರುವ ಶಾಲೆಯ ಕೌನ್ಸಲರ್ ಅವರನ್ನು ಸೇರಿಸುಕೊಳ್ಳುವುದು ಉತ್ತಮ.
  5. ಅಪರಾಧಿಯನ್ನು ಬ್ಲಾಕ್ ಮಾಡಿ: ಒಂದು ವೇಳೆ ತೊಂದರೆಯು ತ್ವರಿತ ಸಂದೇಶಗಳಿಂದ, ಪಠ್ಯಗಳಿಂದ ಅಥವಾ ಪ್ರೊಫೈಲ್ ಕಮೆಂಟ್‌ಗಳಿಂದ ಬಂದಿದ್ದರೆ, ನೀವು ನಿಮಗಾಗಿ ಒಂದು ಸಹಾಯ ಮಾಡಿಕೊಳ್ಳಿ: ಆ ವ್ಯಕ್ತಿಯನ್ನು ಬ್ಲಾಕ್ ಮಾಡಲು ಆದ್ಯತೆಗಳನ್ನು ಅಥವಾ ಖಾಸಗಿ ಟೂಲ್‌ಗಳನ್ನು ಉಪಯೋಗಿಸಿರಿ. ಚಾಟ್‌ನಲ್ಲಿ ಇದ್ದರೆ ಆಗ “ರೂಮ್” ತೊರೆಯಿರಿ.
  6. ನಿಮ್ಮ ಪಿಯನ್ನು ಸಂರಕ್ಷಿಸಿಕೊಳ್ಳಿ: ಉತ್ತಮವಾದ ಅಂಟಿವೈರಸ್ ನಿಮ್ಮ ಪಾಸ್‌ವರ್ಡ್ ಅನ್ನು ಸಂರಕ್ಷಿಸಿ ಇಡುತ್ತದೆ ಮತ್ತು ಸೈಬರ್ ಅಪಾಯಗಳಿಂದ ನಿಮ್ಮನ್ನು ಕಾಪಾಡುತ್ತದೆ. ಡೆಲ್ ಪಿಸಿಗಳು ಸುರಕ್ಷಿತ ಮತ್ತು ಭದ್ರತೆಯುಳ್ಳ ಸೈಬರ್ ಅನುಭವವನ್ನು ಖಚಿತಪಡಿಸಲು 15 ತಿಂಗಳುಗಳ McAfee ಅಂಟಿವೈರಸ್ ಒಳಗೊಂಡಿದೆ.

ಯಾರಾದರೂ ಸೈಬರ್ ಅಪರಾಧಿಗಳಿಂದ ತೊಂದರೆ ಅನುಭವಿಸಿರುವುದು ನಿಮಗೆ ತಿಳಿದಿದೆಯೇ? #DellAarambh ಉಪಯೋಗಿಸಿ ನಮಗೆ ಟ್ವೀಟ್ ಮಾಡಿ ಮತ್ತು ಅವರ ಬಗ್ಗೆ ನಮಗೆ ತಿಳಿಸಿಕೊಡಿ.