ಈ ಉರು ಹೊಡೆಯುವಿಕೆ ನಿರೋಧಕ ದಿನದಂದು ಒಂದು PC ಯನ್ನು ಬಳಸಿಕೊಂಡು ಪಾಠಗಳಿಗೆ ಜೀವ ತುಂಬಿ

 

ಅಧ್ಯಯನ ಮಾಡುವಿಕೆಯೊಂದಿಗೆ ಒಂದು ಮಗುವಿನ ಬಾಂಧವ್ಯವನ್ನು ರೂಪಾಂತರಗೊಳಿಸುವ ಶಕ್ತಿಯನ್ನು ಒಬ್ಬ ಶಿಕ್ಷಕರಾಗಿ ನೀವು ಹೊಂದಿರುತ್ತೀರಿ. ಪರೀಕ್ಷೆಗಳಿಗೂ ಮುನ್ನ ಒಂದು ಮಗುವು ಮಾಡಲೇಬೇಕಾದ ಒಂದು ಕೆಲಸವನ್ನಾಗಿಸುವ ಬದಲಾಗಿ, ಒಂದು ಮಗುವು ನಿಮ್ಮಿಂದಾಗಲಿ ಅಥವಾ ಪಾಲಕರಿಂದಾಗಲಿ ಮುಂದೆ ತಳ್ಳಲ್ಪಡಬೇಕಾದ ಅಗತ್ಯತೆ ಇಲ್ಲದೇ ತಾನಾಗಿಯೇ ಮಾಡಲು ಬಯಸುವಂಥದ್ದನ್ನಾಗಿ ಪರಿವರ್ತಿಸುವ ಕ್ರಮಗಳನ್ನು ನೀವು ಕೈಗೊಳ್ಳಬಹುದು.

ಅದನ್ನು ಮಾಡಲು PC ಯೊಂದು ನಿಮಗೆ ನೆರವಾಗಬಲ್ಲದು, ಪಾಠಗಳಿಗೆ ನೀವು ಜೀವವನ್ನು ಹೇಗೆ ತುಂಬಬಹುದು ಎಂಬುದನ್ನು ಇಲ್ಲಿ ನೀಡಲಾಗಿದೆ:

1) ತರಗತಿಯಲ್ಲಿ ಆಶ್ಚರ್ಯಕರ ಅಂಶವನ್ನು ಪರಿಚಯಿಸಿ

ಅಧ್ಯಯನ ಸಾಮಗ್ರಿಯನ್ನು ಪರೀಕ್ಷೆಗಳ ನಂತರ ದೀರ್ಘ ಕಾಲ ನೆನಪಿಟ್ಟುಕೊಳ್ಳಲು ನಿಮ್ಮ ವಿದ್ಯಾರ್ಥಿಗಳಿಗೆ ಇದು ನೆರವಾಗುವಂತಹದ್ದಾಗಿದೆ. ಉದಾಹರಣೆಗಾಗಿ, ನಿಮ್ಮ ಪಾಠಕ್ಕೆ ಸಂಬಂಧಿಸಿದ ಪದವೊಂದನ್ನು, The Revolution ಎಂಬುದನ್ನು “het nuvreilovoi” ಎಂಬುದಾಗಿ ಗೋಜಲು ಗೋಜಲಾಗಿ ಬರೆಯಿರಿ. ಇದು ನಿಮ್ಮ ತರಗತಿಯು ಊಹೆ ಮಾಡುವ ಪ್ರಕ್ರಿಯೆಯಲ್ಲಿ ತೊಡಗಲು ಹಾಗೂ ಕುತೂಹಲಿಗಳಾಗುವಂತೆ ಮಾಡಲು ಪ್ರೇರೇಪಿಸುತ್ತದೆ!

2) ಉದಾಹರಣೆಗಳನ್ನು ತೋರಿಸಿ

ನಿಮ್ಮ ವಿದ್ಯಾರ್ಥಿಗಳ ಮೇಲೆ ಇದರ ಪ್ರಭಾವವನ್ನು ನಿಜವಾಗಿಯೂ ನೋಡಲು ನೀವು ಇದನ್ನು ಪ್ರಯತ್ನಿಸಿಯೇ ನೋಡಬೇಕು. ಪ್ರಸ್ತುತದಲ್ಲಿ ನೀವು ಕಲಿಸುತ್ತಿರುವ ಶೇಕ್ಸಪೀಯರ್ನ ನಾಟಕವೊಂದರ ಚಲನಚಿತ್ರ ಆವೃತ್ತಿಯನ್ನು ತೋರಿಸುವುದು ಅಥವಾ ಸಸ್ಯ ಜೀವನಚಕ್ರವನ್ನು ಪ್ರದರ್ಶಿಸಲು ತರಗತಿಯು ಸಸಿ ನೆಡುವಂತೆ ಮಾಡುವಂತಹ ಸರಳ ಕ್ರಮಗಳಿಂದ ಉದಾಹರಣೆಗಳನ್ನು ತೋರಿಸುವ ಮೂಲಕ ಬಹಳಷ್ಟನ್ನು ಕಲಿಸಬಹುದು.

3) ಆಳವಾಗಿ ಯೋಚಿಸಿ, ಒಂದು ವಿಷಯದೊಂದಿಗೆ ಮತ್ತೊಂದರ ಸಂಪರ್ಕಗಳನ್ನು ಕಂಡುಕೊಳ್ಳಲು ನಿಮ್ಮ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ

ಇದನ್ನು ಮಾಡಲು, ನೀವು ನೀಡಿದ ವಿಷಯವೊಂದರ ಮೇಲೆ PC ಯಲ್ಲಿ ಸಂಶೋಧನೆಗಾಗಿ ಪಠ್ಯ ಸಮಯವನ್ನು ನೀವು ಹಂಚಿಕೆ ಮಾಡಬೇಕಾಗುತ್ತದೆ ಹಾಗೂ ನಂತರದಲ್ಲಿ ತರಗತಿಯು ಅದರ ಮೇಲೆ ಚರ್ಚೆಯನ್ನು ಮಾಡುವಂತೆ ಮಾಡಬೇಕಾಗುತ್ತದೆ. ಇದು ಪರಿಕಲ್ಪನೆಗಳ ಬಗ್ಗೆ ನಿಮ್ಮ ವಿದ್ಯಾರ್ಥಿಗಳು ಆಳವಾಗಿ ಆಲೋಚಿಸಿ, ಹೆಚ್ಚು ಪರಿಪೂರ್ಣ ಪದಗಳು ಮತ್ತು ಬೇರೆ ಬೇರೆ ವಿಷಯಗಳ ಮಧ್ಯೆ ಸಂಪರ್ಕಗಳನ್ನು ಕಂಡುಕೊಳ್ಳುವಂತೆ ಮಾಡುತ್ತದೆ.

4) ಹೋಮ್ವರ್ಕ್ ಅನ್ನು ಉತ್ಸಾಹಪೂರ್ಣವನ್ನಾಗಿಸಿ

Drawisland ನಂಥ PC ಸಂಪನ್ಮೂಲವನ್ನು ಬಳಸಿಕೊಂಡು ನಿಮ್ಮ ವಿದ್ಯಾರ್ಥಿಗಳು ತಮ್ಮನ್ನು ತಾವೇ ಕಾರ್ಟೂನ್ಗಳಾಗಿ ಪರಿವರ್ತಿಸಿಕೊಳ್ಳುವಂತೆ ನೀವು ಎಂದಾದರೂ ಮಾಡಿದ್ದೀರಾ?
ನಿಮ್ಮ ತರಗತಿಯ ಉತ್ಸಾಹ ಮತ್ತು ಕಲಿಕೆಗಳನ್ನು ಸುಮ್ಮನೇ ಕಲ್ಪಿಸಿಕೊಳ್ಳಿ!

5) ಪ್ರ್ಯಾಕ್ಟೀಸ್ ಪೇಪರ್ಗಳಿಗಾಗಿ ತರಗತಿ ಸಮಯವನ್ನು ಹಂಚಿಕೆ ಮಾಡಿ

ಸಾಮಾನ್ಯವಾಗಿ, ಮಕ್ಕಳು ಪ್ರ್ಯಾಕ್ಟೀಸ್ ಪೇಪರ್ಗಳನ್ನು ಪರೀಕ್ಷೆಗೂ ಮೊದಲಿನ ಕೊನೆಯ ಗಳಿಗೆಯಲ್ಲಿ ಬಿಡಿಸಲು ತೊಡಗುತ್ತಾರೆ ಹಾಗೂ ಬಹಳಷ್ಟು ಸಂಶಯಗಳಲ್ಲಿ ಸಿಲುಕಿಕೊಂಡು ಬಿಡುತ್ತಾರೆ. ಈ ಸಂಭವನೀಯತೆಯನ್ನು ತಪ್ಪಿಸಲು, ತರಗತಿ ಪರೀಕ್ಷೆಗಳನ್ನು ನೀವು ಒಂದು ನಿಗದಿತ ಕ್ರಮವನ್ನಾಗಿಸಬಹುದು ಹಾಗೂ ನಿಮ್ಮ ವಿದ್ಯಾರ್ಥಿಗಳಿಗೆ ವೈಕಿಸ್ಪೇಸಸ್ ಕ್ಲಾಸ್ರೂಮ್, ಗೂಗಲ್ ಕ್ಲಾಸ್ರೂಮ್ ಗಳ ಮೂಲಕ ಫೀಡ್ಬ್ಯಾಕ್ ನೀಡಬಹುದು ಅಥವಾ ಇ-ಮೇಲ್ ಮಾಡಬಹುದು, ಇದರಿಂದ ನಿಮ್ಮ ವಿದ್ಯಾರ್ಥಿಗಳು ರಿವಿಜನ್ ಮಾಡುವಾಗ ಫೀಡ್ಬ್ಯಾಕ್ ಅನ್ನು ಉಲ್ಲೇಖಿಸಬಹುದು.

ವಿದ್ಯಾರ್ಥಿಗಳಿಗೆ ಕಲಿಸುವಿಕೆಯ ಸಂಪೂರ್ಣ ಉದ್ದೇಶವು ಉರು ಹೊಡೆದು ಕಲಿಯುವಿಕೆಯಲ್ಲಿ ಬಹುತೇಕವಾಗಿ ಇಲ್ಲದಂಥ, ಪರಿಕಲ್ಪನೆಗಳನ್ನು ಅವರು ಗ್ರಹಿಸಲಿ ಮತ್ತು ಪರೀಕ್ಷೆಗಳ ನಂತರವೂ ಪ್ರತಿಯೊಂದನ್ನೂ ಅವರು ದೀರ್ಘ ಕಾಲ ನೆನಪಿಟ್ಟುಕೊಳ್ಳಲಿ ಎಂಬುದಾಗಿರುತ್ತದೆ. ನಿಮ್ಮ ಪಠ್ಯ ಯೋಜನೆಗಳ ಜೊತೆಯಲ್ಲಿಯೇ ನೀವಿದನ್ನು ಆರಂಭಿಸಿ, ಸೂಕ್ತ ಸಮಯದಲ್ಲಿ ವ್ಯತ್ಯಾಸವನ್ನು ಮನಗಾಣಬಹುದು. ನಿಮ್ಮ ಕಲಿಸುವಿಕೆಯು ಆನಂದದಾಯಕವಾಗಿರಲಿ!