ನಿಮ್ಮದೇ ಆದ ಸಾಧನವನ್ನು ತರುವುದು: ನೀವು ನಿರ್ಲಕ್ಷಿಸಲಾಗದ ಶೈಕ್ಷಣಿಕ ಪ್ರವೃತ್ತಿ

 

ನಿಮ್ಮ ಮಗುವಿಗಾಗಿ ಮನೆಗೆ ಒಂದು PC ಯನ್ನು ತರುವದೆಂದರೆ ನಿಮ್ಮ ಮಗುವಿಗೆ ಪ್ರತಿದಿನ ಅದರ ನೆಚ್ಚಿನ ಆಟಿಕೆಯನ್ನು ಕೊಡುಗೆಯಾಗಿ ನೀಡುವುದಕ್ಕೆ ಸಮನಾಗಿರುತ್ತದೆ. ಕೇವಲ ಒಂದು ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ನಿಮ್ಮ ಮಗು ಆಟವಾಡುತ್ತದೆ, ಅಧ್ಯಯನ ಮಾಡುತ್ತದೆ ಮತ್ತು ಜಗತ್ತನ್ನು ಅನ್ವೇಷಿಸುತ್ತದೆ - ಶಾಲೆಯಲ್ಲಿ ತನ್ನದೇ ಆದ PC ಯೊಂದಿಗೆ ನಿಮ್ಮ ಮಗು ಅಧ್ಯಯನ ಮಾಡಬಹುದಾಗಿನ ಅದೇ ಉತ್ಸಾಹವನ್ನು ಈಗ ಕಲ್ಪಿಸಿಕೊಳ್ಳಿ!

BYOD ಅಥವಾ ನಿಮ್ಮದೇ ಸಾಧನವನ್ನು ತೆಗೆದುಕೊಂಡು ಬರುವಿಕೆಯು ವಿಶ್ವದಾದ್ಯಂತದ ಶೈಕ್ಷಣಿಕ ಪ್ರವೃತ್ತಿಯಾಗಿ ಬೆಳೆಯುತ್ತಿದ್ದು, ಅದರ ಬಗ್ಗೆ ನೀವು ತಿಳಿದುಕೊಳ್ಳಬೇಕಿರುವ ವಿಷಯಗಳನ್ನು ಇಲ್ಲಿ ನೀಡಲಾಗಿದೆ.

ಹಾಗಾದರೆ, BYOD ಎಂದರೇನು?

ಇತ್ತೀಚಿನ ಸಮೀಕ್ಷೆಯೊಂದರಲ್ಲಿ, ಅಂದಾಜು 85% ಶೈಕ್ಷಣಿಕ ಸಂಸ್ಥೆಗಳು, ತಂತ್ರಜ್ಞಾನ ಮತ್ತು ಶಿಕ್ಷಣ ಎರಡೂ ಕ್ಷೇತ್ರಗಳ ಸೂಕ್ತ ಮಿಶ್ರಣವನ್ನು ಹೊಂದಿರುವ ಪರಿಸರವನ್ನು ಒದಗಿಸುವುದು ಪ್ರಮುಖವಾಗಿದೆ ಎಂಬುದರಲ್ಲಿ ವಿಶ್ವಾಸವನ್ನಿರಿಸಿವೆ ಎಂದು ಪ್ರಮುಖ ಸಾಫ್ಟ್ವೇರ್ ದಿಗ್ಗಜರಾದ, ಅಡೋಬ್ ಹೇಳಿದೆ. [1] ಎಲ್ಲ ವಯೋಮಾನದ ಮಕ್ಕಳಿಗೆ ದಿನನಿತ್ಯದ ಕಲಿಕೆಯೊಳಗೆ ತಂತ್ರಜ್ಞಾನದ ಮಿಶ್ರಣವನ್ನು ಮಾಡಲು ನಿಮ್ಮದೇ ಆದ ಸಾಧನವನ್ನು ತರುವ ಆಚರಣೆಯು ಅವಶ್ಯಕವಾಗಿದೆ.
ಸರಿಯಾದ ಮೂಲಸೌಕರ್ಯ, ಅಂದರೆ ಇಂಟರ್ನೆಟ್ಗೆ ಪ್ರವೇಶಾವಕಾಶ ಮತ್ತು ಸಾಕಷ್ಟು ಚಾರ್ಜಿಂಗ್ ಪಾಯಿಂಟ್ಗಳ ಲಭ್ಯತೆ ದೊರೆತ ನಂತರ ತಮ್ಮ PC ಯನ್ನು ಶಾಲೆಗೆ ತರುವುದಷ್ಟೇ ಎಲ್ಲ ಮಕ್ಕಳು ಮಾಡಬೇಕಿರುವ ಕೆಲಸವಾಗಿರುತ್ತದೆ.

ನಿಮ್ಮ ಮಗುವಿಗೆ ಅದು ಹೇಗೆ ನೆರವಾಗುತ್ತದೆ?

ಅಧ್ಯಯನ ಮಾಡಲು ಕಂಪ್ಯೂಟರ್ ಬಳಕೆಯಿಂದ ಪ್ರಯೋಜನವನ್ನು ಪಡೆದುಕೊಳ್ಳಲು ಮಗುವಿಗೆ ವಯಸ್ಸು ಒಂದು ಅಡ್ಡಿಯೇ ಅಲ್ಲ. ತರಗತಿಯಲ್ಲಿ ಕಲಿಯಲು ಮಗುವು ತನ್ನದೇ ಆದ PC ಯನ್ನು ಹೊಂದಿದ್ದಾಗ ಅವೇ ಪ್ರಯೋಜನಗಳು ದ್ವಿಗುಣಗೊಳ್ಳುತ್ತವೆ. ಪುನರಾವರ್ತಿತ ಬಳಕೆಯೊಂದಿಗೆ, ಮಕ್ಕಳು ತಮ್ಮ PC ಯ ಕೆಲಸ ಮಾಡುವಿಕೆಯೊಂದಿಗೆ ಪರಿಚಿತರಾಗುತ್ತಾರೆ – ಇದು, ಶಾಲೆಯಲ್ಲಿ ಹೊಸ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವಲ್ಲಿ ಅವರ ಸಮಯ ಹಾಗೂ ಶ್ರಮವನ್ನು ಉಳಿಸುತ್ತದೆ. ಅದೇ ಸಮಯ ಹಾಗೂ ಶ್ರಮವನ್ನು ಓದುವಿಕೆ ಹಾಗೂ ಅಸೈನ್ಮೆಂಟುಗಳ ಮೇಲೆ ಕೆಲಸ ಮಾಡಲು ವ್ಯಯಿಸಬಹುದು. ಅದಕ್ಕೂ ಹೆಚ್ಚಾಗಿ, ಅದು ತಮ್ಮದೇ ಆದ PC ಆಗಿರುವುದರಿಂದ ಮಕ್ಕಳು ಜವಾಬ್ದಾರಿಯ ಸಂವೇದನೆಯನ್ನು ಹೊಂದುತ್ತಾರೆ, ಇದು ಅಧ್ಯಯನದಲ್ಲಿನ ಅವರ ಆಸಕ್ತಿಯನ್ನೂ ಸಹ ಹೆಚ್ಚಿಸುತ್ತದೆ. ನಿಮ್ಮದೇ ಆದ ಸಾಧನವನ್ನು ತರುವುದನ್ನು ”ತಮ್ಮದೇ ಕೈಗಳಲ್ಲಿ ಕಲಿಯುವಿಕೆ” ಯನ್ನು ಕೈಗೆತ್ತಿಕೊಳ್ಳಲು ವಿದ್ಯಾರ್ಥಿಗಳಿಗೆ ಇರುವ ಮಾರ್ಗ ಎಂಬುದಾಗಿ ಈ ನಿಯತಕಾಲಿಕವು ಬಣ್ಣಿಸುತ್ತದೆ, ಇದು, ಪ್ರತಿ ಮಗುವು ತಮ್ಮ ಭವಿಷ್ಯದ ಭವಿತವ್ಯಕ್ಕಾಗಿ ಅಭಿವೃದ್ಧಿಪಡಿಸಿಕೊಳ್ಳಬೇಕಾದ ಕೌಶಲ್ಯವಾಗಿದೆ. [2]

ಭವಿಷ್ಯದಲ್ಲಿ ಏನೇನಿದೆ?

ಭವಿಷ್ಯವು ನಮ್ಮ ಜೀವನದ ಪ್ರತಿಯೊಂದೂ ವಿಷಯಗಳಲ್ಲಿ ತಂತ್ರಜ್ಞಾನವನ್ನು ಆಲಂಗಿಸಿಕೊಳ್ಳುವುದರ ಬಗ್ಗೆ ಮತ್ತು ಬದಲಾವಣೆಗಳಿಗೆ ಶೀಘ್ರವಾಗಿ ಸೂಕ್ತವಾಗಿ ಹೊಂದಾಣಿಕೆ ಮಾಡಿಕೊಳ್ಳುವುದರ ಬಗ್ಗೆ ಇದೆ. ಹಾಗಾಗಿ, ಹೊಸದಾಗಿ ಆರಂಭಿಸಲು ಇಂದಿನ ಮಕ್ಕಳಿಗೆ ಇದು ನೆರವಾಗುತ್ತದೆ. ಶಾಲೆಗಳಲ್ಲಿನ ಮಾಹಿತಿ ತಂತ್ರಜ್ಞಾನ ಕೋಣೆಗಳು ಒಂದು ಉತ್ತಮ ಆರಂಭವಾಗಿದ್ದು, ಬಹುತೇಕ ಭಾರತೀಯ ಶಾಲೆಗಳಲ್ಲಿನ ಸಾಮಾನ್ಯ ಸ್ಥಳಗಳಾಗಿವೆ. ಹೆಚ್ಚು ಗ್ರಹಿಕೆಯ ಪರಿಕಲ್ಪನೆಗಳನ್ನು ಹೊಂದಿರುವ ಅಧ್ಯಯನದ ನಿತ್ಯಕ್ರಮಕ್ಕಾಗಿ ಮತ್ತು ವಿಷಯವನ್ನು ಕೇವಲ ನೆನಪಿಟ್ಟುಕೊಳ್ಳುವುದಕ್ಕಿಂತ, ಇನ್ನೂ ಹೆಚ್ಚಿನದನ್ನು ಕಲಿಯುವ ಕುತೂಹಲಿಗಳಾಗಿರುವುದಕ್ಕಾಗಿ ಮನೆ ಮತ್ತು ಶಾಲೆ, ಎರಡೂ ಕಡೆಗಳಲ್ಲಿನ ಬಳಕೆಗಾಗಿ ತನ್ನದೇ ಆದ PC ಯನ್ನು ಪ್ರತಿ ಮಗುವೂ ಹೊಂದುವುದು ಮುಂದಿನ ಹೆಜ್ಜೆಯಾಗಿರುತ್ತದೆ.