BYOD ಅಂದರೇನು?
BYOD ಅಥವಾ ಬ್ರಿಂಗ್ ಯುವರ್ ಓನ್ ಡಿವೈಸ್ – ನಿಮ್ಮದೇ ಸಾಧನವನ್ನು ತನ್ನಿ ಎನ್ನುವುದು, ವಿದ್ಯಾಥಿಗಳು ಶಾಲೆಯಲ್ಲಿ ಕಲಿಯುವುದಕ್ಕಾಗಿ ಮನೆಯಿಂದ ತಮ್ಮದೇ ಆದ PC ಗಳನ್ನು ತರುವುದಾಗಿರುತ್ತದೆ. PC ಯೊಂದು ತರಗತಿಗಳಿಗೆ, ವಿದ್ಯಾರ್ಥಿಯು ಆಯ್ಕೆ ಮಾಡಿಕೊಂಡಲ್ಲಿ ವಿರಾಮದಲ್ಲಿ ಅಧ್ಯಯನ ಮಾಡಲು ಹಾಗೂ PC ಬಳಸಲ್ಪಡುವ, ಶಾಲಾ ನಂತರದ ಕೋಡಿಂಗ್ ಕ್ಲಬ್ನಂಥ ಯಾವುದೇ ಚಟುವಟಿಕೆಗೆ ಉಪಯುಕ್ತವಾಗಿರುತ್ತದೆ. ಇದು PC ಯನ್ನು ಬಳಸಿಕೊಂಡು ಕಲಿಯಲು ವಿದ್ಯಾರ್ಥಿಗಳಿಗೆ ಒಂದು ಪರಿಣಾಮಕಾರಿಯಾದ ಮಾರ್ಗವಾಗಿರುವುದರಿಂದ ಭಾರತದಾದ್ಯಂತ ಶಾಲೆಗಳಲ್ಲಿ ನಿಧಾನವಾಗಿ ಮೈಗೂಡುತ್ತಿರುವ ಪ್ರವೃತ್ತಿಯಾಗಿದೆ.
ಡಿಜಿಟಲ್ ನೇಟಿವ್ ಸ್ಟೂಡೆಂಟ್ಗಾಗಿನ ಸಂದರ್ಭ
ಡಿಜಿಟಲ್ ನೇಟಿವ್ ಸ್ಟೂಡೆಂಟ್ ಎಂದರೆ ಯಾರು?
ನಿಮ್ಮ ಎಲ್ಲ ವಿದ್ಯಾರ್ಥಿಗಳು.
ಇಂದಿನ ಮಕ್ಕಳು PC ಯನ್ನು ಯಾವಾಗಲೋ ಒಮ್ಮೆ ಮಾತ್ರ ಬಳಸುತ್ತಿಲ್ಲ, ಅವರು ಅದರೊಟ್ಟಿಗೇ ಬೆಳೆಯುತ್ತಿದ್ದಾರೆ. ಅದು ಅವರ ದೈನಂದಿನ ಅಧ್ಯಯನ ನಿತ್ಯಕ್ರಮದ ಸಹಜ ಭಾಗವಾಗಿಬಿಟ್ಟಿದೆ ಹಾಗೂ ಹಾಗಾಗಬೇಕೂ ಕೂಡಾ. ಶಾಲೆಗೆ ನಿಮ್ಮದೇ ಆದ PC ಯನ್ನು ತರುವುದು ತನ್ನದೇ ಆದ ಅನುಕೂಲತೆಗಳನ್ನು ಹೊಂದಿದೆ. ಮಗುವು ಬೆಳೆದಂತೆಲ್ಲ ಹೆಚ್ಚು ಹೆಚ್ಚು ಪ್ರಯೋಜನಗಳನ್ನು ಒದಗಿಸುತ್ತದೆ. ನಿಮ್ಮ ಶಾಲೆಯಲ್ಲಿ BYOD ಯನ್ನು ನೀವು ಏಕೆ ಉತ್ತೇಜಿಸಬೇಕು ಎಂಬುದಕ್ಕೆ ಕಾರಣಗಳನ್ನು ಇಲ್ಲಿ ನೀಡಲಾಗಿದೆ:
1) ತಮ್ಮದೇ ಆದ PC ಯನ್ನು ಬಳಸುವುದು ವಿದ್ಯಾರ್ಥಿಗಳಿಗೆ ಅತ್ಯಂತ ಅನುಕೂಲಕರವಾಗಿರುವುದರಿಂದ ಅವರು ಸಂತೋಷದಿಂದ ಇರುತ್ತಾರೆ
2) ಮೂಲವಿಷಯಗಳನ್ನು ಕಂಡುಕೊಳ್ಳಲು ತರಗತಿಯಲ್ಲಿ ಸಮಯವು ವ್ಯರ್ಥವಾಗುವುದಿಲ್ಲ ಉದಾಹರಣೆಗೆ PC ಯನ್ನು ಸ್ಟಾರ್ಟ್ ಮಾಡುವುದು ಅಥವಾ ಫೈಲ್ಗಳನ್ನು ಸೇವ್ ಮಾಡುವುದು, ಏಕೆಂದರೆ ವಿದ್ಯಾರ್ಥಿಗಳು ಈ ವಿಷಯಗಳನ್ನು ಮನೆಯಲ್ಲಿಯೇ ಗ್ರಹಿಸುತ್ತಾರೆ.
3) ವಿದ್ಯಾರ್ಥಿಗಳು ನಿಯಂತ್ರಣದಲ್ಲಿರುವುದರಿಂದ, ಅವರು ಹೆಚ್ಚು ಜಾಗರೂಕರಾಗಿದ್ದು, ತರಗತಿಯಲ್ಲಿ ಗಮನವನ್ನು ಕೇಂದ್ರೀಕರಿಸಬೇಕಾಗುತ್ತದೆ, ಪರಿಣಾಮವಾಗಿ ಒಂದು ಸಕಾರಾತ್ಮಕವಾದ ಹಾಗೂ ಉತ್ಪಾದಕ ಕಲಿಕಾ ಅನುಭವ ಉಂಟಾಗುತ್ತದೆ.
ಶಿಕ್ಷಕರು ಇದರಿಂದ ಹೇಗೆ ಪ್ರಯೋಜನ ಪಡೆದುಕೊಳ್ಳಬಹುದು?
ತಮ್ಮ ವಿದ್ಯಾರ್ಥಿಗಳಿಗಾಗಿನ BYOD ಯಿಂದ ಶಿಕ್ಷಕರೂ ಸಹ ಪಡೆದುಕೊಳ್ಳಬಹುದಾದ ಅನೇಕ ಪ್ರಯೋಜನಗಳಿವೆ. ಇದು ಸಂಪೂರ್ಣ ತರಗತಿಗೆ PC-ಎನೇಬಲ್ಡ್ ಅನುಭವವನ್ನು ಒದಗಿಸುವುದು ಮತ್ತು ಸಾಮಾನ್ಯಕ್ಕಿಂತ ಹೆಚ್ಚು ತೊಡಗಿಕೊಳ್ಳುವಂತೆ ಮಾಡುವುದಷ್ಟೇ ಅಲ್ಲದೇ, ಒಬ್ಬ ವಿದ್ಯಾರ್ಥಿಯ ಸಾಮರ್ಥ್ಯಕ್ಕೆ ತಕ್ಕಂತೆ ಕಲಿಕಾ ಸಾಮಗ್ರಿಯನ್ನು ಕಸ್ಟಮೈಜ್ ಮಾಡುವಲ್ಲಿ ಶಿಕ್ಷಕರಿಗೂ ಸಹ ನೆರವಾಗುತ್ತದೆ. ಶಿಕ್ಷಕರು ವಿದ್ಯಾರ್ಥಿಗಳ ಕೆಲಸವನ್ನು ವಾಸ್ತವಿಕ-ಸಮಯದಲ್ಲಿ ಅವಲೋಕನ ಸಹ ಮಾಡಬಹುದು ಹಾಗೂ ಹೊಸ ಅಸೈನ್ಮೆಂಟುಗಳು ಮತ್ತು ಪ್ರಾಜೆಕ್ಟ್ಗಳನ್ನು ಸುಲಭವಾಗಿ ನೀಡಬಹುದು.
ಶಾಲೆಯು ಏನನ್ನು ಒದಗಿಸಬೇಕಾಗುತ್ತದೆ?
BYOD ಯ ಯಶಸ್ವೀ ಅನುಷ್ಠಾನಕ್ಕಾಗಿ, ಶಾಲೆಯೊಂದು ಇವುಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕಾಗುತ್ತದೆ:
1) ಚಾರ್ಜಿಂಗ್ ಸ್ಟೇಶನ್ಗಳು
2) ವೈ-ಫೈ ಪ್ರವೇಶಾವಕಾಶ
3) ವಿದ್ಯಾರ್ಥಿಗಳಿಗೆ ಅವಶ್ಯವಾದಾಗಲೆಲ್ಲ ಅವರಿಗೆ ನೆರವಾಗಬಲ್ಲ ಐಟಿ ತಂಡ
4) PC ಯನ್ನು ಅಧ್ಯಯನಕ್ಕಾಗಿ ಪರಿಣಾಮಕಾರಿಯಾಗಿ ಬಳಸುವುದಕ್ಕಾಗಿ ತರಬೇತಾಗಿರುವ ಶಿಕ್ಷಕರು
ಶಾಲೆಯ ಭಾಗದಲ್ಲಿ ಇದು ಬಹಳಷ್ಟು ಸಮಯ, ಪ್ರಯತ್ನ ಹಾಗೂ ಕಾಳಜಿಪೂರ್ವಕ ಯೋಜಿಸುವಿಕೆಯನ್ನು ಬೇಡುತ್ತದೆ, ಆದರೆ PC ಯ ನೆರವಿನೊಂದಿಗೆ ಕಲಿಯಲು ನಿಮ್ಮ ವಿದ್ಯಾರ್ಥಿಗಳು ಹೆಚ್ಚು ಉತ್ತೇಜಿತರಾಗುವುದರಿಂದ ಇವೆಲ್ಲವನ್ನೂ ಮಾಡುವುದು ಸಾರ್ಥಕವಾಗುತ್ತದೆ.
Aarambh is a pan-India PC for Education initiative engineered to enhance learning using the power of technology; it is designed to help parents, teachers and children find firm footing in Digital India. This initiative seeks to connect parents, teachers and students and provide them the necessary training so that they can better utilise the PC for learning, both at school and at home.
ಪಿಸಿ ಪ್ರೊ ಸರಣಿಗಳು: ನಿಮ್ಮ ಮಂಡನೆಗಳನ್ನು ಎದ್ದು ಕಾಣುವಂತೆ ಹೇಗೆ ಮಾಡಬಹುದು!
ಶಿಕ್ಷಕರ ದಿನ 2019: ಡೆಲ್ಆರಂಭ್ ಚಾಲನೆಗೆ ಒಂದು ವಿಶೇಷ ದಿನ
ನಿಮ್ಮ ವಿದ್ಯಾರ್ಥಿಗಳಿಗೆ ಇಷ್ಟವಾಗುವ 5 ಮೈಕ್ರೊಸಾಫ್ಟ್ ಆಫೀಸ್ ಲೆಸ್ಸನ್ ಪ್ಲ್ಯಾನ್ಗಳು
ತರಗತಿಯಲ್ಲಿ, ಕಲಿಯಲು ಪ್ರಯಾಸಪಡುತ್ತಿರುವ ವಿದ್ಯಾರ್ಥಿಗಳನ್ನು ಪ್ರೇರೇಪಿತಗೊಳಿಸುವ 5 ಮಾರ್ಗಗಳು
ಈಗ ಕ್ಲಾಸ್ರೂಮ್ಗಳನ್ನು ಇ-ಬುಕ್ಗಳೊಂದಿಗೆ ರೂಪಾಂತರಗೊಳಿಸುವ ಸಮಯ