ಅಳವಡಿಕೆಯಲ್ಲಿ ಎದುರಾಗುವ ಸವಾಲುಗಳು ಮತ್ತು ಮುಂದಿನ ಹೆಜ್ಜೆ

ಆರಂಭದಿಂದ, ನಾವು ಸುಮಾರು 1.5 ಮಿಲಿಯ ವಿದ್ಯಾರ್ಥಿಗಳ ಜೊತೆ ತೊಡಗಿಕೊಂಡಿದ್ದು, 70 ಪಟ್ಟಣಗಳ 5,000 ಕ್ಕೂ ಹೆಚ್ಚಿನ ಶಾಲೆಗಳ 1,00,000 ಶಿಕ್ಷಕರನ್ನು ತರಬೇತಿಗೊಳಪಡಿಸಿ ಅವರಿಗೆ ಪ್ರಮಾಣಪತ್ರ ನೀಡುವ ಗುರಿಯನ್ನು ಇರಿಸಿಕೊಂಡಿದ್ದೇವೆ.

ತರಬೇತಿಯ ಬಗ್ಗೆ ಶಿಕ್ಷಕರು ಸಕಾರಾತ್ಮಕ ಮನೋಭಾವ ಹೊಂದಿದ್ದಾರೆ ಎಂದು ಕಂಟರ್ ವರದಿಯ ಸಮೀಕ್ಷೆಗಳು ತಿಳಿಯಪಡಿಸಿವೆ.   ವಾರಾಂತ್ಯದ ತರಬೇತಿ, ವಿಷಯ, ತರಬೇತುದಾರರು ಮತ್ತು ತರಬೇತಿಯ ವಿಧಾನದ ಕುರಿತು ಅವರಿಗೆ ಸಂತೋಷವಿದೆ. 

ವಿದ್ಯಾರ್ಥಿಗಳು ಕಂಪ್ಯೂಟರ್ ಆಧಾರಿತ (ಪಿಪಿಟಿ) ಅಸೈನ್ಮೆಂಟುಗಳನ್ನು ಕೇಳತೊಡಗಿದರು, ಹಾಗೂ ಶಿಕ್ಷಕರು ಸ್ಮಾರ್ಟ್ ತರಗತಿಗಳಿಗೆ 100% ಹಾಜರಾತಿ  ಇರುತ್ತದೆಂದು ನಂಬಿದ್ದರು. ಮನೆಯಲ್ಲಿ ತಮ್ಮದೇ ಆದ ಕಂಪ್ಯೂಟರ್ ಗಳನ್ನು ಹೊಂದಿರದ ವಿದ್ಯಾರ್ಥಿಗಳು ಶಾಲೆಯಲ್ಲಿರುವ ಕಂಪ್ಯೂಟರುಗಳನ್ನು ತಮ್ಮ ಅಸೈನ್ಮೆಂಟು ಮತ್ತು ಗುಂಪು ಕಾರ್ಯಗಳಿಗಾಗಿ ಬಳಸುತ್ತಾರೆ.  

ಈ ಪ್ರಯಾಣದಲ್ಲಿ ಸವಾಲುಗಳಿರಲಿಲ್ಲ ಎಂದಲ್ಲ. ಕೆಲವು ಪೋಷಕರಿಗೆ ಲ್ಯಾಪ್ ಟಾಪ್/ಪಿಸಿ ಖರೀದಿಸಲು ಸಾಧ್ಯವಿರಲಿಲ್ಲ ಅಥವಾ ಅವರಲ್ಲಿ ಕೆಲವರಿಗೆ ಇಂಟರ್ನೆಟ್ ಸಮಸ್ಯೆಗಳು ಇರುತ್ತಿದ್ದವು. ಮಕ್ಕಳು ಪಿಸಿಯಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರು, ಇದರಿಂದ ಪಿಸಿ ಆಧಾರಿತ ಕಾರ್ಯಯೋಜನೆ/ಅಸೈನ್ಮೆಂಟುಗಳನ್ನು ನೀಡುವುದು ಕಷ್ಟವಾಗುತ್ತಿತ್ತು.

ಇದಕ್ಕೆ ವಿರುದ್ಧವಾಗಿ, ಶಿಕ್ಷಕರು ಕಾರ್ಯಕ್ರಮದ ಅವಧಿ ಮತ್ತು ಆವರ್ತನವನ್ನು ಹೆಚ್ಚಿಸಲು ಬಯಸುತ್ತಾರೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಅಪ್ಲಿಕೇಶನ್ ಗಳು/ ಪರಿಕರಗಳ ಬಗ್ಗೆ ತಿಳಿದುಕೊಳ್ಳುತ್ತಾರೆ.

 

 

ಭಾಗೀದಾರರಿಗೆ ಏನು ಬೇಕಾಗಿದೆ

84% ಶಿಕ್ಷಕರು ಆನ್ ಲೈನ್ ತರಬೇತಿಯೊಂದಿಗೆ ಆರಾಮವಾಗಿದ್ದಾರೆ, ಇದು ವಯಸ್ಸಿಗನುಗುಣವಾಗಿ ಕಡಿಮೆಯಾಗಬಹುದು. ಬದಲಾಗುತ್ತಿರುವ  ಸಮಯದಿಂದಾಗಿ ಆನ್ ಲೈನ್ ತರಬೇತಿಯಲ್ಲಿ ಪ್ರಾಂಶುಪಾಲರು ಆಸಕ್ತಿ ತೋರಿಸುತ್ತಿದ್ದಾರೆ. ತಾವೇ ಕೈಯಾರ ಮಾಡುವ ತರಬೇತಿ ಆಧಾರಿತ ಮತ್ತು ಅನುಮಾನ ಪರಿಹರಿಸುವ ತರಗತಿಗಳಿಗೆ ಆಫ್ ಲೈನ್ ತರಬೇತಿಯ ಆದ್ಯತೆ ನೀಡಲಾಗುತ್ತದೆ.   

 

ಎದುರು ನೋಡುವಂತಹದ್ದು

ನಾವು ಬದಲಾವಣೆಗಳನ್ನು ಮೂರು ಪಟ್ಟು ಜಾರಿಗೆ ತರುತ್ತೇವೆ-

  • ಮರು ತರಬೇತಿ-

ಪಿಸಿ ಪ್ರಾವೀಣ್ಯತೆ ಮತ್ತು ಬಳಕೆಯು ವಯಸ್ಸಿನೊಂದಿಗೆ ಕಡಿಮೆಯಾಗುತ್ತದೆ, ಆದ್ದರಿಂದ ನಾವು ಹಿರಿಯ ಶಿಕ್ಷಕರಿಗೆ ವಿಶೇಷ ತರಬೇತಿ ತರಗತಿಗಳನ್ನು ಆಯೋಜಿಸುತ್ತೇವೆ.

  • ಸೆಮಿನಾರ್ ಗಳನ್ನು ನಡೆಸುವುದು-

ಕಂಪ್ಯೂಟರ್ ಆಧಾರಿತ ಶಿಕ್ಷಣದ ಪ್ರಯೋಜನಗಳ ಬಗ್ಗೆ ಪೋಷಕರಿಗೆ ತಿಳಿಸಿಕೊಡಲು ತಿಳುವಳಿಕೆ ಉಪಕ್ರಮಗಳಿಗೆ ಶಿಕ್ಷಕರು ಮತ್ತು ಕಾರ್ಯನಿರ್ವಾಹಕ ಮಂಡಳಿ ಬೆಂಬಲಿಸಬಹುದು.

  • ಸಲಹೆಗಳನ್ನು ಅಳವಡಿಸಿಕೊಳ್ಳುವುದು-

84% ಶಿಕ್ಷಕರು ಆನ್ ಲೈನ್ ತರಬೇತಿಯ ಬಗ್ಗೆ ಆರಾಮವಾಗಿರುವುದರಿಂದ ಮತ್ತು ಅದು ತಂದ ಗ್ರಹಿಕೆ ಮತ್ತು ವರ್ತನೆಯ ಬದಲಾವಣೆಯನ್ನು ಇಷ್ಟಪಟ್ಟಿರುವುದರಿಂದ ನಾವು ಇದನ್ನು ಮುಂದುವರಿಸುತ್ತೇವೆ.

ಮುಂದಿನ ವರ್ಷಗಳಲ್ಲಿ ಭಾರತವು ಪಿಸಿ ಸ್ನೇಹಿ ಜನಸಂಖ್ಯೆಯನ್ನು ಹೊಂದಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ಬದಲಾವಣೆಯ ಅಭಿಯಾನ, ಹೆಚ್ಚಿನ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವಿಕೆ ಮತ್ತು ಹೆಚ್ಚಿನ ಶಿಕ್ಷಕರಿಗೆ ತರಬೇತಿಯಂತಹವುಗಳನ್ನು ಎದುರು ನೋಡುತ್ತಿದ್ದೇವೆ.