ಡೆಲ್ ಆರಂಭ್: ಏಕೆ, ಏನು ಮತ್ತು ಹೇಗೆ - ಈವರೆಗಿನ ಪ್ರಯಾಣ

 

ಜೂನ್ 6, 2016 - ಈ ಸುದಿನ ನಿರ್ದಿಷ್ಟವಾಗಿ ಟೈರ್ 2 ರಿಂದ ಟೈರ್ 4 ನಗರಗಳಾದ ಮೀರತ್, ರಾಂಚಿ ಮತ್ತು ನಾಸಿಕ್&zwjನಂತಹ ನಗರಗಳನ್ನು ಗುರಿಯಾಗಿಸಿಕೊಂಡು, ದೇಶಾದ್ಯಂತದ ನಗರಗಳಲ್ಲಿ ಪಿಸಿ ಶಿಕ್ಷಣವನ್ನು ಒದಗಿಸಲು ನಾವು ಭಾರತದಾದ್ಯಂತ ಡೆಲ್ ಆರಂಭ್ ಅನ್ನು ಪ್ರಾರಂಭಿಸಿದ ದಿನ.

2016 ರಲ್ಲಿ, ಭಾರತದಲ್ಲಿ ದೂರಸಂಪರ್ಕ ಸಾಂದ್ರತೆಯು 50.63% 1 ಕ್ಕೆ ಏರಿತು, ಆದರೆ ಗ್ರಾಮೀಣ ಪ್ರದೇಶದ ಜನರಿಗೆ ತಂತ್ರಜ್ಞಾನದ ಬಗ್ಗೆ ಇನ್ನೂ ಅಷ್ಟಾಗಿ ಅರಿವಿರಲಿಲ್ಲ, ಮತ್ತು ಅಂತಹ ಸಮಯದಲ್ಲಿ ನಾವು ಪಾದಾರ್ಪಣ ಮಾಡಿದೆವು.

ಹಾಗೆ ಮಾಡಲು, ನಾವು ಸಾಂಪ್ರದಾಯಿಕ ಸ್ವರೂಪದ ಕಲಿಕೆಯಿಂದ ದೂರವಿರಬೇಕಾಗಿತ್ತು ಮತ್ತು ಆಕರ್ಷಕವಾಗಿ ಮತ್ತು ಪರಿಣಾಮಕಾರಿಯಾಗಿರುವ ಒಂದು ರೀತಿಯ ಕಲಿಕೆಯತ್ತ ಸಾಗಬೇಕಾಯಿತು. ತಾಯಂದಿರು, ಶಿಕ್ಷಕ ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳಿಗೆ ಪಿಸಿ ಕೌಶಲ್ಯಗಳನ್ನು ಮೋಜಿನಿಂದ, ಆಕರ್ಷಕವಾಗಿ ಮತ್ತು ಸ್ವತಃ ಕಲಿಯುವ ರೀತಿಯಲ್ಲಿ ಕಲಿಸಲು ನಾವು ಶಿಕ್ಷಕರ ಗುಂಪಿನೊಂದಿಗೆ ಒಂದು ಸಂಪರ್ಕಜಾಲವನ್ನು ಅಭಿವೃದ್ಧಿಪಡಿಸಿದ್ದೇವೆ.

ಹಾಗಾದರೆ ನಮ್ಮ ಪ್ರಯಾಣ ಹೇಗಿತ್ತು?

ನಮ್ಮ ಪ್ರಯಾಣವು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ತಾಯಂದಿರಿಗೆ ಪಿಸಿ ಬಳಸಲು ಬೇಕಾದ ಜ್ಞಾನ, ಹಾಗೂ ಕಲಿಕೆಯ ಮೂಲಕ ಅವರ ಕೌಶಲ್ಯವನ್ನು ಹೆಚ್ಚಿಸಿ ಅವರನ್ನು ಸಬಲೀಕರಣಗೊಳಿಸುವತ್ತ ಗಮನ ಹರಿಸಿದೆ. ಶಿಕ್ಷಕರಲ್ಲಿ ತರಬೇತಿ ಮೌಲ್ಯವನ್ನು ಹೆಚ್ಚಿಸಲು ನಾವು ಶಿಕ್ಷಕರ ಮಾನ್ಯತೆ ಕೇಂದ್ರ (ಸೆಂಟಾ) ದೊಂದಿಗೆ ಪಾಲುದಾರಿಕೆ ಹೊಂದಿದ್ದೇವೆ ಮತ್ತು ಒಂದು ವಿನೋದಮಯ ಮತ್ತು ಸ್ಪರ್ಧಾತ್ಮಕವಾದ ಬೋಧನಾ ವೃತ್ತಿಪರರ ಒಲಿಂಪಿಯಾಡ್ ಅನ್ನು ಸಹ ಪ್ರಾರಂಭಿಸಿದ್ದೇವೆ.

ಪಾಲಿಸಿ ಹ್ಯಾಕ್ ಮೂಲಕ, ಶಿಕ್ಷಕರು ತರಗತಿಯ ಒಳಗೆ ಮತ್ತು ಹೊರಗೆ, ಎದುರಿಸುತ್ತಿರುವ ಸಮಸ್ಯೆಗಳಿಗೆ ನವೀನ ಪರಿಹಾರಗಳನ್ನು ಕಂಡುಹಿಡಿಯುವಂತೆ ನಾವು ಶಿಕ್ಷಣತಜ್ಞರಿಗೆ ಸವಾಲು ಹಾಕಿದ್ದೇವೆ. ಇದಲ್ಲದೇ, ಟಾಟಾ ಕ್ಲಾಸ್ ಎಡ್ಜ್ ನೊಂದಿಗಿನ ನಮ್ಮ ಸಹಭಾಗಿತ್ವವು ಶಾಲೆಗಳಿಗೆ ಡಿಜಿಟಲ್ ತರಬೇತಿಯನ್ನು ಒದಗಿಸಲು ಅನುವು ಮಾಡಿಕೊಡುತ್ತದೆ, ಇದರಿಂದಾಗಿ ನಾವು ತರಗತಿಗಳಲ್ಲಿ ತಂತ್ರಜ್ಞಾನವನ್ನು ಕಾರ್ಯಗತಗೊಳಿಸಲು ಅಗತ್ಯವಾದ ಜ್ಞಾನವನ್ನು ಶಿಕ್ಷಕರಿಗೆ ಒದಗಿಸಬಹುದು.

ಹಾಗಾದರೆ ಭವಿಷ್ಯ ಹೇಗಿದೆ?

ಮೂರು ವರ್ಷಗಳಾಯಿತು, ನಾವು, ಯುನೆಸ್ಕೋ-ಎಂಜಿ ಐ ಇಪಿ ಅಭಿವೃದ್ಧಿಪಡಿಸಿದ ತರಬೇತಿ ವಿಷಯದೊಂದಿಗೆ ಫ್ರೇಮರ್ ಸ್ಪೇಸ್ ಪ್ಲಾಟ್ ಫಾರ್ಮ್ ಮೂಲಕ ಶಿಕ್ಷಕರಿಗೆ ತರಬೇತಿ ನೀಡಲು, ಯುನೆಸ್ಕೋ ಮಹಾತ್ಮಾ ಗಾಂಧಿ ಶಾಂತಿ ಮತ್ತು ಸುಸ್ಥಿರ ಅಭಿವೃದ್ಧಿ ಶಿಕ್ಷಣ ಸಂಸ್ಥೆ[ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ಫಾರ್ ಪೀಸ್ ಅಂಡ್ ಸಸ್ಟೈನಬಲ್ ಡೆವಲಪ್ ಮೆಂಟ್] (ಯುನೆಸ್ಕೋ-ಎಂಜಿ ಐ ಇಪಿ) ಯೊಂದಿಗೆ ಸಹಭಾಗಿತ್ವವನ್ನು ಮಾಡಿಕೊಂಡಿದ್ದೇವೆ. ಇದು ಮೂರು ದಿನಗಳ ಕಾರ್ಯಾಗಾರವಾಗಿದ್ದು, ಇದಾದ ನಂತರ 200 ಗಂಟೆಗಳ ಆನ್ ಲೈನ್ ತರಬೇತಿ ನಡೆಯಲಿದೆ.

ಮತ್ತು ಇಷ್ಟೇ ಅಲ್ಲ&hellip

ಇದುವರೆಗೆ 4,507 ಶಾಲೆಗಳು ಇದರ ಪ್ರಯೋಜನ ಪಡೆಯುವುದರೊಂದಿಗೆ, 83,501 ಶಿಕ್ಷಕರು ತರಬೇತಿ ಹೊಂದಿದ್ದು ಪ್ರಮಾಣ ಪತ್ರ ಪಡೆದಿದ್ದಾರೆ ಮತ್ತು 1,13,708 ತಾಯಂದಿರು ತರಬೇತಿ ಪಡೆದಿದ್ದಾರೆ, ಹೀಗೆ ಈ ತರಬೇತಿಗಳು ನಮ್ಮ ದೇಶಾದ್ಯಂತ ವ್ಯಾಪಕ ಪರಿಣಾಮವನ್ನು ಸೃಷ್ಟಿಸಿವೆ. ಭವಿಷ್ಯದೆಡೆ ನೋಟ ಬೀರಿದರೆ, 2020 ವರ್ಷವು ಆರಂಭ್ ಗೆ ಒಂದು ನಿರ್ಣಾಯಕ ವರ್ಷವಾಗಲಿದೆ, ಏಕೆಂದರೆ ಈ ತರಬೇತಿ ಪಡೆದ ಶಿಕ್ಷಕರು ಈಗ ಹೆಚ್ಚಿನ ಜನರಿಗೆ ತರಬೇತಿ ನೀಡಲು ಸಾಧ್ಯವಾಗುತ್ತದೆ - ಇದು ಪಿಸಿಗಳನ್ನು, ಕೇವಲ ಶಿಕ್ಷಣಕ್ಕೆ ಮಾತ್ರವಲ್ಲದೆ ಜೀವನಕ್ಕೂ ಬಳಸುವುದಕ್ಕಾಗಿ ಸುಸಜ್ಜಿತ ಮತ್ತು ಆತ್ಮವಿಶ್ವಾಸ ಹೊಂದಿರುವ ವ್ಯಕ್ತಿಗಳ ಒಂದು ಸರಪಣಿಯನ್ನು ಸೃಷ್ಟಿಸುತ್ತದೆ.