#ಡಿಜಿಮೊಮ್ಸ್ - ನಿಮಗಾಗಿ ಇದೊಂದು ಮಾರ್ಗದರ್ಶಿ!

 

ನಿಮ್ಮ ಪ್ರೀತಿಯ ಪುಟ್ಟ ಪುಟಾಣಿಗಳ ಪಾಲಿಗೆ ಏಕೈಕ ಸುಪರ್ ವುಮನ್ ಹಾಗೂ ಮಾದರಿ ವ್ಯಕ್ತಿ ಎಲ್ಲವೂ ನೀವೇ ಅಗಿರುತ್ತೀರಿ. ನೀವು ಅವರ #ಡಿಜಿಮೊಮ್ ಕೂಡ ಆಗಿದ್ದೀರಿ ಎನ್ನುವುದನ್ನು ಮರೆಯದಿರೋಣ. ಆದ್ದರಿಂದ  ಆ ಕುರಿತು ನೀವು ಹೇಗೆ ಮುಂದುವರಿಯಬೇಕು?

 

1. ಸಹಾನುಭೂತಿಯು ಸಕಾರಾತ್ಮಕ ಪರಿಣಾಮವನ್ನು ತರುತ್ತದೆ

ನೀವು ಮೃದುಹೃದಯದ ಪ್ರತಿರೂಪವಾಗಿದ್ದೀರಿ, ನಿಜ, ನೀವೇ!

ಓರ್ವ ತಾಯಿಯಾಗಿ, ನೀವು ಬೆಳಿಗ್ಗೆ ಎಚ್ಚತ್ತು ಕಣ್ಣು ತೆರೆದ ಕ್ಷಣದಿಂದ ನಿಮ್ಮ ಕಂದನನ್ನು ತಡವಿ ಸುಖನಿದ್ರೆಯಲ್ಲಿ ಮಲಗಿಸುವ ತನಕ - ಪ್ರತಿ ನಿಮಿಷವೂ ಕೂಡ  ನಿಮ್ಮ ಮೃದುಹೃದಯಕ್ಕೆ ಸಾಕ್ಷಿಯಾಗಿರುತ್ತದೆ. ನಿಮ್ಮ ಮಗು  ನಿಮ್ಮೊಂದಿಗೆ ತನಗೆ ಬೇಕೆಂದು  ಬಹಳಷ್ಟನ್ನು ಕೇಳಲಿದೆ ಮತ್ತು ಟೆಕ್ ಸಂಬಂಧಿತ ಕೋರಿಕೆಗಳಂತೂ ನಿಮ್ಮನ್ನು ಎದೆಗುಂದಿಸಬಹುದು.ನೀವು ನಿಮ್ಮ ಮಗುವಿನ ಕೋರಿಕೆಗಳಿಗೆ  ಕಿವಿಗೊಡುತ್ತಿದ್ದೀರಿ ಎನ್ನುವ ಭಾವನೆ ಮೂಡಿಸುವುದನ್ನು ಸುನಿಶ್ಚಿತಪಡಿಸಲು  ಪ್ರತಿ ದಿನ ಟೆಕ್ ಸಮಯವನ್ನು ನಿಗದಿಪಡಿಸಿರಿ. ಇದು ಪಿಸಿ ಮತ್ತು ಮೊಬೈಲ್ ಎರಡನ್ನೂ ಒಳಗೊಂಡಿರಬಹುದು. ಈ ಸಮಯವು ಟೆಕ್ ಸಮಯ ಎಂದು ನಿಮ್ಮ ಮಗುವಿಗೆ ತಿಳುವಳಿಕೆಯಾದ ನಂತರ, ನಿಮ್ಮ ಮಗುವಿನಿಂದ ಯಾವುದೇ ಅನಿರೀಕ್ಷಿತ ಕೋರಿಕೆಗಳಿಗೆ ಆಸ್ಪದವಿರುವುದಿಲ್ಲ.

 

2. ತಾಳ್ಮೆ ಎನ್ನುವುದೊಂದು ಶಕ್ತಿ-ಅದನ್ನು ಬೆಳೆಸಿರಿ

ಪಿಸಿಯಲ್ಲಿ ನಿಮ್ಮ ಮಗುವಿಗಾಗಿ ಸರಿಯಾದ ಅಧ್ಯಯನದ ಮೂಲವನ್ನು ಆರಿಸಿಕೊಳ್ಳುವ ಸಂದರ್ಭದಲ್ಲಂತೂ ಇದು ವಿಶೇಷವಾಗಿ ಅನ್ವಯವಾಗುತ್ತದೆ. ನಿಮ್ಮ ಮಗು ನೋಡಬಾರದೆಂದು ನೀವು ಬಯಸುವ ಯಾವುದೇ ಮಾಹಿತಿ ಅಲ್ಲಿ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಮಗುವಿಗೆ ಅದನ್ನು ಉಪಯೋಗಿಸಲು ಅನುವು ಮಾಡುವ ಮೊದಲು ಪ್ರತಿಯೊಂದು ವೆಬ್ ಸೈಟ್ ಅನ್ನು ಕೂಲಂಕಷವಾಗಿ  ನೋಡಿರಿ. ನೀವು ಎಚ್ಚರಿಕೆ ವಹಿಸಬೇಕಾದ ಇನ್ನೊಂದು ವಿಷಯವೆಂದರೆ ’’ ನಕಲಿ ಸುದ್ಧಿ ’’ ಮತ್ತು ಡೇಟಾದ  ಕುರಿತಾಗಿದ್ದು, ನಿಮ್ಮ ಮಗುವಿಗೆ ಸತ್ಯ ಸಂಗತಿ ಮತ್ತು ಕಾಲ್ಪನಿಕ ಸಂಗತಿ ಗಳನ್ನು ಪ್ರತ್ಯೇಕಿಸುವುದು ಹೇಗೆ ಎಂದು ಕಲಿಸುವುದು ಕೂಡ ಮುಖ್ಯವಾಗಿರುತ್ತದೆ.

 

3. ಗಮನವಿಟ್ಟು ಆಲಿಸಿರಿ

ನಿಮ್ಮ ಮಗುವಿಗೆ ಪ್ರಶ್ನೆಗಳಿರುತ್ತವೆ, ಅವುಗಳನ್ನು ಒಂದೋ ನೀವು ಉತ್ತರಿಸಬೇಕು, ಇಲ್ಲವೇ ಇಂಟರ್ ನೆಟ್ ಉತ್ತರಿಸುತ್ತದೆ. ಇಂಟರ್ ನೆಟ್ ಬೇಗನೇ ಉತ್ತರ ನೀಡುತ್ತದೆ ಆದರೆ ಅದು ಸರಿಯಾಗಿರದೇ ಇರಬಹುದು. ಈ ಸಂದರ್ಭದಲ್ಲಿ ಅತ್ಯುತ್ತಮವಾಗಿ  ನೀವು ಮಾಡಬೇಕಾಗಿರುವುದೆಂದರೆ ಕೇವಲ ಮಗುವಿಗೆ ಸುಲಭವಾಗಿ ಲಭ್ಯವಿರುವುದು ಮತ್ತು ಗಮನವಿಟ್ಟು ಕೇಳುವುದಷ್ಟೇ.

ಪ್ರತಿಯೋರ್ವ ತಾಯಿ ಒಂದು ತಾಳೆಪಟ್ಟಿಯನ್ನು ಶಿಸ್ತುಬದ್ಧವಾಗಿ ಅನುಸರಿಸುತ್ತಾಳೆ ಮತ್ತು ಡಿಜಿಟಲ್ ಪೇರೆಂಟಿಂಗ್ ಕೂಡ ಇದಕ್ಕೆ ಹೊರತಲ್ಲ. ನೀವು ವಿಷಯಗಳನ್ನು ಆಯ್ದು ನಿಮ್ಮ ತಾಳೆಪಟ್ಟಿಯನ್ನು ಸರಿಪಡಿಸಿ ಪರಿಷ್ಕರಿಸಿಕೊಂಡಿರೆಂದರೆ  ಬಹು ಬೇಗನೇ ನೀವೊಬ್ಬ ಡಿಜಿಟಲ್ ಪೇರೆಂಟಿಂಗ್ ಪ್ರೊ ಆಗಿ ಬಿಡುತ್ತೀರಿ!  ಅದಕ್ಕೆಂದೇ  ಸ್ವಲ್ಪ ಸಮಯವನ್ನು ತೆಗೆದಿರಿಸುವುದು ಮತ್ತು ನಿಮಗೆ ಹಾಗೂ ನಿಮ್ಮ ಇಡೀ ಕುಟುಂಬಕ್ಕೆ ಒಂದು ಪಿಸಿಯಿಂದ ದೊರೆಯಬಹುದಾದ ಗರಿಷ್ಠ ಉಪಯೋಗವನ್ನು ಪಡೆಯುವುದು ಇಲ್ಲಿ ಮುಖ್ಯವಾಗಿರುತ್ತದೆ. ಹ್ಯಾಪೀ ಡಿಜಿಟಲ್ ಪೇರೆಂಟಿಂಗ್ !