ಗೂಗಲ್ ಸೇಫ್ ಸರ್ಚ್ ಬಗ್ಗೆ ನೀವು ತಿಳಿದುಕೊಂಡಿರಬೇಕಾದ ವಿಷಯಗಳು

 

ನಾವು ವಾಸಿಸುತ್ತಿರುವ ಇಂಟರ್ನೆಟ್ ಯುಗದಲ್ಲಿ, ಮಾಹಿತಿ ಎಂಬುದು ಕೆಲವೇ ಟ್ಯಾಪ್ ಗಳ ದೂರದಲ್ಲಿದೆ. ಇಂಟರ್ನೆಟ್ ಎಂಬುದು ನಿಮ್ಮ ಮಕ್ಕಳಿಗೆ ಸಮೃದ್ಧ ಮಾಹಿತಿಯ ಮೂಲವಾಗಬಹುದಾದಂತೆಯೇ, ಮಕ್ಕಳ ಚಿಕ್ಕ, ಅಚ್ಚೊತ್ತಬಹುದಾದ ಮನಸ್ಸುಗಳಿಗೆ ಅದು ಅಸುರಕ್ಷಿತವಾದಂಥ ಮಾಹಿತಿಯ ಒಂದು ಕತ್ತಲುಭರಿತ ಶೂನ್ಯವೂ ಸಹ ಆಗಬಲ್ಲದು. ಓರ್ವ ಡಿಜಿಟಲ್ ಪಾಲಕರಾಗಿ, ಆನ್ಲೈನ್ ನಲ್ಲಿ ಅವರು ಸುರಕ್ಷಿತರಾಗಿರುವುದನ್ನು ಮತ್ತು ಆರೋಗ್ಯದಿಂದಿರುವುದನ್ನು ಖಚಿತಪಡಿಸಿಕೊಳ್ಳಲು ಅವರ ಆನ್ಲೈನ್ ಹುಡುಕಾಟ ನಡವಳಿಕೆಯ ಮೇಲಿನ ಸಂರಕ್ಷಕರು ನೀವಾಗಿರುತ್ತೀರಿ. ಈ ಅಗಾಧ ಕಾರ್ಯವನ್ನು ಗೂಗಲ್ ನ ಒಂದು ಸರಳವಾದ ಹಾಗೂ ಪರಿಣಾಮಕಾರಿಯಾದ ಸಾಧನದಿಂದ ಕೈಗೊಳ್ಳಬಹುದು, ಅದುವೇ - ಸೇಫ್ ಸರ್ಚ್.

ಇಂಟರ್ನೆಟ್ ನಲ್ಲಿ ಗೂಗಲ್ ಎಂಬುದು ಮುಂಚೂಣಿಯಲ್ಲಿರುವ ಸರ್ಚ್ ಇಂಜಿನ್ ಆಗಿರುವುದರೊಂದಿಗೆ, ಅಸಮರ್ಪಕ ಸೈಟ್ ಗಳಿಗೆ ಅನಿರ್ಬಂಧಿತ ಪ್ರವೇಶಾವಕಾಶವನ್ನು ಒಂದು ಬಟನ್ ನ ಟ್ಯಾಪ್ ನಿಂದ ನೀವು ನಿಯಂತ್ರಿಸಬಹುದು.

 

ಆದರೆ ಮೊದಲು, ಅದೇನು?

ನಮ್ಮ ಬಹುಪಾಲು ಸಾಧನಗಳಲ್ಲಿ ಗೂಗಲ್ ಒಂದು ಆದ್ಯತೆಯ ಸರ್ಚ್ ಇಂಜಿನ್ ಆಗಿದ್ದು, ಸರ್ಚ್ ಫಲಿತಾಂಶಗಳ ಮೇಲೆ ಪಾಲಕರು ನಿಯಂತ್ರಣವನ್ನು ಹೊಂದಿದ್ದಾಗಲೂ, ಕೆಲವು ಸರ್ಚ್ ಕ್ವೈರಿಗಳು ಅಸಮರ್ಪಕ ವಿಷಯಸಾಮಗ್ರಿಯನ್ನು ತಂದು ಕೊಡಬಲ್ಲವು. ಸರ್ಚ್ ಫಲಿತಾಂಶಗಳಿಂದ ಇಂಥ ವಿಧದ ವಿಷಯಸಾಮಗ್ರಿಯನ್ನು (ಚಿತ್ರಗಳು ಮತ್ತು ವಿಡಿಯೋಗಳನ್ನೂ ಒಳಗೊಂಡು) ಫಿಲ್ಟರ್ ಮಾಡುವ ಮೂಲಕ ಇದನ್ನು ತಡೆಗಟ್ಟಲು ಸೇಫ್ ಸರ್ಚ್ ನೆರವಾಗುತ್ತದೆ, ಹಾಗೂ ನಿಜವಾಗಿಯೂ ಕೆಲಸ ಮಾಡುವ ಪೇರೆಂಟಲ್ ಕಂಟ್ರೋಲ್ ಗಳನ್ನು ಸೆಟ್ ಮಾಡಲು ಪಾಲಕರಿಗೆ ಗೂಗಲ್ ನೆರವಾಗುವ ಮುಖ್ಯ ಮಾರ್ಗಗಳಲ್ಲಿ ಇದು ಒಂದಾಗಿದೆ.

 

ಗೂಗಲ್ ಸೇಫ್ ಸರ್ಚ್ ಅನ್ನು ಹೇಗೆ ಸೆಟ್ ಮಾಡುವುದು?

  • ನಿಮ್ಮ ವೆಬ್ ಬ್ರೌಜರ್ ಗಳಲ್ಲಿ ಸೇಫ್ ಸರ್ಚ್ ಅನ್ನು ಆ್ಯಕ್ಟಿವೇಟ್ ಮಾಡಲು, ಗೂಗಲ್ ಸರ್ಚ್ ಸೆಟ್ಟಿಂಗ್ಸ್ ಪುಟ: google.com/preferences ಗೆ ಭೇಟಿ ನೀಡಿ.
  • “ಟರ್ನ್ ಆನ್ ಸೇಫ್ ಸರ್ಚ್” ಬಾಕ್ಸ್ ಅನ್ನು ಚೆಕ್ ಮಾಡಿ.
  • ಅದರ ಮುಂದೆ ಇರುವ ನೀಲಿ ಶಬ್ದಗಳು - “ಲಾಕ್ ಸೇಫ್ ಸರ್ಚ್” ಅನ್ನು ಕ್ಲಿಕ್ ಮಾಡಿ.
  • ನಿಮ್ಮ ಜಿಮೇಲ್ ಖಾತೆಗೆ ನೀವು ಈಗಾಗಲೇ ಲಾಗ್ ಇನ್ ಆಗಿಲ್ಲದಿದ್ದಲ್ಲಿ, ಸೇಫ್ ಸರ್ಚ್ ಸೆಟ್ಟಿಂಗ್ ಅನ್ನು ನೀವು ಲಾಕ್ ಮಾಡುವ (ಬ್ರೌಜ್ ಮಾಡುವ ಮೊದಲು ಸೇಫ್ ಸರ್ಚ್ ಅನ್ನು ಯಾರಾದರೂ ಆಫ್ ಮಾಡುವುದರಿಂದ ತಡೆಗಟ್ಟುವುದು) ಮೊದಲು ನೀವು ಲಾಗಿನ್ ಆಗಬೇಕಾಗುತ್ತದೆ.
  • ನಿಮ್ಮ ಬ್ರೌಜರ್ ಸೆಟ್ಟಿಂಗ್ ಅನ್ನೂ ಸಹ “ಆಲ್ವೇಯ್ಸ್ ಆ್ಯಕ್ಸೆಪ್ಟ್ ಕುಕೀಸ್” ಗೆ ನೀವು ಬದಲಾಯಿಸಬೇಕಾಗುತ್ತದೆ (ಇದನ್ನು ಹೇಗೆ ಮಾಡಬೇಕು ಎಂಬುದು ನಿಮಗೆ ತಿಳಿದಿರದಿದ್ದಲ್ಲಿ, ಒಂದು ಲಿಂಕ್ ಅನ್ನು ಗೂಗಲ್ ಒದಗಿಸುತ್ತದೆ).
  • ಇದನ್ನು ಮಾಡಿದ ನಂತರ, “ಲಾಕ್ ಸೇಫ್ ಸರ್ಚ್” ಬಟನ್ ಅನ್ನು ಕ್ಲಿಕ್ ಮಾಡಿ.


ಸೇಫ್ ಸರ್ಚ್ ಅನ್ನು ಹೇಗೆ ಆ್ಯಕ್ಟಿವೇಟ್ ಮಾಡಬೇಕು ಎಂಬುದು ನಿಮಗೆ ಈಗ ತಿಳಿದಿರುವುದರಿಂದ, ನಿಮ್ಮ ಮಕ್ಕಳು ಒಂದು ಸಕಾರಾತ್ಮಕವಾದ ಡಿಜಿಟಲ್ ಹೆಜ್ಜೆಗುರುತನ್ನು ಹೊಂದುವುದರ ಬಗ್ಗೆ ನೆಮ್ಮದಿಯುಕ್ತ ಭರವಸೆಯನ್ನು ನೀವು ತಳೆಯಬಹುದು.