ಪರೀಕ್ಷಾ ಜ್ವರ: ಪರೀಕ್ಷಾ ಒತ್ತಡವನ್ನು ನಿಭಾಯಿಸಲು ನಿಮ್ಮ ಮಗುವಿಗೆ ನೆರವಾಗಿ

 

ಪರೀಕ್ಷೆಗಳನ್ನೆದುರಿಸುವುದು ಒಂದು ಒತ್ತಡದಾಯಕವಾದ ವ್ಯವಹಾರ ಎಂಬುದು ನಮಗೆಲ್ಲರಿಗೂ ತಿಳಿದಿದೆ. ನಿಮ್ಮ ಮಕ್ಕಳು ದೊಡ್ಡವರಾದಂತೆ, ಆ ಒತ್ತಡವನ್ನು ಅವರು ಹೆಚ್ಚೆಚ್ಚು ಅನುಭವಿಸುತ್ತಾರೆ. ಇದು ವಿದ್ಯಾರ್ಥಿಗಳು ತಮ್ಮ ಶಕ್ತಿಯನ್ನು ಅಭ್ಯಾಸ ಮಾಡುವುದಕ್ಕಿಂತ ಹೆಚ್ಚಾಗಿ ಪರೀಕ್ಷೆಗಳ ಮೇಲೆ ಕೇಂದ್ರೀಕರಿಸುವುದಕ್ಕೆ ಕಾರಣವಾಗುತ್ತದೆ. ಸಮಾಧಾನಕರ ಸಂಗತಿ ಎಂದರೆ ನೀವು ಅವರಿಗೆ ನೆರವಾಗಬಹುದು – ಹೇಗೆ ಎಂಬುದು ಇಲ್ಲಿದೆ:

1) ದಿನನಿತ್ಯಕ್ರಮವನ್ನು ಇಷ್ಟಪಡುವುದಕ್ಕಾಗಿ

ನಿಮ್ಮ ಕೈಗಳಿಗೆ ಪರೀಕ್ಷಾ ವೇಳಾಪಟ್ಟಿ ಬಂದಾದ ನಂತರ, ಗೂಗಲ್ ಕ್ಯಾಲೆಂಡರ್ ಮತ್ತು ಆಸನಗಳಂಥ ಸಾಧನಗಳನ್ನು ಬಳಸಿಕೊಂಡು ಒಂದು ವಾಸ್ತವಿಕ ವೇಳಾಪಟ್ಟಿಯನ್ನು ರಚಿಸಿಕೊಳ್ಳಿ, ನಿಮ್ಮ ಮಗುವಿಗಾಗಿ ಟ್ಯೂಶನ್ಗಳು, ಕ್ರೀಡೆ ಮತ್ತು ಆಟದ ಸಮಯದ ಅಂಶಗಳೂ ಇದರಲ್ಲಿ ಒಳಗೊಳ್ಳಲಿ. ಅಧ್ಯಯನ ಸಮಯವನ್ನು ಅವಲೋಕಿಸುವ ಮೂಲಕ ಹಾಗೂ ಸಕಾಲಿಕ ವಿರಾಮಗಳೊಂದಿಗೆ ಪುರಸ್ಕರಿಸುವ ಮೂಲಕ, ನಿತ್ಯಕ್ರಮವೊಂದಕ್ಕೆ ಅಂಟಿಕೊಳ್ಳಲು ನಿಮ್ಮ ಮಗುವನ್ನು ಉತ್ತೇಜಿಸಿ.

2) ನಿಮ್ಮ ಮಗುವಿಗೆ ಯಾವುದು ಸೂಕ್ತವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಕಂಡುಕೊಳ್ಳಿ

PC ಯೊಂದನ್ನು ಹೊಂದಿರುವುದರೊಂದಿಗೆ, ನಿಮ್ಮ ಮಗುವಿಗೆ ಪಠ್ಯಪುಸ್ತಕಗಳಷ್ಟೇ ಪರೀಕ್ಷೆಗಳಿಗೂ ಮೊದಲಿನ ರಿವಿಜನ್ ಟೂಲ್ ಆಗಿ ಉಳಿಯುವುದಿಲ್ಲ. ಯೂಟ್ಯೂಬ್ ಎಜುಕೇಶನ್ನಲ್ಲಿನ ವಿಡಿಯೋಗಳು, ಎಜುಕೇಶನ್ ವರ್ಲ್ಡ್ನ ವರ್ಕ್ಶೀಟ್ಗಳು, ಓದಿಗಾಗಿ ಗೂಗಲ್ ಸ್ಕಾಲರ್ – ಹೀಗೆ ವಿಷಯ ಸಾಮಗ್ರಿಯ ಆಳಕ್ಕೆ ಇಳಿಯಲು ನಿಮ್ಮ ಮಗುವಿನ ಮುಂದೆ ಹಲವಾರು ಮಾರ್ಗಗಳಿರುತ್ತವೆ. ಅವರಿಗೆ ಯಾವುದು ಸೂಕ್ತವಾಗುತ್ತದೆ ಎಂಬುದನ್ನು ಕಂಡುಕೊಳ್ಳುವುದು ಹಾಗೂ ಅದನ್ನೇ ಮುಂದುವರಿಸುವುದಷ್ಟೇ ನಿಮ್ಮ ಮಕ್ಕಳು ಮಾಡಬೇಕಾದ ಕೆಲಸವಾಗಿರುತ್ತದೆ.

3) ಸಹಾಯ ಮಾಡಿ, ಆದರೆ ಮಿತವಾಗಿ ಮಾಡಿ

ನಿಮ್ಮ ಮಕ್ಕಳಿಗಾಗಿ, ವಿಶೇಷವಾಗಿ ನೈತಿಕ ಬೆಂಬಲಕ್ಕಾಗಿ ಅವರ ಜೊತೆ ಇರಿ, ಆದರೆ ಸಮಸ್ಯೆಯನ್ನು ಪರಿಹರಿಸಲು ಸ್ವತಃ ತಾವೇ ಕೆಲವು ಪ್ರಯತ್ನಗಳನ್ನು ಮಾಡಿದ ನಂತರವಷ್ಟೇ ಅವರ ಸಮಸ್ಯೆಗಳನ್ನು ಪರಿಹರಿಸಿ. ಒಂದು ಸ್ವತಂತ್ರ ಹಾಗೂ ಮಾಡಬಲ್ಲೆ ಎಂಬು ಮನಸ್ಥಿತಿಯನ್ನು ಇದು ಸೃಷ್ಟಿಸುತ್ತದೆ, ಹಾಗೂ ಅವರಿಗೆ ಈಗಮಾತ್ರವಲ್ಲದೇ, ಭವಿಷ್ಯದಲ್ಲಿಯೂ ಸಹ ಅವರಿಗೆ ನೆರವಾಗುತ್ತದೆ.

4) ಆಟದ ಸಮಯವನ್ನು ಆನಂದಿಸಲು ಬಿಡುವುದನ್ನು ಮರೆಯಬೇಡಿ

ಆಟದ ಸಮಯವನ್ನು ಪರಿಕ್ಷೆಗಳು ಮುಗಿದ ನಂತರ ಮಾತ್ರ ಆನಂದಿಸತಕ್ಕದ್ದು ಎಂಬುದಾಗಿ ಬಹಳಷ್ಟು ಪಾಲಕರು ಯೋಚಿಸತೊಡಗುತ್ತಾರೆ. ಆದರೆ, ಕ್ರೀಡೆಗಳನ್ನು ಮತ್ತು ಸ್ಪೋರ್ಕಲ್ನಲ್ಲಿರುವಂಥ PC ಗೇಮ್ಗಳನ್ನು ಆಡುವುದಕ್ಕಾಗಿನ ಯೋಜಿತ ವಿರಾಮಗಳಿಂದ ಅವರ ಮನಸ್ಸು ಪ್ರಫುಲ್ಲವಾಗುವುದರಿಂದ ನಿಮ್ಮ ಮಗುವಿನ ಹೆಚ್ಚು ಉತ್ತಮವಾದ ಮತ್ತು ದೀರ್ಘ ಕಾಲದ ಏಕಾಗ್ರತೆಗೆ ನೆರವಾಗುತ್ತದೆ. ಅಭ್ಯಾಸಕ್ಕೆ ನಿಮ್ಮ ಮಗು ಸುಲಭವಾಗಿ ಮರಳಲು ಅನುವಾಗುವಂತೆ ವಿರಾಮಗಳು ಅರ್ಧ ಅಥವಾ ಒಂದು ಗಂಟೆಯಷ್ಟು ಮಾತ್ರ ಚಿಕ್ಕದಾಗಿರಬೇಕು ಎಂಬುದನ್ನು ಮಾತ್ರ ಮರೆಯಬೇಡಿ.

5) ಅಂತಿಮ ಫಲಿತಾಂಶದ ಬಗ್ಗೆ ಅತಿಯಾಗಿ-ಯೋಚಿಸುವುದನ್ನು ತಪ್ಪಿಸಿ

ನಿಮ್ಮ ಮಗುವಿಗೆ ಎಷ್ಟು ಅಂಕಗಳು ಬರುತ್ತವೆ ಎಂಬುದನ್ನು ಊಹಿಸಲು ಪರೀಕ್ಷೆಯ ನಂತರ ಪ್ರಶ್ನೆ ಪತ್ರಿಕೆಯನ್ನು ಅತಿಯಾಗಿ ವಿಶ್ಲೇಷಿಸುವುದು ತುಂಬಾ ಸಾಮಾನ್ಯವಾದ ರೂಢಿಯಾಗಿಬಿಟ್ಟಿದೆ. ಅಂದುಕೊಂಡ ಫಲಿತಾಂಶದ ಮೇಲೆ ಅವಲಂಬಿತವಾಗಿ ನಿಮ್ಮ ಮಗುವು ಅತಿಯಾದ ಆತ್ಮವಿಶ್ವಾಸವನ್ನು ಹೊಂದಬಹುದು ಅಥವಾ ಮುಂದಿನ ಪರೀಕ್ಷೆಗೆ ಸಂಪೂರ್ಣವಾಗಿ ನಿರುತ್ಸಾಹಗೊಳ್ಳಬಹುದಾದ್ದರಿಂದ ಇದು ಉತ್ಪಾದಕ-ವಿರೋಧಿ ಕ್ರಮವಾಗಿರುತ್ತದೆ.

ಪರೀಕ್ಷೆಗಳ ಬಗ್ಗೆ ನಿಮ್ಮ ಮಕ್ಕಳು ಅತಿಯಾದ ಒತ್ತಡಕ್ಕೆ ಒಳಗಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವ ಅತ್ಯುತ್ತಮ ಮಾರ್ಗವೆಂದರೆ ಅವರನ್ನು ಉತ್ಸಾಹಿತರನ್ನಾಗಿ ಮಾಡುವ ವಿಷಯ ಯಾವುದೆಂಬುದನ್ನು ತಿಳಿದುಕೊಂಡು, ಅವರನ್ನು ಉತ್ತೇಜಿತರನ್ನಾಗಿ ಇರಿಸಲು PC ಯ ಬಹುಪಾಲು ಉಪಯೋಗವನ್ನು ಪಡೆದುಕೊಳ್ಳುವುದು ಆಗಿರುತ್ತದೆ.