ಶಿಕ್ಷಕರಿಗಾಗಿ ಐದು ‘ಮರಳಿ ಶಾಲೆಗೆ’ ಅವಶ್ಯಕತೆಗಳು

 

 

ಹೊಸ ಶೈಕ್ಷಣಿಕ ವರ್ಷವೊಂದರ ಆರಂಭವು ವಿದ್ಯಾರ್ಥಿಗಳಿಗಾಗುವಷ್ಟರ ಮಟ್ಟಿಗೇ ಶಿಕ್ಷಕರಿಗೂ ಸಹ ಒತ್ತಡಪೂರ್ಣವಾಗಿರಬಲ್ಲದು. ಬಿಡುವುರಹಿತ ದಿನಗಳು, ಮೌಲ್ಯಮಾಪನ ಮಾಡಬೇಕಿರುವ ರಾಶಿಗಟ್ಟಲೇ ಉತ್ತರಪತ್ರಿಕೆಗಳು ಹಾಗೂ ಕಲಿಸಬೇಕಿರುವ ಪಾಠಗಳ ಬಗ್ಗೆ ಹೆಚ್ಚೇನನ್ನೂ ನೀವು ಮಾಡಲಾಗದಿದ್ದರೂ ಸಹ – ಈ ಮರಳಿ ಶಾಲೆಗೆ ಅವಶ್ಯಕತೆಗಳು ಪ್ರತಿಯೊಂದನ್ನೂ ನಿಮಗೆ ತುಂಬಾ ಸುಲಭವನ್ನಾಗಿಸುತ್ತವೆ.

1. ಪ್ಲ್ಯಾನರ್

ಪಾಠಗಳು, ಸಭೆಗಳು ಮತ್ತು ಅಪಾಯಿಂಟ್ಮೆಂಟುಗಳ ಜಾಡನ್ನು ಇರಿಸಿಕೊಳ್ಳಲು ಒಂದು ಉತ್ತಮ ಪ್ಲ್ಯಾನರ್ ಪ್ರತಿಯೊಬ್ಬ ಶಿಕ್ಷಕರಿಗೂ ಬೇಕಾಗುತ್ತದೆ. ಮುಂಬರಲಿರುವ ವಾರ ಅಥವಾ ತಿಂಗಳಿನಲ್ಲಿ ಮಾಡಬೇಕಿರುವ ಕೆಲಸಗಳ ಮೇಲೆ ನೀವು ಕೇಂದ್ರೀಕೃತರಾಗಿರುವುದನ್ನು ಅಥವಾ ನಿಮ್ಮನ್ನು ನೀವು ಆಯೋಜಿಸಿಕೊಂಡು ಇರುವುದನ್ನು ಖಚಿತಪಡಿಸಿಕೊಳ್ಳಲು DayViewer ದಂಥ ಉಚಿತ ಆನ್ಲೈನ್ ಪ್ಲ್ಯಾನರ್ ಅನ್ನು ಪ್ರಯತ್ನಿಸಿ ನೋಡಿ. ನಿಮ್ಮ ಶಾಲೆಯಲ್ಲಿನ ಇತರ ಶಿಕ್ಷಕರು ಹಾಗೂ ಆಡಳಿತ ವಿಭಾಗದವರೊಂದಿಗೆ ಸಹಯೋಗ ಮಾಡಿಕೊಳ್ಳುವ ಆಯ್ಕೆಯನ್ನೂ ಸಹ ಪಿಸಿ ಟೂಲ್ಗಳು ನಿಮಗೆ ನೀಡುತ್ತವೆ.

2. ಲೇಖನ ಸಾಮಗ್ರಿ

ಮಾದರಿಯುತ ಕೆಂಪು ಪೆನ್, ಹಳದಿ ಹೈಲೈಟರ್ಗಳು, ಚಾಕ್, ವ್ಹೈಟ್ಬೋರ್ಡ್ ಮಾರ್ಕರ್ಗಳು, ಮತ್ತು ಸ್ಟಿಕ್ಕಿ ನೋಟ್ಗಳಂಥ ಮೂಲ ವಿಷಯಗಳು ಬಹುಶಃ ಅತ್ಯಂತ ಪ್ರಮುಖವಾಗಿರುತ್ತವೆ. ಕಲಿಸುವ ನಿಮ್ಮ ಎಲ್ಲ ಅಗತ್ಯಗಳಿಗಾಗಿ ಪ್ರತಿಯೊಂದನ್ನೂ ಲೇಬಲ್ ಮಾಡಿ, ವ್ಯವಸ್ಥಿತವಾಗಿ ಇರಿಸಿ, ಸುಲಭವಾಗಿ ಲಭ್ಯವಾಗುವಂತೆ ಮಾಡಲು ಬಿಳಿ ಲೇಬಲ್ಗಳನ್ನೂ ಸಹ ನೀವು ದಾಸ್ತಾನು ಮಾಡಿ ಇರಿಸಬಹುದು.

3. ಸುಧೃಢವಾದ ಹಾಗೂ ಸ್ಥಳಾವಕಾಶವಿರುವ ಬ್ಯಾಕ್ಪ್ಯಾಕ್

ಚಲಿಸುತ್ತಲೇ ಇರುವ ನಿಮ್ಮ ಜೀವನಶೈಲಿಗೆ ಸುಧೃಢವಾಗಿರುವ ಬ್ಯಾಕ್ಪ್ಯಾಕ್ ಒಂದು ಹೊಂದಿರಲೇಬೇಕಾದ ಅವಶ್ಯಕತೆಯಾಗಿರುತ್ತದೆ. ನಿಮ್ಮ ಪಿಸಿ, ಪೇಪರ್ಗಳು, ಊಟ, ಕುರುಕಲು, ಸ್ಟೇಷನರಿ ಮತ್ತು ಇತರ ದೈನಂದಿನ ಅವಶ್ಯಕತೆಗಳಿಗೆ ಒಂದು ಪರಿಪೂರ್ಣ ಸ್ಥಳಾವಕಾಶ ಬೇಕಿರುತ್ತದೆ, ಹಾಗಾಗಿ ಒಂದು ಬ್ಯಾಕ್ಪ್ಯಾಕ್ ಪಡೆದುಕೊಳ್ಳುವುದನ್ನು ಮರೆಯಬೇಡಿ!

4. ಪೆನ್ಡ್ರೈವ್

ತರಗತಿಯಿಂದ ತರಗತಿಗೆ ನೀವು ಓಡಾಡುವಾಗ ಅಥವಾ ಮುಂಬರಲಿರುವ ತರಗತಿಗಾಗಿ ಮನೆಯಲ್ಲಿ ಪ್ರೆಸೆಂಟೇಶನ್ಗಳು ಅಥವಾ ಅಸೈನ್ಮೆಂಟ್ಗಳನ್ನು ಸಿದ್ಧಪಡಿಸುವಾಗ ಪೆನ್ಡ್ರೈವ್ಗಳು ಅತ್ಯಂತ ಜಾಣತನದ ಆಯ್ಕೆಯಾಗಿರುತ್ತವೆ. ನಿಮ್ಮ ಬ್ಯಾಕ್ಪ್ಯಾಕ್ನಲ್ಲಿ ಇರಿಸಿ, ನಿಮಗೆ ಅಗತ್ಯವಾದಾಗಲೆಲ್ಲ ನಿಮ್ಮ ಎಲ್ಲ ಪಠ್ಯ ಸಂಪನ್ಮೂಲಗಳು ನಿಮ್ಮ ಅಂಗೈಯಲ್ಲಿಯೇ ಇರುವುದನ್ನು ಖಚಿತಪಡಿಸಿಕೊಳ್ಳಲು ಅವುಗಳು ಅತ್ಯಂತ ಸುಲಭವಾಗಿರುತ್ತವೆ!

5. ಪೋರ್ಟೇಬಲ್ ಡೆಸ್ಕ್ ಆರ್ಗನೈಜರ್

ವ್ಯವಸ್ಥಿತವಾಗಿ ಹೊಂದಿಸಿದ ಡೆಸ್ಕ್, ವ್ಯವಸ್ಥಿತವಾಗಿ ಹೊಂದಿಸಿದ ಮನಸ್ಸನ್ನು ಪ್ರತಿಫಲಿಸುತ್ತದೆ. ಮಕ್ಕಳಿಂದ ತುಂಬಿದ ತರಗತಿಯನ್ನು ನಿಭಾಯಿಸುವುದು ಸವಾಲಿನ ಕೆಲಸವೇ ಸರಿ, ನಿಮ್ಮ ಅಸ್ತವ್ಯಸ್ತ ಡೆಸ್ಕಿಗೆ ನಿಮ್ಮ ಉತ್ಪಾದಕತೆ ಹಾಗೂ ತಾಳ್ಮೆಯನ್ನು ನೀವು ಕಳೆದುಕೊಳ್ಳಬಯಸುವುದಿಲ್ಲ. ನಿಮ್ಮ ಸ್ಟೇಷನರಿ ಹಾಗೂ ಪೆನ್ಡ್ರೈವ್ನಿಂದ ಹಿಡಿದು ನಿಮ್ಮ ಫೋನ್ ಹಾಗೂ ಚಾರ್ಜರ್ನವರೆಗೆ ನಿಮ್ಮ ಎಲ್ಲ ಪ್ರಮುಖ ಸಾಮಗ್ರಿಗಳನ್ನು ಒಂದು ಉತ್ತಮ ಆರ್ಗನೈಜರ್ ಒಂದು ಸ್ಥಾನದಲ್ಲಿ ಹಿಡಿದಿರಿಸಿಕೊಳ್ಳುತ್ತದೆ – ಪ್ರತಿಯೊಂದನ್ನೂ ನೀವು ನೋಡಬಹುದಾದಂಥ ಸ್ಥಳದಲ್ಲಿ ಇರಿಸುತ್ತದೆ!

ಕೆಲವು ಅವಶ್ಯಕತೆಗಳನ್ನು ಈಗ ನಾವು ಪೂರೈಸಿರುವುದರಿಂದ, ಬಹಳಷ್ಟು ಸಮಯ ಹಾಗೂ ತಾಳ್ಮೆಯನ್ನು ತೆಗೆದುಕೊಳ್ಳುವ ಇನ್ನೊಂದು ಕಾರ್ಯ – ಪಠ್ಯ ಯೋಜಿಸುವಿಕೆಯನ್ನು ಈಗ ನಿಭಾಯಿಸುವ ಸಮಯವಾಗಿದೆ. ಸಲಹೆಗಳು, ಉಪಾಯಗಳು ಮತ್ತು ಸಾಧನಗಳನ್ನೂ ಸಹ ಒಳಗೊಂಡು ಪಠ್ಯ ಯೋಜಿಸುವಿಕೆಗಾಗಿ ಐದು-ಅಂಶಗಳ ಚೆಕ್ಲಿಸ್ಟ್ ಅನ್ನು ನಾವು ಸಿದ್ಧಪಡಿಸಿದ್ದೇವೆ, ಇದು ನಿಮ್ಮನ್ನು ವೃತ್ತಿಪರರನ್ನಾಗಿ ಮಾಡುತ್ತದೆ. ಹ್ಯಾಪಿ ಟೀಚಿಂಗ್!