ನೀವು ಪ್ರಯತ್ನಿಸಿ ನೋಡಬೇಕಾದ ಐದು ಕ್ಲಾಸ್‌ರೂಮ್ ಐಸ್-ಬ್ರೇಕರ್‌ಗಳು!

 

ಟರ್ಮ್ ಸ್ಟಾರ್ಟ್ ಆಗುತ್ತಿದ್ದಂತೆ, ತರಗತಿಯಲ್ಲಿ ವಿದ್ಯಾರ್ಥಿಗಳ ಗಮನವನ್ನು ಸೆಳೆದುಕೊಳ್ಳುವ ಸಾರ್ವಕಾಲಿಕ ಸಮಸ್ಯೆಯನ್ನು ಶಿಕ್ಷಕರು ಎದುರಿಸುತ್ತಾರೆ. ವಿದ್ಯಾರ್ಥಿಗಳನ್ನು ತೊಡಗಿಸಲು, ಅವರನ್ನು ತೊಡಗಿಕೊಳ್ಳುವಂತೆ ಮಾಡಲು ಹಾಗೂ ಅವರನ್ನು ಕಮ್ ಫರ್ಟೇಬಲ್ ಆಗಿ ಮಾಡಲು, ತರಗತಿಯಲ್ಲಿ ಐಸ್-ಬ್ರೇಕಿಂಗ್ ಸೆಶನ್ ಗಳನ್ನು ನಡೆಸುವುದು ಅವಶ್ಯವಾಗಿರುತ್ತದೆ.

 

ಇಲ್ಲಿ ಬರುವ ಪ್ರಶ್ನೆ ಏನೆಂದರೆ ಈ ಸಮಸ್ಯೆಯನ್ನು ನೀವು ಹೇಗೆ ಎದುರಿಸುಬಹುದು ಎಂಬುದು. ಇದಕ್ಕಾಗಿ ನಿಮಗೆ ನೆರವಾಗುವ ಕೆಲವು ಒಳನೋಟಗಳನ್ನು ಇಲ್ಲಿ ನೀಡಲಾಗಿದೆ!

 

ನಿಮ್ಮ ಅವತಾರವನ್ನು ಸೃಷ್ಟಿಸಿಕೊಳ್ಳಿ

ತಮ್ಮ ಅವತಾರಗಳನ್ನು ತಾವೇ ಸ್ವತಃ ಸೃಷ್ಟಿಸಿಕೊಂಡು, ಅವುಗಳನ್ನು ಇಡೀ ತರಗತಿಗೆ ತೋರಿಸುವಂತೆ ನಿಮ್ಮ ವಿದ್ಯಾರ್ಥಿಗಳಿಗೆ ಹೇಳಿ. ಇತರ ವಿದ್ಯಾರ್ಥಿಗಳು ಈ ಅವತಾರಗಳ ಹಿಂದಿರುವ ವ್ಯಕ್ತಿತ್ವವನ್ನು ಊಹಿಸಲು ಪ್ರಯತ್ನಿಸಬಹುದು. ತಮ್ಮ ಅವತಾರಗಳನ್ನು ಉಚಿತವಾಗಿ ಸೃಷ್ಟಿಸಲು ಡೊಪಲ್ ಮಿ ಟೂಲ್ ನಿಮ್ಮ ವಿದ್ಯಾರ್ಥಿಗಳಿಗೆ ನೆರವಾಗುತ್ತದೆ. ಈ ಚಟುವಟಿಕೆಯು ವಿದ್ಯಾರ್ಥಿಗಳನ್ನು ತೊಡಗಿಸಿ ಇರಿಸುವುದಷ್ಟೇ ಅಲ್ಲದೇ, ಪ್ರತಿಯೊಬ್ಬರ ಬಗೆಗಿನ ಸಂಗತಿಗಳನ್ನು ಅನ್ವೇಷಿಸಲೂ ಸಹ ಅವರಿಗೆ ನೆರವಾಗುತ್ತದೆ. 

 

ಕ್ಲಾಸ್ ರೂಮ್ ಬ್ಲಾಗ್

ಕ್ಲಾಸ್ ರೂಮ್ ಬ್ಲಾಗ್ ಅನ್ನು ಸೃಷ್ಟಿಸಿ ಹಾಗೂ ಇತರರಿಗೆ ತಮ್ಮನ್ನು ತಾವು ಪರಿಚಯಿಸಿಕೊಳ್ಳುವ ಚಿಕ್ಕ ಪೋಸ್ಟ್ ಒಂದನ್ನು ಬರೆಯುವಂತೆ ವಿದ್ಯಾರ್ಥಿಗಳಿಗೆ ಹೇಳಿ. ಕಿಡ್ ಬ್ಲಾಗ್ ಟೂಲ್. ಬಳಸಲು ಅನುಕೂಲಕರವಾಗಿದ್ದು, ವಿದ್ಯಾರ್ಥಿಗಳನ್ನು ತೊಡಗಿಸಿ ಇರಿಸುತ್ತದೆ ಅಲ್ಲದೇ, ತಾವೆಲ್ಲರೂ ಹೊಂದಿರುವ ಸಾಮಾನ್ಯ ಅಂಶಗಳನ್ನು ಅನ್ವೇಷಿಸಿಕೊಳ್ಳಲು ಅವರಿಗೆ ನೆರವಾಗುತ್ತದೆ. 

 

ಸೆಲ್ಫ್ ಪೋರ್ಟರೇಟ್

ಸ್ಕೆಚ್ ಪ್ಯಾಡ್ ಬಳಸಿಕೊಂಡು ತಮ್ಮನ್ನು ತಾವು ಉಚಿತವಾಗಿ ಚಿತ್ರಿಸಿಕೊಳ್ಳುವಂತೆ ನಿಮ್ಮ ವಿದ್ಯಾರ್ಥಿಗಳಿಗೆ ಹೇಳಿ. ತಮ್ಮ ಸೆಲ್ಫ್ ಪೋರ್ಟರೇಟ್ ಗಳನ್ನು ಪ್ರದರ್ಶಿಸುವಲ್ಲಿ ನಿಮ್ಮ ವಿದ್ಯಾರ್ಥಿಗಳು ನಾವೀನ್ಯಪೂರ್ಣತೆ ಹಾಗೂ ಸೃಜನಾತ್ಮಕತೆಯನ್ನು ಹೊಂದಿರಲಿ. ಪರಸ್ಪರ ವ್ಯವಹರಿಸುವಿಕೆಗೆ ಸಮಾನ-ಮನಸ್ಕ ಜನರನ್ನು ಕಂಡುಕೊಳ್ಳಲು ಅವರು ಸಮರ್ಥರಾಗುವುದರಿಂದ ಆತ್ಮವಿಶ್ವಾಸವನ್ನು ಇದು ನಿರ್ಮಿಸುತ್ತದೆ.

 

ಕಾಮಿಕ್ಸ್ ಬಳಸಿ

ಮೇಕ್ ಬಿಲೀಫ್ ಎಂಬುದು ನಿಮ್ಮ ವಿದ್ಯಾರ್ಥಿಗಳನ್ನು ತೊಡಗಿಸುವುದಕ್ಕಾಗಿ ಕಾಮಿಕ್ ಗಳನ್ನು ರಚಿಸಲು ನಿಮಗೆ ನೆರವಾಗುವ ಒಂದು ಸಾಧನವಾಗಿದೆ. ಗಮನವನ್ನು ಸೆಳೆದುಕೊಳ್ಳುವುದಕ್ಕಾಗಿ ನಿಮಗೆ ಬೇಕಾದ ರೀತಿಯಲ್ಲಿ ಕತೆಗಳನ್ನು ನೀವು ಹೆಣೆಯಬಹುದು ಹಾಗೂ ವಿದ್ಯಾರ್ಥಿಗಳೊಂದಿಗೆ ಮೋಜನ್ನು ಹೊಂದಬಹುದು. ಅದು ಬಳಸಲು ಉಚಿತವಾಗಿದೆ, ಸುಲಭವಾಗಿದೆ ಹಾಗೂ ಸರಳವಾಗಿದೆ. 

 

ಹ್ಯೂಮನ್ ಬಿಂಗೊ

ತಮ್ಮ ಸಹಪಾಠಿಗಳೊಂದಿಗೆ ಒಬ್ಬೊಬ್ಬರೊಂದಿಗಿನ ಬಹಳಷ್ಟು ಸಂಭಾಷಣೆಗಳನ್ನು ನಡೆಸಲು ನೆರವಾಗುವುದಕ್ಕಾಗಿ ಸಮಾನ ಆಸಕ್ತಿ, ಹವ್ಯಾಸಗಳು, ಕೌಶಲ್ಯಗಳು ಮುಂತಾದವುಗಳನ್ನು ಹೊಂದಿರುವ ಜನರನ್ನು ಕಂಡುಕೊಳ್ಳಲು ವಿದ್ಯಾರ್ಥಿಗಳಿಗೆ ಹ್ಯೂಮನ್ ಬಿಂಗೊ ನೆರವಾಗುತ್ತದೆ. ಅದನ್ನು ಡಿಜಿಟಲ್ ಆಗಿ ಭರ್ತಿ ಮಾಡುವಂತೆ ನಿಮ್ಮ ವಿದ್ಯಾರ್ಥಿಗಳಿಗೆ ಹೇಳಿ.

 

ವಿದ್ಯಾರ್ಥಿಗಳ ಗಮನವನ್ನು ನೀವು ಸೆಳೆದುಕೊಂಡು, ಎಲ್ಲ ಐಸ್=ಬ್ರೇಕಿಂಗ್ ಸೆಶನ್ ಗಳೊಂದಿಗೆ ಅವರು ಈಗ ಕಮ್ ಫರ್ಟೇಬಲ್ ಆಗಿರುವುದರಿಂದ, ಅಸೈನ್ ಮೆಂಟ್ ಗಳೊಂದಿಗೆ ಅವರನ್ನು ತೊಡಗಿಸಿಕೊಳ್ಳುವಂತೆ ಮಾಡುವುದೂ ಸಹ ಪ್ರಮುಖವಾಗಿರುತ್ತದೆ. ಹಾಗಾಗಿ, ಪ್ರತಿಯೊಂದು ಅಸೈನ್ ಮೆಂಟ್ , ನಿಮ್ಮ ತರಗತಿಯನ್ನು ತೊಡಗಿಸಿಕೊಳ್ಳುವ ರೀತಿಯಲ್ಲಿ ನೀವು ಏನು ಮಾಡಬಹುದು ಎಂಬುದನ್ನು ಕಂಡುಕೊಳ್ಳಿ.