ತಂತ್ರಜ್ಞಾನದೊಂದಿಗೆ ಕಲಿಸುವಿಕೆಯಲ್ಲಿ ಪಾಲಿಸಬೇಕಾದ 5 ಕಟ್ಟಾಜ್ಞೆಗಳು

 

ಅದನ್ನು ಎದುರಿಸೋಣ – ತಂತ್ರಜ್ಞಾನವು ಶಿಕ್ಷಣವನ್ನು ಬಹಳಷ್ಟು ಬದಲಾಯಿಸಿದೆ. ಕೆಲವು ವರ್ಷಗಳ ಹಿಂದೆ “ಶಿಕ್ಷಣಕ್ಕಾಗಿ ಪರ್ಸನಲ್ ಕಂಪ್ಯೂಟರ್” ಎಂಬ ಪದಗಳೇ ಕೇಳರಿಯದವುಗಳಾಗಿದ್ದವು, ಅದೇ ಇಂದು, ‘ಉತ್ತಮ’ ದಿಂದ ‘ಅತ್ಯುತ್ತಮ’ ಪದವಿಗೆ ಏರಬಯಸುವ ಪ್ರತಿಯೊಬ್ಬ ಶಿಕ್ಷಕರಿಗೂ ಅದು ಒಂದು ಮೂಲಭೂತ ಅವಶ್ಯಕತೆಯಾಗಿದೆ.

ತರಗತಿಕೋಣೆಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಅದನ್ನು ಹೇಗೆ ಸರಳೀಕರಿಸುವುದು ಎಂಬುದು ಈಗ ನಮ್ಮ ಮುಂದಿರುವ ದೊಡ್ಡ ಪ್ರಶ್ನೆಯಾಗಿದೆ – ಆ ವಿವರಗಳನ್ನು ಈ ಕೆಳಗೆ ನೀಡಲಾಗಿದೆ:

 

ಕಟ್ಟಾಜ್ಞೆ #1: ಸಂಶೋಧನೆಯ ಕಲೆಯಲ್ಲಿ ಪರಿಣತಿಯನ್ನು ಗಳಿಸಿಕೊಳ್ಳಿ

ಇದನ್ನು ಮಾಡುವುದು ನಿಸ್ಸಂಶಯವಾಗಿ ಅತ್ಯಂತ ಕಠಿಣವಾದುದಾಗಿರುತ್ತದೆಯಾದರೂ, ಒಂದು ಬಾರಿ ಅದರಲ್ಲಿ ಪರಿಣತಿಯನ್ನು ನೀವು ಸಾಧಿಸಿದ ನಂತರ – ಆಕಾಶವೇ ಮಿತಿಯಾಗಿರುತ್ತದೆ. ಮೊದಲು ಹೇಳಬೇಕಾದ್ದನ್ನು ಮೊದಲು ಹೇಳೋಣ, ನಿಮ್ಮ ಬ್ರೌಜರ್ ನಲ್ಲಿ ವೈಕಿಪೆಡಿಯಾ ಹಾಗೂ ಗೂಗಲ್ ಸ್ಕಾಲರ್ ಗಳಂಥ ಅವಶ್ಯಕವಾದವುಗಳನ್ನು ಬುಕ್ ಮಾರ್ಕ್ ಮಾಡಿ. ನಂತರ, ಏನು ನಡೆಯುತ್ತಿದೆ ಎಂಬುದು ನಿಮಗೆ ರಿಯಲ್ ಟೈಮ್ ಆಧಾರದಲ್ಲಿ ತಿಳಿದುಬರುವಂತೆ, ಗೂಗಲ್ ನ್ಯೂಜ್ ಮೂಲಕ ನಿಮ್ಮ ವಿಷಯ ಹಾಗೂ ನಿಮ್ಮ ಆಸಕ್ತಿಯ ಸಂಗತಿಗಳ ನ್ಯೂಜ್ ವಿಭಾಗವನ್ನು ಸರ್ಚ್ ಮಾಡುವುದನ್ನು ಒಂದು ದೈನಂದಿನ ರೂಢಿಯನ್ನಾಗಿಸಿಕೊಳ್ಳಿ.

 

ಕಟ್ಟಾಜ್ಞೆ #2: ಸೂಕ್ತವಾಗಿರುವಲ್ಲೆಲ್ಲ ಶ್ರೇಯವನ್ನು ನೀಡಿ

ಅನುಕರಿಸುವಿಕೆಯು ಶ್ಲಾಘಿಸುವಿಕೆಯ ಅತ್ಯುತ್ತಮ ರೂಪವಾಗಿರುತ್ತದೆಯಾದರೂ...

ಶೈಕ್ಷಣಿಕ ಕ್ಷೇತ್ರದಲ್ಲಿ ಹಾಗಾಗುವುದಿಲ್ಲ!

ಕೃತಿಚೌರ್ಯದ ಸಮಸ್ಯೆಗಳನ್ನು ತಪ್ಪಿಸುವುದಕ್ಕಾಗಿ, ಲೇಖನ, ಸಂಶೋಧನಾ ಪ್ರಬಂಧ ಅಥವಾ ವೆಬ್ ಸೈಟ್ ವೊಂದರಿಂದ ಯಾವುದೇ ಮಾಹಿತಿಯನ್ನು ನೀವು ತೆಗೆದುಕೊಳ್ಳಿ, ಅದನ್ನು ಹೈಪರ್ ಲಿಂಕ್ ಮಾಡುವುದನ್ನು ಅಥವಾ ಮೂಲವನ್ನು ಉಲ್ಲೇಖಿಸುವುದನ್ನು ಮರೆಯಬೇಡಿ.

 

ಕಟ್ಟಾಜ್ಞೆ #3: ನಿಮ್ಮ ದತ್ತಾಂಶವನ್ನು, ನಿರಂತರವಾಗಿ ಬ್ಯಾಕ್ಅಪ್ ಮಾಡಿಟ್ಟುಕೊಳ್ಳಿ

ಫೈಲ್ ಗಳಿಗೆ ಬದಲಾವಣೆಗಳನ್ನು ನೀವು ಮಾಡಿದಾಗಲೆಲ್ಲ ಅಥವಾ ಹೊಸ ಫೈಲ್ ಗಳನ್ನು ಸೇರಿಸಿದಾಗಲೆಲ್ಲ, ನಿಮ್ಮ ಫೈಲ್ ಗಳನ್ನು ನೀವು ಬ್ಯಾಕ್ಅಪ್ ಮಾಡಬೇಕಾಗುತ್ತದೆ. ಇದು ಎಂದಿಗೂ ತಪ್ಪಿಹೋಗದಂತೆ ಒಂದು ಬ್ಯಾಕ್ಅಪ್ ಸ್ಕೆಡ್ಯೂಲ್ ಅನ್ನು ನಿರ್ವಹಿಸುವುದನ್ನು ರೂಢಿಸಿಕೊಳ್ಳುವುದು ಉತ್ತಮ. ನಿರ್ಣಾಯಕವಾದ ಪ್ರಾಜೆಕ್ಟ್ ವೊಂದರ ಮೇಲೆ ನೀವು ಕೆಲಸ ಮಾಡುತ್ತಿದ್ದಲ್ಲಿ, ಇನ್ನೂ ಹೆಚ್ಚು ಬಾರಿ ನೀವು ಅದನ್ನು ಬ್ಯಾಕ್ಅಪ್ ಮಾಡಬಹುದು, ಅಗತ್ಯವಾದಲ್ಲಿ ಪ್ರತಿದಿನವೂ ಮಾಡಬಹುದು.

 

ಕಟ್ಟಾಜ್ಞೆ #4: ಇ-ಮೇಲ್ ಶಿಷ್ಟಾಚಾರಗಳನ್ನು ಗಮನದಲ್ಲಿಟ್ಟುಕೊಳ್ಳಿ

ಇದು ಬಹಳ ಮೂಲಭೂತ ಸಂಗತಿಯೆನಿಸಬಹುದಾದರೂ, ನಿಮ್ಮ ಸಂವಹನಗಳನ್ನು ಪ್ರಸ್ತುತಪಡಿಸುವ ವಿಧಾನವು ಬಹಳಷ್ಟು ವಿಷಯಗಳನ್ನು ತೆರೆದಿಡುತ್ತದೆ. ಉದಾಹರಣೆಗಾಗಿ, ತುಂಬಾ ಉದ್ದವಾಗಿರುವ ಹಾಗೂ ಸಬ್ ಜೆಕ್ಟ್ ಲೈನ್ ನಿಂದ ವಿಮುಖಗೊಳ್ಳುವ ಇ-ಮೇಲ್ ಗಳು ಯಾವ ಉದ್ದೇಶವನ್ನೂ ಈಡೇರಿಸುವುದಿಲ್ಲ. ಯಾವಾಗಲೂ ಸಂಕ್ಷಿಪ್ತತೆ ಹಾಗೂ ನಿಖರತೆಯಿಂದ ಇರಿ ಹಾಗೂ ಸೂಕ್ತವಾಗಿ ಹೆಸರಿಸಲಾದ ಅಟ್ಯಾಚ್ ಮೆಂಟ್ ಗಳನ್ನು ನೀವು ಕಳುಹಿಸುತ್ತಿರುವುದನ್ನು ನಮೂದಿಸುವುದನ್ನು ಗಮನದಲ್ಲಿಟ್ಟುಕೊಳ್ಳಿ.

 

ಕಟ್ಟಾಜ್ಞೆ #5: ಸಾಮಾಜಿಕ ಮಾಧ್ಯಮಗಳ “ಹೀಗೆ ಮಾಡಿ” ಹಾಗೂ “ಹೀಗೆ ಮಾಡಬೇಡಿ” ಗಳನ್ನು ಅನುಸರಿಸಿ

ಹೀಗೆ ಮಾಡಿ

ನಿಮ್ಮ ಪ್ರೈವಸಿ ಸೆಟ್ಟಿಂಗ್ ಗಳನ್ನು ಕಂಟ್ರೋಲ್ ಮಾಡಿ

ನೆಗೆಟಿವಿಟಿಯಿಂದ ದೂರವಿರಿ

ಸೂಕ್ತ ನೆಟ್ ವರ್ಕ್ ನಲ್ಲಿ ಸೂಕ್ತ ವಿಷಯ ಬಳಸಿ

ಬಿಜಿನೆಸ್ ಅಕೌಂಟ್ ಹಾಗೂ ಪರ್ಸನಲ್ ಅಕೌಂಟ್ ಗಳನ್ನು ಪ್ರತ್ಯೇಕವಾಗಿರಿಸಿ

ನಿಮ್ಮ ಸಾಮಾಜಿಕ ಮಾಧ್ಯಮ ಪ್ರೊಫೈಲ್ ಗಳನ್ನು ಪೂರ್ಣಗೊಳಿಸಿ ಹಾಗೂ ಅಪ್ ಡೇಟ್ ಮಾಡಿ

ಹೀಗೆ ಮಾಡಬೇಡಿ

ಅತಿಯಾಗಿ ಪೋಸ್ಟ್ ಮಾಡಬೇಡಿ

ಪೋಸ್ಟ್ ಗಳನ್ನು ದಪ್ಪಕ್ಷರಗಳಲ್ಲಿ ರಚಿಸಬೇಡಿ

ಓರ್ವ ಶಿಕ್ಷಕರು ತಮ್ಮ ಕರಿಯರ್ ನಲ್ಲಿ ಶ್ರೇಷ್ಠತೆಯನ್ನು ಸಾಧಿಸಬೇಕೆಂದರೆ ಅಪ್-ಸ್ಕಿಲಿಂಗ್ (ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವಿಕೆ) ಬಹಳ ಪ್ರಮುಖವಾಗಿರುತ್ತದೆ. ಇದು ನಿಮಗೆ ನೆರವಾಗುವುದಷ್ಟೇ ಅಲ್ಲದೇ, ಹೆಚ್ಚು ಹೆಚ್ಚನ್ನು ಕಲಿಯಲು ವಿದ್ಯಾರ್ಥಿಗಳು ತೊಡಗಿಕೊಳ್ಳುವಂತೆಯೂ ಮಾಡುತ್ತದೆ.