ಪ್ರೌಢ ಶಾಲೆಯನ್ನು ತಲುಪುವ ಹೊತ್ತಿಗೆ ನಿಮ್ಮ ಮಕ್ಕಳು ತಿಳಿದುಕೊಂಡಿರಬೇಕಾದ 5 ಜೀವನ ಕೌಶಲ್ಯಗಳು

 

“ಜೀವನ ಕೌಶಲ್ಯಗಳನ್ನು” ದೈನಂದಿನ ಜೀವನದ ಬೇಡಿಕೆಗಳು ಮತ್ತು ಸವಾಲುಗಳೊಂದಿಗೆ ಪರಿಣಾಮಕಾರಿಯಾಗಿ ವ್ಯವಹರಿಸುವುದಕ್ಕಾಗಿ ವ್ಯಕ್ತಿಗಳನ್ನು ಸಶಕ್ತಗೊಳಿಸುವ ಹೊಂದಾಣಿಕೆ ಮತ್ತು ಸಕಾರಾತ್ಮಕ ವರ್ತನೆಗಾಗಿನ ಮನೋಸಾಮಾಜಿಕ ಸಾಮರ್ಥ್ಯಗಳು ಎಂಬುದಾಗಿ ವ್ಯಾಖ್ಯಾನಿಸಲಾಗುತ್ತದೆ.

ಪ್ರೌಢಶಾಲೆಯನ್ನು ತಲುಪುವ ಹೊತ್ತಿಗೆ ನಿಮ್ಮ ಮಕ್ಕಳು ತಿಳಿದುಕೊಂಡಿರಬೇಕಾದ ಐದು ಜೀವನಕೌಶಲ್ಯಗಳನ್ನು ಇಲ್ಲಿ ನೀಡಲಾಗಿದೆ:

1) ಸರಿಯಾದ ಸಮಯಕ್ಕೆ ಎದ್ದೇಳುವುದು

ಸದ್ಯಕ್ಕೆ ನೀವೇ ಗಡಿಯಾರದ ಅಲಾರಾಂ ಆಗಿದ್ದೀರಿ, ಆದರೆ ನಿಮ್ಮ ಮಕ್ಕಳು ಹಾಸ್ಟೆಲ್ ಒಂದರಲ್ಲಿ ಉಳಿದುಕೊಂಡಾಗ ಅಥವಾ ಕೆಲಸಕ್ಕೆ ಹೋಗುವಾಗಲೂ ಸಹ ನಿಮಗೆ ಅದನ್ನು ಮಾಡುವುದು ಸಾಧ್ಯವಾಗುತ್ತದೆಯೇ? ಯಾವುದೇ ನೆರವಿಲ್ಲದೇ ಸಮಯಕ್ಕೆ ಸರಿಯಾಗಿ ಏಳುವುದನ್ನು ನಿಮ್ಮ ಮಕ್ಕಳಿಗೆ ಅಭ್ಯಾಸ ಮಾಡಿಸುವುದು ಒಂದು ಅವಶ್ಯಕವಾದ ಜೀವನ ಕೌಶಲ್ಯವಾಗಿದೆ. ಶಾಲೆಯು ಪ್ರತಿದಿನವೂ ಒಂದೇ ಸಮಯಕ್ಕೆ ಆರಂಭವಾಗುವುದು ಸದ್ಯ ಒಳ್ಳೆಯದೇ ಆಯಿತು!

2) ಅಡುಗೆ ಮಾಡುವುದು

ಅಡುಗೆಯನ್ನು ಮಾಡಲು ನೀವಿಲ್ಲದೇ ಇರುವಾಗ ಊಟವನ್ನು ಆರ್ಡರ್ ಮಾಡಿ ತರಿಸುವುದು ಅಥವಾ ಹೊರಗಡೆ ತಿನ್ನುವುದೊಂದೇ ನಿಮ್ಮ ಮಕ್ಕಳೆದುರಿಗಿನ ದಾರಿಯಾಗಿರುತ್ತದೆ. ಹೊರಗಡೆಯ ಔತಣವು ಯಾವಾಗಲಾದರೂ ಒಮ್ಮೆ ಆಗಿದ್ದರೆ ಚೆನ್ನಾಗಿರುತ್ತದೆ, ಆದರೆ ಮನೆಯಲ್ಲಿ ತಯಾರಿಸಿದ ಸಂಪೂರ್ಣ ಆಹಾರಕ್ಕಿಂತ ಹೆಚ್ಚು ಉತ್ತಮವಾದದ್ದು ಯಾವುದೂ ಇರಲಾರದು. ಚಹಾ ಮಾಡಲು ನೀರು ಕುದಿಸುವಂಥ ಚಿಕ್ಕ ಚಿಕ್ಕ ವಿಷಯಗಳಲ್ಲಿ ನಿಮ್ಮ ಮಕ್ಕಳನ್ನು ತೊಡಗಿಸಿಕೊಳ್ಳುವ ಮೂಲಕ ಆರಂಭಿಸಿ ಹಾಗೂ ತಮಗಾಗಿ ಒಂದು ಪೌಷ್ಠಿಕ ಊಟವನ್ನು ಸ್ವತಂತ್ರವಾಗಿ ತಯಾರಿಸಿಕೊಳ್ಳಬಲ್ಲವರಾಗುವಂತೆ ನಿಧಾನವಾಗಿ ಅವರಿಗೆ ಕಲಿಸಿ.

3) ಕುಟುಂಬದ ಚಿಕ್ಕ ಸದಸ್ಯರ ಕಾಳಜಿಯನ್ನು ತೆಗೆದುಕೊಳ್ಳುವುದು

ಮನೆಯಲ್ಲಿ ಜವಾಬ್ದಾರಿಯುತ ಆರಂಭಗಳಾಗಿದ್ದುಕೊಂಡು ಇದು ನಿರ್ಲಕ್ಷಿಸಬಾರದಂಥ ಒಂದು ವಿಷಯವಾಗಿದೆ. ತಮ್ಮ ಅಥವಾ ತಂಗಿ, ಸಂಬಂಧಿಕರ ಮಕ್ಕಳು, ನೆರೆಯವರ ಮಕ್ಕಳ ಕಾಳಜಿ ವಹಿಸುವುದು ತಮ್ಮನ್ನು ಮತ್ತು ನಿಮ್ಮನ್ನು ಅವಲಂಬಿಸಿರುವ ಜನರಿಗಾಗಿ ಜವಾಬ್ದಾರರಾಗಿ ಇರುವುದರೆಡೆಗಿನ ಆರಂಭವಾಗಿರುತ್ತದೆ, ಅದು ಒಂದು ಗಂಟೆ ಮಾತ್ರದ ಅವಧಿಯದ್ದಾಗಿದ್ದರೂ ಸಹ, ವಾಸ್ತವಿಕ ಜಗತ್ತಿಗೆ ಇದು ತುಂಬಾ ಅವಶ್ಯಕವಾಗಿದೆ.

4) ಒಂದು ವೇಳಾಪಟ್ಟಿಯನ್ನು ನಿಗದಿ ಮಾಡಿ ಅದಕ್ಕೆ ಬದ್ಧವಾಗಿರುವುದು

ನಿಮ್ಮ ಮಗುವು ಬೆಳೆಸಿಕೊಳ್ಳಬೇಕಿರುವ ಅತ್ಯಂತ ಪ್ರಮುಖವಾದ ಜೀವನ ಕೌಶಲ್ಯಗಳಲ್ಲೊಂದು ದಿನದ ಅಂತ್ಯದಲ್ಲಿ ಸಂಪೂರ್ಣವಾಗಿ ಬಳಲಿಹೋಗದೇ ಶಾಲೆ, ಟ್ಯೂಷನ್ಗಳು, ಕ್ರೀಡೆಗಳು, ಸಾಮಾಜಿಕ ಜೀವನ ಮತ್ತು ಮನೆಯಲ್ಲಿನ ಜವಾಬ್ದಾರಿಗಳನ್ನು ನಿರ್ವಹಿಸುವುದಾಗಿರುತ್ತದೆ. ಸಮಯವನ್ನು ಹೇಗೆ ನಿರ್ವಹಿಸುವುದು ಎಂಬುದರ ಬಗ್ಗೆ ಜೀವನದಲ್ಲಿ ಮುಂಚಿತವಾಗಿಯೇ ತಿಳಿದುಕೊಂಡಿರುವುದು, ಸವಾಲುಗಳನ್ನು ಎದುರಿಸಲು ಸಿದ್ದವಾಗಿದ್ದುಕೊಂಡು ವಯಸ್ಕ ಜೀವನದಲ್ಲಿ ಕಾಲಿಡಲು ನಿಮ್ಮ ಮಗುವಿಗೆ ನೆರವಾಗುತ್ತದೆ.

5) PC ಯ ಬಳಕೆಯಲ್ಲಿ ನಿಪುಣನನ್ನಾಗಿಸಿ

ಪಾರಾಗುವ ತಾಂತ್ರಿಕತೆ ಎಂಬುದು ಇಲ್ಲ ಎಂಬುದು ಒಬ್ಬ ಡಿಜಿಟಲ್ ಪೇರೆಂಟ್ ಆಗಿ ನಿಮಗೆ ತಿಳಿದಿದೆ. ಅದು ಮನೆಯಲ್ಲಾಗಿರಲಿ ಅಥವಾ ಶಾಲೆಯಲ್ಲಾಗಿರಲಿ, PC ಯು ನಿಮ್ಮ ಮಗುವಿನ ಪ್ರಥಮ ಲರ್ನಿಂಗ್ ಗ್ಯಾಜೆಟ್ಗಳಲ್ಲೊಂದಾಗಿದೆ. ಅಧ್ಯಯನ ಮಾಡುವುದಕ್ಕಾಗಿರಲಿ, ಹೊಸ ಹವ್ಯಾಸವೊಂದನ್ನು ರೂಢಿಸಿಕೊಳ್ಳುವುದಕ್ಕಾಗಿರಲಿ ಮತ್ತು ತನ್ನ ಮನರಂಜನೆಗಾಗಿಯೂ ಸಹ, ಸಮಯ ಮತ್ತು ರೂಢಿಯೊಂದಿಗೆ ಅದರ ಬಹುಪಾಲು ಉಪಯೋಗವನ್ನು ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ನಿಮ್ಮ ಮಗುವು ಕಂಡುಕೊಳ್ಳುತ್ತದೆ.

ನಿಸ್ಸಂಶಯವಾಗಿ, 2018 PC ಯ ವರ್ಷವಾಗಿದೆ!