ನಿಮ್ಮ ಮಗುವನ್ನು ಪಠ್ಯೇತರ ಚಟುವಟಿಕೆಗಳಲ್ಲಿ ನೋಂದಾಯಿಸಲು ಐದು ಕಾರಣಗಳು

 

ನಿದ್ದೆಯಿಂದ ಏಳುವುದು
ಶಾಲೆ
ಟ್ಯೂಶನ್ಗಳು
ಮಲಗುವುದು
ಪುನರಾವರ್ತನೆ

ಇಲ್ಲಿ ಯಾವುದು ಕಾಣೆಯಾಗಿದೆ?

ನಿಮ್ಮ ಮಗುವಿಗೆ ಇಷ್ಟವಾಗುವ ಮತ್ತು ಅದನ್ನು ಮಾಡಲು ಅದು ಎದುರುನೋಡುವ ಒಂದು ಚಟುವಟಿಕೆ!

ಪ್ರತಿದಿನ ಒಂದೇ ನಿತ್ಯಕ್ರಮವನ್ನು ಅನುಸರಿಸುವುದರಲ್ಲಿನ ಬೇಸರವನ್ನು ಕಲ್ಪಿಸಿಕೊಳ್ಳಿ. ಕೆಲಸ – ಜೀವನದ ಸಮತೋಲನವನ್ನು ತಪ್ಪಿಸಿಕೊಳ್ಳುವ ವಯಸ್ಕರು ಹೊಂದಿರುವಂಥದ್ದೇ ಭಾವನೆ – ನಿಮಗೆ ತಿಳಿದಿರುವಂಥದ್ದೇ ಅಥವಾ ನಿಮ್ಮ ವೃತ್ತಿಪರ ಜೀವನದ ಒಂದಲ್ಲಾ ಒಂದು ಹಂತದಲ್ಲಿ ನೀವು ಅನುಭವಿಸಿರವಂಥದ್ದು.

ಪಠ್ಯೇತರ ಚಟುವಟಿಕೆಗಳಲ್ಲಿ ನಿಮ್ಮ ಮಗುವನ್ನು ನೋಂದಾಯಿಸುವ ಮೂಲಕ, ಸಮಯವನ್ನು ಉತ್ಪಾದಕತೆಯಿಂದ ಕಳೆಯುವ ಹಾಗೂ ಹಾಗೆ ಮಾಡುತ್ತಲೇ ಆನಂದಿಸುವ ಅವಕಾಶವನ್ನು ನಿಮ್ಮ ಮಗುವಿಗೆ ನೀವು ನೀಡುತ್ತಿರುತ್ತೀರಿ. ಇನ್ನೂ ಐದು ಹೆಚ್ಚು ಕಾರಣಗಳನ್ನು ಇಲ್ಲಿ ನೀಡಲಾಗಿದೆ:

1) ಇದು ಅಧ್ಯಯನದಿಂದ ತೆಗೆದುಕೊಳ್ಳಲೇಬೇಕಾದ ಅವಶ್ಯಕ ಬಿಡುವು ಆಗಿರುತ್ತದೆ

ಅಧ್ಯಯನ ಹಾಗೂ ಪರೀಕ್ಷೆಗಳು ಹೆಚ್ಚು ಹೆಚ್ಚು ಸ್ಪರ್ಧಾತ್ಮಕವಾಗುವುದರೊಂದಿಗೆ, ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಅಥವಾ ನೃತ್ಯ, ಯೋಗ ಅಥವಾ ಕಲೆಯಂಥ ಹವ್ಯಾಸವೊಂದರಲ್ಲಿ ಸಮಯವನ್ನು ಹೂಡಿಕೆ ಮಾಡುವುದು ಒಂದು ಅವಶ್ಯಕವಾದ ಬಿಡುವು ಆಗಿದ್ದು, ನಿಮ್ಮ ಮಗು ಹೊಂದಿರಬಹುದಾದ ಯಾವುದೇ ಪರೀಕ್ಷಾ-ಸಂಬಂಧಿತ ಒತ್ತಡವನ್ನು ನಿರ್ವಹಿಸಲು ನೆರವಾಗುತ್ತದೆ.

2) ಒಂದು ತಂಡದಲ್ಲಿ ಹೇಗೆ ಕೆಲಸ ಮಾಡುವುದು ಎಂಬುದನ್ನು ಕಲಿತುಕೊಳ್ಳುವ ಅವಕಾಶ

ಸಮೂಹ ಚಟುವಟಿಕೆಗಳಲ್ಲಿ ನಿಗದಿತವಾಗಿ ಪಾಲ್ಗೊಳ್ಳುವಿಕೆಯು ತಂಡ ಪ್ರಯತ್ನದ ಮಹತ್ವವನ್ನು ಅರಿತುಕೊಳ್ಳಲು ಮಕ್ಕಳಿಗೆ ನೆರವಾಗುತ್ತದೆ ಹಾಗೂ ಇತರರೊಂದಿಗಿನ ಸಂಯೋಜನೆ ಹಾಗೂ ಸಹಯೋಗದಲ್ಲಿ ಅವರನ್ನು ಹೆಚ್ಚು ಉತ್ತಮರನ್ನಾಗಿಸುತ್ತದೆ. ತಮ್ಮ ಸಹವಯಸ್ಕರಿಂದ ಹೆಚ್ಚು ಕೌಶಲ್ಯಗಳನ್ನು ಕಲಿತುಕೊಳ್ಳುವಲ್ಲಿ ಹಾಗೂ ಅಪರಿಚಿತ ವ್ಯಕ್ತಿಗಳೊಂದಿಗೆ ಮಾತನಾಡುವಾಗ ಭಯವಾಗುವಿಕೆಯಂಥ ವೈಯಕ್ತಿಕ ಕುಂದುಕೊರತೆಗಳನ್ನು ನಿವಾರಿಸಿಕೊಳ್ಳುವಲ್ಲಿಯೂ ಸಹ ಅದು ಅವರಿಗೆ ನೆರವಾಗಬಲ್ಲದು.

3) ಸಮಯ ನಿರ್ವಹಣೆಯ ಕೌಶಲ್ಯಗಳನ್ನು ಗ್ರಹಿಸುವುದು – ರೂಢಿಸಿಕೊಳ್ಳುವಿಕೆಯಿಂದ ಮಾತ್ರ ಬರುವಂಥದ್ದು

ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆಯು ಬದ್ದತೆಗಳನ್ನು ಆದ್ಯತೀಕರಿಸುವಿಕೆಯೊಂದಿಗೇ ಅಭ್ಯಾಸ ಮಾಡುವಿಕೆ ಹಾಗೂ ಆಟವಾಡುವಿಕೆಗಳ ನಡುವೆ ಸೂಕ್ಷ್ಮ ಸಮತೋಲನವನ್ನು ನಿರ್ವಹಿಸುವುದನ್ನು ಒಳಗೊಳ್ಳುತ್ತದೆ. ತಮ್ಮ ದಿನ ಹಾಗೂ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಯೋಜಿಸಲು ಮಕ್ಕಳಿಗೆ ಇದು ನೆರವಾಗುತ್ತದೆ – ಇದು ರೂಢಿಸಿಕೊಳ್ಳುವಿಕೆಯಿಂದ ಹರಿತವಾಗುವ ಕೌಶಲ್ಯವಾಗಿರುತ್ತದೆ.

4) ಅವಶ್ಯಕ ಸಾಮಾಜಿಕ ಕೌಶಲ್ಯಗಳ ಬೆಳವಣಿಗೆ

ಹೊಸ ಜನರೊಂದಿಗೆ ವ್ಯವಹರಿಸುವಿಕೆ ಹಾಗೂ ಚಟುವಟಿಕೆಗಳಲ್ಲಿ ಒಟ್ಟಾಗಿ ಭಾಗವಹಿಸುವಿಕೆಯು ಮಾನಸಿಕ ಹಾಗೂ ಭಾವನಾತ್ಮಕ ಪ್ರಯೋಜನಗಳೆರಡನ್ನೂ ಹೊಂದಿದೆ. ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು ಹಾಗೂ ತಮ್ಮ ಆತ್ಮವಿಶ್ವಾಸವನ್ನು ವರ್ಧಿಸಿಕೊಳ್ಳಲೂ ಸಹ ಮಕ್ಕಳಿಗೆ ಇದು ನೆರವಾಗುತ್ತದೆ.

5) ಹೊಸದೇನೋ ಒಂದನ್ನು ಅನ್ವೇಷಿಸಿ

ಪಠ್ಯೇತರ ಚಟುವಟಿಕೆಗಳು ಆಟದ ಮೈದಾನಕ್ಕೇ ಸೀಮಿತವಾಗಿರಬೇಕಿಲ್ಲ. ಪಿಸಿಗಳು ಕಲಿಕೆಯನ್ನು ಹೊಸದು, ಸುಲಭ ಹಾಗೂ ಹಿಂದೆಂದಿಗಿಂತಲೂ ಹೆಚ್ಚು ಪ್ರವೇಶಾವಕಾಶವನ್ನು ಹೊಂದಿರುವಂತೆ ಮಾಡಿವೆ. Canva ಮೂಲಕ ಡಿಜಿಟಲ್ ಆರ್ಟ್ ಅನ್ನು ತೆಗೆದುಕೊಳ್ಳಲು ಅಥವಾ Code.org ದಿಂದ ಕೋಡ್ನ ಮೂಲಭೂತ ವಿಷಯಗಳನ್ನು ಕಲಿಯಲು ನಿಮ್ಮ ಮಗುವನ್ನು ನೀವು ಪ್ರೋತ್ಸಾಹಿಸಬಹುದು. ನಿಮ್ಮ ಮಗುವಿನ ಶಾಲೆಯಿಂದ ಈ ಚಟುವಟಿಕೆಗಳನ್ನು ಈಗಾಗಲೇ ಆಫರ್ ಮಾಡದೇ ಇದ್ದಲ್ಲಿ, ಅದನ್ನು ಸ್ಥಾಪಿಸುವಂತೆ ಅಧಿಕಾರಿಗಳೊಂದಿಗೆ ನೀವು ಮಾತನಾಡಬಹುದು ಅಥವಾ ಈ ಉಪಕ್ರಮವನ್ನು ತಾವೇ ಕೈಗೊಳ್ಳುವಂತೆ ನಿಮ್ಮ ಮಗುವನ್ನು ನೀವು ಉತ್ತೇಜಿಸಬಹುದು.

ನಿಮ್ಮ ಮಗುವು ಸವಾಲೆಸೆಯಲ್ಪಟ್ಟ ಭಾವನೆಯನ್ನು ಹೊಂದಿರುವವರೆಗೆ ಹಾಗೂ ಈ ಚಟುವಟಿಕೆಯನ್ನು ಆನಂದಿಸುವವರೆಗೆ, ನಿಮ್ಮ ಮಗುವು “ಅಮ್ಮಾ ನನಗೆ ಬೇಸರವಾಗುತ್ತಿದೆ” ಎಂದು ಇನ್ನೆಂದಿಗೂ ಹೇಳದು :)