ಈ ಹೊಸ ವರ್ಷದ ಆರಂಭದಂದು ಪ್ರತಿಯೊಬ್ಬ ವಿದ್ಯಾರ್ಥಿಯೂ ಮಾಡಬೇಕಿರುವ ಐದು ಧೃಢಸಂಕಲ್ಪಗಳು

 

ನೀವು ಒಂದು ಪರ್ಸನಲ್ ಕಂಪ್ಯೂಟರಿನ ಲಭ್ಯತೆಯನ್ನು, ತಲೆಯಲ್ಲಿ ಯೋಜನೆಯೊಂದನ್ನು ಮತ್ತು 2018 ನೇ ವರ್ಷವನ್ನು ಇಲ್ಲಿಯವರೆಗಿನ ವರ್ಷಗಳಲ್ಲಿ ಅತ್ಯುತ್ತಮವಾಗಿಸುವ ಪ್ರೇರೇಪಣೆಯನ್ನು ಹೊಂದಿದ್ದೀರಿ, ಹಾಗಾದರೆ ಪ್ರತಿಯೊಬ್ಬ ಯಶಸ್ವಿ ವಿದ್ಯಾರ್ಥಿಯೂ ಮಾಡಬೇಕಿರುವ ಐದು ಧೃಢಸಂಕಲ್ಪಗಳು ಯಾವವು?

1) ಓದುವಿಕೆಯನ್ನು ನಾನು ಒಂದು ದಿನನಿತ್ಯದ ಹವ್ಯಾಸವನ್ನಾಗಿಸಿಕೊಳ್ಳುತ್ತೇನೆ

ಅದು ಕಲ್ಪಿತವಾದದ್ದೇ ಇರಲಿ, ವಾಸ್ತವಿಕವಾದದ್ದೇ ಇರಲಿ, ನಿಮ್ಮ ಪಿಸಿಯಲ್ಲಿ ಅಥವಾ ಭೌತಿಕ ಪುಸ್ತಕದಲ್ಲಿ ನೀವು ಪ್ರತಿ ದಿನ ಕೇವಲ ಒಂದು ಅಧ್ಯಾಯವನ್ನು ಓದಿದರೂ ಸಹ &ndash ನಿಮ್ಮ ಸಹಪಾಠಿಗಳಿಗಿಂತ ನೀವು ಅದಾಗಲೇ ಮುಂದೆ ಇರುತ್ತೀರಿ, ಏಕೆಂದರೆ ನೀವು ಹೊಸ ಹೊಸ ವಿಷಯಗಳನ್ನು ಎತ್ತಿಕೊಳ್ಳುತ್ತಿರುತ್ತೀರಿ ಮತ್ತು ಅದೇ ಸಮಯದಲ್ಲಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳುತ್ತಿರುತ್ತೀರಿ!

2) ಒಂದು ಸಮಯದಲ್ಲಿ ನಾನು ಒಂದು ಕೆಲಸವನ್ನು ಮಾಡುತ್ತೇನೆ

ಮೊದಲಿಗೆ ಇದು ಕಷ್ಟಕರವೆನ್ನಿಸಬಹುದು, ಆದರೆ ಒಂದು ಬಾರಿಗೆ ಒಂದು ಕೆಲಸವನ್ನು ಮಾಡಲು ಪ್ರಯತ್ನಿಸುವುದು ಗಮನವನ್ನು ಕೇಂದ್ರೀಕರಿಸಲು ನೆರವಾಗುತ್ತದೆ ಹಾಗೂ ಕ್ಷುಲ್ಲಕ ತಪ್ಪುಗಳು ಸಂಭವಿಸುವ ಅವಕಾಶವನ್ನು ಕಡಿಮೆ ಮಾಡುತ್ತದೆ. ನಿಮ್ಮ ಪ್ರಬಂಧಕ್ಕಾಗಿ ಅಡ್ಡಿಆತಂಕಗಳಿಲ್ಲದ ಒಂದು ಗಂಟೆಯ ಬರವಣಿಗೆಯು ನಿಮ್ಮನ್ನು ಸಾಮಾನ್ಯಕ್ಕಿಂತ ಹೆಚ್ಚು ಉತ್ಪಾದನಾಶೀಲರನ್ನಾಗಿಸುತ್ತದೆ.

3) ನನ್ನ ಎಲ್ಲಾ ಫೈಲ್ಗಳನ್ನು ನಾನು ಕ್ಲೌಡ್ ಸ್ಟೋರೇಜಿನಲ್ಲಿ ಬ್ಯಾಕ್ಅಪ್ ಮಾಡುತ್ತೇನೆ

ಸಹಯೋಗದ ಅವಶ್ಯಕತೆ ಇರುವ ಒಂದು ಗ್ರುಪ್ ಅಸೈನ್ಮೆಂಟನ್ನು ಪೂರ್ಣಗೊಳಿಸಲು ಶಾಲೆ ಅಥವಾ ಮನೆಯಲ್ಲಿ ನೀವು ಬೇರೆ ಬೇರೆ ಪಿಸಿಗಳನ್ನು ಉಪಯೋಗಿಸುವುದಿರಲಿ ಅಥವಾ ನಿಮ್ಮ ಫೈಲುಗಳಿಗೆ ಹೆಚ್ಚುವರಿ ಬ್ಯಾಕ್ಅಪ್ನ ಅವಶ್ಯಕತೆ ಇರಲಿ &ndash ಕ್ಲೌಡ್ ಸ್ಟೋರೇಜ್ ನಿಮಗೆ ಒಂದು ಉಪಯುಕ್ತ ಮಾರ್ಗವಾಗಿರುತ್ತದೆ. ಇಂಟರ್ನೆಟ್ನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದಷ್ಟೇ ನೀವು ಮಾಡಬೇಕಿರುವ ಕೆಲಸವಾಗುತ್ತದೆ.

4) ಸಾಮಾಜಿಕ ಮಾಧ್ಯಮಗಳಲ್ಲಿ ನಾನು ಪೋಸ್ಟ್ ಮಾಡುವುದರ ಬಗ್ಗೆ ನಾನು ಜಾಗರೂಕತೆ ವಹಿಸುತ್ತೇನೆ

ಸಾಮಾಜಿಕ ಮಾಧ್ಯಮಗಳು ತುಂಬಾ ಮೋಜುಮಸ್ತಿಯನ್ನು ನೀಡುತ್ತವೆ ಹಾಗೂ ಅವುಗಳಲ್ಲಿ ಇರುವುದನ್ನು ಪ್ರತಿಯೊಬ್ಬರೂ ಆನಂದಿಸುತ್ತಾರೆ. ಆದರೆ ಸ್ಕ್ರೀನ್ಶಾಟ್ಗಳಿಂದಾಗಿ ನೀವು ಮಾಡುವ ಪ್ರತಿಯೊಂದು ಪೋಸ್ಟ್ ಶಾಶ್ವತವಾಗಿ ಉಳಿದುಬಿಡಬಹುದಾದ್ದರಿಂದ, ನೀವು ಏನನ್ನು ಶೇರ್ ಮಾಡುತ್ತಿದ್ದೀರಿ ಎಂಬುದರ ಬಗ್ಗೆ ತುಂಬಾ ಜಾಗರೂಕತೆ ವಹಿಸಿ. ಅದು ವೃತ್ತಿಪರವಾಗಿ ಅಥವಾ ವೈಯಕ್ತಿಕವಾಗಿ - ಪ್ರತಿಯೊಬ್ಬರನ್ನೂ ಅಥವಾ ನಿಮ್ಮನ್ನೂ ಸಹ ಬಾಧಿಸಬಹುದು.

5) ನಾನು ಉರು ಹೊಡೆದು ಕಲಿಯುವುದಿಲ್ಲ

&ldquoಉರು ಹೊಡೆಯುವುದು&rdquo ನಾವೆಲ್ಲರೂ ಮಾಡುವಂಥ ಹಾಗೂ ನಮ್ಮ ಸ್ನೇಹಿತರು ಹಾಗೂ ಕಿರಿಯರಿಗೂ ಹಾಗೇ ಮಾಡುವಂತೆ ನಾವು ಪ್ರೋತ್ಸಾಹಿಸುವ ವಿಷಯ. ಈ ವರ್ಷ, ಪರೀಕ್ಷೆಗಳ ನಂತರದ ಸ್ವಲ್ಪ ಸಮಯಕ್ಕಿಂತಲೂ ಬಹಳ ಹೆಚ್ಚು ಸಮಯದವರೆಗೆ ವಿಷಯಗಳನ್ನು ನೆನಪಿಟ್ಟುಕೊಳ್ಳುವಂತೆ ನೀವು ಕಲಿಯುತ್ತಿರುವುದನ್ನು ನಿಜವಾಗಿಯೂ ಅರ್ಥ ಮಾಡಿಕೊಳ್ಳುವ ಪ್ರಜ್ಞಾಪೂರ್ವಕ ಪ್ರಯತ್ನವನ್ನು ಕೈಗೊಳ್ಳಿ.

ಆರಂಭದಲ್ಲಿ, ಉರು ಹೊಡೆದು ಕಲಿಯುವುದು ಹೆಚ್ಚು ಸುಲಭ ಹಾಗೂ ವೇಗದ ಮಾರ್ಗವೆನಿಸಬಹುದು. ಆದರೆ ಅದರ ಬಗ್ಗೆ ಸ್ವಲ್ಪ ಯೋಚಿಸಿ &ndash ಅಧ್ಯಾಯದ ನಂತರ ಅಧ್ಯಾಯವನ್ನು ನೆನಪಿಟ್ಟುಕೊಳ್ಳಲು ಪ್ರಯತ್ನಿಸುತ್ತಾ ನೀವು ಗಂಟೆಗಟ್ಟಲೇ ಸಮಯವನ್ನು ವ್ಯಯಿಸುತ್ತೀರಿ, ಆದರೆ ಪರೀಕ್ಷೆ ಮುಗಿದ ನಂತರ ಪ್ರತಿಯೊಂದನ್ನೂ ಮರೆತುಬಿಡುತ್ತೀರಿ! ಅದಕ್ಕೆ ಬದಲಾಗಿ, ಸರಿಯಾದ ಸಾಧನಗಳು, ಸಮಯ ಮತ್ತು ಏಕಾಗ್ರತೆಯೊಂದಿಗೆ, ಮುಂದಿನ ಹಲವಾರು ವರ್ಷಗಳವರೆಗೆ ನೀವು ವಿಷಯದಲ್ಲಿ ಪರಿಣತಿಯನ್ನು ಸಾಧಿಸಬಲ್ಲಿರಿ.

ಹೆಚ್ಚಿನ ವಿಷಯ ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋ ನೋಡಿ