ನೀವು ಪ್ರಯತ್ನಿಸಿ ನೋಡಬೇಕಾದ ಐದು ಸ್ಟಡಿ ಬ್ರೇಕ್ ಐಡಿಯಾಗಳು

 

 

ಪರೀಕ್ಷಾ-ಸಮಯವು ಬಹಳ ಒತ್ತಡಪೂರ್ಣವಾಗಿರಬಲ್ಲದು. ಹಸಿವೆಯಾಗದಿರುವುದು, ನಿದ್ರೆ ತಪ್ಪಿಸಿಕೊಳ್ಳುವುದು ಅಥವಾ ಗಮನ ಕೇಂದ್ರೀಕರಿಸುವುದು ಇವೆಲ್ಲವುಗಳೂ ನಿಮ್ಮ ಕಾರ್ಯಪ್ರದರ್ಶನದ ಮೇಲೆ ಪರಿಣಾಮ ಬೀರಬಲ್ಲವು. ಸಕಾಲಿಕ ವಿರಾಮಗಳನ್ನು ತೆಗೆದುಕೊಳ್ಳುವಿಕೆಯೂ ಸೇರಿದಂತೆ ಕೆಲವು ಸರಳ ಹಂತಗಳು ನಿಮ್ಮ ಒತ್ತಡವನ್ನು ನಿವಾರಿಸಿ, ಪರೀಕ್ಷೆಗಳ ಸಮಯದಲ್ಲಿ ನಿಮ್ಮ ಒತ್ತಡವನ್ನು ಕಡಿಮೆ ಮಾಡುವುದನ್ನು ಖಚಿತಪಡಿಸಬಲ್ಲವು.

ಅಧ್ಯಯನ ವಿರಾಮದ ಸಮಯದಲ್ಲಿ ನೀವು ಮಾಡಬೇಕಾದ ಐದು ಸಂಗತಿಗಳು

1) ಸ್ನೇಹಿತರೊಬ್ಬರಿಗೆ ಫೋನ್ ಮಾಡಿ

ನಿಮ್ಮ ಮನಸ್ಸಿಗೆ ವಿರಾಮವನ್ನು ಒದಗಿಸುವುದಕ್ಕಾಗಿ ಮನಪೂರ್ವಕವಾಗಿ ನಗಲು ಅಥವಾ ಕ್ರೀಡಾ ವಿಷಯಗಳ ಬಗ್ಗೆ ಚರ್ಚಿಸಲು ನಿಮ್ಮ ನೆಚ್ಚಿನ ಸ್ನೇಹಿತರಿಗೆ ಕರೆ ಮಾಡಿ. ನಿಮ್ಮ ಪ್ರೀತಿಪಾತ್ರರೊಂದಿಗೆ ಸ್ವಲ್ಪ ಸಮಯ ಸಂಭಾಷಿಸುವಿಕೆಯು ನಿಮ್ಮ ಮನಸ್ಸನ್ನು ಮುದಗೊಳಿಸಬಲ್ಲದು – ನಿಮಗಾಗಿ ನೀವು ನಿಗದಿಪಡಿಸಿದುದಕ್ಕಿಂತ ಹೆಚ್ಚು ಸಮಯದವರೆಗೆ ಮಾತನಾಡವುದರಲ್ಲೇ ಕಳೆಯದಿರುವುದನ್ನು ಖಚಿತಪಡಿಸಿಕೊಳ್ಳಿ! ನೀವು ಪ್ರಸ್ತುತ ಅಭ್ಯಸಿಸುತ್ತಿರುವ ವಿಷಯದ ಮೇಲೆ ಪ್ರಶ್ನೆಯೊಂದನ್ನು ನಿಮಗೆ ಕೇಳುವಂತೆ ನಿಮ್ಮ ಸ್ನೇಹಿತರನ್ನು ಕೇಳುವ ಮೂಲಕ ಫನ್ ಕ್ವಿಜ್ ಒಂದನ್ನು ಆಡುವುದೂ ಸಹ ತುಂಬಾ ಉತ್ತಮ ಕೆಲಸವನ್ನು ಮಾಡುತ್ತದೆ.

2) ಮಿದುಳಿನ ಕಸರತ್ತು ಮಾಡಿ

ಮಿದುಳು ಕಸರತ್ತಿನ ಚಟುವಟಿಕೆಗಳು ಸಮಸ್ಯೆ – ಪರಿಹರಿಸುವಿಕೆ ಕೌಶಲ್ಯಗಳನ್ನು ಸುಧಾರಿಸುತ್ತವೆ, ನಿಮ್ಮ ಶಬ್ಧಭಾಂಡಾರವನ್ನು ವಿಸ್ತಾರಗೊಳಿಸುತ್ತವೆ ಹಾಗೂ ಅಭ್ಯಸಿಸುವಿಕೆಯ ಒತ್ತಡದಿಂದ ಬಿಡುಗಡೆ ಮಾಡುತ್ತವೆ. ವಿರಾಮಕ್ಕಾಗಿ, ವಾಸ್ತವದಲ್ಲಿ ನಿಮ್ಮನ್ನು ಇನ್ನೂ ಹೆಚ್ಚು ಚತುರರನ್ನಾಗಿಸುವ, ಹೆಚ್ಚು ಜಾಗರೂಕರನ್ನಾಗಿಸುವ ಹಾಗೂ ಮುಂದಿನ ಅಧ್ಯಯನ ಅಧಿವೇಶನಕ್ಕೆ ನಿಮ್ಮನ್ನು ಸಜ್ಜುಗೊಳಿಸುವ ಪದಬಂಧ, ಸುಡೊಕು ಬಿಡಿಸುವುದನ್ನು ಅಥವಾ ಲುಮೊಸಿಟಿ ಆಟಗಳನ್ನು ಆಡುವುದನ್ನು ಪರಿಗಣಿಸಿ.

3) ಸ್ಫೂರ್ತಿ ಪಡೆದುಕೊಳ್ಳಿ

ಅಭ್ಯಾಸ ಮಾಡಲು ಕುಳಿತುಕೊಳ್ಳುವುದಕ್ಕೂ ಮೊದಲು, ನಿಮ್ಮನ್ನು ಸ್ಫೂರ್ತಿಗೊಳಿಸುವ ಜನರ ಅಥವಾ ನಿಮ್ಮನ್ನು ಸಮ್ಮೋಹನಗೊಳಿಸುವ ವಿಷಯಗಳ ಪಟ್ಟಿಯೊಂದನ್ನು ತಯಾರಿಸಿ. ನಿಮ್ಮ ಮೇಜಿಗಾಗಿ ಒಂದು ಪ್ರೇರಣೆದಾಯಕ ಮನಸ್ಥಿತಿಯ ಬೋರ್ಡ್ ಅನ್ನು ರಚಿಸಿಕೊಳ್ಳಲು ಅವರ ಚಿತ್ರಗಳು ಅಥವಾ ಹೇಳಿಕೆಗಳನ್ನು ನೀವು ಬಳಸಿಕೊಳ್ಳಬಹುದು. ನಿಮ್ಮ ಗುರಿಗಳು ಮತ್ತು ನೀವು ಪಡೆಯಬಹುದಾದ ಪುರಸ್ಕಾರಗಳನ್ನು ಬರೆದಿಡುವುದೂ ಸಹ ಒಂದು ಅತ್ಯುತ್ತಮ ಸೇರ್ಪಡೆಯಾಗಿರುತ್ತದೆ! ನಿಮ್ಮ ವಿರಾಮದ ಸಮಯದಲ್ಲಿ ಟೆಡ್ ಟಾಕ್ಗಳನ್ನು ಓದುವುದು ಅಥವಾ ವೀಕ್ಷಿಸುವುದೂ ಸಹ ನಿಮಗೆ ಉತ್ತೇಜನವನ್ನು ಒದಗಿಸಲು ನೆರವಾಗಬಲ್ಲದು.

4) ಸೃಜನಶೀಲತೆಯನ್ನು ಪ್ರದರ್ಶಿಸಿ

ನಿಮ್ಮ ಸೃಜನಶೀಲತೆಯೇ ನಿಮ್ಮ ಮಾರ್ಗದರ್ಶಿಯಾಗಲಿ! ನಿಮ್ಮ ಮನಸ್ಸನ್ನು ಮುದಗೊಳಿಸಲು ಹಾಗೂ ನಿಮ್ಮ ಚೈತನ್ಯವನ್ನು ಹೆಚ್ಚಿಸಲು ಗಿಟಾರ್ ನುಡಿಸುವುದು ಅಥವಾ ಡೂಡಲ್ ಮಾಡುವುದು ಮುಂತಾದವುಗಳಂಥ ನಿಮ್ಮ ಅಭ್ಯಾಸಕ್ಕೆ ಸಂಬಂಧಿಸದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ತಾಜಾ ಮನಸ್ಸಿನೊಂದಿಗೆ ಹಾಗೂ ನವೀಕೃತಗೊಂಡ ಏಕಾಗ್ರತೆಯೊಂದಿಗೆ ಅಭ್ಯಾಸಕ್ಕೆ ನೀವು ಮರಳುವುದನ್ನು ಇದು ಖಚಿತಪಡಿಸುತ್ತದೆ!

5) ನಿಮ್ಮ ಬಕೆಟ್ ಲಿಸ್ಟ್ ಅಪ್ಡೇಟ್ ಮಾಡಿ

ನಿಮ್ಮ ಗುರಿಗಳ ಕಡೆಗೆ ನಿಮ್ಮನ್ನು ನೀವು ಪ್ರೇರೇಪಿಸಿಕೊಂಡಿರಿಸಲು ಒಂದು ಬಕೆಟ್ ಲಿಸ್ಟ್ ಅನ್ನು ಸಿದ್ಧಪಡಿಸುವುದು ಒಂದು ಅತ್ಯುತ್ತಮವಾದ ಮಾರ್ಗವಾಗಿದೆ! ನಿಮ್ಮ ಬಕೆಟ್ ಲಿಸ್ಟ್ ಅನ್ನು ನೀವು ಇನ್ನೂವರೆಗೆ ಸಿದ್ಧಪಡಿಸಿಕೊಂಡಿಲ್ಲವೆಂದಾದಲ್ಲಿ, ಅದನ್ನು ಮಾಡಲು ಈಗ ಸೂಕ್ತ ಸಮಯವಾಗಿದೆ! ನೀವು ಪ್ರಯತ್ನಿಸಬಯಸುವ ಎಲ್ಲ ಸ್ಥಳಗಳು, ಆಹಾರ, ವಿಹಾರ, ಸಾಹಸಗಳನ್ನು ಒಂದು ವರ್ಡ್ ಡಾಕ್ಯುಮೆಂಟ್ನಲ್ಲಿ ಸೇರ್ಪಡೆ ಮಾಡಿ, ಅವುಗಳ ಲಿಂಕ್ಗಳು ಮತ್ತು ಚಿತ್ರಗಳೊಂದಿಗೆ ಹಿಂದೆಂದೂ ಇರದಂಥ ಪಟ್ಟಿಯೊಂದನ್ನು ತಯಾರಿಸಿ. ನಿಮ್ಮ ಅಧ್ಯಯನ ಯೋಜನೆಯಲ್ಲಿ ಮೈಲಿಗಲ್ಲೊಂದನ್ನು ನೀವು ಸಾಧಿಸಿದ ಪ್ರತಿ ಬಾರಿಯೂ, ನಿಮ್ಮ ಬಕೆಟ್ ಲಿಸ್ಟಿನಲ್ಲಿ ಏನನ್ನಾದರೂ ಒಂದನ್ನು ಸೇರಿಸುವ ಮೂಲಕ ನಿಮ್ಮನ್ನು ನೀವು ಪುರಸ್ಕರಿಸಿಕೊಳ್ಳಿ.

ಪ್ರಾಜೆಕ್ಟುಗಳಿಂದ ಹಿಡಿದು ಪ್ರೆಸೆಂಟೇಶನ್ನುಗಳವರೆಗೆ – ಪ್ರತಿಯೊಂದನ್ನೂ ಮಾಡಲು ಸರಿಯಾದ ಟೆಕ್ ಟೂಲ್ಗಳನ್ನು ಬಳಸುವ ಮೂಲಕ ನಿಮ್ಮ ಅಧ್ಯಯನವನ್ನು ಸರಳಗೊಳಿಸಿಕೊಳ್ಳುವುದನ್ನು ಮರೆಯಬೇಡಿ!