ಪ್ರತಿಯೊಂದು ವಿದ್ಯಾರ್ಥಿಯು ಐದು ಕಲಿಯುವ ಉಪಾಯಗಳನ್ನು ಅನುಸರಿಸಬೇಕು.

 

ಪರೀಕ್ಷೆಯ ಹಿಂದಿನ ರಾತ್ರಿ ಅಥವಾ ಪ್ರೋಜೆಕ್ಟ್ ಗೆ ಒಂದು ದಿನ ಇರುವಾಗ ಕಲಿತರೆ ಸಾಲದು.

ಎಷ್ಟು ಬೇಗ ಕಲಿಯಲು ಪ್ರಾರಂಭಿಸುತ್ತೀರೋ ಅಷ್ಟೇ ನೀವು ವಿಷಯವನ್ನು ಅರ್ಥ ಮಾಡಿಕೊಳ್ಳುವಿರಿ ಮತ್ತು ಇದು ನಿಮಗೆ ಉತ್ತಮ ಅಂಕಗಳನ್ನು ಗಳಿಸಲು ಸಹಕಾರಿಯಾಗುತ್ತದೆ. [1]

ಪಿ.ಸಿ. ಯಿಂದ ನೀವು ಪರೀಕ್ಷೆಗಳಲ್ಲಿ ಉತ್ತಮವಾಗಿ ಬರೆಯಲು ಸಹಾಯ ನೀಡುವುದಲ್ಲದೇ ಸಂಶೋಧನೆ ಸಹಿತ ಗೊಂದಲಯುಕ್ತ ವಿಷಯಗಳನ್ನು ಅರಿತುಕೊಳ್ಳಲು ನೆರವಾಗುತ್ತದೆ.

ಪಿ.ಸಿ. ಯನ್ನು ಉಪಯೋಗಿಸಿ ಅತ್ಯಂತ ಲಾಭವನ್ನು ಪಡೆಯಲು ಐದು ಕಲಿಯುವ ಉಪಾಯಗಳು ಈ ಕೆಳಕಂಡಂತಿವೆ:

1. ಒಂದು ನಿರ್ಧಾರಿತ ಸಮಯವನ್ನು ರೂಪಿಸಿಕೊಂಡು ಅದರಂತೆ ನಡೆಯಿರಿ

ಕಲಿಯುವ ಸಮಯವನ್ನು ನಿರ್ಧರಿಸುವುದರಿಂದ ಇದು ಪೂರೈಸಲಿರುವ ಪಾಠ್ಯಕ್ರಮದ ಸಂಖ್ಯೆಗಳನ್ನು ಮತ್ತು ಪ್ರತಿಯೊಂದಕ್ಕೂ ಬೀಕಾಗುವ ಸಮಯದ ಬಗ್ಗೆ ಸ್ಪಷ್ಟತೆಯನ್ನು ನೀಡುತ್ತದೆ. ಗೂಗಲ್ ಕ್ಯಾಲೆಂಡರ್ ನಂತಹ ಟೂಲ್ಸ್ ಗಳು ನಿತ್ಯ ಅಭ್ಯಾಸ ಮಾಡುವ ಕ್ರಮವನ್ನು ಸೃಷ್ಟಿಸಲು ಉಪಯೋಗಕರವಾಗಿವೆ. ನಿರ್ಧರಿಸಿದ ಸಮಯದ ಮಧ್ಯದಲ್ಲಿ ವಿರಾಮ ತೆಗೆದು ಕೊಳ್ಳುವ ಯೋಜನೆಯನ್ನು ಸಹ ಮಾಡಿರಿ.

2. ತರಗತಿಯಲ್ಲಿ ಟಿಪ್ಪಣಿಗಳನ್ನು ಬರೆದುಕೊಳ್ಳಿ

ಟಿಪ್ಪಣಿ ತೆಗೆದುಕೊಳ್ಳುವುದರಿಂದ ತರಗತಿಯಲ್ಲಿ ಬೋಧಿಸಿದ ವಿಷಯ ವಸ್ತುವನ್ನು ಮುಂದೆ ಸಂದರ್ಭಕ್ಕಾಗಿ ಸಂಗ್ರಹಿಸಿ ನಿಮಗೆ ಪರೀಕ್ಷೆಯಲ್ಲಿ ಅಥವಾ ಪ್ರೋಜೆಕ್ಟ್ ನಲ್ಲಿ ಕಲಿಯುವುದಕ್ಕೆ ನೆರವಾಗುತ್ತದೆ. ಕಾಗದದಲ್ಲಿ ಟಿಪ್ಪಣಿಗಳು ಅನುಕೂಲಕರವೆ, ಆದರೆ ವರ್ಡ್ ಪ್ರೋಸೆಸರ್ಸ್ ನಿಂದ ಸಂದರ್ಭದೊಂದಿಗೆ ವೈಯಕ್ತಿಕಯುಕ್ತ ಟಿಪ್ಪಣಿಗಳನ್ನು ಮತ್ತು ಇಂಟರ್ ನೆಟ್ ನಿಂದ ಲಿಂಕ್ಸ್ ಇವುಗಳು ಅತಿ ಸೂಕ್ತವೆಂದು ಪರಿಗಣಿಸಲಾಗಿದೆ.

3. ನಿಜ ಜೀವನದಲ್ಲಿ ಕಲಿತ ವಿಷಯಗಳನ್ನು ಪ್ರಯೋಗಿಸಲು ಕಲಿಯಿರಿ.

ಕಲಿಯುತ್ತಿರುವಾಗ, ಯಾವಾಗಲೂ ಸಿದ್ಧಾಂತ ಮತ್ತು ಅಭ್ಯಾಸದ ಮಧ್ಯೆ ಇರುವ ಅಂತರವನ್ನು ಹೋಗಲಾಡಿಸಿ. ನೀವು ತರಗತಿಯಲ್ಲಿ ಕಲಿತ ಪ್ರತಿಯೊಂದು ವಿಷಯವನ್ನು ಸಂಬಂಧಿಸಿದಂತೆ, ಇದು ಉತ್ತಮವಾಗಿ ನೆನಪಿಟ್ಟುಕೊಳ್ಳಲು ಸಹಕರಿಸುತ್ತದೆ. ವೀಡಿಯೋ ನ್ನು ವೀಕ್ಷಿಸುವುದು, ಮೇಕರ್ ಸ್ಪೇಸ್ ಪ್ರೋಜೆಕ್ಟ್[2] ನ್ನು ತೆಗೆದುಕೊಳ್ಳುವುದು ಮತ್ತು ವಿಷಯಗಳನ್ನು ಪ್ರದರ್ಶಿವುವಂತಹ ಶೈಕ್ಷಣಿಕ ಗೇಮ್ ಗಳ[3] ಪ್ರಯೋಗದಿಂದ ಮನದಟ್ಟುಮಾಡಿ ಕೊಳ್ಳಲು ನೆರವಾಗುತ್ತದೆ.

4. ನಿಮ್ಮನ್ನು ನೀವು ಪರೀಕ್ಷಿಸಿ ಕೊಳ್ಳಿ ಮತ್ತು ಮಾಡಿದ ತಪ್ಪುಗಳಿಂದ ಮತ್ತೆ ಕಲಿಯಿರಿ

ವಿಷಯವನ್ನು ಕಲಿತ ನಂತರ ನಿಮ್ಮನ್ನು ನೀವು ಪರೀಕ್ಷಿಸಿಕೊಂಡು ಮಾಹಿತಿಯನ್ನು ಇಟ್ಟುಕೊಳ್ಳುವುದು, ಮತ್ತೆ ಮತ್ತೆ ಅದನ್ನೆ ಮಾಡುವುದಕ್ಕಿಂತ ಉತ್ತಮ ಮಾರ್ಗವೆಂಬುದಾಗಿದೆ.[4] ಆನ್ ಲೈನ್ ಟೂಲ್ಸ್ ಗಳ ಬಳಕೆಯಿಂದ ನೀವು ಕಲಿತದ್ದನ್ನು ನೀವೇ ಪರೀಕ್ಷಿಸಿಕೊಳ್ಳಬಹುದು. ಮೊದಲನೆ ಬಾರಿಯೇ ದೊರಕದಿದ್ದರೂ ಸಹ, ಎಲ್ಲಿ ತಪ್ಪು ಮಾಡಿದ್ದೀರೆಂಬುದನ್ನು ಕಲಿಯುತ್ತೀರಿ. ಇದು ಮುಂದಿನ ಸಮಯದಲ್ಲಿ ನೀವು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.

5. ನೀವು ಕಲಿತದ್ದನ್ನು ಪದೇ ಪದೇ ಪುನರವಲೋಕನ

ಸಾಮಂಜ್ಯಸ್ಯತೆ ಒಂದು ಪ್ರಮುಖ ಅಂಶ. ಅಭ್ಯಾಸ ಮಾಡುವ ಸಾಮಗ್ರಿಯನ್ನು ಪುನರವಲೋಕಿಸುತ್ತಿರಿ ಮತ್ತು ಸಾಧ್ಯವಾದಷ್ಟು ದಿನನಿತ್ಯ ಮತ್ತು ವಾರಕ್ಕೊಮ್ಮೆ ಆನ್ ಲೈನ್ ಸಂದರ್ಭವನ್ನು ಮೊರೆಹೋಗುವುದು. ಇದರಿಂದ ನೀವು ಇದನ್ನು ಬಹುಕಾಲ ನೆನಪಿಟ್ಟುಕೊಳ್ಳುವುದಲ್ಲದೆ ಪರೀಕ್ಷೆಯ ಹಿಂದಿನ ದಿನ ಅಭ್ಯಾಸ ಮಾಡುವ ಒತ್ತಡದಿಂದ ದೂರವಾಗಬಹುದು.

ಪರಿಣಾಮಕಾರಿಯಾಗಿ ಅಧ್ಯಯನ ಅಭ್ಯಾಸದಿಂದ ಕಲೆಕೆಯನ್ನು ಮತ್ತು ಉಳಿಸಿಕೊಳ್ಳುವುದನ್ನು ಉತ್ತೇಜಿಸುತ್ತದೆ. ಇದರಿಂದ ನೀವು ಜಾಣತನದಿಂದ ಕಲಿಯಲು, ಪ್ರೋಜೆಕ್ಟ್ ಅಥವಾ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ನೆರವಾಗುವುದು.