2020 ರಲ್ಲಿ ನೀವು ನೋಡುವ ಐದು ತಂತ್ರಜ್ಞಾನ ಪ್ರವೃತ್ತಿ(ಟ್ರೆಂಡ್) ಗಳು

 

ಬೆಳವಣಿಗೆಯು ಮಾಹಿತಿಯ ಗುಣಮಟ್ಟವನ್ನು ಅವಲಂಬಿಸಿರುವ, ಜ್ಞಾನದ ಆರ್ಥಿಕತೆಯತ್ತ ಭಾರತವು ಹೆಚ್ಚು ಮುಂದುವರಿಯುವುತ್ತಿರುವುದರಿಂದ, ಅಗತ್ಯ ಕೌಶಲ್ಯದೊಂದಿಗೆ ನಮ್ಮ ಮಕ್ಕಳನ್ನು ಭವಿಷ್ಯಕ್ಕೆ ಸಿದ್ಧಗೊಳಿಸುವುದು ನಮಗೆ ಹೆಚ್ಚು ಮುಖ್ಯವಾಗುತ್ತಿದೆ. ತಂತ್ರಜ್ಞಾನವನ್ನು ಕಲಿಯುವ ಮತ್ತು ಅದರೊಂದಿಗೆ ಸುಲಭವಾಗಿ ಹೊಂದಿಕೊಳ್ಳುವ ಸಾಮರ್ಥ್ಯವು ಪೋಷಕರು ತಮ್ಮ ಮಗುವಿಗೆ ಒದಗಿಸಬೇಕಾದ ಪ್ರಮುಖ ಕೌಶಲ್ಯಗಳಲ್ಲಿ ಒಂದಾಗಿದೆ.

1. ಧ್ವನಿ ತಂತ್ರಜ್ಞಾನಧ್ವನಿ ತಂತ್ರಜ್ಞಾನವು ಆಜ್ಞಾಪಿಸಿದ ಕ್ರಿಯೆಯನ್ನು ನಿರ್ವಹಿಸಲು ಮಾತಿನ ಗುರುತಿಸುವಿಕೆಯನ್ನು ಬಳಸುತ್ತದೆ, ಇದು ಅಮೂಲ್ಯ ಸಮಯವನ್ನು ಉಳಿಸುವ ಮೂಲಕ, ಮಾಹಿತಿ ಪಡೆಯುವುದನ್ನು ಸುಲಭಗೊಳಿಸುತ್ತದೆ. 1 ವಾಸ್ತವವಾಗಿ, ಧ್ವನಿ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳು ಹೊಸ ಪರಿಕಲ್ಪನೆಗಳನ್ನು ಕಲಿಯುವಂತಹ ಮೋಜಿನ ಆಟವನ್ನು ಸೃಷ್ಟಿಸುವ ಮೂಲಕ, ತರಗತಿಯ ಕಲಿಕೆಯನ್ನು ಹೆಚ್ಚಿಸಲು ಇದನ್ನು ಬಳಸಬಹುದು. 2


2. 5 ಜಿ


 

5 ಜಿ ಎಂಬುದು ಮುಂದಿನ ಪೀಳಿಗೆಯ ವೈರ್ ಲೆಸ್ ತಂತ್ರಜ್ಞಾನವಾಗಿದ್ದು ಅದು 4 ಜಿ ತಂತ್ರಜ್ಞಾನದ ಮೇಲ್ದರ್ಜೆಗೇರಿಸಿದ ಆವೃತ್ತಿಯಾಗಿದೆ. ಇದು ಅಧಿಕ ಇಂಟರ್ನೆಟ್ ವೇಗ, ಅಧಿಕ ಬ್ಯಾಂಡ್ ವಿಡ್ತ್ ಮತ್ತು ಕಡಿಮೆ ಲ್ಯಾಗಿಂಗ್ ಅಥವಾ ಬಫರಿಂಗ್ ನಂತಹ ಅನೇಕ ಪ್ರಯೋಜನಗಳನ್ನು ಹೊಂದಿದೆ. ಕಂಪ್ಯೂಟರ್ ಗಳು, ಐ ಒಟಿ ಮತ್ತು ಸ್ಮಾರ್ಟ್ ಸಾಧನಗಳನ್ನೂ ಒಳಗೊಂಡಂತೆ ಸ್ಮಾರ್ಟ್ ಫೋನ್ ಗಳನ್ನೂ ಮೀರಿ ಸಂಪರ್ಕವನ್ನು ಸಾಧ್ಯವಾಗಿಸಬಹುದು ಎಂಬುದು ಈ ತಂತ್ರಜ್ಞಾನದ ವಿಶೇಷತೆಯಾಗಿದೆ. 3


3. ಡೇಟಾ ವಿಶ್ಲೇಷಣೆ(ಅನಾಲಿಟಿಕ್ಸ್)


ಇದು ಕಾರ್ಯಸಾಧ್ಯವಾದ ಮತ್ತು ಉಪಯುಕ್ತ ಸ್ವರೂಪಕ್ಕೆ ಪರಿವರ್ತಿಸಲು ದೊಡ್ಡ ಪ್ರಮಾಣದ ಕಚ್ಚಾ ಡೇಟಾವನ್ನು ಸಂಸ್ಕರಿಸುವುದನ್ನು ಒಳಗೊಂಡಿರುತ್ತದೆ. ಡೇಟಾವನ್ನು ಅರ್ಥಮಾಡಿಕೊಳ್ಳಲು, ಸಮಸ್ಯೆಗಳನ್ನು ಗುರುತಿಸಲು ಮತ್ತು ಡೇಟಾವನ್ನು ಹೇಗೆ ಬಳಸುವುದು ಎಂಬುದರ ಕುರಿತು ಶಿಫಾರಸುಗಳನ್ನು ಮಾಡಲು ಇದನ್ನು ಬಳಸಬಹುದು.
4 ಉದಾಹರಣೆಗೆ, ಶಿಕ್ಷಕರು ವಿದ್ಯಾರ್ಥಿಯ ಕಲಿಕೆಯ ಸಾಮರ್ಥ್ಯ ಮತ್ತು ಆದ್ಯತೆಗಳಿಗೆ ಅನುಗುಣವಾಗಿ ಅನುಭವಗಳನ್ನು ಹೆಣೆಯಲು ಪರೀಕ್ಷಾ ಅಂಕಗಳನ್ನು ವಿಶ್ಲೇಷಿಸಬಹುದು.

4. ವಿಷಯ ಸಂಪರ್ಕಜಾಲ (ಇಂಟರ್ನೆಟ್ ಆಫ್ ಥಿಂಗ್ಸ್)


ವಿಷಯ ಸಂಪರ್ಕಜಾಲ-ಇಂಟರ್ನೆಟ್ ಆಫ್ ಥಿಂಗ್ಸ್ (ಐ ಒಟಿ) ಎನ್ನುವುದು ಸಾಧನಗಳನ್ನು ಅಂತರ್ಜಾಲಕ್ಕೆ(ಇಂಟರ್ನೆಟ್) ಮತ್ತು ಪರಸ್ಪರ ಒಂದಕ್ಕೊಂದು ಸಂಪರ್ಕ ಕಲ್ಪಿಸುವ ಮೂಲಕ ಡೇಟಾವನ್ನು ಸಂಗ್ರಹಿಸುವ ಮತ್ತು ಹಂಚಿಕೊಳ್ಳುವ ಒಂದು ದೊಡ್ಡ ಸಂಪರ್ಕಜಾಲವನ್ನು(ನೆಟ್ ವರ್ಕ್) ರಚಿಸುವುದಾಗಿದೆ. ಇಂದು, ಸ್ವಯಂ ಚಾಲಿತ ಕಾರುಗಳು, ಫಿಟ್ ನೆಸ್ ಸಾಧನಗಳು ಮತ್ತು ಗೃಹೋಪಯೋಗಿ ವಸ್ತುಗಳೂ ಸೇರಿದಂತೆ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಐ ಒಟಿಯನ್ನು ಕಾಣಬಹುದು
6 ಮತ್ತು ಕಲಿಕೆಯ ವಸ್ತುಗಳನ್ನು ಆನ್ ಲೈನ್ ನಲ್ಲಿ ಲಭ್ಯವಾಗುವಂತೆ ಮಾಡಲು, ಶ್ರೇಣಿಗಳನ್ನು ನಿರ್ವಹಿಸಲು ಮತ್ತು ಆನ್ ಲೈನ್ ನಲ್ಲಿ ತರಗತಿಗಳನ್ನು ತೆಗೆದುಕೊಳ್ಳಲು ಇದನ್ನು ಬಳಸಬಹುದು.

5. ಸೈಬರ್ ಸುರಕ್ಷತೆ


 

ಬ್ಯಾಂಕಿಂಗ್ ವಿವರಗಳಂತಹ ಪ್ರಮುಖ ಮಾಹಿತಿಗಳು ಡಿಜಿಟಲ್ ರೂಪದಲ್ಲಿರುವುದರಿಂದ, ಸೈಬರ್ ಸುರಕ್ಷತೆಯು ವಿಕಸನಗೊಳ್ಳುವ ಅವಶ್ಯಕತೆಯಿದೆ. ಇಂದು, ಅಂತರ್ಜಾಲ ಸಂಪರ್ಕ ಹೆಚ್ಚಿದ ಕಾರಣ ಉದ್ದೇಶಿತ ಸುಲಿಗೆ, ಫಿಶಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ದಾಳಿಯಂತಹ ಹಲವಾರು ಬೆದರಿಕೆಗಳಿವೆ. ಕೃತಕ ಬುದ್ಧಿಮತ್ತೆ(AI )ಯಂತಹ ವಿಕಾಸಗೊಳ್ಳುತ್ತಿರುವ ತಂತ್ರಜ್ಞಾನದ ಸಹಾಯದಿಂದ, ನಾವು ಈ ಸಮಸ್ಯೆಗಳನ್ನು ಎದುರಿಸಬಹುದು ಮತ್ತು ಅಂತರ್ಜಾಲವನ್ನು ಸುರಕ್ಷಿತವಾಗಿಸಬಹುದು. 8

ಮುಂಬರುವ ಪ್ರವೃತ್ತಿಗಳ(ಟ್ರೆಂಡ್) ಬಗ್ಗೆ ಕಲಿಯುವುದು ಮುಖ್ಯವಾದರೂ, ನಮ್ಮ ಮಕ್ಕಳನ್ನು ಅವಶ್ಯಕ ಪಿಸಿ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುವುದು ಹೆಚ್ಚು ಮುಖ್ಯವಾಗಿದೆ. ಈ 2020 ನೇ ವರ್ಷದಲ್ಲಿ, ನಾವು ತಂತ್ರಜ್ಞಾನವನ್ನು ಒಟ್ಟಿಗೇ ಅಳವಡಿಸಿಕೊಳ್ಳೋಣ!-