ತರಗತಿಗಾಗಿ ಪ್ರಸ್ತುತಪಡಿಸುವಿಕೆಯ ನಿಮ್ಮ ಕೌಶಲ್ಯಗಳಿಗೆ ಹೊಳಪು ನೀಡುವ ಐದು ವಿಧಾನಗಳು

 

 

ವಿದ್ಯಾರ್ಥಿಗಳ ಗಮನವನ್ನು ಸೆಳೆಯುವುದು ಮತ್ತು ಅದನ್ನು ಹಿಡಿದಿಟ್ಟುಕೊಳ್ಳುವುದು ತರಗತಿಯೊಳಗಿನ ಅತ್ಯಂತ ದೊಡ್ಡ ಸವಾಲು ಎಂದು ಯಾವುದೇ ಶಿಕ್ಷಕರು ಒಪ್ಪಿಕೊಳ್ಳುತ್ತಾರೆ. ಶಾಸ್ತ್ರೀಯ ಉಪನ್ಯಾಸದ ಸಂದರ್ಭದಲ್ಲಿ ಬಹುತೇಕ ವಿದ್ಯಾರ್ಥಿಗಳು ಗಮನವನ್ನು ಕಳೆದುಕೊಳ್ಳಲಾರಂಭಿಸುತ್ತಾರಾದರೂ, ನಿರಾಶೆ ಹೊಂದಬೇಕಾದ ಅಗತ್ಯವಿಲ್ಲ.

ಈ ಉದ್ದೇಶಕ್ಕಾಗಿ ಬಳಸಬಹುದಾದ ಅತ್ಯುತ್ತಮ ಸಾಧನಗಳಲ್ಲೊಂದು ನಮ್ಮ ಪಿಸಿಗಳಲ್ಲಿ ಯಾವಾಗಲೂ ಇದ್ದೇ ಇದೆ.

ಅದೇ ಶಾಸ್ತ್ರೀಯ ಎಂಎಸ್ ಪವರ್ಪಾಯಿಂಟ್!

ಸೂಕ್ತವಾಗಿ ಬಳಸಿದಾಗ, ಯಾವುದೇ ಪಾಠವು ಒಂದು ತೊಡಗಿಸಿಕೊಳ್ಳುವ ಚಟುವಟಿಕೆಯಾಗಿ ಪರಿವರ್ತಿತಗೊಳ್ಳಬಲ್ಲದು. ಇದು ನೀವು ಆಟವಾಡಬಹುದಾದ ಹಲವಾರು ವೈಶಿಷ್ಟ್ಯತೆಗಳೊಂದಿಗೆ ಬರುತ್ತಿದ್ದಾಗಲೂ, ಪ್ರಸ್ತುತಪಡಿಸುವಿಕೆ ಕೌಶಲ್ಯಗಳು ಅವಶ್ಯಕವಾಗಿವೆ.

ನಿಮ್ಮ ಪ್ರಸ್ತುತಿಗಳನ್ನು ಉತ್ತಮದಿಂದ ಅತ್ಯುತ್ತಮ ಎನಿಸುವವರೆಗೆ ಕೊಂಡೊಯ್ಯುವ ಐದು ವಿಧಾನಗಳನ್ನು ಕಂಡುಕೊಳ್ಳಲು ಮುಂದೆ ಓದಿ:

1) ಹೆಚ್ಚು ಉತ್ತಮ ಧಾರಣೆಗಾಗಿ ವಿಶುವಲ್ ಏಡ್ಗಳನ್ನು ಬಳಸಿ

ನಿಮ್ಮ ಪದಗಳ ಎಣಿಕೆಯನ್ನು ಕಡಿಮೆ ಇರಿಸುವುದು ಅತ್ಯುತ್ತಮವಾಗಿರುತ್ತದೆ. ಹೆಚ್ಚು ದೃಶ್ಯಾತ್ಮಕ ವಿಷಯವನ್ನು ನೀವು ಹೊಂದಿರುವಷ್ಟು, ಪರಿಕಲ್ಪನೆಗಳನ್ನು ನಿಮ್ಮ ವಿದ್ಯಾರ್ಥಿಗಳು ಗ್ರಹಿಸಿ ಅದನ್ನು ಹೆಚ್ಚು ಉತ್ತಮವಾಗಿ ಕಲಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ವಿಶುವಲ್ ಏಡ್ಗಳು ರೇಖಾಚಿತ್ರಗಳು, ಫ್ಲೋ ಚಾರ್ಟ್ಗಳು ಮತ್ತು ಗ್ರಾಫ್ಗಳನ್ನು ಒಳಗೊಳ್ಳಬಹುದು. ಆದರೆ ನೀವು ಅಲ್ಲಿಗೇ ನಿಲ್ಲಬೇಕಿರುವುದಿಲ್ಲ – ಪ್ರಸ್ತುತಿಗಳನ್ನು ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡಲು ವಿಡಿಯೋಗಳು ಅತ್ಯುತ್ತಮ ಸೇರ್ಪಡೆಗಳಾಗಿರುತ್ತವೆ!

2) ಅದನ್ನು ಆಗಾಗ್ಗೆ ಬದಲಾಯಿಸುತ್ತಿರಿ

ಒಬ್ಬ ವಿದ್ಯಾರ್ಥಿಯ ಗಮನ ನೀಡಿಕೆಯ ಸರಾಸರಿ ಅವಧಿಯು ಬಹಳ ದೀರ್ಘವಾಗಿರುವುದಿಲ್ಲ ಎಂಬುದು ನಿಮಗೆ ಚೆನ್ನಾಗಿ ತಿಳಿದಿರುತ್ತದೆ. ಕಲಿಸುವ ವಿಧಾನಗಳನ್ನು ಪ್ರತಿ 15-20 ನಿಮಿಷಗಳಿಗೆ ಬದಲಿಸುವುದನ್ನು ಪರಿಗಣಿಸಿ. ಉದಾಹರಣೆಗೆ, ನಿಮ್ಮ ತರಗತಿಯು ಆಲಿಸುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಪ್ರಸ್ತುತಿಗಳ ಮಧ್ಯದಲ್ಲಿ ಮಿದುಳಿನ ಮೇಲೆ ವಿಚಾರಗಳ ದಾಳಿಯನ್ನು ನಡೆಸಲು ಒಂದು ರಸಪ್ರಶ್ನೆ ಅಥವಾ ಗುಂಪು ಚಟುವಟಿಕೆಯನ್ನು ನೀವು ಸೇರಿಸಬಹುದು.

3) ಸ್ವಲ್ಪ ಹಾಸ್ಯವನ್ನು ಬೆರೆಸಿ

ಭಾವನಾತ್ಮಕ ಸ್ಪಂದನೆಗಳು ಸ್ಮರಣೆಗೆ ನೆರವಾಗುತ್ತವೆ. ನಿಮ್ಮ ಪ್ರಸ್ತುತಿಗಳಿಗೆ ಸ್ವಲ್ಪ ಹಾಸ್ಯವನ್ನು ಬೆರೆಸುವುದು ವಿದ್ಯಾರ್ಥಿಗಳಿಗೆ ಅದನ್ನು ಹೆಚ್ಚು ಸ್ಮರಣೀಯವನ್ನಾಗಿಸಬಲ್ಲದು ಹಾಗೂ ತರಗತಿ ನಡೆಯುವ ಸಂದರ್ಭದಲ್ಲಿ ಸಂವಾದವೊಂದಕ್ಕೂ ಚಾಲನೆ ನೀಡಬಹುದು. ಹಾಸ್ಯವನ್ನು ಸನ್ನಿವೇಶಕ್ಕೆ ಅನುಗುಣವಾಗಿ ವಿರಳವಾಗಿ ಹಾಗೂ ಜಾಣತನದಿಂದ ಬಳಸುವುದನ್ನು ಖಚಿತಪಡಿಸಿಕೊಳ್ಳಿ.

4) ವರ್ಣರಂಜಿತವಾಗಿರುವುದನ್ನು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ

ವಿಷಯವೊಂದರ ಮೇಲೆ ಗಮನವನ್ನು ಸೆಳೆಯಲು, ಪರಿಕ್ಷೆಯಲ್ಲಿ ಬರುವ ಗರಿಷ್ಠ ಸಂಭಾವ್ಯತೆಯ ಏನೋ ಒಂದನ್ನು ಒತ್ತಿ ಹೇಳಲು, ಪ್ರಮುಖ ಮಾಹಿತಿಯನ್ನು ನೆನಪಿಟ್ಟುಕೊಳ್ಳುವುದಕ್ಕೆ ನೆರವಾಗಲು ಹಾಗೂ ದತ್ತಾಂಶವನ್ನು ಆಯೋಜಿಸಲೂ ಸಹ ಬಣ್ಣಗಳನ್ನು ಬಳಸಬಹುದು. ಬಣ್ಣಗಳನ್ನು ಅತಿಯಾಗಿ ಬಳಸುವುದನ್ನು ತಪ್ಪಿಸಲು ಎಚ್ಚರ ವಹಿಸಿ – ಇಲ್ಲದಿದ್ದಲ್ಲಿ ಅದು ಅನುಪಯುಕ್ತವಾಗಬಹುದು.

5) ಸಾರಾಂಶವನ್ನು ಒದಗಿಸಿ

ಇಲ್ಲಿಯವರೆಗೆ ಚರ್ಚಿಸಿದ ಅಂಶಗಳನ್ನು ಸಾರಾಂಶೀಕರಿಸಲು ಆಗಾಗ್ಗೆ ಅಲ್ಪವಿರಾಮಗಳನ್ನು ತೆಗೆದುಕೊಳ್ಳಿ ಅಥವಾ ಹಾಗೆ ಮಾಡಲು ತಾವಾಗಿಯೇ ಮುಂದೆ ಬರುವಂತೆ ವಿದ್ಯಾರ್ಥಿಗಳಲ್ಲೊಬ್ಬರನ್ನು ಕೇಳಿ. ಮಾಹಿತಿಯನ್ನು ಮರುಉಣಿಸಲು, ಆ ಮೂಲಕ ಪರೀಕ್ಷೆಗಳಿಗಾಗಿ ನೆನಪಿಸಿಕೊಳ್ಳಲು ಇದು ನೆರವಾಗುತ್ತದೆ.

ವಿಶ್ವದ ಅನುಭೂತಿಯನ್ನು ನಿಮ್ಮ ವಿದ್ಯಾರ್ಥಿಗಳಿಗೆ ತರಗತಿಯಿಂದಲೇ ಒದಗಿಸಲು ವರ್ಚ್ಯುವಲ್ ಫೀಲ್ಡ್ ಟ್ರಿಪ್ಗಳನ್ನು ಅಳವಡಿಸಿಕೊಳ್ಳುವುದು ನಿಮ್ಮ ಪ್ರಸ್ತುತಿಗಳನ್ನು ಮೇಲ್ದರ್ಜೆಗೇರಿಸುವ ಇನ್ನೊಂದು ಅತ್ಯುತ್ತಮ ವಿಧಾನವಾಗಿರುತ್ತದೆ!