ಉರು ಹೊಡೆದು ಕಲಿಯುವುದನ್ನು ನೀವು ಇಷ್ಟಪಡದಿದ್ದಾಗ ಅಧ್ಯಯನ ಮಾಡುವ ಐದು ಮಾರ್ಗಗಳು

 

ಪ್ರಮುಖವಾದ ಸೂತ್ರಗಳು ಹಾಗೂ ಸಂಕೀರ್ಣವಾದ ಹೆಸರುಗಳನ್ನು ಸ್ಮರಿಸಿಕೊಳ್ಳಲು ಉರು ಹೊಡೆದು ಕಲಿಯುವಿಕೆಯು ಅವಶ್ಯವಾಗಿ ಬೇಕಾಗುತ್ತದೆ, ಆದರೆ ಅದೊಂದೇ ನಿಮ್ಮ ಕಲಿಕೆಯ ಏಕಮಾತ್ರ ಮಾರ್ಗವಾಗಬಾರದು. ಅಧ್ಯಯನದ ಸಂಪೂರ್ಣ ನಿತ್ಯಕ್ರಮವು ಹೆಚ್ಚು ಮೋಜಿನಿಂದ ಕೂಡಿರುವಂತಾಗಲು ಹಾಗೂ ದೀರ್ಘಾವಧಿಯಲ್ಲಿ ನಿಮಗೆ ಪ್ರಯೋಜನಕಾರಿಯಾಗಿರುವಂತೆ ಮಾಡಲು, ಒಂದು PC ಯ ನೆರವಿನೊಂದಿಗೆ ವಿಷಯಗಳನ್ನು ಮಿಶ್ರಣ ಮಾಡುವುದು ಉತ್ತಮವಾಗಿರುತ್ತದೆ.

ಉರು ಹೊಡೆದು ಕಲಿಯುವುದು ನಿಮಗೆ ಇಷ್ಟವಾಗದಿದ್ದಾಗ ಅಧ್ಯಯನ ಮಾಡುವ ಐದು ಮಾರ್ಗಗಳು

1. ನಿಮ್ಮದೇ ಆದ “ಪಠ್ಯಪುಸ್ತಕ” ವನ್ನು ಬರೆಯಿರಿ

ಮೂಲಭೂತವಾಗಿ ಅಧ್ಯಯನ ಸಾಮಗ್ರಿಯು ನಿಮಗೆ ಸರಳವಾಗಿದೆ ಎನಿಸುವ ಯಾವುದೇ ರೂಪದಲ್ಲಿ ರೇಖಾಚಿತ್ರಗಳು, ಮೈಂಡ್ ಮ್ಯಾಪ್ಗಳು, ಪ್ರಸ್ತುತಿ ಕರಪತ್ರಗಳನ್ನು ಬಳಸಿಕೊಂಡು ನೀವು ಕಲಿತಿರುವುದನ್ನು ಬರೆದಿಡಿ. ಇದರ ಅತಿದೊಡ್ಡ ಪ್ರಯೋಜನವೆಂದರೆ ಅಧ್ಯಯನ ಮಾಡುವಾಗ ನೀವು ಸಂಪೂರ್ಣವಾಗಿ ಜಾಗರೂಕರಾಗಿರುತ್ತೀರಿ ಹಾಗೂ ಎಲ್ಲ ಅಧ್ಯಯನ ಸಾಮಗ್ರಿಯನ್ನು ಒಂದೇ ಸ್ಥಳದಲ್ಲಿ ಹೊಂದಿರುತ್ತೀರಿ.

2. ಪ್ರಯತ್ನಿಸಿ, ಕಲಿಯಿರಿ, ವಿಫಲರಾಗಿ ಮತ್ತು ನೀವು ಯಶಸ್ವಿಯಾಗುವವರೆಗೆ ಪುನರಾವರ್ತಿಸಿ

ಇದು ಸ್ವಲ್ಪ ಸಮಯ ವ್ಯಯವಾಗುವಂತಹದ್ದಾದರೂ ಯೋಗ್ಯವಾಗಿರುತ್ತದೆ. ಮೇಕರ್ಸ್ಪೇಸ್ ಪ್ರಾಜೆಕ್ಟ್ವೊಂದನ್ನು ಮಾಡುತ್ತಾ ವೈಜ್ಞಾನಿಕ ಸಿದ್ದಾಂತವೊಂದನ್ನು ಪರೀಕ್ಷಿಸುವುದಾಗಲಿ ಅಥವಾ ನಿಮ್ಮ ತೃತೀಯ ಭಾಷೆಯಲ್ಲಿ ಯಾರೋ ಒಬ್ಬರೊಂದಿಗೆ ಸುಸಜ್ಜಿತ ಸಂವಾದವನ್ನು ನಡೆಸುವುದಾಗಿರಲಿ – ನೀವು ಅದರಲ್ಲಿ ಪರಿಪೂರ್ಣರಾಗುವವರೆಗೆ ಪ್ರಯತ್ನಿಸುತ್ತಲೇ ಇರಿ.

3. ಸಂವಾದಯುಕ್ತ ಕಲಿಕೆಗೆ ಒಂದು ಅವಕಾಶವನ್ನು ನೀಡಿ

ಒಂದು ವಿಷಯದ ಸನ್ನಿವೇಶಾತ್ಮಕ ತಿಳುವಳಿಕೆಯನ್ನು ಸುಧಾರಿಸಲು ಸಂವಾದಯುಕ್ತ ಕಲಿಕೆಯು ಸಂವಾದ ಹಾಗೂ ಚರ್ಚೆಗಳಿಗೆ ಒತ್ತನ್ನು ನೀಡುತ್ತದೆ. ಹೀಗೆ ಮಾಡಲು, ಪ್ರಮುಖ ಸಿದ್ದಾಂತಗಳು ಮತ್ತು ಪರಿಕಲ್ಪನೆಗಳ ಮೇಲಿನ ಉತ್ತರಗಳನ್ನು ಒಟ್ಟಾಗಿ ಕಂಡುಕೊಂಡು, ಪರಸ್ಪರ ಪರೀಕ್ಷಿಸುವುದಕ್ಕಾಗಿ ನಿಮ್ಮ ಸಹಪಾಠಿಗಳ ಗುಂಪೊಂದನ್ನು ಒಟ್ಟುಗೂಡಿಸಿ.

4. ನೀವು ಈಗಷ್ಟೇ ಕಲಿತ ಮಾಹಿತಿಯಿಂದ ನಿಮಗಾಗಿ ರಸಪ್ರಶ್ನೆಗಳನ್ನು ಸಿದ್ಧಪಡಿಸಿಕೊಳ್ಳಿ

ಉತ್ತಮವಾಗಿ ಅಂಕ ಗಳಿಸಲು, ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದು ಪ್ರಯತ್ನಿಸಿ, ಪರೀಕ್ಷಿಸಲ್ಪಟ್ಟ ವಿಧಾನವಾಗಿದೆ. ಪರೀಕ್ಷೆಗಾಗಿ ಅತ್ಯಾವಶ್ಯವಾಗಿರುವ ಆತ್ಮವಿಶ್ವಾಸದ ವೃದ್ಧಿಗಾಗಿ ಕ್ವಿಝ್ಲೆಟ್ನಲ್ಲಿ ಪ್ರಶ್ನೆ ಪತ್ರಿಕೆಗಳನ್ನು ರಚಿಸಿ, ನೀವು ಯಾವುದರಲ್ಲಿ ಉತ್ತಮರಿದ್ದೀರಿ ಎಂಬುದನ್ನು ಕಂಡುಕೊಳ್ಳಲು ನೀವೇ ಅವುಗಳಿಗೆ ಉತ್ತರಗಳನ್ನು ಗುರುತಿಸುವ ಮೂಲಕ ಈ ವಿಧಾನವನ್ನು ನೀವು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ತೆಗೆದುಕೊಂಡು ಹೋಗಬಹುದು.

5. ರಕ್ಷಕರ ರೂಪದಲ್ಲಿ ಫ್ಲ್ಯಾಶ್ಕಾರ್ಡ್ಗಳು

ಅಂತಿಮ ದಿನದಂದಿನ ಕೆಲವು ದಿನಗಳ ಮುಂಚೆ, ಕ್ರ್ಯಾಮ್ನಲ್ಲಿ ನಿಮ್ಮ ಫ್ಲ್ಯಾಶ್ಕಾರ್ಡ್ಗಳನ್ನು ಸಿದ್ಧಪಡಿಸಿಕೊಳ್ಳಿ ಹಾಗೂ ಅಧ್ಯಯನ ಸಾಮಗ್ರಿಯು ನಿಮ್ಮ ಬೆರಳತುದಿಯಲ್ಲಿಯೇ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರತಿದಿನ ಅವುಗಳ ಮೇಲೆ ಕಣ್ಣಾಡಿಸಿ. ಪರೀಕ್ಷೆಗಳಿಗೂ ಮೊದಲು ಒಂದು ಅಥವಾ ಎರಡು ಬಾರಿ ಮಾತ್ರ ರಿವಿಜನ್ ಮಾಡುವುದಕ್ಕಿಂತ ಪ್ರತಿದಿನ ನಿಮ್ಮ ನೋಟ್ಸ್ಗಳನ್ನು ಓದುವ ಮೂಲಕ, ಪ್ರತಿಯೊಂದನ್ನೂ ನೀವು ನೆನಪಿಟ್ಟುಕೊಳ್ಳುವ ಸಂಭವ ಹೆಚ್ಚಾಗಿರುತ್ತದೆ.

ಈ ಪ್ರತಿಯೊಂದೂ ಅಧ್ಯಯನ ವಿಧಾನದ ಬಹುಪಾಲು ಉಪಯೋಗವನ್ನು ಪಡೆದುಕೊಳ್ಳುವುದಕ್ಕಾಗಿ, ನಿಮ್ಮ ವೇಳಾಪಟ್ಟಿಯಲ್ಲಿ ಸಂಶೋಧನೆಯನ್ನೂ ಅಳವಡಿಸಿಕೊಳ್ಳಿ. PC ಯೊಂದರಲ್ಲಿ, ಸಂಶೋಧನೆಗಾಗಿನ ಪ್ರವೇಶಾವಕಾಶವು ವೇಗದಿಂದ ಕೂಡಿರುವುದಷ್ಟೇ ಅಲ್ಲದೇ, ನೀವು ಓದಿರುವುದನ್ನು ಉಳಿಸಿಕೊಂಡು, ನಿಮ್ಮ ನೋಟ್ಸ್ಗಳಿಗೆ ಸೇರ್ಪಡೆ ಮಾಡಿಕೊಳ್ಳುವ ಸಕ್ಷಮ ಮಾರ್ಗವೂ ಆಗಿದ್ದು, ನಿಮ್ಮ ರಿವಿಜನ್ಗಾಗಿ ಎರಡೂ ಕಡೆಗಳಿಗೂ ಜಯವನ್ನು ನೀಡುವಂತಹ ಸನ್ನಿವೇಶವನ್ನು ಒದಗಿಸುತ್ತದೆ.