ನಿಮ್ಮ ವಿದ್ಯಾರ್ಥಿಗಳ ನಿರ್ಣಾಯಕ ಆಲೋಚನಾ ಕೌಶಲ್ಯಗಳನ್ನು ಸುಪರ್ಚಾರ್ಜ್ ಮಾಡಲು ಐದು ಮಾರ್ಗಗಳು

 

 

ನಿರ್ಣಾಯಕ ಆಲೋಚಿಸುವಿಕೆಯು ಕೇವಲ ತೇರ್ಗಡೆಯಾಗುವ ಗೀಳಿಗಿಂತ ಬಹಳ ಹೆಚ್ಚಿನದ್ದಾಗಿದೆ. ಇದು ಭವಿಷ್ಯಕ್ಕಾಗಿ ತಯಾರಾಗಿ ಇರಲು ಇಂದಿನ ಕಾಲದ ಪ್ರತಿಯೊಬ್ಬ ವಿದ್ಯಾರ್ಥಿಗೂ ಅಗತ್ಯವಾಗಿರುವ ಒಂದು *ನಿರ್ಣಾಯಕವಾದ* (ದ್ವಂದಾರ್ಥವು ಉದ್ದೇಶಿತವಾಗಿದೆ) ಕೌಶಲ್ಯವಾಗಿದೆ.

ಸರಳವಾಗಿ ಹೇಳಬೇಕೆಂದರೆ, ಇದು ಮಾಹಿತಿಯನ್ನು ಎರಡೂ ಪಾರ್ಶ್ವಗಳಿಂದ ವಿಶ್ಲೇಷಿಸುವ ಮೂಲಕ ಅಭಿಪ್ರಾಯವೊಂದನ್ನು ರೂಪಿಸಿಕೊಳ್ಳುವ ಹಾಗೂ ಅಗತ್ಯವಾದಲ್ಲಿ ಅದನ್ನು ವಿರೋಧಿಸುವ ಸಾಮರ್ಥ್ಯವಾಗಿದೆ. ತರಗತಿಯಲ್ಲಿ ಕಲಿಸಲಾದ ಪರಿಕಲ್ಪನೆಯ ಹಿಂದಿನ ತರ್ಕ ಮತ್ತು ವಾದಗಳನ್ನು ನಿಮ್ಮ ವಿದ್ಯಾರ್ಥಿಗಳು ತಿಳಿದುಕೊಳ್ಳಬಲ್ಲವರಾಗುತ್ತಾರೆ, ಇದು ಉರು ಹೊಡೆದು ಕಲಿಯುವ ಅಗತ್ಯತೆಯನ್ನು ಕಡಿಮೆ ಮಾಡುತ್ತಾ, ಪರೀಕ್ಷೆಗಳಿಗಾಗಿ ಅವುಗಳನ್ನು ಹೆಚ್ಚು ಉತ್ತಮವಾಗಿ ನೆನಪಿಟ್ಟುಕೊಳ್ಳಲು ಅವರಿಗೆ ನೆರವಾಗುತ್ತದೆ!

ನಿಮ್ಮ ವಿದ್ಯಾರ್ಥಿಗಳ ನಿರ್ಣಾಯಕ ಆಲೋಚನಾ ಕೌಶಲ್ಯಗಳನ್ನು ನೀವು ಸುಪರ್ ಚಾರ್ಜ್ ಮಾಡಬಹುದಾದ ಐದು ಮಾರ್ಗಗಳನ್ನು ಇಲ್ಲಿ ನೀಡಲಾಗಿದೆ:

1) ಆ ದಿನದ ಪ್ರಶ್ನೆ

ನಿಮ್ಮ ಪಾಠದ ಕೊನೆಯಲ್ಲಿ, ಅವರಿಗೆ ನಿಜವಾಗಿಯೂ ಒಗಟೆನಿಸುವಂಥ ಒಂದು ಪ್ರಶ್ನೆಯನ್ನು ನಿಮ್ಮ ತರಗತಿಗೆ ಕೇಳಿ, ಉದಾಹರಣೆಗೆ “ವಿಶ್ವವು ಚಪ್ಪಟೆಯಾಗಿದ್ದಲ್ಲಿ ಏನಾಗುತ್ತಿತ್ತು?” ಈ ತರಹದ ಒಂದು ಚಟುವಟಿಕೆಯು ನಿಮ್ಮ ವಿದ್ಯಾರ್ಥಿಗಳನ್ನು ಓದಲು ಮತ್ತು ಒಂದು ಸಿದ್ದಾಂತದ “ಏಕೆ” ಎಂಬುದನ್ನು ತಿಳಿದುಕೊಳ್ಳಲು ಪ್ರೇರೇಪಿಸುತ್ತದೆ.

2) “ಏಕೆ”

ನಿಮ್ಮ ವಿದ್ಯಾರ್ಥಿಗಳನ್ನು ಸಿದ್ದಾಂತವೊಂದರ ಹಿಂದಿನ ತಾರ್ಕಿಕತೆಯನ್ನು ಕಂಡುಕೊಳ್ಳಲು ಬಿಡುವ ಮೂಲಕ ತರಗತಿಯಲ್ಲಿನ ಸಾಧಾರಣ ನಿತ್ಯಕ್ರಮವನ್ನು ಬದಲಾಯಿಸಿ. ಉದಾಹರಣೆಗೆ, “ಎಲೆಗಳು ಏಕೆ ಹಸಿರಾಗಿರುತ್ತವೆ” ಎಂದು ಅವರನ್ನು ಕೇಳಿ ಹಾಗೂ ಅವರು ಏನೇನು ಉತ್ತರಗಳೊಂದಿಗೆ ಬರುತ್ತಾರೆ ಎಂಬುದನ್ನು ನೋಡಿ! ಈ ಚಟುವಟಿಕೆಯು ನಿಮ್ಮ ತರಗತಿಯನ್ನು ಹೆಚ್ಚು ತೊಡಗಿಕೊಳ್ಳುವಂತೆ ಮತ್ತು ಜೀವಂತಿಕೆಯಿಂದ ಇರುವಂತೆಯೂ ಸಹ ಮಾಡುತ್ತದೆ. 

3) ಚರ್ಚಿಸುವುದು ಉತ್ತಮ

ನಿಮ್ಮ ವಿದ್ಯಾರ್ಥಿಗಳು ನಿಜವಾಗಿಯೂ ಭಾವೋದ್ವೇಗವನ್ನು ಹೊಂದಿರುವಂಥ ವಿಷಯವೊಂದರ ಮೇಲೆ ಚರ್ಚೆಯನ್ನು ಮಾಡಲು ಪರ ಮತ್ತು ವಿರೋಧದ ಪಾರ್ಶ್ವಗಳನ್ನು ಅವರು ತೆಗೆದುಕೊಳ್ಳುವಂತೆ ಮಾಡಿ, ಉದಾಹರಣೆಗೆ ವಾರ್ಮ್ ಅಪ್ ಮಾಡುವ ಸಲುವಾಗಿ ಕಡ್ಡಾಯ ಸಮವಸ್ತ್ರಗಳು ಎಂಬ ವಿಷಯ. ನಿಮ್ಮ ವಿದ್ಯಾರ್ಥಿಗಳು ತಯಾರಾಗಿದ್ದಾರೆ ಎಂದು ನಿಮಗೆ ಅನಿಸಿದಾಗ ನೀವು ಹೆಚ್ಚು ಆಳವಾದ ವಿಷಯಗಳನ್ನು ನೀಡಬಹುದು. ಪ್ರತಿಯೊಬ್ಬರೂ ಮಾಹಿತಿಯುಕ್ತ ವಾದ-ವಿವಾದಗಳನ್ನು ಮಾಡಲು ಸಾಧ್ಯವಾಗುವಂತೆ PC ಯಲ್ಲಿ ಸಂಶೋಧನೆ ಮಾಡುವುದನ್ನು ಉತ್ತೇಜಿಸಿ. 

4) ಬಿಂದುಗಳನ್ನು ಜೋಡಿಸಿ

ಬೇರೆ ಬೇರೆ ಸಿದ್ದಾಂತಗಳನ್ನು ಒಂದಕ್ಕೊಂದು ಜೋಡಿಸಲು ಮೈಂಡ್ ಮೀಸ್ಟರ್ ನಂತಹ ಟೆಕ್ ಟೂಲ್ ಅನ್ನು ಬಳಸಿ. ಪರೀಕ್ಷೆಗಳಿಗಾಗಿ ಹೆಚ್ಚು ಉತ್ತಮವಾಗಿ ನೆನಪಿಟ್ಟುಕೊಳ್ಳಲು ನಿಮ್ಮ ವಿದ್ಯಾರ್ಥಿಗಳಿಗೆ ನೆರವಾಗುವುದು ಇವೇ ಸಂಪರ್ಕಗಳು. ಏನಿದ್ದರೂ, ದಿನದ ಕೊನೆಯಲ್ಲಿ ಅಂಕಗಳೇ

5) ಇದು ಸರಿಯೇ ಅಥವಾ ತಪ್ಪೇ?

ಉತ್ತರಿಸಲು ನಿಜವಾಗಿಯೂ ಕಷ್ಟಕರವಾದಂತಹ ಪ್ರಶ್ನೆಗಳಿಗೆ ಸರಿಯೇ ಅಥವಾ ತಪ್ಪೇ ಎಂದು ನಿಮ್ಮ ವಿದ್ಯಾರ್ಥಿಗಳನ್ನು ಕೇಳಲು ಗೂಗಲ್ ಫಾರ್ಮ್ ಗಳು ಅಥವಾ ಸರ್ವೇಮಂಕೀಯನ್ನು ಬಹಳಮಟ್ಟಿಗೆ ಬಳಸಿಕೊಳ್ಳಿ. ಆರಂಭಿಸಲು ಬಝ್ ಫೀಡ್ ನ ಈ ರಸಪ್ರಶ್ನೆಯು ಅತ್ಯುತ್ತಮವಾದ ಉಲ್ಲೇಖವಾಗಿದೆ.

PC ಯನ್ನು ಬಳಸುವ ಮತ್ತು ವಿಷಯವನ್ನು ತಿಳಿದುಕೊಳ್ಳುವ ಹೆಚ್ಚಿದ ಸಾಮರ್ಥ್ಯದ ನಡುವಿನ ಸಂಪರ್ಕವು ಕಲಿಸುವ ಕ್ಷೇತ್ರದಲ್ಲಿ ಹೆಚ್ಚು ಚರ್ಚಿಸಲ್ಪಡುವ ವಿಷಯವಾಗಿದೆ. ಏಕೆಂದರೆ ಸ್ವತಂತ್ರವಾಗಿ ಕಲಿಯುವವರಾಗಲು ನಿಮ್ಮ ವಿದ್ಯಾರ್ಥಿಗಳಿಗೆ PC ಯು ನೆರವಾಗುತ್ತದೆ, ಹಾಗೂ ಇದು ಕಲಿಯುವಿಕೆಯನ್ನು ಅವರು ಇಷ್ಟಪಡಲು ಕಾರಣವಾಗುತ್ತದೆ.