ನಿಮ್ಮ ಮಗುವಿನ ಕಲಿಕಾ ಸಾಮರ್ಥ್ಯವನ್ನು ವಿಸ್ತಾರಗೊಳಿಸಲು ಐದು ಮಾರ್ಗಗಳು

“ಶಿಕ್ಷಣ ಎಂಬುದು ಅದರ ಮೇಲೆ ನಮ್ಮ ಭವಿಷ್ಯವನ್ನು ನಾವು ನಿರ್ಮಿಸಿಕೊಳ್ಳುವ ಅಡಿಪಾಯವಾಗಿದೆ” – ಕ್ರಿಸ್ಟೈನ್ ಗ್ರೆಗೋಯರ್

ಒಬ್ಬ ಪಾಲಕರಿಗೆ, ತಮ್ಮ ಮಗು ಶಿಕ್ಷಣ ವ್ಯವಸ್ಥೆಯಲ್ಲಿ ಕೇವಲ ಬದುಕುಳಿಯುವುದನ್ನು ನೋಡುವುದಕ್ಕಿಂತ, ಶಾಲೆಯಲ್ಲಿ ಜೀವಿಸುವುದನ್ನು ನೋಡುವಷ್ಟು ಹೆಚ್ಚಿನ ಹೆಮ್ಮೆಯ ಸಂಗತಿ ಇನ್ಯಾವುದೂ ಇರಲಾರದು. ಶಾಲೆಯಲ್ಲಿ ತಮ್ಮ ಅತ್ಯುತ್ತಮ ಕಾರ್ಯಪ್ರದರ್ಶನವನ್ನು ನೀಡಲು ಒಂದು ಮಗುವು ತನ್ನ ಕಲಿಕಾ ಸಾಮರ್ಥ್ಯವನ್ನು ಚಿಕ್ಕ ವಯಸ್ಸಿನಲ್ಲಿಯೇ ವಿಸ್ತಾರಗೊಳಿಸಿಕೊಳ್ಳಬೇಕಾಗಿರುತ್ತದೆ. ನಿಮ್ಮ ಮಗುವಿಗೆ ನೆರವಾಗಲು ನಿಮಗೆ ನೆರವಾಗುವ ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ:

1) ಓದುವಿಕೆಯನ್ನು ಒಂದು ದಿನನಿತ್ಯದ ಹವ್ಯಾಸವನ್ನಾಗಿಸಿ
ಪ್ರತಿ ದಿನ ಓದುವಿಕೆಯ ಒಂದು ಅತ್ಯಂತ ದೊಡ್ಡ ಅನುಕೂಲತೆ ಎಂದರೆ, ವಿಚಾರಗಳನ್ನು ಸ್ಪಷ್ಟವಾಗಿ ತಿಳಿಸುವ ಮತ್ತು ಹೆಚ್ಚು ಉತ್ತಮವಾಗಿ ಬರೆಯುವ ಅವಕಾಶವನ್ನು ನಿಮ್ಮ ಮಗು ಪಡೆದುಕೊಳ್ಳುತ್ತದೆ. ಅದು ಸಮಾಚಾರ ಪತ್ರಿಕೆಯ ಕ್ರೀಡಾ ವಿಭಾಗವಾಗಿರಲಿ ಅಥವಾ ಶ್ರೇಷ್ಠತಮ ಕಾದಂಬರಿಯ ಒಂದು ಅಧ್ಯಾಯವಾಗಿರಲಿ – ಪ್ರತಿ ದಿನ ಓದುವ ಮೂಲಕ ನಿಮ್ಮ ಮಗು ಹೊಸ ಪದಗಳನ್ನು ಗ್ರಹಿಸುತ್ತದೆ ಮತ್ತು ಭಾಷಾ ಸನ್ನಿವೇಶವನ್ನು ಗ್ರಹಿಸುತ್ತದೆ.

2) ಅವರ ಸೃಜನಶೀಲ ಪಾರ್ಶ್ವವನ್ನು ಹೊರತನ್ನಿ
ಮೇಕರ್ಸ್ಪೇಸ್ ನಲ್ಲಿ ಪ್ರತಿಯೊಂದು ವಯೋಮಾನ ಹಾಗೂ ಆಸಕ್ತಿಗೂ ಒಂದು ಪ್ರಾಜೆಕ್ಟ್ ಇರುತ್ತದೆ. ಅವರಿಗೆ ಮೋಜೆನ್ನಿಸುವುದನ್ನು ಕಂಡುಕೊಳ್ಳಲು ನಿಮ್ಮ ಮಗುವನ್ನು ಮುಂದಕ್ಕೆ ತಳ್ಳುವುದು ಹಾಗೂ ಸಾಮಗ್ರಿಗಳನ್ನು ಒದಗಿಸುವುದಷ್ಟೇ ನೀವು ಮಾಡಬೇಕಾದ ಕೆಲಸವಾಗಿರುತ್ತದೆ. ಪ್ರತಿಯೊಂದು ಮೇಕರ್ಸ್ಪೇಸ್ ಪ್ರಾಜೆಕ್ಟ್, ಹೊಸದೇನೋ ಒಂದು ವಿಷಯವನ್ನು ನಿಮ್ಮ ಮಗುವಿಗೆ ಕಲಿಸುತ್ತದೆ. ಮೊದಲಿಗೆ ಕಷ್ಟಕರವೆಂಬುದಾಗಿ ತೋರಿದ್ದ ಆ ಕೆಲಸವನ್ನು ಯಶಸ್ವಿಯಾಗಿ ಸಂಪೂರ್ಣಗೊಳಿಸಿದಾಗ ಹೊರಹೊಮ್ಮುವ ವಿಜಯಿಯಾದ ಆ ಭಾವವು ಯಾವುದಕ್ಕೂ ಕಡಿಮೆ ಎನಿಸುವುದಿಲ್ಲ!

3) ಅವರನ್ನು ಆಟದಲ್ಲಿ ತೊಡಗಿಸಿ
ನಿಮ್ಮ ಮಗುವಿನ ಅಧ್ಯಯನ ನಿತ್ಯಕ್ರಮಕ್ಕೆ ಆಟಗಳನ್ನು ಸೇರಿಸುವುದರ ಅತ್ಯುತ್ತಮ ಭಾಗವೆಂದರೆ, ಆಟವಾಡುವಾಗ “ನನಗೆ ಬೇಜಾರಾಗಿದೆ” ಎಂದು ಅವರು ಎಂದಿಗೂ ಹೇಳದಿರುವುದು. ಅದು ಪರೀಕ್ಷೆಯೊಂದಕ್ಕೆ ಅಭ್ಯಸಿಸುತ್ತಿರುವಾಗಿನ ಒಂದು ವಿರಾಮವಾಗಿರಬಹುದು ಅಥವಾ ಒಂದು ಸಂಪೂರ್ಣ ಭಾಗವನ್ನು ಪೂರ್ಣಗೊಳಿಸಿದ್ದುದಕ್ಕಾಗಿ ನೀಡಿದ ಒಂದು ವಿಶೇಷ ಉಪಚಾರವಾಗಿರಬಹುದು. ಮಗುವಿನ ಸಾಮರ್ಥ್ಯಗಳನ್ನು ವಿಸ್ತರಿಸಿಕೊಳ್ಳಲು ನೆರವಾಗುತ್ತಾ, ತನ್ನ ಸರ್ವ ಪ್ರಯತ್ನಗಳನ್ನು ಮಾಡಲು ನಿಮ್ಮ ಮಗು ಉತ್ತೇಜಿತನಾದ ಭಾವನೆಯನ್ನು ಹೊಂದುವುದು ಅದರ ಅತ್ಯುತ್ತಮ ಭಾಗವಾಗಿರುತ್ತದೆ.

4) ನಿಮ್ಮ ಮಗುವಿನ ಕಲಿಕಾ ಶೈಲಿಯನ್ನು ಗುರುತಿಸಿ

ಸಮಯದ ಹಾದಿ ಕಳೆದಂತೆ ಹಾಗೂ ಆ ವಿಷಯದ ಮೇಲೆ ಅವಲಂಬಿತವಾಗಿ, ಉಪಯುಕ್ತವಾಗುವ ಒಂದು ಕಲಿಕಾ ಪ್ರವೃತ್ತಿಯನ್ನು ನಿಮ್ಮ ಮಗುವು ಬೆಳೆಸಿಕೊಳ್ಳುತ್ತದೆ. ಆ ಶೈಲಿಯನ್ನು ಗುರುತಿಸುವುದನ್ನು ಮತ್ತು ಸೂಕ್ತ PC ಸಂಪನ್ಮೂಲಗಳ ಬಳಕೆಯನ್ನು ಪ್ರೋತ್ಸಾಹಿಸುವುದನ್ನು ಒಬ್ಬ ಪಾಲಕರಾಗಿ ನೀವು ಖಚಿತಪಡಿಸಿಕೊಳ್ಳಬೇಕಿರುತ್ತದೆ.

5) ನಿರ್ದಿಷ್ಟವಾದ ಫೀಡ್ಬ್ಯಾಕ್ ಅನ್ನು ನೀಡಿ
ಸಾಮರ್ಥ್ಯಗಳನ್ನು ಅವಲಂಬಿಸಿ ಆಟವಾಡುವುದು ಪ್ರಯತ್ನಿಸಿ, ಪರೀಕ್ಷಿಸಲ್ಪಟ್ಟ ಸಲಹೆಯಾಗಿದೆಯಾದರೂ, ನಿಮ್ಮ ಮಗುವಿನ ದುರ್ಬಲ ವಿಷಯಗಳ ಗತಿಯೇನು?
ನಿರ್ದಿಷ್ಟವಾದ, ಮಾಡಬಹುದಾದ ಫೀಡ್ಬ್ಯಾಕ್ ನೀಡುವಂತೆ ಶಿಕ್ಷಕರನ್ನು ಕೋರುವುದು ಹಾಗೂ ಅದಕ್ಕನುಗುಣವಾಗಿ ನೆರವು ಪಡೆದುಕೊಳ್ಳುವುದು ಈ ವಿಷಯದಲ್ಲಿನ ಮೊದಲನೇ ಹಂತವಾಗಿರುತ್ತದೆ. ನಿಮ್ಮ ಮಗುವಿನ ಶಿಕ್ಷಕರನ್ನು ಅವುಗಳ ಉತ್ತರಗಳು ಕೇವಲ ಹೌದು ಅಥವಾ ಅಲ್ಲ ಅಲ್ಲದ ಬಹಳಷ್ಟು ಪ್ರಶ್ನೆಗಳನ್ನು ಕೇಳುವುದು ಇಲ್ಲಿ ಪ್ರಮುಖವಾಗಿರುತ್ತದೆ.

ನಿಮ್ಮ ಮಗುವಿನ ಯಶಸ್ಸಿಗೆ PC ಎಂಬುದು ಒಂದು ದೊಡ್ಡ ಪ್ರೇರೇಪಣಾದಾಯಕವಾದ ಸಾಧನವಾಗಿರುತ್ತದೆ ಎಂಬುದನ್ನು ಮರೆಯಬೇಡಿ.