ಪ್ರತಿಯೊಬ್ಬ ಶಿಕ್ಷಕರೂ ಬುಕ್ಮಾರ್ಕ್ ಮಾಡಬೇಕಾದ 5 ಯೂಟ್ಯೂಬ್ ಚಾನಲ್ಗಳು

 

ಅಭ್ಯಾಸದಲ್ಲಿ ತೊಡಗಿಕೊಂಡಿರುವ ವಿದ್ಯಾರ್ಥಿಗಳನ್ನು ಹೊಂದಿರುವ ತರಗತಿಯನ್ನು ಪ್ರತಿಯೊಬ್ಬ ಶಿಕ್ಷಕರೂ ಬಯಸುತ್ತಾರೆ. ಆದರೆ, ಕೆಲವೊಮ್ಮೆ ಅದು ಹಗಲುಗನಸಾಗಿಯೇ ಉಳಿದುಬಿಡುತ್ತದೆ ಅಥವಾ ಅವರ ಆಲೋಚನೆಗಳಿಗೇ ಸೀಮಿತವಾಗಿಬಿಡುತ್ತದೆ.

ಹಾಗಾದರೆ, ತಮ್ಮ 100% ಗಮನವನ್ನೂ ಮಕ್ಕಳು ನಿಮಗೇ ನೀಡುವಂತೆ ಮಾಡುವುದು ಹೇಗೆ?

ತರಗತಿಯಲ್ಲಿ ಒಂದು ಇಂಟರಾಕ್ಟಿವ್ ವಿಡಿಯೋ!

ಮಾಹಿತಿಯನ್ನು ಹೆಚ್ಚು ಉತ್ತಮವಾಗಿ ಗ್ರಹಿಸಲು ನಿಮ್ಮ ವಿದ್ಯಾರ್ಥಿಗಳಿಗೆ ನೆರವಾಗುತ್ತಾ - ನಿಮ್ಮ ಪಠ್ಯ ಯೋಜನೆಗೆ ಅನುಗುಣವಾಗಿ ತರಗತಿಯ ಆರಂಭದಲ್ಲಿ, ಮಧ್ಯದಲ್ಲಿ, ಕೊನೆಯ ಐದು ನಿಮಿಷಗಳಲ್ಲಿ ನೀವು ವಿಡಿಯೋವನ್ನು ಪ್ಲೇ ಮಾಡಬಹುದು. ಸಂಪನ್ಮೂಲಗಳಿಗೆ ಸಂಬಂಧಿಸಿದಂತೆ, ಎಲ್ಲ ವಯೋಮಾನದವರಿಗಾಗಿ ಹಾಗೂ ಎಲ್ಲ ವಿಷಯಗಳಾದ್ಯಂತ ಸಮರ್ಪಿತ ಕಲಿಕಾ ಚಾನಲ್ಗಳನ್ನು ಹೊಂದಿರುವ ಯೂಟ್ಯೂಬ್ಗೆ ಬೇರಾವುದೂ ಸರಿಸಾಟಿಯಾಗಲಾರದು.

ಪ್ರತಿ ಬಾರಿಯೂ, ಅಭ್ಯಾಸದಲ್ಲಿ ತೊಡಗಿಕೊಳ್ಳುವ ತರಗತಿಗಾಗಿ ನಿಮ್ಮ PC ಯ ಬ್ರೌಜರ್ನಲ್ಲಿ ನೀವು ಬುಕ್ಮಾರ್ಕ್ ಮಾಡಬೇಕಾದ ಐದು ಯೂಟ್ಯೂಬ್ ಚಾನಲ್ಗಳನ್ನು ಇಲ್ಲಿ ನೀಡಲಾಗಿದೆ:

1) SciShow / ಸೈಶೋ

ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಕುತೂಹಲವನ್ನು ಕೆರಳಿಸುವ ಉದ್ದೇಶದೊಂದಿಗೆ, ಮಾನವನ ಮಿದುಳಿನಿಂದ ಹಿಡಿದು ಒರಿಗ್ಯಾಮಿಯಿಂದ ಪ್ರೇರೇಪಿತ ಅನ್ವೇಷಣೆಗಳವರೆಗೆ, ಪ್ರತಿ ವಿಡಿಯೋ ಐದು ನಿಮಿಷಗಳಿಗಿಂತ ಹೆಚ್ಚು ದೀರ್ಘವಲ್ಲದ ಚಿಕ್ಕ, ಎನಿಮೇಟೆಡ್ ವಿಡಿಯೋಗಳೊಂದಿಗೆ ಈ ಚಾನಲ್ ಪ್ರತಿಯೊಂದೂ ವಿಷಯವನ್ನು ಕವರ್ ಮಾಡುತ್ತದೆ!

ಕೊಂಡಿ: https://www.youtube.com/user/scishowkids/featured

2) Grammarly / ಗ್ರಾಮರ್ಲಿ

ಅವಶ್ಯಕ ಮೂಲಭೂತ ಅಂಶಗಳ ಪುನರ್ಮನನಕ್ಕಾಗಿ ಪರೀಕ್ಷೆಗಳಿಗೆ ಒಂದು ವಾರ ಮೊದಲು ವಿದ್ಯಾರ್ಥಿಗಳಿಗೆ ತೋರಿಸಲು ಆದರ್ಶಪ್ರಾಯವಾದ - ಬರವಣಿಗೆಯ ಪ್ರಮುಖ ಮಾರ್ಗದರ್ಶಿ ಸೂತ್ರಗಳು, ಸಾಮಾನ್ಯವಾಗಿ ಗೊಂದಲವನ್ನುಂಟು ಮಾಡುವ ಶಬ್ದಗಳು ಮತ್ತು ವ್ಯಾಕರಣವನ್ನು ಸರಳೀಕರಿಸುವುದಕ್ಕೆ ಸಮರ್ಪಿತವಾದ ಸಂಪೂರ್ಣ ಪ್ಲೇಲಿಸ್ಟ್ ಅನ್ನು ಗ್ರಾಮರ್ಲಿ ಹೊಂದಿದೆ.

ಕೊಂಡಿ: https://www.youtube.com/channel/UCfmqLyr1PI3_zbwppHNEzuQ

3) Crash Course / ಕ್ರ್ಯಾಶ್ ಕೋರ್ಸ್

ವಿದ್ಯಾರ್ಥಿಗಳು ವಿಷಯವೊಂದಕ್ಕೆ ಹೊಸಬರಾಗಿದ್ದಾಗ ಅಥವಾ ವಿಷಯವು ಸ್ವಲ್ಪ ಹಳೆಯದು ಮತ್ತು ತಿಳಿದುಕೊಳ್ಳಲು ಸಂಕೀರ್ಣವಾಗಿದ್ದು ಅವರಿಗೆ ಸ್ವಲ್ಪ ಮರುಕಳಿಕೆಯ ಅಗತ್ಯವಿದ್ದಾಗ, ಇಂಗ್ಲೀಷ್ ಸಾಹಿತ್ಯದಿಂದ ಹಿಡಿದು ಕಂಪ್ಯೂಟರ್ ಸೈನ್ಸ್ವರೆಗೆ, ಕ್ರ್ಯಾಶ್ ಕೋರ್ಸಿನ ವಿಡಿಯೋಗಳು ಮನೆಗೆಲಸದ ಸೂಕ್ತ ಉಲ್ಲೇಖಗಳಾಗಿ ಕೆಲಸ ಮಾಡುತ್ತವೆ.

ಕೊಂಡಿ: https://www.youtube.com/user/crashcourse

4) National Geographic / ನ್ಯಾಷನಲ್ ಜಿಯೊಗ್ರಫಿಕ್

ಭೂಗೋಳಶಾಸ್ತ್ರಕ್ಕಿಂತ ಬಹಳ ಹೆಚ್ಚು ವಿಷಯಗಳನ್ನು ಹೊಂದಿರುವ ನ್ಯಾಷನಲ್ ಜಿಯೊಗ್ರಫಿಕ್ನ ಚಿಕ್ಕ ಫಿಲ್ಮ್ಗಳ ಸಂಗ್ರಹವು ವಾಸ್ತವಿಕ-ಜಗತ್ತಿನ ಸನ್ನಿವೇಶವನ್ನು ತರಗತಿಯಲ್ಲಿ ನೀವು ಕಲಿಸಿದ ಸಿದ್ಧಾಂತದೊಂದಿಗೆ ಸಮೀಕರಿಸಲು ನಿಮ್ಮ ವಿದ್ಯಾರ್ಥಿಗಳಿಗೆ ನೆರವಾಗುತ್ತದೆ. ನಿಗದಿಪಡಿಸಿದ ಅನುಸೂಚಿಯೊಂದಿಗೆ, ಇದನ್ನು ನಿಮ್ಮ ಪಾಠಗಳ ನಿಗದಿತ ಭಾಗವನ್ನಾಗಿ ನೀವು ಮಾಡಬಹುದು.

ವಾರದ ಯೂಟ್ಯೂಬ್ ಅನುಸೂಚಿ:
ಸೋಮ ಮತ್ತು ಮಂಗಳ – ಪ್ರಕೃತಿ ಮತ್ತು ಪರಿಸರ
ಬುಧ – ಅನ್ವೇಷಣೆ
ಗುರು – ವಿಜ್ಞಾನ
ಶುಕ್ರ – ಮೋಜುಭರಿತ ವಾಸ್ತವಾಂಶಗಳು
ಶನಿ – ಸಾಹಸ ಮತ್ತು ಬದುಕುಳಿಯುವಿಕೆ
ಭಾನು – ಇತಿಹಾಸ & ಸಂಸ್ಕೃತಿ

ಕೊಂಡಿ: https://www.youtube.com/user/NationalGeographic

5) World Economic Forum / ವರ್ಲ್ಡ್ ಎಕನಾಮಿಕ್ ಫೋರಂ

ಪ್ರತಿಯೊಂದು ವಿಡಿಯೊ ಐದು ನಿಮಿಷಗಳಿಗಿಂತ ಕಡಿಮೆ ಅವಧಿಯದ್ದಾಗಿರುವುದರೊಂದಿಗೆ, ಗ್ರುಪ್ ಅಸೈನ್ಮೆಂಟುಗಳು, ಪೌರನೀತಿಯ ಪಾಠಗಳು ಮತ್ತು ಕ್ಲಾಸ್ರೂಮ್ ಡಿಬೇಟ್ಗಳಿಗಾಗಿ ತುಂಬಾ ಉಪಯುಕ್ತವಾದ ಇತ್ತೀಚಿನ ಸುದ್ದಿಗಳು, ಜಾಗತಿಕ ಪ್ರವೃತ್ತಿಗಳು ಮತ್ತು ಭವಿಷ್ಯದ ಮುನ್ಸೂಚನೆಗಳ ಬಗ್ಗೆ ಸ್ಪಷ್ಟತೆಯನ್ನು ನೀಡಲು ವಿದ್ಯಾರ್ಥಿಗಳಿಗೆ ಅವುಗಳು ಉಪಯುಕ್ತವಾಗಿರುತ್ತವೆ.

ಕೊಂಡಿ: https://www.youtube.com/user/WorldEconomicForum/featured

ಮುಂದಿನ ಹೆಜ್ಜೆ – ಮನೆಗೆಲಸ. ಮನೆಗೆಲಸವನ್ನೂ ಒಳಗೊಂಡಂತೆ, ವಿಶೇಷವಾಗಿ ಪರಿಧಿಯಾಚೆಗಿನ ವಿಚಾರಗಳಿಗಾಗಿ ನೀವು ಹುಡುಕುತ್ತಿದ್ದಲ್ಲಿ, ಮಾರ್ಗದಲ್ಲಿನ ಪ್ರತಿಯೊಂದು ಹೆಜ್ಜೆಯಲ್ಲಿ, PC ಶಿಕ್ಷಕರಿಗೆ ನೆರವಾಗುತ್ತದೆ.