ನಿಮ್ಮ ರಜಾದಿನಗಳಲ್ಲಿ ನೀವು ಮಾಡಬಹುದಾದ ಕೋರ್ಸುಗಳು

 

 

ರಜಾದಿನಗಳು ಮೋಜು ಮಜಾ ಮಾಡುವುದಕ್ಕಾಗಿಯೇ ಇರುತ್ತವೆ, ಆದರೆ ನೀವು ಕಲಿಯುವಾಗಲೇ ಮೋಜು ಮಜಾ ಮಾಡಬಾರದು ಎಂದೇನೂ ಇಲ್ಲ. ಇ-ಕಲಿಕೆಯ ಜನಪ್ರಿಯತೆಯು ಕಲೆ ಹಾಗೂ ಸಂಸ್ಕೃತಿಯಿಂದ ಹಿಡಿದು ಕೋಡಿಂಗ್ ಮತ್ತು ವಿಜ್ಞಾನ ವಿಷಯಗಳವರೆಗೆ ಹಲವಾರು ಆನ್ಲೈನ್ ಕೋರ್ಸುಗಳ ಹುಟ್ಟಿಗೆ ಕಾರಣವಾಗಿದೆ. ಒಂದು ಬಟನ್ನ ಸ್ಪರ್ಷ ಮಾತ್ರದಿಂದ ನಿಮ್ಮ ಜ್ಞಾನವನ್ನು ಈಗ ನೀವು ವಿಸ್ತರಿಸಿಕೊಂಡು ಹೊಸ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು.

1. ಖಾನ್ ಅಕಾಡಮಿಯ ಫಿಜಿಕ್ಸ್

ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆಯೊಂದಿಗೆ, ಮೂಲಭೂತ ವಿಷಯಗಳನ್ನು ಸರಿಯಾಗಿ ಗ್ರಹಿಸುವಿಕೆಯ ಮಹತ್ವವು ಹೆಚ್ಚುತ್ತಲೇ ಹೋಗುತ್ತದೆ. ವಿಶ್ವದಲ್ಲಿನ ಪ್ರತಿಯೊಂದೂ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳುವಲ್ಲಿ ಭೌತಶಾಸ್ತ್ರದ ಜ್ಞಾನವು ಸಾಧಕೀಯವಾಗಿದೆ. ರಸಪ್ರಶ್ನೆಗಳು ಹಾಗೂ ಮೌಲ್ಯಮಾಪನಗಳೊಂದಿಗೆ ಖಾನ್ ಅಕಾಡಮಿಯ ಚಿಕ್ಕ ಕೋರ್ಸ್ ಚಲನೆ, ಧ್ವನಿ, ಮತ್ತು ಬೆಳಕು ವಿಷಯಗಳಂಥ ಮೂಲ ಪರಿಕಲ್ಪನೆಗಳನ್ನು ಸರಳೀಕರಿಸುತ್ತದೆ.

ಲಿಂಕ್: https://www.khanacademy.org/

2. edX ರವರ ವರ್ಚ್ಯುವಲ್ ರಿಯಾಲಿಟಿ ಹೇಗೆ ಕೆಲಸ ಮಾಡುತ್ತದೆ

ವರ್ಚ್ಯುವಲ್ ರಿಯಾಲಿಟಿ (ವಿಆರ್) ಎಂಬುದು ವಿಶ್ವದಲ್ಲಿ ಬಿರುಗಾಳಿ ಎಬ್ಬಿಸುತ್ತಿರುವ ಇತ್ತೀಚಿನ ತಂತ್ರಜ್ಞಾನವಾಗಿದೆ – ನಮ್ಮ ಜಗತ್ತಿನೊಂದಿಗೆ ನಾವು ವ್ಯವಹರಿಸುವ ವಿಧಾನವನ್ನೇ ಇದು ಬದಲಾಯಿಸುತ್ತದೆ. ಆದರೆ ಅದರ ಬಗ್ಗೆ ನಾವೆಷ್ಟು ತಿಳಿದುಕೊಂಡಿದ್ದೇವೆ? ಅದರ ಹಿಂದಿರುವ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ಯಾವುದು? ಈ ಕೋರ್ಸಿನಲ್ಲಿ, ವರ್ಚ್ಯುವಲ್ ರಿಯಾಲಿಟಿಯ ಮೂಲಭೂತ ವಿಷಯಗಳನ್ನು ಮತ್ತು WebVR ಬಳಸಿಕೊಂಡು ಅದನ್ನು ಹೇಗೆ ಜಾರಿಗೊಳಿಸುವುದು ಎಂಬುದನ್ನು ನೀವು ಕಲಿಯುತ್ತೀರಿ.

ಲಿಂಕ್: https://www.edx.org/course/how-virtual-reality-works

3. ಕೋರ್ಸೆರಾರವರ ಫೋಟೊಗ್ರಾಫಿಯ ಮೂಲವಿಷಯಗಳು ಮತ್ತು ಅದರಾಚೆ: ಸ್ಮಾರ್ಟ್ಫೋನ್ನಿಂದ ಡಿಎಸ್ಎಲ್ಆರ್ ಸ್ಪೆಶಲೈಜೇಶನ್ವರೆಗೆ

ನಿಮ್ಮ ಸುತ್ತಮುತ್ತಲಿನ ಪ್ರತಿಯೊಂದೂ ವಸ್ತುವಿನ ಚಿತ್ರಗಳನ್ನು ಕ್ಲಿಕ್ಕಿಸುವುದು ನಿಮಗೆ ಇಷ್ಟವಾಗುತ್ತದೆಯೇ? ಈ ಕೋರ್ಸಿನಲ್ಲಿ ಪರಿಣಿತರಿಂದ ಕಲಿಯುವ ಮೂಲಕ ಎಕ್ಸ್ಪೋಜರ್, ಕಾಂಪೊಜಿಶನ್, ಲೈಟಿಂಗ್ ಮತ್ತು ಅದರಾಚೆಯ ಆಯಾಮಗಳಂಥ ಫೋಟೊಗ್ರಾಫಿಯ ಬೇರೆಬೇರೆ ವಿಷಯಗಳನ್ನು ಅನ್ವೇಷಿಸಲು ರಜಾದಿನಗಳು ಪರಿಪೂರ್ಣವಾದ ಸಮಯವಾಗಿರುತ್ತದೆ.

ಲಿಂಕ್: https://www.coursera.org/specializations/photography-basics

4. ಯುಡೆಮಿರವರ ಎಕ್ಸೆಲ್ ಕ್ವಿಕ್ ಸ್ಟಾರ್ಟ್ ಟ್ಯೂಟೋರಿಯಲ್: ಮೂಲವಿಷಯಗಳನ್ನು ಕಲಿಯಲು 36 ನಿಮಿಷಗಳು

ಸಂಖ್ಯೆಗಳೊಂದಿಗೆ ಆಟವಾಡುವುದು ಶಾಲಾ ಪ್ರಾಜೆಕ್ಟ್ಗಳಿಗಾಗಿ ದತ್ತಾಂಶವನ್ನು ವಿಶ್ಲೇಷಿಸುವುದರೆಡೆಗಿನ ಮೊದಲ ಹೆಜ್ಜೆಯಾಗಿರುತ್ತದೆ. ಸಾರ್ಟ್ ಮಾಡುವುದು, ಫಿಲ್ಟರ್ ಮಾಡುವುದು, ಪಿವೋಟ್ ಟೇಬಲ್ಗಳು, ವಿಲುಕ್ಅಪ್ ಮತ್ತು ಇನ್ನೂ ಹಲವಾರು – ಹೀಗೆ ಒಬ್ಬ ಎಕ್ಸೆಲ್ ಪರಿಣಿತರಾಗಲು ನಿಮಗೆ ಬೇಕಾಗುವ ಎಲ್ಲವನ್ನೂ ಈ ಕೋರ್ಸ್ ಒಳಗೊಂಡಿದೆ.

ಲಿಂಕ್: https://www.udemy.com/excel_quickstart/

ಈ ಕೋರ್ಸುಗಳು ಆನ್ಲೈನ್ ಆಗಿ ಲಭ್ಯವಿರುವ ಎಣಿಕೆಯಿಲ್ಲದಷ್ಟು ಇತರವುಗಳಲ್ಲಿನ ನಾಲ್ಕು ಮಾತ್ರ ಆಗಿವೆ, ಹಾಗೂ ಕಲಿಕೆಯು ನಿಮ್ಮ ಶಾಲೆಗೆ ಮಾತ್ರ ಸೀಮಿತವಾಗಿರಬೇಕಿಲ್ಲ ಎಂಬುದನ್ನು ರುಜುವಾತುಪಡಿಸುತ್ತವೆ. ಇವುಗಳನ್ನು ನೀವು ಮಾಡುತ್ತಿರುವಂತೆಯೇ, ನೀವು ಆನಂದಿಸುವ ಉತ್ಪಾದಕ ಶಾಲಾ ನಂತರದ ಕ್ಲಬ್ಗಳಿಗೂ ಸಹ ನಿಮ್ಮನ್ನು ನೋಂದಾಯಿಸಿಕೊಳ್ಳುವುದನ್ನು ಮರೆಯಬೇಡಿ.